AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2022: ಏಷ್ಯಾಕಪ್​ನಿಂದ ಶಾಹೀನ್ ಶಾ ಆಫ್ರಿದಿ ಔಟ್; ಗೋಳು ತೋಡಿಕೊಂಡ ಪಾಕ್ ಫ್ಯಾನ್ಸ್

Asia Cup 2022: ಶಾಹೀನ್ ಗಾಯಗೊಂಡಿರುವುದು ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ರಿಲೀಫ್ ಸಿಕ್ಕಂತ್ತಾಗಿದೆ. 2022 ರ ಏಷ್ಯಾಕಪ್‌ನಲ್ಲಿ ನಾವು ಆಫ್ರಿದಿ ಅವರನ್ನು ನೋಡಲಾಗುತ್ತಿಲ್ಲ ಎಂಬ ಬೇಸರವಿದೆ. ಶಾಹೀನ್ ಅಫ್ರಿದಿ ಶೀಘ್ರದಲ್ಲೇ ಫಿಟ್ ಆಗಲಿ ಎಂದು ಟ್ವೀಟ್​ನಲ್ಲಿ ಯೂನಿಸ್ ಬರೆದುಕೊಂಡಿದ್ದಾರೆ.

Asia Cup 2022: ಏಷ್ಯಾಕಪ್​ನಿಂದ ಶಾಹೀನ್ ಶಾ ಆಫ್ರಿದಿ ಔಟ್; ಗೋಳು ತೋಡಿಕೊಂಡ ಪಾಕ್ ಫ್ಯಾನ್ಸ್
ಶಾಹೀನ್ ಶಾ ಆಫ್ರಿದಿ
TV9 Web
| Updated By: ಪೃಥ್ವಿಶಂಕರ|

Updated on: Aug 21, 2022 | 3:40 PM

Share

ಈ ವರ್ಷದ ಏಷ್ಯಾಕಪ್​ಗಾಗಿ (Asia Cup 2022) ಟೀಂ ಇಂಡಿಯಾವನ್ನು (Indian cricket team) ಆಗಸ್ಟ್ 8 ರಂದು ಬಿಸಿಸಿಐ ಪ್ರಕಟಿಸಿತ್ತು. ಆದರೆ ಪ್ರಕಟವಾದ ತಂಡವನ್ನು ನೋಡಿದ ಅಭಿಮಾನಿಗಳಿಗೆ ಬಿಗ್ ಶಾಕ್ ಕಾದಿತ್ತು. ತಂಡದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಗಾಯದ ಕಾರಣ ಏಷ್ಯಾಕಪ್‌ನಿಂದ ಹೊರಗುಳಿದಿದ್ದ ಸುದ್ದಿ ಭಾರತೀಯರಿಗೆ ಆಘಾತ ನೀಡಿತ್ತು. ಆದರೆ ಈ ಸುದ್ದಿ ನೋಡಿದ ಪಾಕಿಸ್ತಾನದ ಅಭಿಮಾನಿಗಳು ಮಾತ್ರ ಹಾಲು ಕುಡಿದು ತೃಪ್ತಿಪಟ್ಟಿದ್ದರು. ಇದೀಗ ಪಾಕಿಸ್ತಾನಕ್ಕೂ ಇದೇ ಸ್ಥಿತಿ ಎದುರಾಗಿದ್ದು, ತಂಡದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ (Shaheen Shah Afridi) ಗಾಯದಿಂದಾಗಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಈಗ ಈ ಸುದ್ದಿ ಪಾಕ್ ತಂಡಕ್ಕೆ ಹಾಗೂ ಅದರ ಅಭಿಮಾನಿಗಳಿಗೆ ನುಂಗಲಾರದ ಬಿಸಿ ತುಪ್ಪದಂತ್ತಾಗಿದೆ.

ಏಷ್ಯಾಕಪ್ 2022 ಪ್ರಾರಂಭವಾಗುವ ಒಂದು ವಾರದ ಮೊದಲು ಅಂದರೆ,ಆಗಸ್ಟ್ 20 ರಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಏಷ್ಯಾಕಪ್​ಗೆ ತನ್ನ ತಂಡವನ್ನು ಪ್ರಕಟಿಸಿತ್ತು. ಆದರೆ ಆ ತಂಡದಲ್ಲಿರಬೇಕಿದ್ದ ಪ್ರಮುಖ ಹೆಸರೊಂದು ಕಾಣೆಯಾಗಿತ್ತು. ತಂಡದ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಈ ತಂಡದಲ್ಲಿಲ್ಲ ಎಂಬ ಸುದ್ದಿ ಪಾಕ್ ಅಭಿಮಾನಿಗಳಿಗೆ ಸಖತ್ ಶಾಕ್ ನೀಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಪಾಕ್ ಮಂಡಳಿ, ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಶಾಹೀನ್ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದಿತ್ತು. ಇಂಜುರಿಗೊಳಗಾಗಿರುವ ಆಫ್ರಿದಿಗೆ ಸುಮಾರು 6 ವಾರಗಳ ಕಾಲ ವಿಶ್ರಾಂತಿಯನ್ನು ಸೂಚಿಸಲಾಗಿದ್ದು, ಅವರು ಏಷ್ಯಾಕಪ್​ನಿಂದ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿಯನ್ನು ನೀಡಿತ್ತು. ಆದ್ದರಿಂದ ಈಗ ಆಗಸ್ಟ್ 28 ರಂದು ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಶಾಹೀನ್ ಇಲ್ಲದೆ ಕಣಕ್ಕಿಳಿಯಬೇಕಾಗಿದೆ.

ಇದನ್ನೂ ಓದಿ
Image
Asia Cup 2022: ಏಷ್ಯಾಕಪ್​ಗೆ ಎಲ್ಲಾ ಪ್ರಮುಖ ತಂಡಗಳು ಪ್ರಕಟ; ಹೀಗಿದೆ ಆಟಗಾರರ ಸಂಪೂರ್ಣ ಪಟ್ಟಿ
Image
Asia Cup 2022: ಏಷ್ಯಾಕಪ್​ಗೆ ಬಲಿಷ್ಠ ತಂಡ ಪ್ರಕಟಿಸಿದ ಶ್ರೀಲಂಕಾ; ಯಾರಿಗೆಲ್ಲ ಚಾನ್ಸ್ ಸಿಕ್ಕಿದೆ ಗೊತ್ತಾ?
Image
Asia Cup 2022: ಭಾರತಕ್ಕೆ ಸಿಹಿ, ಪಾಕಿಸ್ತಾನಕ್ಕೆ ಕಹಿ; ಏಷ್ಯಾಕಪ್​ನಿಂದ ಬಾಬರ್ ತಂಡದ ಸ್ಟಾರ್ ಬೌಲರ್ ಔಟ್..!

ಬೇಸರ ವ್ಯಕ್ತಪಡಿಸಿದ ವಕಾರ್ ಯೂನಸ್

ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸುವಲ್ಲಿ ಶಾಹೀನ್ ಅಫ್ರಿದಿ ಪಾಕಿಸ್ತಾನ ಪರ ಪ್ರಮುಖ ಪಾತ್ರವನ್ನು ವಹಿಸಿದ್ದರು. ಆರಂಭದಿಂದಲ್ಲೇ ಅಬ್ಬರಿಸಿದ್ದ ಅಫ್ರಿದಿ ಮೊದಲ ಓವರ್‌ನಲ್ಲಿ ರೋಹಿತ್ ಶರ್ಮಾ ಅವರ ವಿಕೆಟ್ ಪಡೆದಿದ್ದರು. ಬಳಿಕ ಕೆಲವೇ ಎಸೆತಗಳಲ್ಲಿ ಕೆಎಲ್ ರಾಹುಲ್ ಕೂಡ ಬಲಿಯಾಗಿದ್ದರು. ಆನಂತರ ಬಂದ ಕೊಹ್ಲಿಯೂ ಕೂಡ ಸೈಲೆಂಟ್ ಆಗಿ ಆಫ್ರಿದಿ ಬಲೆಗೆ ಬಿದ್ದಿದ್ದರು. ಹೀಗಿರುವಾಗ ಪಾಕಿಸ್ತಾನದ ಅಭಿಮಾನಿಗಳಿಗೆ ಈ ಸುದ್ದಿಯಿಂದ ನಿರಾಸೆಯಾಗುವುದು ಸಹಜ. ಪಾಕಿಸ್ತಾನದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾದ ವಕಾರ್ ಯೂನಿಸ್ ತಮ್ಮ ಹತಾಶೆಯನ್ನು ಟ್ವೀಟ್‌ನಲ್ಲಿ ವ್ಯಕ್ತಪಡಿಸಿದ್ದಾರೆ.

ಶಾಹೀನ್ ಗಾಯಗೊಂಡಿರುವುದು ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ರಿಲೀಫ್ ಸಿಕ್ಕಂತ್ತಾಗಿದೆ. 2022 ರ ಏಷ್ಯಾಕಪ್‌ನಲ್ಲಿ ನಾವು ಆಫ್ರಿದಿ ಅವರನ್ನು ನೋಡಲಾಗುತ್ತಿಲ್ಲ ಎಂಬ ಬೇಸರವಿದೆ. ಶಾಹೀನ್ ಅಫ್ರಿದಿ ಶೀಘ್ರದಲ್ಲೇ ಫಿಟ್ ಆಗಲಿ ಎಂದು ಟ್ವೀಟ್​ನಲ್ಲಿ ಯೂನಿಸ್ ಬರೆದುಕೊಂಡಿದ್ದಾರೆ.

ಪಾಕಿಸ್ತಾನಿ ಅಭಿಮಾನಿಗಳು ಕೂಡ ತಮ್ಮ ನಿರಾಶೆ ಮತ್ತು ದುಃಖವನ್ನು ಟ್ವಿಟರ್‌ನಲ್ಲಿ ವ್ಯಕ್ತಪಡಿಸಿದ್ದಾರೆ.

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ