FIFA ವಿಶ್ವಕಪ್ ಫುಟ್‌ಬಾಲ್ ಪಂದ್ಯ ವರದಿ ಮಾಡುತ್ತಿದ್ದಾಗ ಹ್ಯಾಂಡ್ ಬ್ಯಾಗ್ ಕಳವು; ದೂರು ನೀಡಿದಾಗ ಕತಾರ್ ಪೊಲೀಸರ ಪ್ರತಿಕ್ರಿಯೆ ಕೇಳಿ ದಂಗಾದ ಪತ್ರಕರ್ತೆ

| Updated By: ರಶ್ಮಿ ಕಲ್ಲಕಟ್ಟ

Updated on: Nov 21, 2022 | 6:00 PM

ಮಹಿಳಾ ಪೊಲೀಸೊಬ್ಬರು ನನ್ನಲ್ಲಿ 'ನಾವು ಎಲ್ಲೆಡೆ ಹೈಟೆಕ್ ಕ್ಯಾಮೆರಾಗಳನ್ನು ಹೊಂದಿದ್ದೇವೆ. ನಾವು ಅವನನ್ನು (ಕಳ್ಳನನ್ನು) ಫೇಸ್ ಡಿಟೆಕ್ಷನ್ ಮೂಲಕ ಪತ್ತೆ ಮಾಡಲಿದ್ದೇವೆ.

FIFA ವಿಶ್ವಕಪ್ ಫುಟ್‌ಬಾಲ್ ಪಂದ್ಯ ವರದಿ ಮಾಡುತ್ತಿದ್ದಾಗ ಹ್ಯಾಂಡ್ ಬ್ಯಾಗ್ ಕಳವು; ದೂರು ನೀಡಿದಾಗ ಕತಾರ್ ಪೊಲೀಸರ ಪ್ರತಿಕ್ರಿಯೆ ಕೇಳಿ ದಂಗಾದ ಪತ್ರಕರ್ತೆ
ಅರ್ಜೆಂಟೀನಾದ ಪತ್ರಕರ್ತೆ ಡೊಮಿನಿಕ್ ಮೆಟ್ಜರ್
Follow us on

2022 ಫಿಫಾ ವಿಶ್ವಕಪ್‌ ಫುಟ್‌ಬಾಲ್ (FIFA World Cup) ಆರಂಭವಾಗುತ್ತಿದ್ದಂತೆ ಪತ್ರಕರ್ತೆಯೊಬ್ಬರ ಹ್ಯಾಂಡ್ ಬಾಗ್ ನಿಂದ ವಸ್ತುಗಳು ಕಳವಾದ ಘಟನೆ ನಡೆದಿದೆ. ಈ ಬಗ್ಗೆ ಕತಾರಿ ಪೊಲೀಸರಿಗೆ(Qatari police) ದೂರು ನೀಡಿದಾಗ ಅಲ್ಲಿಂದ ಸಿಕ್ಕಿದ ಪ್ರತಿಕ್ರಿಯೆಯಿಂದ ನಾನು ದಂಗಾದೆ ಎಂದು ಅರ್ಜೆಂಟೀನಾದ ಟಿವಿ ವರದಿಗಾರ್ತಿ ಹೇಳಿದ್ದಾರೆ. ಮೊದಲ ಪಂದ್ಯದಲ್ಲಿ ಕತಾರ್ ಈಕ್ವೆಡಾರ್ ತಂಡವನ್ನು ಎದುರಿಸುವ ಮೂಲಕ ಭಾನುವಾರ ಸಂಜೆ ಪಂದ್ಯಾವಳಿ ಪ್ರಾರಂಭವಾಯಿತು. ಆರಂಭಿಕ ಪಂದ್ಯದ ವೇಳೆ ಅರ್ಜೆಂಟೀನಾದ ಪತ್ರಕರ್ತೆ ಡೊಮಿನಿಕ್ ಮೆಟ್ಜರ್ ಅವರು ನೇರ ಪ್ರಸಾರ ಮಾಡುತ್ತಿದ್ದಾಗ ಅವರ ಹ್ಯಾಂಡ್ ಬ್ಯಾಗ್ ನಿಂದ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ದಿ ಮಿರರ್ ವರದಿ ಮಾಡಿದೆ. ಸ್ಥಳೀಯ ಪೋಲೀಸ್ ಅಧಿಕಾರಿಗಳಿಗೆ ಕಳ್ಳತನ ಬಗ್ಗೆ ಪತ್ರಕರ್ತೆ ದೂರು ನೀಡಿದಾಗ ಕಳ್ಳನಿಗೆ ಯಾವ ಶಿಕ್ಷೆಯನ್ನು ವಿಧಿಸಲು ಬಯಸುತ್ತೀರಿ ಎಂದು ಅವರು ಕೇಳಿದ್ದಾರೆ.

“ನಾನು ಪೊಲೀಸ್ ಠಾಣೆಗೆ ಹೋದೆ. ಅಲ್ಲಿ ಸಾಂಸ್ಕೃತಿಕ ಭಿನ್ನತೆ ಕಂಡು ಬಂತು. ಮಹಿಳಾ ಪೊಲೀಸೊಬ್ಬರು ನನ್ನಲ್ಲಿ ‘ನಾವು ಎಲ್ಲೆಡೆ ಹೈಟೆಕ್ ಕ್ಯಾಮೆರಾಗಳನ್ನು ಹೊಂದಿದ್ದೇವೆ. ನಾವು ಅವನನ್ನು (ಕಳ್ಳನನ್ನು) ಫೇಸ್ ಡಿಟೆಕ್ಷನ್ ಮೂಲಕ ಪತ್ತೆ ಮಾಡಲಿದ್ದೇವೆ. ನಾವು ಅವನನ್ನು ಪತ್ತೆ ಮಾಡಿದ ನಂತರ ಅವನಿಗೆ ಯಾವ ಶಿಕ್ಷೆ ನೀಡಬೇಕೆಂದು ನೀವು ಬಯಸುತ್ತೀರಿ? ಎಂದು ಕೇಳಿದರು.

ಈ ಪ್ರಶ್ನೆಯಿಂದ ನಾನು ಗಲಿಬಿಲಿಗೊಳಗಾದೆ.

“ನಿಮಗೆ ಯಾವ ನ್ಯಾಯ ಬೇಕು? ನಾವು ಅವನಿಗೆ ಯಾವ ಶಿಕ್ಷೆಯನ್ನು ನೀಡಬೇಕೆಂದು ನೀವು ಬಯಸುತ್ತೀರಿ? ಅವನಿಗೆ ಐದು ವರ್ಷ ಜೈಲು ಶಿಕ್ಷೆಯಾಗಬೇಕೆಂದು ನೀವು ಬಯಸುತ್ತೀರಾ? ಅವನನ್ನು ಗಡೀಪಾರು ಮಾಡಬೇಕೆಂದು ನೀವು ಬಯಸುತ್ತೀರಾ? ಎಂದು ಪೊಲೀಸ್ ನನ್ನಲ್ಲಿ ಕೇಳಿದರು ಎಂದು ಪತ್ರಕರ್ತೆ ಹೇಳಿದ್ದಾರೆ.

 

 

Published On - 5:57 pm, Mon, 21 November 22