Virat Kohli- Anushka Sharma: ಮುಂಬೈ ಬೀದಿಗಳಲ್ಲಿ ಸ್ಕೂಟರ್ ಸವಾರಿ ಮಾಡಿದ ಕೊಹ್ಲಿ- ಅನುಷ್ಕಾ; ವಿಡಿಯೋ ನೋಡಿ
Virat Kohli- Anushka Sharma: ವಿರಾಟ್ ಸ್ಕೂಟರ್ ಓಡಿಸುತ್ತಿದ್ದರೆ, ಅನುಷ್ಕಾ ಅವರ ಹಿಂದೆ ಕುಳಿತಿದ್ದರು. ಕೋಟಿಗಟ್ಟಲೆ ಒಡೆಯ ಕೊಹ್ಲಿ ಸ್ಕೂಟಿ ಓಡಿಸಿದ್ದು ಕಂಡು ಅಭಿಮಾನಿಗಳು ಸಾಕಷ್ಟು ಅಚ್ಚರಿಗೊಂಡಿದ್ದಾರೆ.
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಸುಮಾರು ಒಂದು ತಿಂಗಳಿನಿಂದ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಕಳಪೆ ಫಾರ್ಮ್‌ನೊಂದಿಗೆ ಹೋರಾಡುತ್ತಿರುವ ಕೊಹ್ಲಿ, ಸ್ವಲ್ಪ ಸಮಯ ವಿರಾಮ ತೆಗೆದುಕೊಂಡು ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ, ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಕೊಹ್ಲಿ ಚಿತ್ರಿಕರಣ ಮುಗಿದ ಬಳಿಕ ತಮ್ಮ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರೊಂದಿಗೆ ಮುಂಬೈ ರಸ್ತೆಗಳಲ್ಲಿ ಸ್ಕೂಟರ್ನಲ್ಲಿ ಸವಾರಿ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಸ್ಕೂಟರ್ನಲ್ಲಿ ವಿರಾಟ್ ಮತ್ತು ಅನುಷ್ಕಾ
ವಿರಾಟ್ ಮತ್ತು ಅನುಷ್ಕಾ ಜಾಹೀರಾತು ಚಿತ್ರೀಕರಣಕ್ಕಾಗಿ ಮಡ್ ಐಲ್ಯಾಂಡ್‌ಗೆ ಹೋಗಿದ್ದರು. ಅಲ್ಲಿಂದ ಹಿಂತಿರುಗುವಾಗ ಇಬ್ಬರೂ ಕಪ್ಪು ಸ್ಕೂಟರ್ ಮೇಲೆ ಸವಾರಿ ಹೊರಟ್ಟಿದ್ದು ಈಗ ಸಖತ್ ವೈರಲ್ ಆಗುತ್ತಿದೆ. ಇದರೊಂದಿಗೆ ಇಬ್ಬರೂ ಕಪ್ಪು ಹೆಲ್ಮೆಟ್ ಧರಿಸಿ ಮಾಧ್ಯಮಗಳಿಂದ ಮರೆಮಾಚಲು ಯತ್ನಿಸಿದ್ದು ಕಂಡುಬಂತು. ಆದರೆ ಪಾಪರಾಜಿಗಳ ಕಣ್ಣುಗಳಿಂದ ಕೊಹ್ಲಿ ದಂಪತಿಗಳು ತಪ್ಪಿಸಿಕೊಳ್ಳಲು ಸಾಧ್ಯವೆ? ಇಬ್ಬರೂ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅವರ ಸ್ಕೂಟಿ ಸವಾರಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿರಾಟ್ ಸ್ಕೂಟರ್ ಓಡಿಸುತ್ತಿದ್ದರೆ, ಅನುಷ್ಕಾ ಅವರ ಹಿಂದೆ ಕುಳಿತಿದ್ದರು. ಕೋಟಿಗಟ್ಟಲೆ ಒಡೆಯ ಕೊಹ್ಲಿ ಸ್ಕೂಟರ್ ಓಡಿಸಿದ್ದು ಕಂಡು ಅಭಿಮಾನಿಗಳು ಸಾಕಷ್ಟು ಅಚ್ಚರಿಗೊಂಡಿದ್ದಾರೆ.
View this post on Instagram
ಬ್ರ್ಯಾಂಡ್ ಆರಂಭಿಸಲಿದ್ದಾರೆ ಕೊಹ್ಲಿ ಮತ್ತು ಅನುಷ್ಕಾ
ಅನುಷ್ಕಾ ಇತ್ತೀಚೆಗಷ್ಟೇ ಕೊಹ್ಲಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ತಮ್ಮ ಹೊಸ ಬ್ರಾಂಡ್ ಬಗ್ಗೆ ಹೇಳಿದ್ದರು. ಒಂದೇ ಬಣ್ಣದ ಟೀ ಶರ್ಟ್ ಮತ್ತು ಜೀನ್ಸ್‌ನಲ್ಲಿ ಕಾಣಿಸಿಕೊಂಡಿರುವ ವಿರಾಟ್ ಅವರೊಂದಿಗಿನ ಫೋಟೋಗಳನ್ನು ಅನುಷ್ಕಾ ಹಂಚಿಕೊಂಡಿದ್ದರು. ಕೊಹ್ಲಿ ಮತ್ತು ಅನುಷ್ಕಾ ರಾಕ್‌ಸ್ಟಾರ್‌ಗಳಂತೆ ಪೋಸ್ ನೀಡಿದ್ದು, ಶೀರ್ಷಿಕೆಯಲ್ಲಿ ಅನುಷ್ಕಾ, ‘ನಾನು ಯಾವಾಗಲೂ ಮುದ್ದಾದ ಹುಡುಗನೊಂದಿಗೆ ಬ್ರ್ಯಾಂಡ್ ಪ್ರಾರಂಭಿಸಲು ಬಯಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಈಗಾಗಲೇ ರೆಸ್ಟೋರೆಂಟ್ ಮತ್ತು ಬಟ್ಟೆ ಬ್ರ್ಯಾಂಡ್ ನಡೆಸುತ್ತಿದ್ದಾರೆ. ಅದೇ ಸಮಯದಲ್ಲಿ, ಅನುಷ್ಕಾ ತನ್ನದೇ ಆದ ಬಟ್ಟೆ ಬ್ರಾಂಡ್ ಅನ್ನು ಸಹ ಹೊಂದಿದ್ದಾರೆ.
ಕ್ರಿಕೆಟ್‌ನಿಂದ ದೂರವಾಗಿದ್ದಾರೆ ಕೊಹ್ಲಿ
ವಿರಾಟ್ ಕೊಹ್ಲಿಗೆ, ಕಳೆದ ಕೆಲವು ವರ್ಷಗಳು ವೃತ್ತಿಜೀವನದ ದೃಷ್ಟಿಯಿಂದ ಉತ್ತಮವಾಗಿಲ್ಲ. 2019 ರಿಂದ ಅವರು ತಮ್ಮ ಬ್ಯಾಟ್‌ನಿಂದ ಯಾವುದೇ ಶತಕ ಗಳಿಸಿಲ್ಲ. ಅದೇ ಸಮಯದಲ್ಲಿ, ಅವರ ಬ್ಯಾಟ್‌ನಿಂದ ಸರಿಯಾಗಿ ರನ್ ಸಹ ಬರುತ್ತಿಲ್ಲ. ಹೀಗಾಗಿ ಕೊಹ್ಲಿಯನ್ನು ತಂಡದಿಂದ ಹೊರಹಾಕಬೇಕೆಂದು ಅನುಭವಿಗಳು ಮಾತನಾಡಿದ್ದಾರೆ. ಆದರೆ ಇದಕ್ಕೆಲ್ಲ ಕೊಹ್ಲಿ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ನಲ್ಲಿ ಉತ್ತರ ನೀಡಲು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ.