AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Neeraj Chopra: ಗಾಯಗೊಂಡಿದ್ದ ನೀರಜ್ ಚೋಪ್ರಾ ಮತ್ತೆ ಅಖಾಡಕ್ಕಿಳಿಯುವುದು ಯಾವಾಗ? ಇಲ್ಲಿದೆ ಬಿಗ್ ಅಪ್​ಡೇಟ್

Neeraj Chopra: ಯುಜೀನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ನೀರಜ್, ನಾಲ್ಕನೇ ಪ್ರಯತ್ನದಲ್ಲಿ ಗಾಯಗೊಂಡಿದ್ದರು. ಹೀಗಾಗಿ ನೀರಜ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು.

Neeraj Chopra: ಗಾಯಗೊಂಡಿದ್ದ ನೀರಜ್ ಚೋಪ್ರಾ ಮತ್ತೆ ಅಖಾಡಕ್ಕಿಳಿಯುವುದು ಯಾವಾಗ? ಇಲ್ಲಿದೆ ಬಿಗ್ ಅಪ್​ಡೇಟ್
TV9 Web
| Updated By: ಪೃಥ್ವಿಶಂಕರ|

Updated on:Aug 21, 2022 | 3:07 PM

Share

ಗಾಯದ ಕಾರಣದಿಂದಾಗಿ 2022 ರ ಕಾಮನ್‌ವೆಲ್ತ್ ಗೇಮ್ಸ್‌ನಿಂದ (Commonwealth Games 2022) ಹಿಂದೆ ಸರಿದಿದ್ದ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಅವರ ಫಿಟ್‌ನೆಸ್ ಕುರಿತು ಬಿಗ್ ಅಪ್​ಡೇಟ್ ಸಿಕ್ಕಿದೆ. ಟೋಕಿಯೊ ಒಲಿಂಪಿಕ್ (Tokyo Olympic) ಚಾಂಪಿಯನ್ ನೀರಜ್ ಅವರು ವೈದ್ಯಕೀಯವಾಗಿ ಫಿಟ್ ಆದ ನಂತರವೇ ಆಗಸ್ಟ್ 26 ರಂದು ನಡೆಯಲ್ಲಿರುವ ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಆದಿಲೆ ಸುಮರಿವಾಲಾ ಅವರ ಫಿಟ್ನೆಸ್ ಕುರಿತು ಹೇಳಿಕೆ ನೀಡಿದ್ದು, ಆಗಸ್ಟ್ 26 ರಿಂದ ನಡೆಯಲಿರುವ ಪಂದ್ಯಾವಳಿಯ ಸ್ಪರ್ಧಿಗಳ ಪಟ್ಟಿಯಲ್ಲಿ ಭಾರತದ ಸ್ಟಾರ್ ಆಟಗಾರ ನೀರಜ್ ಚೋಪ್ರಾ ಹೆಸರು ಕೂಡ ಇದೆ. ಪಿಟಿಐ ಜೊತೆ ಮಾತನಾಡಿದ ಸುಮರಿವಾಲಾ, ನೀರಜ್ ವೈದ್ಯಕೀಯ ಆಧಾರದ ಮೇಲೆ ಫಿಟ್ ಆಗಿದ್ದರೆ ಮಾತ್ರ ಅವರು ಈ ಪಂದ್ಯಾವಳಿಯಲ್ಲಿ ಆಡಲಿದ್ದಾರೆ ಎಂದಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್ ವೇಳೆ ಗಾಯಗೊಂಡಿದ್ದ ನೀರಜ್

ಯುಜೀನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ನೀರಜ್, ನಾಲ್ಕನೇ ಪ್ರಯತ್ನದಲ್ಲಿ ಗಾಯಗೊಂಡಿದ್ದರು. ಹೀಗಾಗಿ ನೀರಜ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇಡೀ ದೇಶ ಅವರಿಂದ ಚಿನ್ನವನ್ನು ನಿರೀಕ್ಷಿಸಿತ್ತು, ಆದರೆ ಇಂಜುರಿಯಿಂದ ಇದು ಅವರಿಂದ ಸಾಧ್ಯವಾಗಲಿಲ್ಲ. ಫೈನಲ್‌ನಲ್ಲಿ ನೀರಜ್ ಆರಂಭವೇ ಉತ್ತಮವಾಗಿರಲಿಲ್ಲ, ಆದರೆ ನಾಲ್ಕನೇ ಎಸೆತದಲ್ಲಿ ಲಯಕ್ಕೆ ಮರಳಿದ್ದ ನೀರಜ್ ಭಾರತಕ್ಕೆ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದರು. ಕೊನೆಯ 2 ಎಸೆತಗಳಲ್ಲಿ ಅವರಿಂದ ಚಿನ್ನ ನಿರೀಕ್ಷಿಸಲಾಗಿದ್ದರೂ ನಾಲ್ಕನೇ ಎಸೆತದ ಬಳಿಕ ನೀರಜ್​ಗೆ ಇಂಜುರಿ ಸಮಸ್ಯೆ ಹೆಚ್ಚಾಗತೊಡಗಿತು. ಹೀಗಾಗಿ ಚಿನ್ನ ಗೆಲ್ಲುವ ನೀರಜ್ ಕನಸು ಕನಸ್ಸಾಗಿಯೇ ಉಳಿಯಿತು. ಆದರೆ ನೀರಜ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ
Image
ಪಾಕ್ ರಾಜಕೀಯ ವಿಶ್ಲೇಷಕನ ಎಡವಟ್ಟಿನ ಟ್ವೀಟ್​ಗೆ ಸೆಹ್ವಾಗ್ ನೀಡಿದ ಖಡಕ್ ರಿಪ್ಲೆ ಹೇಗಿತ್ತು ಗೊತ್ತಾ?
Image
CWG 2022: ಕಾಮನ್‌ವೆಲ್ತ್‌ ಗೇಮ್ಸ್​ನಿಂದ ನೀರಜ್ ಔಟ್, ಭಾರತಕ್ಕೆ ಪದಕ ಮಿಸ್! ಪಾಕಿಸ್ತಾನಕ್ಕೆ ತೆರೆಯಿತು ಭಾಗ್ಯದ ಬಾಗಿಲು
Image
ನೀರಜ್ ಚಿನ್ನದ ಕನಸಿಗೆ ಅಡ್ಡಿಯಾದ ವೇಗದ ಬೌಲರ್ ಆಂಡರ್ಸನ್ ಪೀಟರ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹಿಂದೆ ಸರಿದಿದ್ದ ನೀರಜ್

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗಾಯಗೊಂಡಿದ್ದ ನೀರಜ್, ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹಿಂದೆ ಸರಿಯಬೇಕಾಯಿತು. ನೀರಜ್ ಅನುಪಸ್ಥಿತಿಯಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ನೀರಜ್ ಕನಸನ್ನು ಭಗ್ನಗೊಳಿಸಿದ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ ಅವರನ್ನು ಸೋಲಿಸಿ ಪಾಕ್​ನ ಅರ್ಷದ್ ಕಾಮನ್ ವೆಲ್ತ್ ಪ್ರಶಸ್ತಿ ಗೆದ್ದಿದ್ದರು. ಅರ್ಷದ್ ಮತ್ತು ನೀರಜ್ ಕೆಲವು ಸಮಯದಿಂದ ರೋಚಕ ಸ್ಪರ್ಧೆಗೆ ಸಾಕ್ಷಿಯಾಗಿದ್ದಾರೆ. ಇಬ್ಬರೂ ಒಳ್ಳೆಯ ಸ್ನೇಹಿತರು ಕೂಡ. ಅರ್ಷದ್ ಟೋಕಿಯೊ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಎರಡರಲ್ಲೂ 5ನೇ ಸ್ಥಾನ ಪಡೆದಿದ್ದರು. ಇಬ್ಬರ ನಡುವಿನ ಈ ಪೈಪೋಟಿಯೂ 2016 ರ ಗುವಾಹಟಿಯಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದೊಂದಿಗೆ ಪ್ರಾರಂಭವಾಯಿತು. ಸುಮಾರು 5 ವರ್ಷಗಳ ಹಿಂದೆ ನೀರಜ್ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆದ್ದಾಗ ಅರ್ಷದ್ ಕಂಚಿನ ಪದಕ ಗೆದ್ದಿದ್ದರು.

Published On - 3:06 pm, Sun, 21 August 22

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ