ಪ್ಲೇ ಆಫ್ನ ಮೂರು ಸ್ಥಾನಗಳು ಭರ್ತಿಯಾಗಿವೆ, ಉಳಿದ ಒಂದಕ್ಕೆ ನಾಲ್ಕರಲ್ಲಿ ಪೈಪೋಟಿ
ಇಂಡಿಯನ್ ಪ್ರಿಮೀಯರ್ ಲೀಗ್ 13 ನೇ ಅವೃತ್ತಿಯಲ್ಲಿಂದು ಡಬಲ್ ಹೆಡ್ಡರ್; ಮೊದಲ ಅಂದರೆ ಈ ಸೀಸನ್ನ 42ನೇ ಪಂದ್ಯ ಕೊಲ್ಕತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ನಡೆದರೆ, 43ನೇ ಪಂದ್ಯ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ನಾವಿಲ್ಲಿ ಚರ್ಚಿಸುತ್ತಿರುವುದು ಎರಡನೇ ಪಂದ್ಯವನ್ನು ಕುರಿತು. ತಲಾ 14 ಪಾಯಿಂಟ್ಸ್ ಗಳಿಸಿರುವ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಪ್ಲೇ ಆಫ್ […]
ಇಂಡಿಯನ್ ಪ್ರಿಮೀಯರ್ ಲೀಗ್ 13 ನೇ ಅವೃತ್ತಿಯಲ್ಲಿಂದು ಡಬಲ್ ಹೆಡ್ಡರ್; ಮೊದಲ ಅಂದರೆ ಈ ಸೀಸನ್ನ 42ನೇ ಪಂದ್ಯ ಕೊಲ್ಕತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ನಡೆದರೆ, 43ನೇ ಪಂದ್ಯ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ನಾವಿಲ್ಲಿ ಚರ್ಚಿಸುತ್ತಿರುವುದು ಎರಡನೇ ಪಂದ್ಯವನ್ನು ಕುರಿತು.
ತಲಾ 14 ಪಾಯಿಂಟ್ಸ್ ಗಳಿಸಿರುವ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಪ್ಲೇ ಆಫ್ ಹಂತ ತಲುಪುವುದನ್ನು ಖಚಿತಪಡಿಸಿಕೊಂಡಿವೆ. ಇನ್ನುಳಿದಿರುವ 5 ಟೀಮುಗಳಲ್ಲಿ ನಿನ್ನೆ ದಯನೀಯವಾಗಿ ಸೋತ ಚೆನೈ ಸೂಪರ್ ಕಿಂಗ್ಸ್ ಅದಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಹಾಗಾಗಿ ಕೊನೆಯ ಒಂದು ಸ್ಥಾನಕ್ಕೆ ಪಂಜಾಬ್, ಹೈದರಾಬಾದ್, ರಾಜಸ್ತಾನ್ ರಾಯಲ್ಸ್ ಮತ್ತು ಕೊಲ್ಕತಾ ನಡುವೆ ತೀವ್ರ ಸ್ವರೂಪದ ಪೈಪೋಟಿ ಎದುರಾಗಿದೆ. ಆಡಿರುವ 10 ಗೇಮ್ಗಳಲ್ಲಿ 6 ಸೋತು 4ರಲ್ಲಿ ಗೆದ್ದಿರುವ ಪಂಜಾಬ್ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನದಲ್ಲಿದೆ. ಹೈದರಾಬಾದ್ ಸಹ ಪಂಜಾಬ್ನಷ್ಟೇ ಪಂದ್ಯಗಳಲ್ಲಾಡಿ ಅಷ್ಟೇ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೂ ಉತ್ತಮ ರನ್ ಸರಾಸರಿಯಿಂದಾಗಿ 5ನೇ ಸ್ಥಾನದಲ್ಲಿದೆ.
ತಾನಾಡಿರುವ ಕೊನೆಯ ಮೂರು ಪಂದ್ಯಗಳಲ್ಲಿ ಪ್ರಮುಖ ತಂಡಗಳನ್ನು ಸೋಲಿಸಿರುವ ಪಂಜಾಬ್ ಆತ್ಮವಿಶ್ವಾಸದಿಂದ ಬೀಗುತ್ತಿರುವುದು ನಿಜ. ಆದರೆ, ಟಿ20 ಕ್ರಿಕೆಟ್ನಲ್ಲಿ ಹಿಂದಿನ ಪಂದ್ಯಗಳ ಫಲಿತಾಂಶದಿಂದ ಯಾವ ನೆರವೂ ಸಿಗುವುದಿಲ್ಲ. ನಿರ್ದಿಷ್ಟ ದಿನದಂದು ಯಾವ ತಂಡ ಕ್ರೀಡೆಯ ಎಲ್ಲ ವಿಭಾಗಗಲ್ಲಿ ಉತ್ತಮ ಪ್ರದರ್ಶನ ನೀಡುತ್ತದೆಯೋ ಅದು ವಿಜೃಂಭಿಸುತ್ತದೆ.
ಹೈದರಾಬಾದ್ ತನ್ನ ಕೊನೆಯ 5ಪಂದ್ಯಗಳಲ್ಲಿ 2 ಗೆದ್ದು 3ರಲ್ಲಿ ಸೋತಿದೆ. ಆದರೆ ರಾಯಲ್ಸ್ ವಿರುದ್ಧ ಅಡಿದ ಟೂರ್ನಿಯ 40 ನೇ ಪಂದ್ಯದಲ್ಲಿ ವಾರ್ನರ್ ಪಡೆ, 8 ವಿಕೆಟ್ಗಳ ಅಧಿಕಾರಯುತ ಗೆಲುವು ಸಾಧಿಸಿತು.
ಹಾಗೆಯೇ, ಹೈದರಾಬಾದ್ ಮತ್ತು ಪಂಜಾಬ್ ನಡುವೆ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ದಕ್ಷಿಣದ ತಂಡ ಉತ್ತರ ಭಾರತದ ಟೀಮನ್ನು 69ರನ್ ಅಂತರದಿಂದ ಸುಲಭವಾಗಿ ಮಣಿಸಿತ್ತು. ಈ ಪಂದ್ಯದಲ್ಲಿ ಹೈದರಾಬಾದಿನ ಆರಂಭ ಆಟಗಾರರಾದ ಜಾನಿ ಬೇರ್ಸ್ಟೋ (97) ಮತ್ತು ವಾರ್ನರ್ (52) ಮೊದಲ ವಿಕೆಟ್ಗೆ 160 ರನ್ ಸೇರಿಸಿದ್ದರು. ಪಂಜಾಬ್ ಪರ ನಿಕೊಲಾಸ್ ಪೂರನ್ ಮಾತ್ರ ಬ್ಯಾಟಿಂಗ್ನಲ್ಲಿ ಮಿಂಚಿ ಕೇವಲ 37 ಎಸೆತಗಳಲ್ಲಿ 77 ರನ್ ಬಾರಿಸಿದ್ದರು.
ಪಂಜಾಬ್ ನಾಯಕ ಕೆ ಎಲ್ ರಾಹುಲ್ (548) ಮತ್ತು ಮಾಯಾಂಕ್ ಅಗರ್ವಾಲ್ (398) ತಮ್ಮಿಬ್ಬರ ನಡುವೆ ಹೆಚ್ಚುಕಡಿಮೆ 1,000 ರನ್ ಕಲೆಹಾಕಿದ್ದಾರೆ. ಪೂರನ್ ಇದುವರೆಗೆ 295 ರನ್ ಗಳಿಸಿದ್ದಾರೆ. ತಡವಾಗಿ ಆಡುವ ಅವಕಾಶ ಪಡೆದ ಕ್ರಿಸ್ ಗೇಲ್ ಇಷ್ಟದಿನ ತಮ್ಮನ್ನು ದೂರವಿಟ್ಟಿದ್ದು ಮಹಾ ಪ್ರಮಾದ ಎನ್ನುವ ರೀತಿಯಲ್ಲಿ ಆಡುತ್ತಿದ್ದಾರೆ. ಅವಕಾಶ ದೊರೆತರೂ 9 ಇನ್ನಿಂಗ್ಸ್ಗಳ ನಂತರ ಸ್ಪರ್ಶ ಕಂಡುಕೊಂಡ ಗ್ಲೆನ್ ಮ್ಯಾಕ್ಸ್ವೆಲ್ ಅವರು ರಾಹುಲ್ ಮುಖದಲ್ಲಿ ಮಂದಹಾದ ಮೂಡುವಂತೆ ಮಾಡಿದ್ದಾರೆ.
ಬೌಲರ್ಗಳ ಸಾಧನೆಯನ್ನು ನೋಡಿದ್ದೇಯಾದರೆ, ಮೊಹಮ್ಮದ್ ಶಮಿ 18 ವಿಕೆಟ್ ಪಡೆದಿದ್ದರೆ, ರವಿ ಬಿಷ್ಣೋಯಿ ಮತ್ತು ಮುರುಗನ್ ಅಶ್ವಿನ್ ಕ್ರಮವಾಗಿ 9 ಮತ್ತು 7 ವಿಕೆಟ್ಗಳನ್ನು ಪಡೆದಿದ್ದಾರೆ.
ಹೈದರಾಬಾದ್ ಪರವೂ, ಆರಂಭಿಕ ಆಟಗಾರರೇ ಅತಿಹೆಚ್ಚು ರನ್ಗಳನ್ನು ಕೂಡಿಹಾಕಿದ್ದಾರೆ. ವಾರ್ನರ್ 335 ರನ್ ಬಾರಿಸಿದ್ದರೆ ಬೇರ್ಸ್ಟೋ 326 ರನ್ ಗಳಿಸಿದ್ದಾರೆ. ರಾಯಲ್ಸ್ ವಿರುಧ್ಧ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ (ಅಜೇಯ 83) ಆಡಿದ ಕನ್ನಡಿಗ ಮನೀಶ್ ಪಾಂಡೆ, ಇದುವರೆಗೆ 295 ರನ್ ಕಲೆ ಹಾಕಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ರಶೀದ್ ಖಾನ್ (12) ಟಿ ನಟರಾಜನ್ (11) ಮತ್ತು ಖಲೀಲ್ ಅಹ್ಮದ್ (8) ವಿಕೆಟ್ಗಳನ್ನು ಪಡೆದಿದ್ದಾರೆ.
ಹೈದರಾಬಾದ್ ಟೀಮಿನ ಸಮಸ್ಯೆಯೆಂದರೆ, ಟಾಪ್ ಸ್ಕೋರರ್ಗಳಾದ ವಾರ್ನರ್ ಮತ್ತು ಬೇರ್ಸ್ಟೋ ಅವರ ಪ್ರದರ್ಶನಗಳಲ್ಲಿ ಸ್ಥಿರತೆಯ ಕೊರೆತೆ. ಅವರ ಮೇಲೆ ಹೆಚ್ಚಿನ ನಿರೀಕ್ಷೆಯಿರುವುದರಿಂದ ಇಬ್ಬರಲ್ಲಿ ಒಬ್ಬರು ಮಿಂಚಲೇಬೇಕು. ರನ್ ಸ್ಕೋರ್ ಮಾಡುವ ಕೆಲಸವನ್ನು ಕೇನ್ ವಿಲಿಯಮ್ಸನ್ ಮಾಡುತ್ತಿರುವರಾದರೂ ಅವರು ಕ್ರೀಸಿಗೆ ಬಂದಾಗ ಕೆಲವು ಓವರ್ಗಳು ಮಾತ್ರ ಉಳಿದುಕೊಂಡಿರುತ್ತವೆ. ಅವರ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಬೇಕಾದರೆ ಬೇರ್ಸ್ಟೋ ಅವರನ್ನು ಕೆಳ ಕ್ರಮಾಂಕದಲ್ಲಿ ಆಡಿಸಬೇಕಾಗುತ್ತದೆ. ಅದರಿಂದ ಬ್ಯಾಟಿಂಗ್ ಬ್ಯಾಲೆನ್ಸ್ ಏರುಪೇರಾಗುತ್ತದೆ.
ಇನ್ನು ಮುಂದೆ ಕೆಲವು ಪಂದ್ಯಗಳು ಮಾತ್ರ ಉಳಿದಿರುವುದರಿಂದ ಹೆಚ್ಚಿನ ಪ್ರಯೋಗಗಳಿಗೂ ಅವಕಾಶವಿಲ್ಲದಂತಾಗಿದೆ.