ಸಚಿನ್​ ತೆಂಡೂಲ್ಕರ್​​ ದಾಖಲೆಯನ್ನು ಹಿಂದಿಕ್ಕಿದ ವಿರಾಟ್​ ಕೊಹ್ಲಿ!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 02, 2020 | 1:24 PM

ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಅವರು ಈ ಮೊದಲು ಅತಿ ಕಡಿಮೆ ಇನ್ನಿಂಗ್ಸ್​ ಅಂದರೆ, 300 ಮ್ಯಾಚ್​ಗಳಲ್ಲಿ 12 ಸಾವಿರ ರನ್​ ಕಲೆ ಹಾಕಿದ್ದರು. ಆದರೆ, ವಿರಾಟ್​ ಕೊಹ್ಲಿ ಕೇವಲ 242 ಮ್ಯಾಚ್​ಗಳಲ್ಲಿ 12 ಸಾವಿರ ರನ್​ ತಲುಪಿದ್ದಾರೆ.

ಸಚಿನ್​ ತೆಂಡೂಲ್ಕರ್​​ ದಾಖಲೆಯನ್ನು ಹಿಂದಿಕ್ಕಿದ ವಿರಾಟ್​ ಕೊಹ್ಲಿ!
ವಿರಾಟ್ ಕೊಹ್ಲಿ
Follow us on

ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಹೊಸ ದಾಖಲೆಗಳನ್ನು ಬರೆಯುತ್ತಲೇ ಇದ್ದಾರೆ. ಇಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅತಿ ಕಡಿಮೆ ಇನ್ನಿಂಗ್ಸ್​ನಲ್ಲಿ 12 ಸಾವಿರ ರನ್​ ಗಳಿಕೆ ಮಾಡಿದ ಮೊದಲ ಕ್ರಿಕೆಟಿಗ ಎನ್ನುವ ಖ್ಯಾತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಈ ಮೊದಲು ಅತಿ ಕಡಿಮೆ ಇನ್ನಿಂಗ್ಸ್​ ಅಂದರೆ, 300 ಏಕದಿನ ಮ್ಯಾಚ್​ಗಳಲ್ಲಿ 12 ಸಾವಿರ ರನ್​ ಕಲೆ ಹಾಕಿದ್ದರು. ವಿರಾಟ್​ ಕೇವಲ 242 ಮ್ಯಾಚ್​ಗಳಲ್ಲಿ 12 ಸಾವಿರ ರನ್​ ತಲುಪಿದ್ದಾರೆ. ಈ ಮೂಲಕ 12 ಸಾವಿರ ರನ್​ಗಳನ್ನು ಕಡಿಮೆ ಇನ್ನಿಂಗ್ಸ್​ನಲ್ಲಿ ತಲುಪಿದ ಮೊದಲ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಉಳಿದಂತೆ, ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್​ (314), ಕುಮಾರ್​ ಸಂಗಕಾರ (336), ಸನತ್​ ಜಯಸೂರ್ಯ (379), ಹಾಗೂ ಮಹೇಲಾ ಜಯವರ್ಧನೆ (399) ಕಡಿಮೆ ಇನ್ಸಿಂಗ್ಸ್​​ನಲ್ಲಿ 12 ಸಾವಿರ ರನ್​ ತಲುಪಿದ ಆಟಗಾರರ ಸಾಲಿನಲ್ಲಿದ್ದಾರೆ.

ಇದಲ್ಲದೆ, ವಿರಾಟ್​ ಕೊಹ್ಲಿ ಇನ್ನೂ ಅನೇಕ ದಾಖಲೆಗಳನ್ನು ತಮ್ಮ ಹೆಸರಿನಲ್ಲಿಟ್ಟುಕೊಂಡಿದ್ದಾರೆ. ಏಕದಿನ ಪಂದ್ಯಗಳಲ್ಲಿ 8,000, 9,000, 10,1000 ಹಾಗೂ 11,000 ಸಾವಿರ ರನ್​ಗಳನ್ನು ಕಡಿಮೆ ಇನ್ನಿಂಗ್ಸ್​ನಲ್ಲಿ ಅವರು ತಲುಪಿದ್ದಾರೆ. 242 ಏಕದಿನ ಪಂದ್ಯಗಳಲ್ಲಿ ವಿರಾಟ್​ ಸರಾಸರಿ ರನ್​ರೇಟ್​ 59.29 ಇದೆ. ಟಿ20 ಹಾಗೂ ಟೆಸ್ಟ್​ನಲ್ಲೂ ವಿರಾಟ್ ಅದ್ಭುತ ಪ್ರದರ್ಶನ ನೀಡಿದ್ದಾರೆ. 145 ಟೆಸ್ಟ್ ಇನ್ನಿಂಗ್ಸ್​ನಲ್ಲಿ 7,240 ರನ್​ ಕಲೆ ಹಾಕಿರುವ ಅವರು 27 ಶತಕ ಸಿಡಿಸಿದ್ದಾರೆ. ಟಿ20ಮ್ಯಾಚ್​ನಲ್ಲಿ ವಿರಾಟ್​ 2,794 ರನ್​ ಗಳಿಸಿದ್ದಾರೆ.

ಮುಂಬರುವ ದಿನಗಳಲ್ಲಿ ವಿರಾಟ್​ ಕೊಹ್ಲಿ ಮತ್ತಷ್ಟು ದಾಖಲೆ ಬರೆಯಲಿದ್ದಾರೆ ಎಂದು ಟ್ವಿಟರ್​ನಲ್ಲಿ ಅಭಿಮಾನಿಗಳು ವಿರಾಟ್​ ಸಾಧನೆಯನ್ನು ಕೊಂಡಾಡಿದ್ದಾರೆ.

 

ಪತ್ನಿ ಅನುಷ್ಕಾ ಗರ್ಭಿಣಿ ಹಿನ್ನೆಲೆ, ವಿರಾಟ್ ಕೊಹ್ಲಿ ಆಸಿಸ್ ಟೂರ್​ಗೆ ಬ್ರೇಕ್