ಅವರು ನಮ್ಮ ಬಗ್ಗೆ ಯೋಚಿಸಲ್ಲ, ನಾವೇಕೆ ಅವರ ಬಗ್ಗೆ ಯೋಚಿಸಬೇಕು? ಇಂಗ್ಲೆಂಡ್​ಗೆ ರೋಹಿತ್​ ಶರ್ಮಾ ತಿರುಗೇಟು

| Updated By: Digi Tech Desk

Updated on: Feb 22, 2021 | 1:42 PM

ಮೈದಾನ ಎರಡೂ ತಂಡಗಳಿಗೆ ಒಂದೇ ಆಗಿರುತ್ತದೆ. ಈ ಚರ್ಚೆ ಏಕೆ ಆರಂಭವಾಯಿತು ಎಂದು ನನಗೆ ತಿಳಿಯುತ್ತಿಲ್ಲ ಎಂದು ರೋಹಿತ್​ ಶರ್ಮಾ ಮಾತು ಆರಂಭಿಸಿದ್ದಾರೆ.

ಅವರು ನಮ್ಮ ಬಗ್ಗೆ ಯೋಚಿಸಲ್ಲ, ನಾವೇಕೆ ಅವರ ಬಗ್ಗೆ ಯೋಚಿಸಬೇಕು? ಇಂಗ್ಲೆಂಡ್​ಗೆ ರೋಹಿತ್​ ಶರ್ಮಾ ತಿರುಗೇಟು
ರೋಹಿತ್​ ಶರ್ಮಾ
Follow us on

ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ಗೆದ್ದಿತ್ತು. ಸೋಲನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಇಂಗ್ಲೆಂಡ್​​ ಆಟಗಾರರು ಪಿಚ್​ ಅನ್ನು ದೂರಿದ್ದರು. ಚೆನ್ನೈ ಸ್ಟೇಡಿಯಂ ಐದು ದಿನದ ಟೆಸ್ಟ್​​ ಆಡಲು ಸರಿಯಾದ ಪಿಚ್​ ಅಲ್ಲ ಎಂದು ಹೇಳಿದ್ದರು. ಅಲ್ಲದೆ, ಈ ಪಿಚ್​ ಟೀಂ ಇಂಡಿಯಾಗೆ ಸಹಕಾರಿಯಾಗುವ ರೀತಿಯಲ್ಲಿದೆ ಎಂದೂ ಹೇಳಿದ್ದರು. ಇದಕ್ಕೆ ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಿರುಗೇಟು ನೀಡಿದ್ದು, ಅವರು ನಮ್ಮ ಬಗ್ಗೆ ಯೋಚಿಸಲ್ಲ, ನಾವೇಕೆ ಅವರ ಬಗ್ಗೆ ಯೋಚಿಸಲಿ ಎಂದು ಪ್ರಶ್ನೆ ಮಾಡಿದ್ದಾರೆ.

ಮೈದಾನ ಎರಡೂ ತಂಡಗಳಿಗೆ ಒಂದೇ ಆಗಿರುತ್ತದೆ. ಈ ಚರ್ಚೆ ಏಕೆ ಆರಂಭವಾಯಿತು ಎಂದು ನನಗೆ ತಿಳಿಯುತ್ತಿಲ್ಲ. ಭಾರತದಲ್ಲಿ ಪಿಚ್‌ಗಳನ್ನು ಹಲವು ವರ್ಷಗಳಿಂದ ಒಂದೇ ರೀತಿಯಲ್ಲಿ ತಯಾರಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಯಾವುದೇ ಬದಲಾವಣೆಗಳಾಗಿವೆ ಎಂದು ನಾನು ಭಾವಿಸುವುದಿಲ್ಲ ಎಂದು ಬಿಸಿಸಿಐ ಟ್ವೀಟ್ ಮಾಡಿದ ವಿಡಿಯೋದಲ್ಲಿ ರೋಹಿತ್ ಹೇಳಿದ್ದಾರೆ.

ಪ್ರತಿ ತಂಡವೂ ಹೋಂ ಪಿಚ್​ ಅನುಕೂಲವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತದೆ. ನಾವು ವಿದೇಶಕ್ಕೆ ಆಡಲು ಹೋದಾಗ ಅಲ್ಲಿಯೂ ನಮಗೆ ಇದೇ ರೀತಿ ಆಗುತ್ತದೆ. ಅವರಿಗೆ ಹೋಂ ಪಿಚ್​ ಅನುಕೂಲ ಸಿಗುತ್ತದೆ. ಅವರು ನಮ್ಮ ಬಗ್ಗೆ ಯೋಚಿಸುವುದಿಲ್ಲ. ಹೀಗಿರುವಾಗ ನಾವೇಕೆ ಅವರ ಬಗ್ಗೆ ಯೋಚಿಸಬೇಕು. ನಾವು ಏನು ಇಷ್ಟಪಡುತ್ತೇವೆ ಮತ್ತು ನಮ್ಮ ತಂಡದ ಆದ್ಯತೆ ಏನು ಎಂಬುದನ್ನು ತಿಳಿದುಕೊಂಡು ಅದನ್ನೇ ಮಾಡಬೇಕು. ಪಿಚ್ ಸಿದ್ಧಪಡಿಸುವ​ ಬಗ್ಗೆ ಐಸಿಸಿ ನಿಯಮವನ್ನು ಮಾಡಲು ಹೇಳಿ ಎಂದು ಹೇಳುವ ಮೂಲಕ ಇಂಗ್ಲೆಂಡ್​ಗೆ ಬಿಸಿ ಮುಟ್ಟಿಸಿದ್ದಾರೆ.

ಪಿಚ್​ ಬಗ್ಗೆ ದೂರುವುದನ್ನು ಬಿಟ್ಟು, ಯಾವ ಆಟಗಾರ ಹೇಗೆ ಬೌಲಿಂಗ್​ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ. ಕೊನೆಯಲ್ಲಿ ಯಾವ ತಂಡ ಉತ್ತಮವಾಗಿ ಆಡುತ್ತೆದೆಯೋ ಅವರೇ ಗೆಲ್ಲುತ್ತಾರೆ ಎಂದು ರೋಹಿತ್​ ಹೇಳಿದ್ದಾರೆ.

ಇದನ್ನೂ ಓದಿ: India vs England: ಕುಣಿಲಾಗದವರು ನೆಲ ಡೊಂಕು ಎಂದರು.. ಚೆನ್ನೈ ಪಿಚ್ ಟೀಕಿಸಿದವರ ವಿರುದ್ಧ ಗಾವಸ್ಕರ್​ ಗರಂ

Published On - 10:10 pm, Sun, 21 February 21