
ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ಗೆ (Paris Olympics 2024) ದಿನಗಣನೆ ಶುರುವಾಗಿದೆ. ಜುಲೈ 26 ರಿಂದ ಆರಂಭವಾಗಲಿರುವ ಈ ಕ್ರೀಡಾಕೂಟದಲ್ಲಿ 206 ದೇಶಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ವಿಶೇಷ ಎಂದರೆ ಈ ಬಾರಿ ನಡೆಯುತ್ತಿರುವುದು ಒಲಿಂಪಿಯಾಡ್. ಅಂದರೆ ಸಮ್ಮರ್ ಒಲಿಂಪಿಕ್ಸ್. ಒಲಿಂಪಿಕ್ಸ್ನಲ್ಲೂ ಎರಡು ವಿಧವಿದೆ. ಅವೆಂದರೆ ಸಮ್ಮರ್ ಒಲಿಂಪಿಕ್ಸ್ ಮತ್ತು ವಿಂಟರ್ ಒಲಿಂಪಿಕ್ಸ್.
ಇಲ್ಲಿ ಸಮ್ಮರ್ ಒಲಿಂಪಿಕ್ಸ್ ಎಂದರೆ ಬೇಸಿಗೆ ಕಾಲದ ಕ್ರೀಡಾಕೂಟ. ಹಾಗೆಯೇ ವಿಂಟರ್ ಒಲಿಂಪಿಕ್ಸ್ ಎಂದರೆ ಚಳಿಗಾಲದ ಕ್ರೀಡಾಕೂಟ. ಇನ್ನು ಸರಳವಾಗಿ ಹೇಳಬೇಕೆಂದರೆ ಬೇಸಿಗೆ ಕಾಲದಲ್ಲಿ ಆಡಲಾಗುವ ಆಟಗಳನ್ನು ಸಮ್ಮರ್ ಒಲಿಂಪಿಕ್ಸ್ನಲ್ಲಿ ಆಡಲಾಗುತ್ತದೆ. ಹಾಗೆಯೇ ಚಳಿಗಾಲದಲ್ಲಿ ಅಥವಾ ಶೀತ ಹವಾಮಾನದಲ್ಲಿ ಆಡಬಹುದಾದ ಕ್ರೀಡೆಗಳನ್ನು ವಿಂಟರ್ ಒಲಿಂಪಿಕ್ಸ್ನಲ್ಲಿ ಆಯೋಜಿಸಲಾಗುತ್ತದೆ.
ಬೇಸಿಗೆ ಒಲಿಂಪಿಕ್ಸ್ ಅನ್ನು ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್‌ನಲ್ಲಿ ಆಯೋಜಿಸಲಾಗುತ್ತದೆ. ಹಾಗೆಯೇ ಚಳಿಗಾಲದ ಒಲಿಂಪಿಕ್ಸ್ ಅನ್ನು ಸಾಮಾನ್ಯವಾಗಿ ಫೆಬ್ರವರಿಯಲ್ಲಿ ನಡೆಸಲಾಗುತ್ತದೆ. ಇಲ್ಲಿ ವಿಂಟರ್ ಒಲಿಂಪಿಕ್ಸ್ ಆಯೋಜಿಸಲು ಚಳಿ ಅಥವಾ ಶೀತದಿಂದ ಕೂಡಿದ ಹವಮಾನ ಇರಬೇಕಾಗುತ್ತದೆ. ಹೀಗಾಗಿ ಒಲಿಂಪಿಕ್ಸ್ ಅನ್ನು ಎರಡು ಅವಧಿಗಳಿಗೆ ವಿಂಗಡಿಸಲಾಗಿದೆ.
ಇದನ್ನೂ ಓದಿ: Paris Olympic 2024: ಪ್ಯಾರಿಸ್ ಒಲಿಂಪಿಕ್ಸ್ ಪದಕದಲ್ಲಿ ಐಫೆಲ್ ಟವರ್ ತುಣುಕು
ಸಮ್ಮರ್ ಒಲಿಂಪಿಕ್ಸ್ನಂತೆ ವಿಂಟರ್ ಒಲಿಂಪಿಕ್ಸ್ ಅನ್ನು ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. 2022 ರ ವಿಂಟರ್ ಒಲಿಂಪಿಕ್ಸ್ಗೆ ಚೀನಾದ ಬೀಜಿಂಗ್ ನಗರ ಆತಿಥ್ಯವಹಿಸಿತ್ತು. ಹಾಗೆಯೇ 2026 ರ ವಿಂಟರ್ ಒಲಿಂಪಿಕ್ಸ್ಗೆ ಇಟಲಿ ದೇಶದಲ್ಲಿ ನಡೆಯಲಿದೆ.
1924 ರಲ್ಲಿ ಶುರುವಾದ ವಿಂಟರ್ ಒಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳ ಭಾಗವಹಿಸುವಿಕೆ ತೀರ ವಿರಳ. ಇದಕ್ಕೆ ಮುಖ್ಯ ಕಾರಣ ಭಾರತದಲ್ಲಿ ಚಳಿಗಾಲದ ಕ್ರೀಡೆಗಳಿಗೆ ಪ್ರಾಮುಖ್ಯತೆ ಇಲ್ಲದಿರುವುದು. ಇದಾಗ್ಯೂ 11 ವಿಂಟರ್ ಒಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ಕಾಣಿಸಿಕೊಂಡಿದ್ದಾರೆ. ಅವರೆಂದರೆ…
| ವರ್ಷ | ಕ್ರೀಡಾಪಟುಗಳ ಸಂಖ್ಯೆ | ಕ್ರೀಡಾಪಟುಗಳ ಹೆಸರು ಮತ್ತು ಕ್ರೀಡೆ |
|---|---|---|
| 1964 | 1 | ಜೆರೆಮಿ ಬುಜಕೋವ್ಸ್ಕಿ (ಡೌನ್ಹಿಲ್) |
| 1968 | 1 | ಜೆರೆಮಿ ಬುಜಕೋವ್ಸ್ಕಿ (ಡೌನ್ಹಿಲ್, ಜೈಂಟ್ ಸ್ಲಾಲೋಮ್, ಸ್ಲಾಲೋಮ್) |
| 1988 | 3 | ಶೈಲಜಾ ಕುಮಾರ್ (ಮಹಿಳಾ ಸ್ಲಾಲೊಮ್); ಗುಲ್ ದೇವ್ (ಸ್ಲಾಲೋಮ್); ಕಿಶೋರ್ ರಹತ್ನಾ ರೈ (ಸ್ಲಾಲೋಮ್) |
| 1992 | 2 | ಲಾಲ್ ಚುನಿ (ಸ್ಲಾಲೋಮ್, ಜೈಂಟ್ ಸ್ಲಾಲೋಮ್); ನಾನಕ್ ಚಂದ್ (ಸ್ಲಾಲೋಮ್, ಜೈಂಟ್ ಸ್ಲಾಲೋಮ್) |
| 1998 | 1 | ಶಿವ ಕೇಶವನ್ (ಲೂಜ್) |
| 2002 | 1 | ಶಿವ ಕೇಶವನ್ (ಲೂಜ್) |
| 2006 | 4 | ನೇಹಾ ಅಹುಜಾ (ಮಹಿಳಾ ಸ್ಲಾಲೋಮ್, ಜೈಂಟ್ ಸ್ಲಾಲೋಮ್); ಹೀರಾ ಲಾಲ್ (ಜೈಂಟ್ ಸ್ಲಾಲೋಮ್); ಬಹದ್ದೂರ್ ಗುಪ್ತಾ (ಕ್ರಾಸ್ ಕಂಟ್ರಿ ಸ್ಪ್ರಿಂಟ್); ಶಿವ ಕೇಶವನ್ (ಲೂಜ್) |
| 2010 | 3 | ಜಮ್ಯಾಂಗ್ ನಾಮ್ಗಿಯಲ್ (ಜೈಂಟ್ ಸ್ಲಾಲೋಮ್); ತಾಶಿ ಲುಂಡಪ್ (ಕ್ರಾಸ್ ಕಂಟ್ರಿ 15 ಕಿಮೀ ಫ್ರೀಸ್ಟೈಲ್); ಶಿವ ಕೇಶವನ್ (ಲೂಜ್) |
| 2014 | 3 | ಹಿಮಾಂಶು ಠಾಕೂರ್ (ಜೈಂಟ್ ಸ್ಲಾಲೋಮ್); ನದೀಮ್ ಇಕ್ಬಾಲ್ (ಕ್ರಾಸ್ ಕಂಟ್ರಿ 15 ಕಿಮೀ ಕ್ಲಾಸಿಕಲ್); ಶಿವ ಕೇಶವನ್ (ಲೂಜ್) |
| 2018 | 2 | ಜಗದೀಶ್ ಸಿಂಗ್ (ಕ್ರಾಸ್ ಕಂಟ್ರಿ 15 ಕಿಮೀ ಫ್ರೀಸ್ಟೈಲ್); ಶಿವ ಕೇಶವನ್ (ಲೂಜ್) |
| 2022 | 1 | ಆರಿಫ್ ಮೊಹಮ್ಮದ್ ಖಾನ್ (ಸ್ಲಾಲೊಮ್, ಜೈಂಟ್ ಸ್ಲಾಲೊಮ್) |