Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಪಂದ್ಯದಲ್ಲೇ ಶೂನ್ಯ ಸುತ್ತಿದ್ದ ಧೋನಿ.. ಅಂತರ​ರಾಷ್ಟ್ರೀಯ ಕ್ರಿಕೆಟ್​ ಜಗತ್ತಿಗೆ ಕಾಲಿರಿಸಿ ಇಂದಿಗೆ 16 ವರ್ಷ

ಚಿತ್ತಗಾಂಗ್‌ನಲ್ಲಿ ನಡೆದ ತಮ್ಮ ಮೊದಲ ಏಕದಿನ ಪಂದ್ಯದಲ್ಲಿ ಧೋನಿ ಕೇವಲ 0 ರನ್ ಗಳಿಸಿದರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಇನ್ನಿಂಗ್ಸ್ ಆಡುತ್ತಿರುವ ಧೋನಿ ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಜೊತೆಗೆ ಮೊದಲ ಎಸೆತದಲ್ಲಿ ದುರದೃಷ್ಟಕರವಾದ ರನ್ ಔಟ್​ಗೆ ಬಲಿಯಾದರು.

ಮೊದಲ ಪಂದ್ಯದಲ್ಲೇ ಶೂನ್ಯ ಸುತ್ತಿದ್ದ ಧೋನಿ.. ಅಂತರ​ರಾಷ್ಟ್ರೀಯ ಕ್ರಿಕೆಟ್​ ಜಗತ್ತಿಗೆ ಕಾಲಿರಿಸಿ ಇಂದಿಗೆ 16 ವರ್ಷ
ಮಹೇಂದ್ರ ಸಿಂಗ್ ಧೋನಿ
Follow us
ಪೃಥ್ವಿಶಂಕರ
|

Updated on:Dec 23, 2020 | 4:09 PM

ಇಂದಿಗೆ 16 ವರ್ಷಗಳ ಹಿಂದೆ ಅಂದರೆ 23 ಡಿಸೆಂಬರ್ 2004, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಎಂದಿಗೂ ಬಹಳ ವಿಶೇಷವಾದ ದಿನವಾಗಿದೆ. ಈ ದಿನದಂದ ಭಾರತ ತಂಡವು 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 11 ರನ್‌ಗಳಿಂದ ಸೋಲಿಸಿತ್ತು.

ಆದರೆ ಈ ವಿಚಾರ ಅಷ್ಟು ವಿಶೇಷವಲ್ಲ. ಬದಲಿಗೆ, ಇದೆ ದಿನದಂದು 23 ವರ್ಷದ ಆಟಗಾರನೊಬ್ಬ ಭಾರತೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದ. ಆತನ ಉದ್ದನೆಯ ಕೂದಲು ಮತ್ತು ವಿಶಿಷ್ಟ ತಂತ್ರಗಳು, ನಂತರ ದಿನಗಳಲ್ಲಿ ಆತ ನಾಯಕನಾಗಿ ತಂಡವನ್ನು ಮುನ್ನಡಿಸಿದ ರೀತಿ ಇಡೀ ವಿಶ್ವವೆ ಬೇರಗಾಗುವಂತೆ ಮಾಡಿತ್ತು. ಈ ಸಾಧನೆಗೈದ ಕ್ರಿಕೆಟಿಗ ಮತ್ತ್ಯಾರೂ ಅಲ್ಲ.. ಅವರೇ ಮಹೇಂದ್ರ ಸಿಂಗ್ ಧೋನಿ.

ಭಾರತ ತಂಡದಲ್ಲಿ ಮೊದಲ ಬಾರಿಗೆ ಮಹೇಂದ್ರ ಸಿಂಗ್ ಧೋನಿಗೆ (ಎಂ.ಎಸ್. ಧೋನಿ) ಅಂದರೆ ಇಂದಿಗೆ 16 ವರ್ಷಗಳ ಹಿಂದೆ ಅವಕಾಶ ಸಿಕ್ಕಿತು. ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಧೋನಿ ತಂಡದಲ್ಲಿ ಸ್ಥಾನ ಪಡೆದಿದ್ದರು.

ಮೊದಲ ಪಂದ್ಯದಲ್ಲಿಯೇ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದ ಧೋನಿ.. ಮುಂದಿನ 15 ವರ್ಷಗಳವರೆಗೆ, ಧೋನಿ ಅವರ ಅದ್ಭುತ ಫಿನಿಶಿಂಗ್ ಮತ್ತು ಬುದ್ಧಿವಂತ ನಾಯಕತ್ವದ ಸಹಾಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಿದರು. ಆದರೆ ಧೋನಿ ತಮ್ಮ ವೃತ್ತಿಜೀವನವನ್ನು ಅಷ್ಟು ಉತ್ತಮವಾಗಿ ಪ್ರಾರಂಭಿಸಲಿಲ್ಲ. ಆಡಿದ ಮೊದಲ ಪಂದ್ಯದಲ್ಲಿಯೇ ಧೋನಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿ ಎಲ್ಲರ ನಿರೀಕ್ಷೆಗೆ ತಣ್ಣೀರೆರಚ್ಚಿದ್ದರು.

ಮುಂದೆ.. 2004 ರಲ್ಲಿ ಇಂಡಿಯಾ ಎ ಜೊತೆ ಕೀನ್ಯಾ ಪ್ರವಾಸದಲ್ಲಿ ಧೋನಿ ಭರ್ಜರಿ ಇನ್ನಿಂಗ್ಸ್ ಮತ್ತು ದೊಡ್ಡ ಹೊಡೆತಗಳನ್ನು ಹೊಡೆಯುವ ಮೂಲಕ ಆಯ್ಕೆಗಾರರ ​​ಗಮನ ಸೆಳೆದರು. ಆ ಸಮಯದಲ್ಲಿ ಭಾರತೀಯ ತಂಡವು ಉತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ನನ್ನು ಹುಡುಕುತ್ತಿತ್ತು. ಪಾರ್ಥಿವ್ ಪಟೇಲ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ತಂಡಕ್ಕೆ ತರಲು ಪ್ರಯತ್ನಿಸಲಾಯಿತು.  ಆದರೆ ಅವರಿಬ್ಬರೂ ಹೆಚ್ಚಿನ ಯಶಸ್ಸನ್ನು ಗಳಿಸಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಧೋನಿಯ ಮೇಲೆ ಹೆಚ್ಚು ನಿರೀಕ್ಷೆಗಳನ್ನು ಇಡಲಾಯಿತು.

ಮೊದಲ ಎಸೆತದಲ್ಲಿಯೇ ರನ್ ಔಟ್..​ ಚಿತ್ತಗಾಂಗ್‌ನಲ್ಲಿ ನಡೆದ ತಮ್ಮ ಮೊದಲ ಏಕದಿನ ಪಂದ್ಯದಲ್ಲಿ ಧೋನಿ ಕೇವಲ 0 ರನ್ ಗಳಿಸಿದರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಇನ್ನಿಂಗ್ಸ್ ಆಡುತ್ತಿದ್ದ ಧೋನಿ ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಜೊತೆಗೆ ಮೊದಲ ಎಸೆತದಲ್ಲಿಯೇ ದುರದೃಷ್ಟಕರ ರೀತಿಯಲ್ಲಿ ರನ್ ಔಟ್​ಗೆ ಬಲಿಯಾದರು.

ಈ ಸರಣಿಯ ನಂತರ, 2005 ರಲ್ಲಿ ಭಾರತದಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಅವರಿಗೆ ಎರಡನೇ ಅವಕಾಶ ನೀಡಲಾಯಿತು. ಪಾಕಿಸ್ತಾನ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಧೋನಿ ಕೇವಲ 123 ಎಸೆತಗಳಲ್ಲಿ 148 ರನ್ ಗಳಿಸಿ ಕ್ರಿಕೆಟ್​ ಪ್ರೇಮಿಗಳ ಮನೆಮಾತಾದರು.

ತಂಡದ ಭವಿಷ್ಯವನ್ನು ಬದಲಾಯಿಸಿದ ಕ್ಯಾಪ್ಟನ್​ ಕೂಲ್​.. ಈ ಪಂದ್ಯದ ನಂತರ, ಮುಂದಿನ 15 ವರ್ಷಗಳವರೆಗೆ ಧೋನಿ ಏನು ಮಾಡಿದರು ಎಂಬುದಕ್ಕೆ ಇಡೀ ಕ್ರಿಕೆಟ್ ಜಗತ್ತು ಸಾಕ್ಷಿಯಾಗಿದೆ. ಭಾರತ ತಂಡ ಎರಡು ಬಾರಿ ವಿಶ್ವಕಪ್ ಗೆಲ್ಲುವುದರಿಂದ ಹಿಡಿದು ಚಾಂಪಿಯನ್ಸ್ ಟ್ರೋಫಿ ಗೆಲ್ಲುವವರೆಗೆ, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಪ್ರಥಮ ಸ್ಥಾನ ಗಳಿಸುವವರೆಗೆ, ಧೋನಿಯ ನಾಯಕತ್ವದಲ್ಲಿ ಭಾರತವು ಉತ್ತುಂಗಕ್ಕೆ ಏರಿತು.

ಆಗಸ್ಟ್ 15, 2020ರಂದು ನಿವೃತ್ತಿ ಘೋಷಿಸಿದ ಧೋನಿ.. ಕ್ರಿಕೆಟ್ ಕ್ಷೇತ್ರದಲ್ಲಿ ಬಹಳ ಸಮಯ ಕಳೆದ ನಂತರ ಧೋನಿ ಈ ವರ್ಷ ಆಟದಿಂದ ನಿವೃತ್ತರಾದರು. ಅಪ್ಪಟ ದೇಶಾಭಿಮಾನಿಯಾದ ಧೋನಿ, ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಯಂದು.. ಆಗಸ್ಟ್ 15, 2020 ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವೀಡಿಯೊ ಒಂದನ್ನು ಹಾಕುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದರು. ಧೋನಿ ಅವರ ನಿವೃತ್ತಿ ಘೋಷಣೆಯು ಅವರ ಅಸಂಖ್ಯಾತ ಅಭಿಮಾನಿಗಳ ಹೃದಯ ಒಡೆಯುವಂತೆ ಮಾಡಿತು. ಸದ್ಯ ಧೋನಿ ಚುಟುಕು ಸಮರ ಐಪಿಎಲ್​ನಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ರಾಹುಲ್, ಮಯಾಂಕ್​ಗೆ ಮೈದಾನದಲ್ಲೇ.. ಮಹಾ ಗುರು ಧೋನಿಯಿಂದ ಪಾಠ

Published On - 3:47 pm, Wed, 23 December 20

ಡಿಫರೆಂಟ್ ಆಗಿ ‘ಯುದ್ಧಕಾಂಡ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್
ಡಿಫರೆಂಟ್ ಆಗಿ ‘ಯುದ್ಧಕಾಂಡ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್
ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಕೇಂದ್ರ ಒಪ್ಪಿಗೆ
ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲು ಕೇಂದ್ರ ಒಪ್ಪಿಗೆ
ಪತ್ನಿಯ ಕಿರುಕುಳಕ್ಕೆ ಬೇಸತ್ತು ರಾಜಭವನದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಪತಿ
ಪತ್ನಿಯ ಕಿರುಕುಳಕ್ಕೆ ಬೇಸತ್ತು ರಾಜಭವನದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಪತಿ
ಸುಲಭ ಕ್ಯಾಚ್ ಬಿಟ್ಟು ಮೌನಕ್ಕೆ ಜಾರಿದ ಕೊಹ್ಲಿ
ಸುಲಭ ಕ್ಯಾಚ್ ಬಿಟ್ಟು ಮೌನಕ್ಕೆ ಜಾರಿದ ಕೊಹ್ಲಿ
ದೆಹಲಿ: ಗೋಡೆ ಕುಸಿದು ವ್ಯಕ್ತಿ ಸಾವು, ಹಲವರಿಗೆ ಗಾಯ
ದೆಹಲಿ: ಗೋಡೆ ಕುಸಿದು ವ್ಯಕ್ತಿ ಸಾವು, ಹಲವರಿಗೆ ಗಾಯ
ಮೈಸೂರು ದಸರಾ ಕ್ರೀಡಾಕೂಟದಲ್ಲಿ ಕಂಬಳ ಸ್ಪರ್ಧೆ: ಡಿಕೆ ಶಿವಕುಮಾರ್ ಘೋಷಣೆ
ಮೈಸೂರು ದಸರಾ ಕ್ರೀಡಾಕೂಟದಲ್ಲಿ ಕಂಬಳ ಸ್ಪರ್ಧೆ: ಡಿಕೆ ಶಿವಕುಮಾರ್ ಘೋಷಣೆ
ಭರ್ಜರಿ ಸೆಂಚುರಿ ಸಿಡಿಸಿದ ರಿಝ್ವಾನ್: ತಂಡಕ್ಕೆ ಸೋಲು..!
ಭರ್ಜರಿ ಸೆಂಚುರಿ ಸಿಡಿಸಿದ ರಿಝ್ವಾನ್: ತಂಡಕ್ಕೆ ಸೋಲು..!
ವಿನಯ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಜತ್ ಹೇಳಿದ್ದೇನು? ವಿಡಿಯೋ ನೋಡಿ
ವಿನಯ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಜತ್ ಹೇಳಿದ್ದೇನು? ವಿಡಿಯೋ ನೋಡಿ
SRH vs PBKS: ಗೆರೆ ದಾಟಿದ್ದೇ ಪಂಜಾಬ್ ಕಿಂಗ್ಸ್ ಸೋಲಿಗೆ ಕಾರಣ..!
SRH vs PBKS: ಗೆರೆ ದಾಟಿದ್ದೇ ಪಂಜಾಬ್ ಕಿಂಗ್ಸ್ ಸೋಲಿಗೆ ಕಾರಣ..!
VIDEO: ಚೆಂಡು ಎಲ್ಲಿ? ಕಣ್ಮುಂದೆ ಬಾಲ್ ಇದ್ದರೂ, ಹುಡುಕಾಡಿದ ಇಶಾನ್ ಕಿಶನ್
VIDEO: ಚೆಂಡು ಎಲ್ಲಿ? ಕಣ್ಮುಂದೆ ಬಾಲ್ ಇದ್ದರೂ, ಹುಡುಕಾಡಿದ ಇಶಾನ್ ಕಿಶನ್