ಫ್ರೆಂಚ್ ಜೋಡಿ ಕ್ಯಾರೊಲಿನ್ ಗಾರ್ಸಿಯಾ ಮತ್ತು ಕ್ರಿಸ್ಟಿನಾ ಮ್ಲಾಡೆನೊವಿಕ್ (Carolina Garcia and Kristina Mladenovic) ಅವರು ಭಾನುವಾರ ಅಮೆರಿಕದ ಕೊಕೊ ಗೌಫ್ ಮತ್ತು ಜೆಸ್ಸಿಕಾ ಪೆಗುಲಾ ಅವರನ್ನು 2-6 6-3 6-2 ಸೆಟ್‌ಗಳಿಂದ ಸೋಲಿಸಿ ಎರಡನೇ ಬಾರಿಗೆ ಫ್ರೆಂಚ್ ಓಪನ್ (French Open 2022) ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಎತ್ತಿ ಹಿಡಿದರು. ಗೌಫ್‌ಗೆ ಇದು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ಫೈನಲ್ ಸೋಲಾಗಿತ್ತು, ಶನಿವಾರದ ಸಿಂಗಲ್ಸ್ ಫೈನಲ್‌ನಲ್ಲಿ 18 ವರ್ಷ ವಯಸ್ಸಿನ ಅಗ್ರ ಶ್ರೇಯಾಂಕದ ಇಗಾ ಸ್ವಿಯಾಟೆಕ್ ವಿರುದ್ಧ ನೇರ ಸೆಟ್‌ಗಳಲ್ಲಿ ಸೋಲನುಭವಿಸಿದ್ದರು.
ಗಾರ್ಸಿಯಾ ಮತ್ತು ಮ್ಲಾಡೆನೋವಿಕ್ ಅವರು 2016 ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಒಟ್ಟಿಗೆ ಗೆದ್ದಿದ್ದರು. ಮ್ಲಾಡೆನೋವಿಕ್ ಈಗ ಒಟ್ಟು ಆರು ಗ್ರ್ಯಾಂಡ್ ಸ್ಲ್ಯಾಮ್ ಮಹಿಳಾ ಡಬಲ್ಸ್ ಟ್ರೋಫಿಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಂತ್ತಾಗಿದೆ. ಅದರಲ್ಲಿ ನಾಲ್ಕು ಪ್ರಶಸ್ತಿಗಳನ್ನು ಟೈಮಿ ಬಾಬೋಸ್ ಅವರೊಂದಿಗೆ ಸೇರಿ ಗೆದ್ದುಕೊಂಡಿದ್ದಾರೆ.
ಇನ್ನೊಂದೆಡೆ ಫ್ಲೋರಿಡಾ ಮೂಲದ ಗೌಫ್ ಮತ್ತು ನ್ಯೂಯಾರ್ಕ್‌ನ 28 ವರ್ಷದ ಪೆಗುಲಾ ಅವರು ಮೊದಲ ಬಾರಿಗೆ ಪ್ರಮುಖ ಡಬಲ್ಸ್ ಈವೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಈ ಜೋಡಿಗೆ ವಿಜಯಮಾಲೆ ಒಲಿಯಲಿಲ್ಲ.
ಗೆಲುವಿನ ಬಳಿಕ ಮಾತನಾಡಿದ ಗಾರ್ಸಿಯಾ, ನಾವು ಆರು ವರ್ಷಗಳ ಹಿಂದೆ ಈ ಪ್ರಶಸ್ತಿಯನ್ನು ಜೊತೆಯಾಗಿ ಗೆದ್ದಿದ್ದವು. ಮತ್ತೆ ಈ ಪ್ರಶಸ್ತಿಯನ್ನು ಗೆಲ್ಲಲ್ಲು ಬಹಳ ಸಮಯ ಹಿಡಿಯಿತು. ಕ್ರಿಸ್ಟಿನಾ ಅವರೊಂದಿಗೆ ಮತ್ತೊಮ್ಮೆ ತಂಡವನ್ನು ಸೇರಲು ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.
ಮ್ಲಾಡೆನೊವಿಕ್ ಮಾತನಾಡಿ, ಕ್ರಿಸ್ಟಿನಾ ಅವರೊಂದಿಗೆ ಈ ಪ್ರಶಸ್ತಿಯನ್ನು ಗೆಲ್ಲುವುದು ಒಂದು ಕನಸಾಗಿತ್ತು. ಈ ಗೆಲುವಿನಲ್ಲಿ ಜೊತೆಗಾತಿಯಾಗಿದ್ದ ನಿಮಗೆ ಧನ್ಯವಾದಗಳು ಎಂದಿದ್ದಾರೆ. ಮ್ಲಾಡೆನೊವಿಕ್ ಅವರು 2019 ಮತ್ತು 2020 ರಲ್ಲಿ ಪ್ಯಾರಿಸ್‌ನಲ್ಲಿ ಹಂಗೇರಿಯ ಟೈಮಾ ಬಾಬೋಸ್ ಅವರೊಂದಿಗೆ ಈ ಪ್ರಶಸ್ತಿಯನ್ನು ಗೆದ್ದಿದ್ದರು.
ಫ್ಲೋರಿಡಾ ಮೂಲದ ಗೌಫ್ ಮತ್ತು ನ್ಯೂಯಾರ್ಕ್‌ನ ಪೆಗುಲಾ ಜೋಡಿಗೆ ಇದು ಆಂಟಿ-ಕ್ಲೈಮ್ಯಾಕ್ಸ್ ಆಗಿತ್ತು. ಏಕೆಂದರೆ USA ಜೋಡಿಯು ಫೈನಲ್‌ಗೆ ಹೋಗುವ ಮಾರ್ಗದಲ್ಲಿ ಕೇವಲ ಒಂದು ಸೆಟ್ ಮಾತ್ರ ಕಳೆದುಕೊಂಡಿತು. ಆದಾಗ್ಯೂ, ಭಾನುವಾರ ನಡೆದ ಫೈನಲ್‌ನಲ್ಲಿ ಈ ಜೋಡಿ ಆರಂಭಿಕ ಪ್ರಯೋಜನವನ್ನು ಬಿಟ್ಟುಕೊಟ್ಟಿದ್ದರಿಂದ ಮತ್ತೆ ಆಟಕ್ಕೆ ಮರಳಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ, ಈ ಜೋಡಿ ಆರಂಭಿಕ ಸೆಟ್‌ನಲ್ಲಿ ಮುಂದಿದ್ದರು ಆದರೆ ಮುಂದಿನ ಸೆಟ್‌ಗಳಲ್ಲಿ ಪುಟಿದೇಳುವ ಮತ್ತು ಸೆಟ್ ಮುರಿಯುವಲ್ಲಿ ಯಶಸ್ವಿಯಾಗಲಿಲ್ಲ.
Published On - 6:59 pm, Sun, 5 June 22