AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs SRH Viral Moment: 4,4,6,6,4.. ಮೊದಲ ಓವರ್​ನಲ್ಲೇ ಅಬ್ಬರಿಸಿದ ಅಲೆನ್

KKR vs SRH Viral Moment: 4,4,6,6,4.. ಮೊದಲ ಓವರ್​ನಲ್ಲೇ ಅಬ್ಬರಿಸಿದ ಅಲೆನ್

ಪೃಥ್ವಿಶಂಕರ
|

Updated on: Apr 02, 2026 | 10:28 PM

Share

Fin Allen's Explosive IPL 2026 Start: ಕೋಲ್ಕತ್ತಾದಲ್ಲಿ ನಡೆದ ಐಪಿಎಲ್ 2026ರ ಕೆಕೆಆರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಫಿನ್ ಅಲೆನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಸನ್‌ರೈಸರ್ಸ್‌ನ 226 ರನ್ ಗುರಿ ಬೆನ್ನಟ್ಟಿದ ಕೆಕೆಆರ್‌ಗೆ ಅಲೆನ್ ಮೊದಲ ಓವರ್‌ನಲ್ಲಿ 24 ರನ್ ಸೇರಿದಂತೆ ಒಟ್ಟು 7 ಎಸೆತಗಳಲ್ಲಿ 28 ರನ್ ಗಳಿಸಿ ಭರ್ಜರಿ ಆರಂಭ ನೀಡಿದರು. ಅವರ ಅಬ್ಬರದ ಆಟ ಪಂದ್ಯದ ರೋಚಕತೆಯನ್ನು ಹೆಚ್ಚಿಸಿತು.

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ 2026 ರ 6ನೇ ಪಂದ್ಯದಲ್ಲಿ ಕೆಕೆಆರ್ ತಂಡ, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ 226 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಪರ ಆರಂಭಿಕ ಫಿನ್ ಅಲೆನ್ ಮೊದಲ ಓವರ್​ನಲ್ಲೇ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದು 25 ರನ್ ಕಲೆಹಾಕಿದರು.

ಸನ್‌ರೈಸರ್ಸ್ ಪರ ಡೇವಿಡ್ ಪೇನ್ ಮೊದಲ ಓವರ್ ಬೌಲ್ ಮಾಡಿದರು. ಈ ಓವರ್​ನ ಮೊದಲ ಎಸೆತವನ್ನು ಎದುರಿಸಿದ ನಾಯಕ ಅಜಿಂಕ್ಯ ರಹಾನೆ ಸಿಂಗಲ್ ತೆಗೆದುಕೊಂಡು ಅಲೆನ್​ಗೆ ಸ್ಟ್ರೈಕ್ ನೀಡಿದರು. ಅಲೆನ್ ತಾವು ಎದುರಿಸಿದ ಮೊದಲ ಎಸೆತವನ್ನೇ ಬೌಂಡರಿಗಟ್ಟಿದರು. ನಂತರದ ಎರಡು ಎಸೆತಗಳಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದರು. ಕೊನೆಯ ಎರಡು ಎಸೆತಗಳಲ್ಲಿ ಬೌಂಡರಿ ಬಂತು. ಈ ಮೂಲಕ ಅಲೆನ್ ತಾವು ಎದುರಿಸಿದ ಐದು ಎಸೆತಗಳಲ್ಲಿ 24 ರನ್ ಕಲೆಹಾಕಿದರು.

ಆ ಬಳಿಕವೂ ಅಬ್ಬರಿಸಿದ ಅಲೆನ್ ಮುಂದಿನ ಓವರ್​ನಲ್ಲಿ ಎದುರಿಸಿದ ಮೊದಲ ಎಸೆತವನ್ನು ಬೌಂಡರಿಗಟ್ಟಿದರು. ಆದರೆ ಮುಂದಿನ ಎಸೆತದಲ್ಲಿ ಮತ್ತೊಂದು ಬೌಂಡರಿ ಬಾರಿಸಲು ಯತ್ನಿಸಿ ಬೌಲರ್ ಹರ್ಷ್ ದುಬೆಗೆ ಕ್ಯಾಚಿತ್ತು ಔಟಾದರು. ಅಂತಿಮವಾಗಿ ಅಲೆನ್ ತಮ್ಮ ಇನ್ನಿಂಗ್ಸ್​ನಲ್ಲಿ 7 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 28 ರನ್ ಬಾರಿಸಿ ಔಟಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us