
ಚೆನ್ನೈ: ಮಂಗಳವಾರ ಇಲ್ಲಿನ ಎಮ್.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಗೆಲುವಿನ ಸನಿಹಕ್ಕೆ ಹೋಗಿ, ಕೊನೆಯ ಹಂತದಲ್ಲಿ ಹೀನಾಯ ಸೋಲು ಕಂಡಿತು. ಐಪಿಎಲ್ ರನ್ ವೇಗಕ್ಕೆ ಹೋಲಿಸಿದರೆ, ಸಣ್ಣದು ಎಂದೇ ಹೇಳಬಹುದಾದ ಮೊತ್ತವನ್ನು ಬೆನ್ನಟ್ಟಲು ಕೂಡ ಕೋಲ್ಕತ್ತಾಗೆ ಸಾಧ್ಯವಾಗದೇ ಹೋಯಿತು. ಆರಂಭಿಕವಾಗಿ ಉತ್ತಮ ಆಟವಾಡಿದ ಕೋಲ್ಕತ್ತಾ, ಮಧ್ಯಮ ಕ್ರಮಾಂಕದಲ್ಲಿ ಅಚ್ಚರಿಯ ರೀತಿಯಲ್ಲಿ ಕುಸಿತ ಕಂಡಿತು. 30 ಬಾಲ್ಗೆ 31 ರನ್ ಗಳಿಸಲೂ ಆಗದೆ ಪರದಾಡಿತು.
28 ಬಾಲ್ಗೆ 31 ರನ್ ಗಳಿಸುವ ಸುಲಭ ಸವಾಲು ಕೋಲ್ಕತ್ತಾ ಮುಂದಿತ್ತು. ಈ ವೇಳೆ, ದಿನೇಶ್ ಕಾರ್ತಿಕ್ ಹಾಗೂ ರಸ್ಸೆಲ್ ಕ್ರೀಸ್ನಲ್ಲಿ ಇದ್ದರು. ಸಾಲದ್ದಕ್ಕೆ ಅವರಿಬ್ಬರೂ ಕೊನೆಯ ಓವರ್ವರೆಗೆ ಆಟವಾಡಿದ್ದರು. ಇಷ್ಟಾದರೂ ಕೋಲ್ಕತ್ತಾ ತಂಡ 10 ರನ್ಗಳ ಸೋಲು ಕಂಡಿತು! ಈ ಬಗ್ಗೆ ಹಿರಿಯ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ಸಂಜಯ್ ಮಾಂಜ್ರೇಕರ್, ಆಕಾಶ್ ಛೋಪ್ರಾ ಆಶ್ಚರ್ಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಅನಾವಶ್ಯಕ ಶಾಟ್ಗಳಿಗೆ ತೊಡಗಿ, ಕೆಕೆಆರ್ ದಾಂಡಿಗರು ಕೈಸುಟ್ಟುಕೊಂಡರು. ಮುಂಬೈ ಪರ ಕೃನಾಲ್ ಪಾಂಡ್ಯ ಡೆತ್ ಓವರ್ಗಳಲ್ಲಿ ಉತ್ತಮ ಆಟವಾಡಿ, ಗೆಲುವಿಗೆ ಸಹಕರಿಸಿದರು. ಕೊನೆಯ ಓವರ್ನಲ್ಲಿ ಕೋಲ್ಕತ್ತಾ 6 ಬಾಲ್ಗೆ 15 ರನ್ ಗಳಿಸಬೇಕಾದ ಸ್ಥಿತಿ ಬಂತು. ಲಾಸ್ಟ್ ಓವರ್ ಬೌಲ್ ಮಾಡಿದ ಬೋಲ್ಟ್ ಮುಂಬೈಯನ್ನು ಗೆಲುವಿನ ದಡ ಮುಟ್ಟಿಸಲು ಯಶಸ್ವಿಯಾದರು.
ಈ ಹೀನಾಯ ಸೋಲಿನ ಬಗ್ಗೆ ಹಿರಿಯ ಕ್ರಿಕೆಟಿಗರ ಅಭಿಪ್ರಾಯವೇನು?
ಮೊದಲ ಇನ್ನಿಂಗ್ಸ್ ಬೌಲ್ ಮಾಡಿದ ಕೋಲ್ಕತ್ತಾ ಕೂಡ ಉತ್ತಮ ಪ್ರದರ್ಶನ ನೀಡಿತ್ತು. ಹೀಗಾಗಿ ನಿನ್ನೆ ಪಿಚ್ ಬೌಲಿಂಗ್ಗೆ ಸಹಕರಿಸಿತ್ತು ಎಂಬ ಅಭಿಪ್ರಾಯ ಕೇಳಿಬಂದವು. ಈ ವಿಚಾರವಾಗಿ ಸಂಜಯ್ ಮಾಂಜ್ರೇಕರ್, ಇದು ಪಿಚ್ನ ವಿಚಾರ ಎಂದಷ್ಟೇ ಸಾಧ್ಯವಿಲ್ಲ ಎಂದು ಹೀಗೆ ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬ ಹಿರಿಯ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಇದು ಉಡಾಫೆ ಮನಸ್ಥಿತಿಯಿಂದ ಒದಗಿದ ಫಲಿತಾಂಶ ಎಂದು, ಮುಂಬೈ ಬೌಲರ್ಗಳನ್ನು ಪ್ರಶಂಸಿಸಿದ್ದಾರೆ. ಆಕಾಶ್ ಛೋಪ್ರಾ, ಇದು ಹೇಗಾಯ್ತು? ‘ಇನ್ಕ್ರೆಡಿಬಲ್ ಪ್ರೀಮಿಯರ್ ಲೀಗ್’ ಎಂದು ನಿನ್ನೆಯ ಮ್ಯಾಚ್ನ್ನು ಕುರಿತು ಹೇಳಿದ್ದಾರೆ. ವೆಂಕಟೇಶ್ ಪ್ರಸಾದ್ ಕೂಡ ಮುಂಬೈ ತಂಡದ ಆಟವನ್ನು ಹೊಗಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: KKR vs MI, IPL 2021: ರೋಚಕ ಪಂದ್ಯದಲ್ಲಿ ಗೆದ್ದ ಮುಂಬೈ; ಗೆಲುವಿನ ಸನಿಹದಲ್ಲಿ ಎಡವಿದ ಕೋಲ್ಕತ್ತಾ
Published On - 3:26 pm, Wed, 14 April 21