FIFA World Cup: ಇಂದು ಫಿಫಾ ವಿಶ್ವಕಪ್ ಉದ್ಘಾಟನೆ; ಮೊದಲ ಪಂದ್ಯ ಎಷ್ಟು ಗಂಟೆಗೆ?, ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

| Updated By: ಪೃಥ್ವಿಶಂಕರ

Updated on: Nov 20, 2022 | 1:11 PM

FIFA World Cup, Opening Ceremony: ಇಂದು ಭಾರತೀಯ ಕಾಲಮಾನ ಸಂಜೆ 7.30ಕ್ಕೆ, ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಪಂಚದಾದ್ಯಂತದ ಪ್ರಖ್ಯಾತ ಕಲಾವಿದರು ಪ್ರದರ್ಶನ ನೀಡುತ್ತಾರೆ.

FIFA World Cup: ಇಂದು ಫಿಫಾ ವಿಶ್ವಕಪ್ ಉದ್ಘಾಟನೆ; ಮೊದಲ ಪಂದ್ಯ ಎಷ್ಟು ಗಂಟೆಗೆ?, ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?
FIFA World Cup 2022
Follow us on

ಕತಾರ್‌ನಲ್ಲಿ (Qatar) ನಡೆಯುತ್ತಿರುವ ಫಿಫಾ ಫುಟ್‌ಬಾಲ್ ವಿಶ್ವಕಪ್ (FIFA World Cup 2022 ) ಭಾನುವಾರದಿಂದ ಆರಂಭವಾಗಲಿದೆ. ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ದೋಹಾ ಸಮೀಪದ ಅಲ್​ಬೇತ್ ಕ್ರೀಡಾಂಗಣದಲ್ಲಿ ನಡೆಯಲಿದೆ. ನಂತರ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ (Qatar and Ecuador) ನಡುವೆ ವಿಶ್ವಕಪ್‌ನ ಮೊದಲ ಪಂದ್ಯ ನಡೆಯಲಿದೆ. ಮಧ್ಯಪ್ರಾಚ್ಯ ರಾಷ್ಟ್ರವೊಂದರಲ್ಲಿ ಈ ಈವೆಂಟ್ ಆಯೋಜಿಸುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು. ಅದೇ ಸಮಯದಲ್ಲಿ, ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಭಾನುವಾರ ಕತಾರ್‌ನಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಅದಕ್ಕೂ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ.

ಖ್ಯಾತ ಕಲಾವಿದರಿಂದ ಕಾರ್ಯಕ್ರಮ

ಇಂದು ಭಾರತೀಯ ಕಾಲಮಾನ ಸಂಜೆ 7.30ಕ್ಕೆ, ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಪಂಚದಾದ್ಯಂತದ ಪ್ರಖ್ಯಾತ ಕಲಾವಿದರು ಪ್ರದರ್ಶನ ನೀಡುತ್ತಾರೆ. ಅವುಗಳಲ್ಲಿ ದೊಡ್ಡ ಹೆಸರು ಕೊರಿಯನ್ ಬ್ಯಾಂಡ್ BTS. ಉದ್ಘಾಟನಾ ಸಮಾರಂಭದ ನಂತರ, ಉದ್ಘಾಟನಾ ಪಂದ್ಯವೂ ಇಂದು ನಡೆಯಲಿದ್ದು, ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ನಡುವೆ ನಡೆಯಲಿದೆ.

8 ಭವ್ಯವಾದ ಕ್ರೀಡಾಂಗಣಗಳಲ್ಲಿ 65 ಪಂದ್ಯಗಳು

ನವೆಂಬರ್ 20 ಮತ್ತು ಡಿಸೆಂಬರ್ 18, 2022 ರ ನಡುವೆ, ಫಿಫಾ ವಿಶ್ವಕಪ್‌ನಲ್ಲಿ ಟ್ರೋಫಿಯನ್ನು ಗೆಲ್ಲಲು 32 ತಂಡಗಳು ಸ್ಪರ್ಧಿಸುತ್ತವೆ. ಈ ಫುಟ್ಬಾಲ್ ಮಹಾಕುಂಭ 29 ದಿನಗಳ ಕಾಲ ನಡೆಯಲಿದೆ. 32 ತಂಡಗಳಿಂದ 832ಕ್ಕೂ ಹೆಚ್ಚು ಆಟಗಾರರು ತಮ್ಮ ತಂಡವನ್ನು ಗೆಲ್ಲಿಸಲು ಮೈದಾನಕ್ಕಿಳಿಯಲಿದ್ದಾರೆ. ಫಿಫಾ ವಿಶ್ವಕಪ್‌ನಲ್ಲಿ 90ಕ್ಕೂ ಹೆಚ್ಚು ಅಂತರಾಷ್ಟ್ರೀಯ ಕಾರ್ಯಕ್ರಮಗಳು ನಡೆಯಲಿದ್ದು, ಇದರಲ್ಲಿ 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಕತಾರ್‌ನ 8 ಭವ್ಯವಾದ ಕ್ರೀಡಾಂಗಣಗಳಲ್ಲಿ 65 ಪಂದ್ಯಗಳು ನಡೆಯಲಿವೆ. ಫಿಫಾ ವಿಶ್ವಕಪ್ 2022 ರ ಕೊನೆಯಲ್ಲಿ, ವಿವಿಧ ತಂಡಗಳಿಗೆ ಅವರ ಪ್ರದರ್ಶನಕ್ಕೆ ಅನುಗುಣವಾಗಿ 3585 ಕೋಟಿ ಬಹುಮಾನದ ಹಣದಲ್ಲಿ ಹಂಚಿಕೆ ಮಾಡಲಾಗುತ್ತದೆ.

ಉದ್ಘಾಟನಾ ಸಮಾರಂಭದ ಪೂರ್ಣ ಮಾಹಿತಿ

ಫಿಫಾ ವಿಶ್ವಕಪ್ 2022 ರ ಉದ್ಘಾಟನಾ ಸಮಾರಂಭ ಯಾವಾಗ ನಡೆಯಲಿದೆ?

ಫಿಫಾ ವಿಶ್ವಕಪ್ 2022 ರ ಉದ್ಘಾಟನಾ ಸಮಾರಂಭವು ಭಾನುವಾರ, ನವೆಂಬರ್ 20 ರಂದು ನಡೆಯಲಿದೆ.

ಫಿಫಾ ವಿಶ್ವಕಪ್ 2022 ರ ಉದ್ಘಾಟನಾ ಸಮಾರಂಭ ಎಲ್ಲಿ ನಡೆಯಲಿದೆ?

ಫಿಫಾ ವಿಶ್ವಕಪ್ 2022 ರ ಉದ್ಘಾಟನಾ ಸಮಾರಂಭವು ದೋಹಾದಿಂದ 40 ಕಿಮೀ ದೂರದಲ್ಲಿರುವ ಅಲ್ ಬೇತ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಫಿಫಾ ವಿಶ್ವಕಪ್ 2022 ರ ಉದ್ಘಾಟನಾ ಸಮಾರಂಭ ಯಾವಾಗ ಪ್ರಾರಂಭವಾಗುತ್ತದೆ?

ಫಿಫಾ ವಿಶ್ವಕಪ್ 2022 ರ ಉದ್ಘಾಟನಾ ಸಮಾರಂಭವು ಸಂಜೆ 7.30 ಕ್ಕೆ ಪ್ರಾರಂಭವಾಗುತ್ತದೆ.

ಫಿಫಾ ವಿಶ್ವಕಪ್ ಉದ್ಘಾಟನಾ ಸಮಾರಂಭದ ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬಹುದು?

ಫಿಫಾ ವಿಶ್ವಕಪ್ 2022 ರ ಉದ್ಘಾಟನಾ ಸಮಾರಂಭವು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು Voot ಸೆಲೆಕ್ಟ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.

ಫಿಫಾ ವಿಶ್ವಕಪ್ 2022 ಉದ್ಘಾಟನಾ ಸಮಾರಂಭವನ್ನು ಎಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ?

ಫಿಫಾ ವಿಶ್ವ ಕಪ್ 2022 ರ ಉದ್ಘಾಟನಾ ಸಮಾರಂಭವನ್ನು ಸ್ಪೋರ್ಟ್ಸ್ 18 ಮತ್ತು ಸ್ಪೋರ್ಟ್ಸ್ 18 ಎಚ್‌ಡಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

Published On - 1:02 pm, Sun, 20 November 22