Asia Cup 2022: ಏಷ್ಯಾಕಪ್​ಗೆ ಬಲಿಷ್ಠ ತಂಡ ಪ್ರಕಟಿಸಿದ ಶ್ರೀಲಂಕಾ; ಯಾರಿಗೆಲ್ಲ ಚಾನ್ಸ್ ಸಿಕ್ಕಿದೆ ಗೊತ್ತಾ?

Asia Cup 2022: ಈ ಏಷ್ಯಾಕಪ್‌ಗಾಗಿ ಶ್ರೀಲಂಕಾ ತಂಡದಲ್ಲಿ ಇಬ್ಬರು ಅತ್ಯುತ್ತಮ ಆಟಗಾರರನ್ನು ವಾಪಸ್ ಕರೆಸಿದೆ. ಆಯ್ಕೆಗಾರರು ದಿನೇಶ್ ಚಾಂಡಿಮಾಲ್ ಮತ್ತು ಧನಂಜಯ್ ಡಿ ಸಿಲ್ವಾ ಅವರನ್ನು ತಂಡದಲ್ಲಿ ಆಯ್ಕೆ ಮಾಡಿದ್ದಾರೆ.

Asia Cup 2022: ಏಷ್ಯಾಕಪ್​ಗೆ ಬಲಿಷ್ಠ ತಂಡ ಪ್ರಕಟಿಸಿದ ಶ್ರೀಲಂಕಾ; ಯಾರಿಗೆಲ್ಲ ಚಾನ್ಸ್ ಸಿಕ್ಕಿದೆ ಗೊತ್ತಾ?
Follow us
TV9 Web
| Updated By: ಪೃಥ್ವಿಶಂಕರ

Updated on:Aug 20, 2022 | 8:55 PM

ಏಷ್ಯಾಕಪ್ ಕ್ರಿಕೆಟ್​ ರಣರಂಗ ಸಿದ್ಧವಾಗಿದೆ. ಏಷ್ಯಾದ ರಾಜ ಯಾರು ಎಂಬ ರೇಸ್ ಆಗಸ್ಟ್ 27 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಪ್ರಾರಂಭವಾಗಲಿದೆ. ಈ ಪಂದ್ಯಾವಳಿಗೆ ಎಲ್ಲಾ ದೇಶಗಳು ತಮ್ಮ ತಂಡವನ್ನು ಘೋಷಿಸಿವೆ. ಇಲ್ಲಿಯವರೆಗೆ ಶ್ರೀಲಂಕಾ (Sri Lanka) ಕ್ರಿಕೆಟ್ ಮಂಡಳಿ ಮಾತ್ರ ತನ್ನ ತಂಡವನ್ನು ಪ್ರಕಟಿಸಿರಲಿಲ್ಲ. ಆದರೆ ಶನಿವಾರ ಈ ತಂಡವನ್ನು ಸಹ ಪ್ರಕಟಿಸಲಾಯಿತು. ಏಷ್ಯಾಕಪ್​ಗಾಗಿ (Asia Cup) ಶ್ರೀಲಂಕಾ ತನ್ನ 18 ಮಂದಿಯ ತಂಡವನ್ನು ಪ್ರಕಟಿಸಿದ್ದು, ಎಡಗೈ ವೇಗದ ಬೌಲರ್ ದಿಲ್ಶಾನ್ ಮಧುಶಂಕ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

2021ರ ಜುಲೈನಲ್ಲಿ ಕೊನೆಯದಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ್ದ ದಿಲ್ಶಾನ್ ಮಧುಶಂಕ, ದಸುನ್ ಶನಕ ನಾಯಕತ್ವದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶ್ರೀಲಂಕಾ ಆಡಿದ ಕೊನೆಯ ಸರಣಿಯಲ್ಲಿ ಭಾಗವಹಿಸಿದ್ದ ಹೆಚ್ಚಿನ ಆಟಗಾರರನ್ನು ಇಲ್ಲಿ ಉಳಿಸಿಕೊಳ್ಳಲಾಗಿದೆ. ಆಗಸ್ಟ್ 12 ರಂದು ಆಯ್ಕೆಗಾರರು ತಂಡವನ್ನು ಆಯ್ಕೆ ಮಾಡಿ ತಂಡವನ್ನು ಕ್ರೀಡಾ ಸಚಿವಾಲಯಕ್ಕೆ ಕಳುಹಿಸಿದ್ದರು. ಕ್ರೀಡಾ ಸಚಿವ ರೋಷನ್ ರಣಸಿಂಗ್ ಅವರು ತಂಡವನ್ನು ಅನುಮೋದಿಸಿದ್ದಾರೆ. ಏಷ್ಯಾಕಪ್‌ನಲ್ಲಿ ಪಾಲ್ಗೊಳ್ಳಲು ತಂಡವು ಆಗಸ್ಟ್ 24 ರಂದು ಹೊರಡಲಿದೆ.

ಇದನ್ನೂ ಓದಿ
Image
Ind vs Zim: ಕ್ಯಾಪ್ಟನ್ ಆಗಿ ಪಾಸ್, ಬ್ಯಾಟರ್ ಆಗಿ ಫೇಲ್; ಕೇವಲ 5 ಎಸೆತಗಳಿಗೆ ಸುಸ್ತಾದ ನಾಯಕ ರಾಹುಲ್
Image
Asia Cup 2022: ಭಾರತಕ್ಕೆ ಸಿಹಿ, ಪಾಕಿಸ್ತಾನಕ್ಕೆ ಕಹಿ; ಏಷ್ಯಾಕಪ್​ನಿಂದ ಬಾಬರ್ ತಂಡದ ಸ್ಟಾರ್ ಬೌಲರ್ ಔಟ್..!
Image
Virat Kohli: 1000 ದಿನಗಳು ಪೂರ್ಣ; ಪಾಕ್ ವಿರುದ್ಧವಾದರೂ ಕೊಹ್ಲಿ ಬ್ಯಾಟ್ ಆಗಸದತ್ತ ಮುಖ ಮಾಡುತ್ತಾ?

ಈ ಆಟಗಾರರು ವಾಪಸ್

ಈ ಏಷ್ಯಾಕಪ್‌ಗಾಗಿ ಶ್ರೀಲಂಕಾ ತಂಡದಲ್ಲಿ ಇಬ್ಬರು ಅತ್ಯುತ್ತಮ ಆಟಗಾರರನ್ನು ವಾಪಸ್ ಕರೆಸಿದೆ. ಆಯ್ಕೆಗಾರರು ದಿನೇಶ್ ಚಾಂಡಿಮಾಲ್ ಮತ್ತು ಧನಂಜಯ್ ಡಿ ಸಿಲ್ವಾ ಅವರನ್ನು ತಂಡದಲ್ಲಿ ಆಯ್ಕೆ ಮಾಡಿದ್ದಾರೆ. ಇಬ್ಬರೂ ಟಿ20 ತಂಡಕ್ಕೆ ಮರಳಿದ್ದಾರೆ. ಈ ಇಬ್ಬರೂ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಆಡಿರಲಿಲ್ಲ. ಏಷ್ಯಾಕಪ್‌ಗೆ ಇವರಿಬ್ಬರ ಆಗಮನ ತಂಡಕ್ಕೆ ಬಲ ತುಂಬಲಿದೆ. ಚಂಡಿಮಾಲ್ ಇತ್ತೀಚೆಗೆ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಅವರು ಪುನರಾಗಮನ ಮಾಡಲು ಸಾಧ್ಯವಾಯಿತು. ಅವರ ಅನುಭವ ತಂಡಕ್ಕೆ ಹೆಚ್ಚು ಉಪಯೋಗವಾಗಬಹುದು. ನಿರೋಶನ್ ಡಿಕ್ವೆಲ್ಲಾ ಮತ್ತು ಕುಶಾಲ್ ಪೆರೇರಾ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಏಷ್ಯಾಕಪ್‌ನಲ್ಲಿ ಶ್ರೀಲಂಕಾ ತನ್ನ ಮೊದಲ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಆಗಸ್ಟ್ 27 ರಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಬೇಕಾಗಿದೆ. ಇದರ ನಂತರ, ಅವರು ಆಗಸ್ಟ್ 1 ರಂದು ಬಾಂಗ್ಲಾದೇಶವನ್ನು ಎದುರಿಸಲಿದ್ದಾರೆ. ಶ್ರೀಲಂಕಾ ಐದು ಬಾರಿ ಏಷ್ಯಾಕಪ್ ಗೆದ್ದಿದೆ. ಆರನೇ ಬಾರಿ ಈ ಟೂರ್ನಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ. ಆದಾಗ್ಯೂ, ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳನ್ನು ಸಹ ಈ ಪ್ರಶಸ್ತಿಗೆ ಸ್ಪರ್ಧಿಗಳು ಎಂದು ಪರಿಗಣಿಸಲಾಗಿರುವುದರಿಂದ ಇದು ಅವರಿಗೆ ಸುಲಭವಲ್ಲ.

ಏಷ್ಯಾ ಕಪ್ಗಾಗಿ ಶ್ರೀಲಂಕಾ ತಂಡ:-

ದಸುನ್ ಶನಕ (ನಾಯಕ), ಧನುಷ್ಕ ಗುಣತಿಲಕ, ಪಾತುಮ್ ನಿಸಂಕ, ಕುಸಲ್ ಮೆಂಡಿಸ್, ಚರಿತ್ ಅಸ್ಲಂಕಾ, ಭಾನುಕಾ ರಾಜಪಕ್ಸೆ, ಅಶೆನ್ ಬಂಡಾರ, ಧನಂಜಯ್ ಡಿ’ಸಿಲ್ವ, ವನಿಂದು ಹಸರಂಗ, ಮಹಿಷ್ ಟೀಕ್ಷಣ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ಚಮಿಕ ಕರುಣಾಶನನ್, ಎಫ್. ಬಂಡಾರ, ಧನಂಜಯ್ ಡಿ’ಸಿಲ್ವಾ, ದುಷ್ಮಂತ ಚಮೀರ, ದಿನೇಶ್ ಚಂಡಿಮಲ್.

Published On - 8:54 pm, Sat, 20 August 22

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ