ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ದೊಡ್ಡ ಕ್ರೀಡಾಂಗಣವನ್ನು ಕಾಣಬಹುದು. ಕೆಲವರು ಈ ಪೋಸ್ಟ್ ಅನ್ನು ಶೇರ್ ಮಾಡುತ್ತಿದ್ದು, ಇದು ಉತ್ತರಾಖಂಡ್ನ ರುದ್ರಪ್ರಯಾಗದಲ್ಲಿ ನಿರ್ಮಿಸಲಾದ ಕ್ರಿಕೆಟ್ ಕ್ರೀಡಾಂಗಣದ ಫೋಟೋ ಎಂದು ಹೇಳುತ್ತಿದ್ದಾರೆ. ನೋಡಲು ಸುಂದರವಾಗಿ ಕಾಣುವ ಈ ಕ್ರೀಡಾಂಗಣದ ಫೋಟೋವನ್ನು ಅನೇಕ ಬಳಕೆದಾರರು ನಿಜವೆಂದು ಪರಿಗಣಿಸಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ, ನಿಜಕ್ಕೂ ರುದ್ರಪ್ರಯಾಗದಲ್ಲಿ ಈ ಕ್ರೀಡಾಂಗಣ ನಿರ್ಮಾನ ಆಗಿದೆಯೇ?. ಈ ವೈರಲ್ ಫೋಟೋದ ಸತ್ಯಾಂಶ ಏನು ತಿಳಿದುಕೊಳ್ಳೋಣ.
ವೈರಲ್ ಫೋಟೋವನ್ನು ಹಂಚಿಕೊಳ್ಳುವಾಗ, ಫೇಸ್‌ಬುಕ್ ಬಳಕೆದಾರರೊಬ್ಬರು ‘‘ರುದ್ರಪ್ರಯಾಗ್ ಸ್ಟೇಡಿಯಂ ಸಿದ್ಧವಾಗಿದೆ. ಈಗ ಏಕ್ತಾ ಬಿಶ್ತ್, ರಿಷಭ್ ಪಂತ್, ಆಯುಷ್ ಬದೋನಿ ಮತ್ತು ಅನುಜ್ ರಾವತ್ ಅವರಂತಹ ಕ್ರಿಕೆಟಿಗರು ರುದ್ರಪ್ರಯಾಗ್ ಕ್ರಿಕೆಟ್ ಪ್ರೇಮಿಗಳಾಗಿ ಹೊರಹೊಮ್ಮುತ್ತಾರೆ’’ ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ನಾವು ತನಿಖೆ ನಡೆಸಿದಾಗ ರುದ್ರಪ್ರಯಾಗದಲ್ಲಿ ಅಂತಹ ಯಾವುದೇ ಕ್ರೀಡಾಂಗಣವಿಲ್ಲ ಎಂದು ತಿಳಿದುಬಂದಿದೆ. ಸದ್ಯ ಅಲ್ಲಿ ಅಗಸ್ಟ್‌ಮುನಿ ಸ್ಟೇಡಿಯಂ ನಿರ್ಮಾಣ ಕಾರ್ಯ ನಡೆಯುತ್ತಿದೆಯಷ್ಟೆ.
ವೈರಲ್ ಫೋಟೋ ನಿಜಾಂಶ ಕಂಡುಹಿಡಿಯಲು ನಾವು ಗೂಗಲ್ ಲೆನ್ಸ್ ಅನ್ನು ಬಳಸಿದ್ದೇವೆ. ಆಗ ದೇವಭೂಮಿ ಉತ್ತರಾಖಂಡ್ ಎಂಬ ಹೆಸರಿನ ಫೇಸ್‌ಬುಕ್ ಪುಟದಲ್ಲಿ ನಾವು ಈ ಫೋಟೋವನ್ನು ಕಂಡುಕೊಂಡಿದ್ದೇವೆ. ಡಿಸೆಂಬರ್ 17, 2024 ರಂದು ಹಂಚಿಕೊಂಡ ಪೋಸ್ಟ್‌ನ ಶೀರ್ಷಿಕೆ ಹೀಗಿದೆ, ‘‘ಈ ಫೋಟೋ ಉತ್ತರಾಖಂಡದಲ್ಲಿ ವೈರಲ್ ಆಗಿದೆ! ಈ ಕ್ರಿಕೆಟ್ ಸ್ಟೇಡಿಯಂ ರುದ್ರಪ್ರಯಾಗದಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಸುಳ್ಳು, ಇಂತಹ ಕ್ರೀಡಾಂಗಣ ಉತ್ತರಾಖಂಡದಲ್ಲಿ ಎಲ್ಲಿಯೂ ಇಲ್ಲ. ಈ ಸುಳ್ಳು ಚಿತ್ರವನ್ನು AI ಸಹಾಯದಿಂದ ರಚಿಸಲಾಗಿದೆ ಮತ್ತು ಇದು ಉತ್ತರಾಖಂಡದ ರುದ್ರಪ್ರಯಾಗ್ ಕ್ರಿಕೆಟ್ ಸ್ಟೇಡಿಯಂ ಎಂದು ವೈರಲ್ ಆಗಿದೆ.’’ ಎಂದು ಬರೆಯಲಾಗಿದೆ.
ಹಾಗೆಯೆ ಹಿಮಾಲಯನ್ ಹಿಂದೂ ಹೆಸರಿನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಕೂಡ ಇದೇ ವೈರಲ್ ಫೋಟೋವನ್ನು ನಾವು ಕಂಡುಕೊಂಡಿದ್ದೇವೆ. ಡಿಸೆಂಬರ್ 15, 2024 ರಂದು ಮಾಡಿದ ಪೋಸ್ಟ್‌ನಲ್ಲಿ, ‘‘ಈ ಫೋಟೋ ಉತ್ತರಾಖಂಡದಲ್ಲಿ ವೈರಲ್ ಆಗಿದೆ! ಈ ಕ್ರಿಕೆಟ್ ಸ್ಟೇಡಿಯಂ ರುದ್ರಪ್ರಯಾಗದಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಸುಳ್ಳು, ಇಂತಹ ಕ್ರೀಡಾಂಗಣ ಉತ್ತರಾಖಂಡದಲ್ಲಿ ಎಲ್ಲಿಯೂ ಇಲ್ಲ. ಈ ಸುಳ್ಳು ಚಿತ್ರವನ್ನು AI ಸಹಾಯದಿಂದ ರಚಿಸಲಾಗಿದೆ ಮತ್ತು ಇದು ಉತ್ತರಾಖಂಡದಿಂದ ವೈರಲ್ ಆಗಿದೆ” ಎಂದು ಬರೆಯಲಾಗಿದೆ.
ये फोटो उत्तराखंड में वायरल है!
बताया जा रहा है कि ये क्रिकेट स्टेडियम रुद्रप्रयाग में है। लेकिन ये झूठ है, उत्तराखंड में कहीं भी ऐसा स्टेडियम नहीं है। ये झूठी तस्वीर AI की मदद से बनाई गई है और इसे उत्तराखंड का बताकर वायरल किया जा रहा है। 🤣 pic.twitter.com/LpVt5vVvn8
— Himalayan Hindu (@himalayanhindu) December 15, 2024
ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು AI ಫೋಟೋವನ್ನು ಕಂಡುಹಿಡಿಯುವ ಮಲ್ಟಿಮೀಡಿಯಾ ಸ್ಕ್ಯಾನಿಂಗ್ ಉಪಕರಣಗಳ ಸಹಾಯದಿಂದ ಫೋಟೋಗಳನ್ನು ಹುಡುಕಿದೆವು. ಇದಕ್ಕಾಗಿ decopy.ai ಉಪಕರಣಕ್ಕೆ ಅಪ್‌ಲೋಡ್ ಮಾಡಿದ್ದೇವೆ. ಈ ಉಪಕರಣವು ಫೋಟೋವು AI ರಚಿತವಾಗಿರುವ ಸಾಧ್ಯತೆ ಶೇಕಡಾ 99.9 ರಷ್ಟಿದೆ ಎಂದು ಹೇಳಿದೆ.
ಹೀಗಾಗಿ ಉತ್ತರಾಖಂಡದ ರುದ್ರಪ್ರಯಾಗದಲ್ಲಿ ನಿರ್ಮಿಸಲಾದ ಕ್ರೀಡಾಂಗಣದಿಂದ ಎಂದು ಹೇಳುವ ಪೋಸ್ಟ್ ನಕಲಿ ಎಂದು ನಾವು ಖಚಿತವಾಗಿ ಹೇಲುತ್ತೇವೆ. ರುದ್ರಪ್ರಯಾಗದಲ್ಲಿ ಸದ್ಯಕ್ಕೆ ಯಾವುದೇ ಕ್ರೀಡಾಂಗಣವಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಅಗಸ್ಟ್ಮುನಿ ಕ್ರಿಕೆಟ್ ಸ್ಟೇಡಿಯಂನ ಕಾಮಗಾರಿ ನಡೆಯುತ್ತಿದೆಯಷ್ಟೆ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ