CSK vs RR Predicted Playing 11: ಚೆನ್ನೈ ಸೂಪರ್ ಕಿಂಗ್ಸ್​ಗೆ ರಾಜಸ್ಥಾನ್ ರಾಯಲ್ಸ್ ಸವಾಲು; ತಂಡದಲ್ಲಿ ಏನೇನು ಬದಲಾವಣೆ?

| Updated By: ganapathi bhat

Updated on: Nov 30, 2021 | 12:17 PM

ಲೀಗ್​ನ 12ನೇ ಪಂದ್ಯದಲ್ಲಿ ಅನುಭವಿ ಆಟಗಾರರನ್ನು ಒಳಗೊಂಡ ಚೆನ್ನೈ ಗೆಲ್ಲುತ್ತಾ ಅಥವಾ ಯುವ ಪಡೆ ರಾಜಸ್ಥಾನ್ ರಾಯಲ್ಸ್ ಗೆಲ್ಲುತ್ತಾ ಎಂದು ಕಾದುನೋಡಬೇಕಿದೆ.

CSK vs RR Predicted Playing 11: ಚೆನ್ನೈ ಸೂಪರ್ ಕಿಂಗ್ಸ್​ಗೆ ರಾಜಸ್ಥಾನ್ ರಾಯಲ್ಸ್ ಸವಾಲು; ತಂಡದಲ್ಲಿ ಏನೇನು ಬದಲಾವಣೆ?
ಎಮ್.ಎಸ್. ಧೋನಿ- ಸಂಜು ಸ್ಯಾಮ್ಸನ್
Follow us on

ಐಪಿಎಲ್ 2021 ಟೂರ್ನಿಯಲ್ಲಿ, ಆಡಿದ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದು, ಒಂದು ಪಂದ್ಯದಲ್ಲಿ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಇಂದು (ಏಪ್ರಿಲ್ 19) ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಎದುರಾಗಲಿವೆ. ಲೀಗ್​ನ 12ನೇ ಪಂದ್ಯದಲ್ಲಿ ಅನುಭವಿ ಆಟಗಾರರನ್ನು ಒಳಗೊಂಡ ಚೆನ್ನೈ ಗೆಲ್ಲುತ್ತಾ ಅಥವಾ ಯುವ ಪಡೆ ರಾಜಸ್ಥಾನ್ ರಾಯಲ್ಸ್ ಗೆಲ್ಲುತ್ತಾ ಎಂದು ಕಾದುನೋಡಬೇಕಿದೆ.

ಈ ಮೊದಲು ಪಂಜಾಬ್ ಕಿಂಗ್ಸ್ ವಿರುದ್ಧ ಆಡಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ವಿಕೆಟ್​ಗಳ ಗೆಲುವು ದಾಖಲಿಸಿತ್ತು. ಚೆನ್ನೈ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿತ್ತು. ಪಂಜಾಬ್ ಆಟಗಾರರನ್ನು 106 ರನ್​ಗರ ಕಟ್ಟಿಹಾಕಿದ್ದು ಮಾತ್ರವಲ್ಲ, ಚೆನ್ನೈ 15 ಓವರ್ ಮುಗಿಯುವಷ್ಟರಲ್ಲಿ, 4 ವಿಕೆಟ್ ಕಳೆದುಕೊಂಡು ಗೆದ್ದಿತ್ತು. ಹಾಗಾಗಿ ತಂಡದ ವಿಶ್ವಾಸ ಈಗ ಹೆಚ್ಚಾಗಿದೆ. ತಂಡದಲ್ಲಿ ಸಾಮಾನ್ಯವಾಗಿ ಆಗಾಗ್ಗೆ ಬದಲಾವಣೆ ಮಾಡಿಕೊಳ್ಳದ, ಚೆನ್ನೈ ಕೂಲ್ ಕ್ಯಾಪ್ಟನ್ ಧೋನಿ ಇಂದು ಕೂಡ ಬದಲಾವಣೆ ಇಲ್ಲದೆ, ಅದೇ ತಂಡವನ್ನು ಆಡಿಸುವ ಸಾಧ್ಯತೆ ಹೆಚ್ಚಿದೆ.

ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿಯೂ ಸೋಲುಂಡಿದ್ದ ರಾಜಸ್ಥಾನ್ ರಾಯಲ್ಸ್, ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವು ದಾಖಲಿಸಿತ್ತು. ಯುವ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದರೆ ರಾಜಸ್ಥಾನ್ ರಾಯಲ್ಸ್​ ಗೆಲ್ಲುವುದು ಕೂಡ ಕಷ್ಟವೇನಲ್ಲ.

ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:
ರುತುರಾಜ್ ಗೈಕ್ವಾಡ್, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂ.ಎಸ್. ಧೋನಿ (ನಾಯಕ/ ವಿಕೆಟ್ ಕೀಪರ್), ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಮೊಯೀನ್ ಅಲಿ, ಸ್ಯಾಮ್ ಕುರ್ರನ್, ಶಾರ್ದುಲ್ ಠಾಕೂರ್, ದೀಪಕ್ ಚಹರ್

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:
ಮನನ್ ವೊಹ್ರಾ, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ/ ವಿಕೆಟ್ ಕೀಪರ್), ರಿಯಾನ್ ಪರಾಗ್, ಡೇವಿಡ್ ಮಿಲ್ಲರ್, ಶಿವಮ್ ಡ್ಯೂಬ್, ರಾಹುಲ್ ತೇವಟಿಯಾ, ಕ್ರಿಸ್ ಮೋರಿಸ್, ಜಯದೇವ್ ಉನಾದ್ಕಟ್, ಮುಸ್ತಾಫಿಜುರ್ ರಹಮಾನ್, ಚೇತನ್ ಸಕರಿಯಾ

ಇದನ್ನೂ ಓದಿ: RR vs CSK IPL 2021 Match Prediction: ಅನುಭವಿ ಧೋನಿಗೆ ಯಂಗ್ ಕ್ಯಾಪ್ಟನ್ ಸಂಜು ಸವಾಲು! ಯಾರ ಸ್ವತ್ತಾಗಲಿದೆ ಗೆಲುವು?

ಇದನ್ನೂ ಓದಿ: RR vs DC, IPL 2021: ರಿಷಭ್ ಪಂತ್ ರನೌಟ್ ಮಾಡಿ ಮೈದಾನದಲ್ಲೇ ಸ್ಟೆಪ್ ಹಾಕಿದ ಪರಾಗ್!

Published On - 5:44 pm, Mon, 19 April 21