FIFA World Cup 2022 Opening Ceremony Highlights: ಫಿಫಾ ವಿಶ್ವಕಪ್ಗೆ ಅದ್ಧೂರಿ ಚಾಲನೆ
Football World Cup Opening Ceremony Highlights in Kannada: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ಫುಟ್‌ಬಾಲ್ ವಿಶ್ವಕಪ್ಗೆ ಇಂದು ಅದ್ಧೂರಿ ಚಾಲನೆ ಸಿಕ್ಕಿದೆ.
ಕತಾರ್‌ನಲ್ಲಿ (Qatar) ನಡೆಯುತ್ತಿರುವ ಫಿಫಾ ಫುಟ್‌ಬಾಲ್ ವಿಶ್ವಕಪ್ಗೆ (FIFA World Cup 2022 )ಇಂದು ಅದ್ಧೂರಿ ಚಾಲನೆ ಸಿಕ್ಕಿದೆ. ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ದೋಹಾ ಸಮೀಪದ ಅಲ್ಬೇತ್ ಕ್ರೀಡಾಂಗಣದಲ್ಲಿ ನಡೆಯಿತು. ನಂತರ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ (Qatar and Ecuador) ನಡುವೆ ವಿಶ್ವಕಪ್‌ನ ಮೊದಲ ಪಂದ್ಯ ನಡೆಯಲಿದೆ. ಮಧ್ಯಪ್ರಾಚ್ಯ ರಾಷ್ಟ್ರವೊಂದರಲ್ಲಿ ಈ ಈವೆಂಟ್ ಆಯೋಜಿಸುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು. ಅದೇ ಸಮಯದಲ್ಲಿ, ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
LIVE NEWS & UPDATES
-
9:30 ಕ್ಕೆ ಮೊದಲ ಪಂದ್ಯ
ಇಂದು ರಾತ್ರಿ 9:30 ಗಂಟೆಗೆ ವಿಶ್ವಕಪ್ ಚೆಂಡು ಮೈದಾನಕ್ಕೆ ಅಪ್ಪಳಿಸಲಿದೆ. ಮೊದಲ ಪಂದ್ಯದಲ್ಲಿ ಕತಾರ್ ಮತ್ತು ಈಕ್ವೆಡಾರ್ ಮುಖಾಮುಖಿಯಾಗಲಿವೆ.
-
ಅದ್ಧೂರಿ ಉದ್ಘಾಟನಾ ಸಮಾರಂಭ ಮುಗಿದಿದೆ
ದೋಹಾದ ಅಲ್ ಖೋರ್ ಸ್ಟೇಡಿಯಂನಲ್ಲಿ ವಿಶ್ವಕಪ್‌ನ ಉದ್ಘಾಟನಾ ಸಮಾರಂಭ ಕೊನೆಗೊಂಡಿದೆ.
The #FIFAWorldCup opening ceremony is underway.
We're under an hour away from the tournament beginning.
? @lauriewhitwell pic.twitter.com/faMfs2zhrR
— The Athletic | Football (@TheAthleticFC) November 20, 2022
-
ಕಾರ್ಯಕ್ರಮ ನಡೆಸಿಕೊಡುತ್ತಿರುವ ಮಾರ್ಗನ್ ಫ್ರೀಮನ್
ಅಮೆರಿಕದ ಸೂಪರ್‌ಸ್ಟಾರ್ ಮೋರ್ಗನ್ ಫ್ರೀಮನ್ ಕತಾರ್‌ನಲ್ಲಿ ವಿಶ್ವಕಪ್‌ನ ಉದ್ಘಾಟನಾ ಸಮಾರಂಭವನ್ನು ನಡೆಸಿಕೊಡುವ ಜವಬ್ದಾರಿ ಹೊತ್ತಿದ್ದಾರೆ.
#MorganFreeman x #WorldCup2022#Qatar2022 pic.twitter.com/b9G0cpOP47
— BellaNaija (@bellanaija) November 20, 2022
ಜಂಗ್‌ಕುಕ್ ನಂತರ, ಕತಾರಿ ಗಾಯಕ ವೇದಿಕೆಯಲ್ಲಿ
ಕತಾರಿ ಗಾಯಕ ಫಹಾದ್ ಅಲ್-ಕುಬೈಸಿ ಮತ್ತು ಬಿಟಿಎಸ್ ತಾರೆ ಜಂಗ್‌ಕುಕ್ ಒಟ್ಟಿಗೆ ಹಾಡುತ್ತಿದ್ದಾರೆ.
ಜಂಗ್‌ಕುಕ್ ಪ್ರದರ್ಶನ ಆರಂಭ
ಕಾಯುವಿಕೆ ಮುಗಿದಿದೆ. ಬಿಟಿಎಸ್ ಸ್ಟಾರ್ ಜಂಗ್‌ಕುಕ್ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದ್ದಾರೆ.
ಲೀಬ್ ವೇದಿಕೆಯಲ್ಲಿ
ಈ ಬಾರಿ ಕತಾರ್ ವಿಶ್ವಕಪ್ ಮ್ಯಾಸ್ಕಾಟ್ ಲಿಬ್ ವೇದಿಕೆಯಲ್ಲಿ ಕಾಣಿಸಿಕೊಂಡರು.
ವಿಶ್ವಕಪ್ ಟ್ರೋಫಿಯೊಂದಿಗೆ ಮಾರ್ಸೆಲ್ ಡೆಸೈಲಿ
ಪಂದ್ಯಕ್ಕೂ ಮುನ್ನ ವಿಶ್ವಕಪ್ ಟ್ರೋಫಿಯೊಂದಿಗೆ ಫ್ರಾನ್ಸ್ ಮಾಜಿ ಆಟಗಾರ ಮಾರ್ಸೆಲ್ ಡೆಸೈಲಿ
32 ದೇಶಗಳ ಧ್ವಜಗಳೊಂದಿಗೆ ವಿಶೇಷ ಪ್ರದರ್ಶನ
ಉದ್ಘಾಟನಾ ಸಮಾರಂಭದಲ್ಲಿ ಈ ಬಾರಿಯ ವಿಶ್ವಕಪ್‌ನಲ್ಲಿ ಭಾಗವಹಿಸುವ 32 ದೇಶಗಳ ಧ್ವಜಗಳೊಂದಿಗೆ ವಿಶೇಷ ಪ್ರದರ್ಶನ ನಡೆಯುತ್ತಿದೆ. ಒಂದೊಂದು ದೇಶದ ಜೆರ್ಸಿ ಒಂದೊಂದಾಗಿ ವೇದಿಕೆ ಮೇಲೆ ಪ್ರದರ್ಶನಗೊಂಡಿತು. ಅದ್ಭುತ ತಂತ್ರಜ್ಞಾನದ ಬಳಕೆ ಕಾಣುತ್ತಿದೆ.
ಅಲ್ಬೇತ್ನಲ್ಲಿ ಕತಾರಿ ಸಂಸ್ಕೃತಿ
ದೋಹಾದ ಅಲ್ಬೇತ್ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಸಮಾರಂಭವು ಕತಾರಿ ಸಾಂಸ್ಕೃತಿಕ ನೃತ್ಯ ಮತ್ತು ಹಾಡುಗಳಿಂದ ತುಂಬಿತ್ತು.
ವೇದಿಕೆಯಲ್ಲಿ ಗಣ್ಯರು
ವಿಶ್ವಕಪ್‌ನ ಉದ್ಘಾಟನಾ ಸಮಾರಂಭದಲ್ಲಿ ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫಾಂಟಿನೋ ಮತ್ತು ಕತಾರ್‌ನ ಆಡಳಿತಗಾರ ತಮೀಮ್ ಬಿನ್ ಹಮದ್ ಅಲ್ ಥಾನಿ ವೇದಿಕೆ ಏರಿದ್ದಾರೆ.
ಪ್ರೇಕ್ಷಕರಿಂದ ತುಂಬಿದ ಕ್ರೀಡಾಂಗಣ
ವಿಶ್ವಕಪ್ ಉನ್ಮಾದದ ಪ್ರತಿ ನಿಮಿಷವನ್ನು ಪ್ರೇಕ್ಷಕರು ಆನಂದಿಸುತ್ತಿದ್ದಾರೆ. ಅವರ ಝಲಕ್ಗಳು ಕ್ರೀಡಾಂಗಣದಲ್ಲಿಯೂ ಕಂಡುಬರುತ್ತಿವೆ.
The atmosphere is building! ?#Qatar2022 | #FIFAWorldCup pic.twitter.com/jpH28QL2Ze
— FIFA World Cup (@FIFAWorldCup) November 20, 2022
ಕಾಯುವಿಕೆ ಕೊನೆಗೊಂಡಿದೆ
ವಿಶ್ವಕಪ್ಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಇಂದು ರಾತ್ರಿ 9:30 ಕ್ಕೆ ಮೊದಲ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ರಾಷ್ಟ್ರ ಕತಾರ್, ಈಕ್ವೆಡಾರ್ ತಂಡವನ್ನು ಎದುರಿಸಲಿದೆ
ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ
ಕತಾರ್ ವಿಶ್ವಕಪ್‌ನ ಅದ್ಧೂರಿ ಉದ್ಘಾಟನಾ ಸಮಾರಂಭಕ್ಕಾಗಿ ಕಾಯುತ್ತಿದೆ. ಬಿಟಿಎಸ್ ಸ್ಟಾರ್ ಜಂಗ್‌ಕುಕ್ ಮತ್ತು ಕತಾರಿ ಗಾಯಕ ಫಹಾದ್ ಅಲ್-ಕುಬೈಸಿ ಕಾರ್ಯಕ್ರಮ ನೀಡಲಿದ್ದಾರೆ.
ಅಲ್ಬೇತ್ ಪಾರ್ಕ್ನಲ್ಲಿ ಅಭಿಮಾನಿಗಳ ಮಹಾಪೂರ
ಉದ್ಘಾಟನಾ ಸಮಾರಂಭವನ್ನು ಆನಂದಿಸಲು 40,000 ಕ್ಕೂ ಹೆಚ್ಚು ಅಭಿಮಾನಿಗಳು ದೋಹಾದ ಅಲ್ಬೇತ್ ಪಾರ್ಕ್ನಲ್ಲಿ ನೆರೆದಿದ್ದಾರೆ.
Published On - Nov 20,2022 7:26 PM