Asia Cup 2022: ಏಷ್ಯಾಕಪ್​ಗೆ ಎಲ್ಲಾ ಪ್ರಮುಖ ತಂಡಗಳು ಪ್ರಕಟ; ಹೀಗಿದೆ ಆಟಗಾರರ ಸಂಪೂರ್ಣ ಪಟ್ಟಿ

Asia Cup 2022: ಏಷ್ಯಾಕಪ್ 2022 ಇನ್ನೇನು 7 ದಿನಗಳಲ್ಲಿ ಪ್ರಾರಂಭವಾಗುತ್ತಿದ್ದು, ಅಫ್ಘಾನಿಸ್ತಾನ ಮೊದಲ ದಿನ ಶ್ರೀಲಂಕಾವನ್ನು ಎದುರಿಸಲಿದೆ.

Asia Cup 2022: ಏಷ್ಯಾಕಪ್​ಗೆ ಎಲ್ಲಾ ಪ್ರಮುಖ ತಂಡಗಳು ಪ್ರಕಟ; ಹೀಗಿದೆ ಆಟಗಾರರ ಸಂಪೂರ್ಣ ಪಟ್ಟಿ
Follow us
TV9 Web
| Updated By: ಪೃಥ್ವಿಶಂಕರ

Updated on: Aug 21, 2022 | 8:20 AM

ಏಷ್ಯಾಕಪ್ 2022 (Asia Cup 2022)ರ ವೇಳಾಪಟ್ಟಿಯನ್ನು ಪ್ರಕಟಿಸಿದ ತಕ್ಷಣ, ಎಲ್ಲಾ ತಂಡಗಳು ತಮ್ಮ ತಂಡವನ್ನು ಘೋಷಿಸಲು ಪ್ರಾರಂಭಿಸಿದವು. ಏಷ್ಯಾಕಪ್ 2022 ಇನ್ನೇನು 7 ದಿನಗಳಲ್ಲಿ ಪ್ರಾರಂಭವಾಗುತ್ತಿದ್ದು, ಅಫ್ಘಾನಿಸ್ತಾನ ಮೊದಲ ದಿನ ಶ್ರೀಲಂಕಾವನ್ನು ಎದುರಿಸಲಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಇಂದು ತನ್ನ ತಂಡವನ್ನು ಪ್ರಕಟಿಸಿದೆ. ಅದೇ ಸಮಯದಲ್ಲಿ, ಈ ಟೂರ್ನಿಯಲ್ಲಿ ಭಾರತ ತಂಡ ಆಗಸ್ಟ್ 28 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಮೊದಲ ಏಷ್ಯಾಕಪ್ ನಡೆಯಬೇಕಿತ್ತು, ಆದರೆ ಈಗ ಅದನ್ನು ಯುಎಇಗೆ ಸ್ಥಳಾಂತರಿಸಲಾಗಿದೆ. ಲಂಕಾ ತಂಡ ಪ್ರಕಟದೊಂದಿಗೆ ಏಷ್ಯಾಕಪ್​ನಲ್ಲಿ ಕಣಕ್ಕಿಳಿಯುವ ಪ್ರಮುಖ ತಂಡಗಳ ಸಂಪೂರ್ಣ ವಿವರ ಇಲ್ಲಿದೆ.

2022ರ ಏಷ್ಯಾಕಪ್‌ನಲ್ಲಿ ಭಾಗವಹಿಸಲಿರುವ ಶ್ರೀಲಂಕಾ ತಂಡ

ದಸುನ್ ಶನಕ (ನಾಯಕ), ಧನುಷ್ಕ ಗುಣತಿಲಕ, ಪಾತುಮ್ ನಿಸಂಕ, ಕುಸಲ್ ಮೆಂಡಿಸ್, ಚರಿತ್ ಅಸ್ಲಂಕಾ, ಭಾನುಕಾ ರಾಜಪಕ್ಸೆ, ಅಶೆನ್ ಬಂಡಾರ, ಧನಂಜಯ್ ಡಿ’ಸಿಲ್ವ, ವನಿಂದು ಹಸರಂಗ, ಮಹಿಷ್ ಟೀಕ್ಷಣ, ಜೆಫ್ರಿ ವಾಂಡರ್ಸೆ,ದುಷ್ಮಂತ ಚಮೀರ, ಬಿನೂರ ಫೆರ್ನಾಂಡೋ, ಚಾಮಿಕ ಕರುಣಾರತ್ನೆ, ದಿಲ್ಶನ್ ಮಧುಶಂಕ, ಮತಿಶ ಪತಿರಣ, ದಿನೇಶ್ ಚಂಡಿಮಲ್ (ವಿಕೆಟ್ ಕೀಪರ್), ನವಿಂದು ಫೆರ್ನಾಂಡೋ, ಕಸುನ್ ರಜಿತ

ಇದನ್ನೂ ಓದಿ
Image
Ind vs Zim: ಕ್ಯಾಪ್ಟನ್ ಆಗಿ ಪಾಸ್, ಬ್ಯಾಟರ್ ಆಗಿ ಫೇಲ್; ಕೇವಲ 5 ಎಸೆತಗಳಿಗೆ ಸುಸ್ತಾದ ನಾಯಕ ರಾಹುಲ್
Image
Asia Cup 2022: ಭಾರತಕ್ಕೆ ಸಿಹಿ, ಪಾಕಿಸ್ತಾನಕ್ಕೆ ಕಹಿ; ಏಷ್ಯಾಕಪ್​ನಿಂದ ಬಾಬರ್ ತಂಡದ ಸ್ಟಾರ್ ಬೌಲರ್ ಔಟ್..!
Image
Virat Kohli: 1000 ದಿನಗಳು ಪೂರ್ಣ; ಪಾಕ್ ವಿರುದ್ಧವಾದರೂ ಕೊಹ್ಲಿ ಬ್ಯಾಟ್ ಆಗಸದತ್ತ ಮುಖ ಮಾಡುತ್ತಾ?

ಟೀಂ ಇಂಡಿಯಾ:

ರೋಹಿತ್ ಶರ್ಮಾ (ನಾಯಕ), ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್

ಸ್ಟ್ಯಾಂಡ್‌ಬೈ: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹಾರ್

ಬಾಂಗ್ಲಾದೇಶ ತಂಡ:

ಶಕೀಬ್ ಅಲ್ ಹಸನ್ (ನಾಯಕ), ಅನ್ಮೋಲ್ ಹಕ್, ಪರ್ವೇಜ್ ಎಮಾನ್, ಅಫೀಫ್ ಹೊಸೈನ್, ಮುಶ್ಫಿಕರ್ ರಹೀಮ್, ಮಹಮದುಲ್ಲಾ, ತಸ್ಕಿನ್, ನೂರುಲ್ ಹಸನ್, ಸಬ್ಬೀರ್ ರೆಹಮಾನ್, ಮೊಸದ್ದೆಕ್ ಹೊಸೈನ್, ಸೈಫುದ್ದೀನ್, ಮಹೇದಿ ಹಸನ್, ಮಹಿದಿ ಮಿರಾಜ್, ನಸೋಮ್, ಮುಸ್ತಾಫಿಕ್.

ಪಾಕಿಸ್ತಾನ ತಂಡ:

ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರವೂಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಹನವಾಜ್ ದಹಾನಿ, ಉಸ್ಮಾನ್ ದಹಾನಿ

ಅಫ್ಘಾನಿಸ್ತಾನ ತಂಡ:

ಮೊಹಮ್ಮದ್ ನಬಿ (ನಾಯಕ), ನಜೀಬುಲ್ಲಾ ಝದ್ರಾನ್, ಅಫ್ಸರ್ ಝಝೈ, ಅಜ್ಮತುಲ್ಲಾ ಒಮರ್ಜಾಯ್, ಫರೀದ್ ಅಹ್ಮದ್ ಮಲಿಕ್, ಫಜಲ್ ಹಕ್ ಫಾರೂಕಿ, ಹಶ್ಮತುಲ್ಲಾ ಶಾಹಿದಿ, ಹಜರತುಲ್ಲಾ ಝಜೈ, ಇಬ್ರಾಹಿಂ ಝದ್ರಾನ್, ಕರೀಮ್ ಜನತ್, ಮುಜಿಬ್ ಉಲ್ ರಹಮಾನ್, ಮುಜಿಬ್ ಹಕ್, ನೂರ್ ಅಹ್ಮದ್, ರಹಮಾನುಲ್ಲಾ ಗುರ್ಬಾಜ್, ರಶೀದ್ ಖಾನ್ ಮತ್ತು ಸಮೀವುಲ್ಲಾ ಶಿನ್ವಾರಿ. ನಿಜತ್ ಮಸೂದ್, ಖೈಸ್ ಅಹ್ಮದ್ ಮತ್ತು ಶರಫುದ್ದೀನ್ ಅಶ್ರಫ್ ಈ ಮೂವರು ಸ್ಟಾಂಡ್ ಬೈ ಆಟಗಾರರು.