ZIM vs IND: ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಲಿದ್ದಾರೆ ಯುವ ಸ್ಪೋಟಕ ದಾಂಡಿಗ

| Updated By: ಝಾಹಿರ್ ಯೂಸುಫ್

Updated on: Aug 21, 2022 | 2:06 PM

IND Predicted Playing XI: ಏಷ್ಯಾಕಪ್​ಗೆ ಆಯ್ಕೆಯಾಗಿರುವ ಅವೇಶ್​ ಕೊನೆಯ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅಥವಾ ಪ್ರಸಿದ್ಧ ಕೃಷ್ಣನ ಬದಲಿಗೆ ಪ್ಲೇಯಿಂಗ್ ಇಲೆವೆನ್​ನ​ ಭಾಗವಾಗಬಹುದು.

ZIM vs IND: ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಲಿದ್ದಾರೆ ಯುವ ಸ್ಪೋಟಕ ದಾಂಡಿಗ
ಸಾಂದರ್ಭಿಕ ಚಿತ್ರ
Follow us on

Zimbabwe vs India, 3rd ODI: ಜಿಂಬಾಬ್ವೆ-ಭಾರತ ನಡುವಣ ಮೂರನೇ ಏಕದಿನ ಪಂದ್ಯವು ಸೋಮವಾರ (ಅಗಸ್ಟ್ 22) ನಡೆಯಲಿದೆ. ಈಗಾಗಲೇ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿರುವ ಟೀಮ್ ಇಂಡಿಯಾಗೆ ಇದು ಔಪಚಾರಿಕ ಪಂದ್ಯವಷ್ಟೇ. ಹೀಗಾಗಿಯೇ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಕಂಡು ಬರಲಿದೆ. ಏಕೆಂದರೆ ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಸಿಗದ ಆಟಗಾರರು ತಂಡದಲ್ಲಿದ್ದು, ಇವರನ್ನು ಕೊನೆಯ ಪಂದ್ಯದಲ್ಲಿ ಕಣಕ್ಕಿಸಬಹುದು.

ಬಿಸಿಸಿಐನ ಹಿರಿಯ ಆಯ್ಕೆ ಸಮಿತಿಯು ಈ ಸರಣಿಯಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ನೀಡಿದೆ. ಆದರೆ ಈ ಆಟಗಾರರಲ್ಲಿ ಕೆಲವರು ಇನ್ನೂ ಕೂಡ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದಿಲ್ಲ. ಅದರಲ್ಲೂ ಐರ್ಲೆಂಡ್ ಹಾಗೂ ಜಿಂಬಾಬ್ವೆ ಸರಣಿಗೆ ಆಯ್ಕೆಯಾಗಿರುವ ಯುವ ಆಟಗಾರ ರಾಹುಲ್ ತ್ರಿಪಾಠಿಗೆ ಇನ್ನೂ ಕೂಡ ಚೊಚ್ಚಲ ಪಂದ್ಯವಾಡುವ ಅವಕಾಶ ಸಿಕ್ಕಿಲ್ಲ ಎಂಬುದು ವಿಶೇಷ.

ಐಪಿಎಲ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ರಾಹುಲ್ ತ್ರಿಪಾಠಿ ಐರ್ಲೆಂಡ್​ ವಿರುದ್ದದ ಸರಣಿ ವೇಳೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಆದರೆ ಆ ಸರಣಿಯಲ್ಲಿ ತ್ರಿಪಾಠಿಗೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಭಾಗ್ಯ ಲಭಿಸಿರಲಿಲ್ಲ. ಇದೀಗ ಜಿಂಬಾಬ್ವೆ ವಿರುದ್ದದ ಸರಣಿಯ ಮೊದಲೆರಡು ಪಂದ್ಯಗಳಲ್ಲೂ ಪದಾರ್ಪಣೆ ಮಾಡುವ ಅವಕಾಶದಿಂದ ರಾಹುಲ್ ತ್ರಿಪಾಠಿ ವಂಚಿತರಾಗಿದ್ದಾರೆ.

ಹೀಗಾಗಿ ಮೂರನೇ ಪಂದ್ಯದಲ್ಲಿ ಶುಭಮನ್ ಗಿಲ್ ಅಥವಾ ಶಿಖರ್ ಧವನ್ ಬದಲಿಗೆ ರಾಹುಲ್ ತ್ರಿಪಾಠಿಗೆ ಅವಕಾಶ ಸಿಗಬಹುದು. ಹಾಗೆಯೇ ವೇಗದ ಬೌಲರ್ ಅವೇಶ್ ಖಾನ್ ಕೂಡ ಈ ಸರಣಿಯಲ್ಲಿ ಯಾವುದೇ ಪಂದ್ಯವಾಡಿಲ್ಲ. ಅತ್ತ ಏಷ್ಯಾಕಪ್​ಗೆ ಆಯ್ಕೆಯಾಗಿರುವ ಅವೇಶ್​ ಕೊನೆಯ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅಥವಾ ಪ್ರಸಿದ್ಧ ಕೃಷ್ಣನ ಬದಲಿಗೆ ಪ್ಲೇಯಿಂಗ್ ಇಲೆವೆನ್​ನ​ ಭಾಗವಾಗಬಹುದು. ಹಾಗೆಯೇ ಅಕ್ಷರ್ ಪಟೇಲ್ ಬದಲಿಗೆ ಶಹಬಾಜ್ ಅಹ್ಮದ್ ಕೂಡ ಅವಕಾಶ ಪಡೆಯುವ ಸಾಧ್ಯತೆಯಿದೆ. ಅದರಂತೆ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ದದ ಕೊನೆಯ ಪಂದ್ಯದಲ್ಲಿ 2 ಅಥವಾ 3 ಬದಲಾವಣೆಯೊಂದಿಗೆ ಕಣಕ್ಕಿಳಿಯಬಹುದು.

ಮೂರನೇ ಪಂದ್ಯಕ್ಕೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:

ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್

 

Published On - 2:05 pm, Sun, 21 August 22