ಮೌಂಟ್ ಮೌಂಗನುಯಿಯಲ್ಲಿ ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಏಕಪಕ್ಷೀಯ ಪಂದ್ಯದಲ್ಲಿ 65 ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಈ ಪಂದ್ಯದಲ್ಲಿ ಅಮೋಘ ಆಟ ಪ್ರದರ್ಶಿಸಿದ ಟೀಂ ಇಂಡಿಯಾ ಅಲ್ರೌಂಡರ್ ಪ್ರದರ್ಶನ ನೀಡಿತು. ಬ್ಯಾಟಿಂಗ್ನಲ್ಲಿ ಸೂರ್ಯಕುಮಾರ್ ಯಾದವ್ ಮಿಂಚಿದರೆ, ಬೌಲಿಂಗ್ನಲ್ಲಿ ದೀಪಕ್ ಹೂಡಾ ತಮ್ಮ ಕೈಚೆಳಕ ತೋರಿ ಅದ್ಭುತ ದಾಖಲೆ ನಿರ್ಮಿಸಿದ್ದಾರೆ.
ಈ ಪಂದ್ಯದಲ್ಲಿ ದೀಪಕ್ ಯಾವುದೇ ರನ್ ಗಳಿಸದೆ ಔಟಾದರ. ಆದರೆ ಅದ್ಭುತ ಬೌಲಿಂಗ್ ಮಾಡಿದ ದೀಪಕ್ ಕೇವಲ 2.5 ಓವರ್ ಬೌಲ್ ಮಾಡಿ ನಾಲ್ಕು ವಿಕೆಟ್ ಪಡೆದರು.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇದು ಯಾವುದೇ ಬೌಲರ್‌ನ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಈ ಪಂದ್ಯದಲ್ಲಿ ದೀಪಕ್ ಹ್ಯಾಟ್ರಿಕ್ ಮಿಸ್ ಮಾಡಿಕೊಂಡರು. 19ನೇ ಓವರ್ನ ಎರಡನೇ ಹಾಗೂ ಮೂರನೇ ಎಸೆತದಲ್ಲಿ ಸತತ ವಿಕೆಟ್ ಕಬಳಿಸಿದರೂ ಹ್ಯಾಟ್ರಿಕ್ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.
ಅದೇ ಸಮಯದಲ್ಲಿ, ದೀಪಕ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು. ಇವರಿಗಿಂತ ಹಿಂದೆ ಯಾವೊಬ್ಬ ಭಾರತೀಯ ಬೌಲರ್ ಈ ಕೆಲಸ ಮಾಡಿರಲಿಲ್ಲ.
ದೀಪಕ್ ಭಾರತ ಪರ ಇದುವರೆಗೆ 14 ಟಿ20 ಪಂದ್ಯಗಳನ್ನು ಆಡಿದ್ದು, 293 ರನ್ ಗಳಿಸಿ ಐದು ವಿಕೆಟ್ ಕಬಳಿಸಿದ್ದಾರೆ.
Published On - 5:58 pm, Sun, 20 November 22