ಚೆನ್ನೈ: ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಟೂರ್ನಿಯ 13ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ. ಡೆಲ್ಲಿ ಪರ ಶಿಖರ್ ಧವನ್ 45 (42), ಸ್ಮಿತ್ 33 (29), ಲಲಿತ್ ಯಾದವ್ 22 (25) ರನ್ ಗಳಿಸಿ ಡೆಲ್ಲಿ ಗೆಲುವಿಗೆ ಕಾರಣರಾಗಿದ್ದಾರೆ. ಮುಂಬೈ ಬೌಲರ್‌ಗಳು ತಂಡ ಗೆಲ್ಲಿಸುವ ಪ್ರದರ್ಶನ ನೀಡಿಲ್ಲ.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತ್ತು. ಮುಂಬೈ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲ್ಲಲು 138 ರನ್ ಟಾರ್ಗೆಟ್ ನೀಡಿತ್ತು.
ಮುಂಬೈ ಪರ ನಾಯಕ ರೋಹಿತ್ ಶರ್ಮಾ 44 (30), ಸೂರ್ಯಕುಮಾರ್ ಯಾದವ್ 24, ಇಶಾನ್ ಕಿಶನ್ 26 ಹಾಗೂ ಜಯಂತ್ ಯಾದವ್ 23 ರನ್ ಗಳಿಸಿದ್ದರು. ಉಳಿದ ಆಟಗಾರರು 5 ರನ್ ದಾಟುಲು ಕೂಡ ವಿಫಲರಾಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಅಮಿತ್ ಮಿಶ್ರಾ 4 ಓವರ್ಗೆ 24 ರನ್ ನೀಡಿ ಮುಖ್ಯ 4 ವಿಕೆಟ್ ಕಬಳಿಸಿದ್ದರು. ಅವೇಶ್ ಖಾನ್ 2, ಸ್ಟಾಯ್ನಿಸ್, ರಬಾಡ ಹಾಗೂ ಲಲಿತ್ ಯಾದವ್ ತಲಾ 1 ವಿಕೆಟ್ ಪಡೆದಿದ್ದರು.
ಇದನ್ನೂ ಓದಿ: ICC World T20 -2021: ವೀಸಾ ಅನುಮೋದನೆ ಬಳಿಕ ಸದ್ಯದಲ್ಲೇ ಭಾರತಕ್ಕೆ ಬರುತ್ತಿದ್ದಾರೆ ಪಾಕಿಸ್ತಾನದ ಕ್ರಿಕೆಟ್ ಆಟಗಾರರು!
ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವಿಗೆ 30 ಬಾಲ್ಗೆ 37 ರನ್ ಗಳಿಸಬೇಕಿದೆ. ಡೆಲ್ಲಿ 15 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 101 ರನ್ ದಾಖಲಿಸಿದೆ.
ಬೌಂಡರಿ- ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಮುಂದಾಗಿದ್ದ ಶಿಖರ್ ಧವನ್ ಚಹರ್ ಬಾಲ್ಗೆ ವಿಕೆಟ್ ಒಪ್ಪಿಸಿದ್ದಾರೆ. ಮತ್ತೊಂದು ಬೌಂಡರಿಗೆ ಮುಂದಾದ ಧವನ್ ಕೃನಾಲ್ ಪಾಂಡ್ಯ ಕೈಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ತಂಡದ ನಾಯಕ ರಿಷಭ್ ಪಂತ್ ಕ್ರೀಸ್ಗೆ ಇಳಿದಿದ್ದಾರೆ. ಲಲಿತ್ ಯಾದವ್ 10 (14) ಬ್ಯಾಟಿಂಗ್ ಮಾಡುತ್ತಿದ್ದಾರೆ.
ಚಹರ್ ಓವರ್ನ ಮೊದಲೆರಡು ಬಾಲ್ಗೆ ಶಿಖರ್ ಧವನ್ ಫೋರ್- ಸಿಕ್ಸರ್ ಬಾರಿಸಿದ್ದಾರೆ. ಅಂತಿಮ ಓವರ್ಗಳ ಹಂತದಲ್ಲಿ ವೇಗದ ಆಟಕ್ಕೆ ಮುಂದಾಗಿದ್ದಾರೆ. ತಂಡಕ್ಕೆ 32 ಬಾಲ್ಗೆ 38 ರನ್ ಬೇಕಿದೆ.
ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಲು 36 ಬಾಲ್ಗೆ 48 ರನ್ ಗಳಿಸಬೇಕಿದೆ. ನಿಧಾನಗತಿಯ ಆಟದಿಂದ ಮೇಲೆದ್ದು ಕೊಂಚ ವೇಗವಾಗಿ ಆಡುವ ಅನಿವಾರ್ಯತೆಯೂ ಡೆಲ್ಲಿ ತಂಡಕ್ಕಿದೆ. ಅದಕ್ಕೆ ತಕ್ಕನಾಗಿ ವಿಕೆಟ್ ಉಳಿಸಿಕೊಂಡಿರುವ ಡಿಸಿ, ಮುಂಬೈ ತಂಡಕ್ಕೆ ಸೋಲುಣಿಸುವ ಸಾಧ್ಯತೆ ಕಂಡುಬರುತ್ತಿದೆ. ಇನ್ನೂ 6 ಓವರ್ಗಳು ಬಾಕಿ ಇರುವಂತೆ ಫಲಿತಾಂಶ ಏನಾಗಬಹುದು ಎಂದು ಕಾದುನೋಡಬೇಕಿದೆ. ಡೆಲ್ಲಿ ತಂಡ 14 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿದೆ.
12 ಓವರ್ಗಳ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 2 ವಿಕೆಟ್ ಕಳೆದುಕೊಂಡು 83 ರನ್ ಗಳಿಸಿದೆ. ಗೆಲ್ಲಲು 48 ಬಾಲ್ಗೆ 55 ರನ್ ಬೇಕಿದೆ. ಶಿಖರ್ ಧವನ್, ಲಲಿತ್ ಯಾದವ್ ಕ್ರೀಸ್ನಲ್ಲಿದ್ದಾರೆ. ಜೊತೆಗೆ ಡೆಲ್ಲಿ ತಂಡದ 8 ವಿಕೆಟ್ ಉಳಿದುಕೊಂಡಿದೆ.
6.90 ರನ್ ರೇಟ್ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಲು 54 ಬಾಲ್ಗೆ 62 ರನ್ ಬೇಕಿದೆ. 11 ಓವರ್ ಅಂತ್ಯಕ್ಕೆ 76 ರನ್ ಗಳಿಸಿರುವ ಡೆಲ್ಲಿ 2 ವಿಕೆಟ್ ಕಳೆದುಕೊಂಡಿದೆ. ಶಿಖರ್ ಧವನ್ 27 ಬಾಲ್ಗೆ 27 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 60 ಬಾಲ್ಗೆ 70 ರನ್ ಬೇಕಿದೆ. 10 ಓವರ್ಗಳ ಅಂತ್ಯಕ್ಕೆ ಡೆಲ್ಲಿ ದಾಂಡಿಗರು 68/2 ರನ್ ಗಳಿಸಿದ್ದಾರೆ. ಧವನ್ ಹಾಗೂ ಲಲಿತ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಕೀರನ್ ಪೊಲಾರ್ಡ್ ಬೌಲಿಂಗ್ಗೆ ಸ್ಟೀವ್ ಸ್ಮಿತ್ ಎಲ್ಬಿಡಬ್ಲ್ಯು ಆಗಿ ವಿಕೆಟ್ ಒಪ್ಪಿಸಿದ್ದಾರೆ. 29 ಬಾಲ್ಗೆ 33 ರನ್ ಗಳಿಸಿ ನಿರ್ಗಮಿಸಿದ್ದಾರೆ. ಈ ಮೂಲಕ ಡೆಲ್ಲಿ ತಂಡದ ಸ್ಮಿತ್-ಧವನ್ ಜೊತೆಯಾಟಕ್ಕೆ ಬ್ರೇಕ್ ಬಿದ್ದಿದೆ.
Plumb in front ??
Pollard gets Smith, who played a good hand of 33 runs.
Lalit Yadav walks out to join Dhawan.
DC – 64/2 (9.2)#YehHaiNayiDilli #IPL2021 #DCvMI
— Delhi Capitals (@DelhiCapitals) April 20, 2021
ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಲು 66 ಬಾಲ್ಗೆ 74 ರನ್ಗ ಬೇಕಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಸ್ಟೀವ್ ಸ್ಮಿತ್ ಹಾಗೂ ಶಿಖರ್ ಧವನ್ 50 ರನ್ಗಳ ಜೊತೆಯಾಟ ನೀಡಿದ್ದಾರೆ. ಡೆಲ್ಲಿ ಮೊತ್ತ 9 ಓವರ್ ಅಂತ್ಯಕ್ಕೆ 1 ವಿಕೆಟ್ಗೆ 64 ರನ್ ಆಗಿದೆ.
A fine 50-run partnership comes up between @SDhawan25 & @stevesmith49 ?
Live – https://t.co/9JzXKHJrH8 #DCvMI #VIVOIPL pic.twitter.com/HtRruBTrxA
— IndianPremierLeague (@IPL) April 20, 2021
ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ಓವರ್ಗಳ ಅಂತ್ಯಕ್ಕೆ 52 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಸ್ಮಿತ್ 22 (22) ಹಾಗೂ ಶಿಖರ್ ಧವನ್ 19 (21) ಆಟ ಆಡುತ್ತಿದ್ದಾರೆ. ಸುಲಭ ಟಾರ್ಗೆಟ್ ಬೆನ್ನತ್ತುವಲ್ಲಿ ಅವಸರ ಮಾಡದೇ ನಿಧಾನಗತಿಯ ಆಟಕ್ಕೆ ಮುಂದಾಗಿದ್ದಾರೆ.
6 ಓವರ್ಗಳ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 1 ವಿಕೆಟ್ ಕಳೆದುಕೊಂಡು 39 ರನ್ ದಾಖಲಿಸಿದೆ. ಶಿಖರ್ ಧವನ್, ಸ್ಟೀವ್ ಸ್ಮಿತ್ ಆಡುತ್ತಿದ್ದಾರೆ. ರಿಷಭ್ ಪಂತ್, ಸ್ಟಾಯ್ನಿಸ್, ಹೆಟ್ಮೆಯರ್ ಬ್ಯಾಟಿಂಗ್ ವಿಭಾಗದಲ್ಲಿ ಆಡಲು ಬಾಕಿ ಇದ್ದಾರೆ.
Rotating strike out there, the Gabbar-Smith duo ?
DC – 39/1 (6)#YehHaiNayiDilli #IPL2021 #DCvMI
— Delhi Capitals (@DelhiCapitals) April 20, 2021
ಡೆಲ್ಲಿ ಕ್ಯಾಪಿಟಲ್ಸ್ ಮೊದಲ ವಿಕೆಟ್ ಪತನಗೊಂಡಿದೆ. ಸ್ಮಿತ್ ಹಾಗೂ ಧವನ್ ನಿಧಾನಗತಿಯ ಆಟ ಆಡುತ್ತಿದ್ದಾರೆ. 5 ಓವರ್ಗಳಲ್ಲಿ ಡೆಲ್ಲಿ 34 ರನ್ ಗಳಿಸಿದೆ. ಗೆಲ್ಲಲು 90 ಬಾಲ್ಗೆ 104 ರನ್ ಬೇಕಿದೆ.
ಡೆಲ್ಲಿ ಕ್ಯಾಪಿಟಲ್ಸ್ 4 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 28 ರನ್ ಗಳಿಸಿದೆ. ಕಳೆದ ಪಂದ್ಯದಲ್ಲಿ ಮಿಂಚಿದ್ದ ಶಿಖರ್ ಧವನ್ 9(7) ಹಾಗೂ ಸ್ಟೀವ್ ಸ್ಮಿತ್ 11(12) ಕ್ರೀಸ್ನಲ್ಲಿದ್ದಾರೆ.
3 ಓವರ್ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 22 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಶಿಖರ್ ಧವನ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪೃಥ್ವಿ ಶಾ 5 ಬಾಲ್ಗೆ 7 ರನ್ ಗಳಿಸಿ ಜಯಂತ್ ಯಾದವ್ಗೆ ವಿಕೆಟ್ ಒಪ್ಪಿಸಿದ್ದಾರೆ.
ನಿಗದಿತ 20 ಓವರ್ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 9 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಲು 138 ರನ್ ಬೇಕಿದೆ.
ರಾಹುಲ್ ಚಹರ್ 6 ಬಾಲ್ಗೆ 6 ರನ್ ಗಳಿಸಿ ನಿರ್ಗಮಿಸಿದ್ದಾರೆ. 9 ವಿಕೆಟ್ ಕಳೆದುಕೊಂಡಿರುವ ಮುಂಬೈ 135 ರನ್ ಗಳಿಸಿ ಆಡುತ್ತಿದೆ. 2 ಬಾಲ್ ಉಳಿದಿದೆ.
22 ಬಾಲ್ಗೆ 23 ರನ್ ಗಳಿಸಿ ಜಯಂತ್ ಯಾದವ್ ಔಟ್ ಆಗಿದ್ದಾರೆ. ರಬಾಡ ಬಾಲ್ಗೆ ರಬಾಡಗೆ ಕ್ಯಾಚ್ ನೀಡಿ ಯಾದವ್ ನಿರ್ಗಮಿಸಿದ್ದಾರೆ. ಅಂತಿಮ ಓವರ್ನಲ್ಲಿ ತಂಡದ ಮೊತ್ತ 125 ದಾಟುವಲ್ಲಿ ಯಾದವ್ ಆಟ ಮುಖ್ಯ ಪಾತ್ರವಹಿಸಿದೆ. ಮುಂಬೈ ಸ್ಕೋರ್ 19 ಓವರ್ಗೆ 130/8 ಆಗಿದೆ. ಚಹರ್ ಹಾಗೂ ಬುಮ್ರಾ ಕ್ರೀಸ್ನಲ್ಲಿದ್ದಾರೆ.
Match 13. 18.5: WICKET! J Yadav (23) is out, c & b Kagiso Rabada, 129/8 https://t.co/1Pg4mDVMHy #DCvMI #VIVOIPL #IPL2021
— IndianPremierLeague (@IPL) April 20, 2021
ಮಿಶ್ರಾ ಸ್ಪಿನ್ ಕಮಾಲ್ಗೆ ಇಶಾನ್ ಕಿಶನ್ ಔಟ್ ಆಗಿದ್ದಾರೆ. ಮುಂಬೈ ಇಂಡಿಯನ್ಸ್ ಆಟಗಾರರು 18 ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿದ್ದಾರೆ. ಇಶಾನ್ ಕಿಶನ್ 28 ಬಾಲ್ಗೆ 26 ರನ್ ಗಳಿಸಿ ನಿರ್ಗಮಿಸಿದ್ದಾರೆ. ಜಯಂತ್ ಯಾದವ್ ಹಾಗೂ ಚಹರ್ ಆಡುತ್ತಿದ್ದಾರೆ.
16 ಓವರ್ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಕಳೆದುಕೊಂಡು 114 ರನ್ ಗಳಿಸಿದೆ. ತಂಡದ ಪರ ಇಶಾನ್ ಕಿಶನ್ ಹಾಗೂ ಜಯಂತ್ ಯಾದವ್ ಕ್ರೀಸ್ನಲ್ಲಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ 14 ಓವರ್ಗೆ 6 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿದೆ. ಇಶಾನ್ ಕಿಶನ್ 18 ಬಾಲ್ಗೆ 12 ಹಾಗೂ ಜಯಂತ್ 7 ಬಾಲ್ಗೆ 7 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಂಡ ಮುಂಬೈ ಆಟ ನಿಧಾನವಾಗಿ ಸಾಗುತ್ತಿದೆ.
13 ಓವರ್ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಕಳೆದುಕೊಂಡು ಕೇವಲ 89 ರನ್ ಗಳಿಸಿದೆ. ಇಶಾನ್ ಕಿಶನ್ 15 ಬಾಲ್ಗೆ 9 ಹಾಗೂ ಜಯಂತ್ ಯಾದವ್ 3 ಬಾಲ್ಗೆ 2 ರನ್ ಗಳಿಸಿ ಕಣದಲ್ಲಿದ್ದಾರೆ.
5 ಬಾಲ್ಗೆ 2 ರನ್ ಗಳಿಸಿ ಕೀರನ್ ಪೊಲಾರ್ಡ್ ಕೂಡ ಔಟ್ ಆಗಿದ್ದಾರೆ. ಪೊಲಾರ್ಡ್ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸೊರಗಿದೆ. 12 ಓವರ್ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡಿರುವ ಮುಂಬೈ 84 ರನ್ ಗಳಿಸಲಷ್ಟೇ ಶಕ್ತವಾಗಿದೆ.
Rohit Sharma ✅
Hardik Pandya ✅
Kieron Pollard ✅Mishi bhai on fire ?
MI – 88/6 (12.4)#YehHaiNayiDilli #IPL2021 #DCvMI pic.twitter.com/AeAwFBQGKz
— Delhi Capitals (@DelhiCapitals) April 20, 2021
5 ಬಾಲ್ಗೆ 1 ರನ್ ಗಳಿಸಿ ಕೃನಾಲ್ ಪಾಂಡ್ಯ ವಿಕೆಟ್ ಒಪ್ಪಿಸಿದ್ದಾರೆ. ಲಲಿತ್ ಯಾದವ್ ಬಾಲ್ಗೆ ಬೌಲ್ಡ್ ಆಗಿದ್ದಾರೆ. ಮುಂಬೈ ಇಂಡಿಯನ್ಸ್ 11 ಓವರ್ ಅಂತ್ಯಕ್ಕೆ 82 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದ್ದಾರೆ. ಇಶಾನ್ ಕಿಶನ್ ಹಾಗೂ ಕೀರನ್ ಪೊಲಾರ್ಡ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ 10 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 78 ರನ್ ಕಲೆಹಾಕಿದೆ. ತಂಡದ ಪರ ಕೃನಾಲ್ ಪಾಂಡ್ಯ ಮತ್ತು ಇಶಾನ್ ಕಿಶನ್ ಬ್ಯಾಟ್ ಬೀಸುತ್ತಿದ್ದಾರೆ.
ರೋಹಿತ್ ಶರ್ಮಾ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಔಟ್ ಆಗಿದ್ದಾರೆ. ರನ್ ಗಳಿಸದೇ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದ್ದಾರೆ. ಕೊನೆಯ ಓವರ್ನಲ್ಲಿ ಮಿಶ್ರಾ ಸ್ಪಿನ್ಗೆ 2 ವಿಕೆಟ್ ಬಿದ್ದಿದೆ.
Two big wickets in an over for @MishiAmit ??
Rohit Sharma and Hardik Pandya depart.
Live – https://t.co/9JzXKHJrH8 #DCvMI #VIVOIPL pic.twitter.com/7jS3EjiTdf
— IndianPremierLeague (@IPL) April 20, 2021
30 ಬಾಲ್ಗೆ 44 ರನ್ ಗಳಿಸಿ ರೋಹಿತ್ ಶರ್ಮಾ ಔಟ್ ಆಗಿದ್ದಾರೆ. ಮಿಶ್ರಾ ಎಸೆತವನ್ನು ಸ್ಮಿತ್ಗೆ ಕ್ಯಾಚ್ ನೀಡಿ ರೋಹಿತ್ ನಿರ್ಗಮಿಸಿದ್ದಾರೆ.
Rohit returns for a well-compiled 44 (30), trying to go big against Mishra!#MI – 76/3 (8.4)#OneFamily #MumbaiIndians #IPL2021 #DCvMI https://t.co/TMtJw1kNco
— Mumbai Indians (@mipaltan) April 20, 2021
ಮುಂಬೈ ಇಂಡಿಯನ್ಸ್ ತಂಡ 8 ಓವರ್ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 70 ರನ್ ದಾಖಲಿಸಿದೆ. ರೋಹಿತ್ ಶರ್ಮಾ 38 ರನ್ ಗಳಿಸಿ ಆಡುತ್ತಿದ್ದಾರೆ.
ಅವೇಶ್ ಖಾನ್ ಬೌಲಿಂಗ್ಗೆ ಕೀಪರ್ ರಿಷಭ್ ಪಂತ್ಗೆ ಕ್ಯಾಚ್ ನೀಡಿ ಸೂರ್ಯಕುಮಾರ್ ಯಾದವ್ ವಿಕೆಟ್ ಒಪ್ಪಿಸಿದ್ದಾರೆ. 15 ಬಾಲ್ಗೆ 24 ರನ್ ಗಳಿಸಿ ಯಾದವ್ ಔಟ್ ಆಗಿದ್ದಾರೆ. 7 ಓವರ್ ಅಂತ್ಯಕ್ಕೆ ಮುಂಬೈ 2 ವಿಕೆಟ್ ಕಳೆದುಕೊಂಡು 67 ರನ್ ಗಳಿಸಿದೆ. ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಕ್ರಿಸ್ನಲ್ಲಿದ್ದಾರೆ.
6 ಓವರ್ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 1 ವಿಕೆಟ್ ಕಳೆದುಕೊಂಡು 55 ರನ್ ದಾಖಲಿಸಿದೆ. ರೋಹಿತ್ ಶರ್ಮಾ 29 (19) ಹಾಗೂ ಸೂರ್ಯಕುಮಾರ್ ಯಾದವ್ 23 (13) ಕ್ರೀಸ್ ಕಾಯ್ದುಕೊಂಡಿದ್ದಾರೆ. ಮುಂಬೈ ಪರ ಸ್ಟಾಯ್ನಿಸ್ 1 ವಿಕೆಟ್ ಪಡೆದಿದ್ದಾರೆ.
Just one wicket away from shifting the momentum back to our side ?
Dilliwalon, who'll pick the next wicket for us?
MI – 55/1 (6)#YehHaiNayiDilli #IPL2021 #DCvMI
— Delhi Capitals (@DelhiCapitals) April 20, 2021
ಮುಂಬೈ ಇಂಡಿಯನ್ಸ್ ಪರ ತಂಡದ ನಾಯಕ ರೋಹಿತ್ ಶರ್ಮಾ ಬಿರುಸಿನ ಆಟ ಆಡುತ್ತಿದ್ದಾರೆ. 17 ಬಾಲ್ಗೆ 2 ಬೌಂಡರಿ, 2 ಸಿಕ್ಸರ್ ಸಹಿತ 28 ರನ್ ಗಳಿಸಿದ್ದಾರೆ. ಮುಂಬೈ ಇಂಡಿಯನ್ಸ್ 5 ಓವರ್ ಅಂತ್ಯಕ್ಕೆ 45 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.
ಡೆಲ್ಲಿ ಪರ ನಾಲ್ಕನೇ ಓವರ್ ಬೌಲಿಂಗ್ ಮಾಡಿದ ಆರ್.ಅಶ್ವಿನ್ ಓವರ್ಗೆ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಫೋರ್-ಸಿಕ್ಸರ್ ಸಿಡಿಸಿದ್ದಾರೆ. ಮುಂಬೈ ತಂಡದ ಮೊತ್ತ 4 ಓವರ್ಗೆ 1 ವಿಕೆಟ್ ಕಳೆದುಕೊಂಡು 31 ರನ್ ಆಗಿದೆ.
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಪಂದ್ಯದ ಮೊದಲ ಬೌಂಡರಿ ಬಾರಿಸಿದ್ದಾರೆ. ಸ್ಟಾಯ್ನಿಸ್ ಬೌಲಿಂಗ್ನ ಕೊನೆಯ ಬಾಲ್ಗೆ ನಾಲ್ಕು ರನ್ ಕಲೆಹಾಕಿದ್ದಾರೆ. ಡೆಲ್ಲಿ ವಿರುದ್ಧ ಮುಂಬೈ 3 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 16 ರನ್ ಕಲೆಹಾಕಿದೆ.
ಮುಂಬೈ ಇಂಡಿಯನ್ಸ್ ದಾಂಡಿಗ ಕ್ವಿಂಟನ್ ಡಿ ಕಾಕ್ 4 ಬಾಲ್ಗೆ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಸ್ಟಾಯಿನಿಸ್ ಬಾಲ್ಗೆ ಕೀಪರ್ ಪಂತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಮುಂಬೈ ಇಂಡಿಯನ್ಸ್ 9 ರನ್ಗೆ 1 ವಿಕೆಟ್ ಕಳೆದುಕೊಂಡಿದೆ.
Come on, Stoin ?
MI – 9/1 (2.1)#YehHaiNayiDilli #IPL2021 #DCvMI pic.twitter.com/VCWXQmwGFM
— Delhi Capitals (@DelhiCapitals) April 20, 2021
2 ಓವರ್ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ 9 ರನ್ ಗಳಿಸಿದೆ. ಯಾವುದೇ ವಿಕೆಟ್ ನಷ್ಟವಿಲ್ಲದೆ ಮುಂಬೈ ಬ್ಯಾಟಿಂಗ್ ಮಾಡುತ್ತಿದೆ. ಡೆಲ್ಲಿ ಪರ ಸ್ಪಿನ್ನರ್ ಆರ್. ಅಶ್ವಿನ್ ಬೌಲಿಂಗ್ ಮಾಡಿದ್ದು, ಕೇವಲ 3 ರನ್ ಬಿಟ್ಟುಕೊಟ್ಟಿದ್ದಾರೆ.
ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ತಂಡದ ಪರ ರೋಹಿತ್ ಶರ್ಮಾ ಹಾಗೂ ಡಿ ಕಾಕ್ ಕ್ರೀಸ್ನಲ್ಲಿದ್ದಾರೆ. ಮೊದಲ ಓವರ್ನ್ನು ಸ್ಟಾಯ್ನಿಸ್ ಬಾಲ್ ಮಾಡಿದ್ದು 6 ರನ್ ಬಿಟ್ಟುಕೊಟ್ಟಿದ್ದಾರೆ. ತಂಡದ ಮೊತ್ತ 6/0 (1 ಓವರ್) ಆಗಿದೆ. ಯಾವುದೇ ಬೌಂಡರಿ ಅಥವಾ ಸಿಕ್ಸರ್ ಮುಂಬೈನಿಂದ ಬಂದಿಲ್ಲ.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್: ಕ್ವಿಂಟನ್ ಡಿ ಕಾಕ್, ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ರಾಹುಲ್ ಚಹರ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
The Men in Blue & Gold will be batting first tonight! ?
Jayant Yadav replaces @AdamMilne19 in the playing XI! ?
Live Updates ? https://t.co/PrCK5WlEvz#OneFamily #MumbaiIndians #MI #DCvMI #IPL2021 @SamsungIndia pic.twitter.com/zHWa2mIedR
— Mumbai Indians (@mipaltan) April 20, 2021
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್: ಪೃಥ್ವಿ ಶಾ, ಶಿಖರ್ ಧವನ್, ಸ್ಟೀವನ್ ಸ್ಮಿತ್, ರಿಷಭ್ ಪಂತ್ (ನಾಯಕ), ಮಾರ್ಕಸ್ ಸ್ಟೋಯಿನಿಸ್, ಶಿಮ್ರಾನ್ ಹೆಟ್ಮಿಯರ್, ಲಲಿತ್ ಯಾದವ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡ, ಅಮಿತ್ ಮಿಶ್ರಾ, ಅವೇಶ್ ಖಾನ್
Hettie returns and so does Mishi bhai ?
Presenting our Playing XI to take on the defending champions ?#DCvMI #YehHaiNayiDilli #IPL2021 pic.twitter.com/QHo4IVfP2Y
— Delhi Capitals (@DelhiCapitals) April 20, 2021
ಟಾಸ್ ವೇಳೆ ರಿಷಭ್ ಪಂತ್ ಮತ್ತು ರೋಹಿತ್ ಶರ್ಮಾ
RO & Pant's bond on ⏸ for the next 40 overs!
Paltan, it’s time for #DCvMI! ?#OneFamily #MumbaiIndians #MI #IPL2021 pic.twitter.com/3iHcUZhgBV
— Mumbai Indians (@mipaltan) April 20, 2021
ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಮಾಡಲಿದೆ.
Match 13. Mumbai Indians win the toss and elect to bat https://t.co/1Pg4mDVMHy #DCvMI #VIVOIPL #IPL2021
— IndianPremierLeague (@IPL) April 20, 2021
Published On - 10:56 pm, Tue, 20 April 21