French Open 2022: ಫ್ರೆಂಚ್ ಓಪನ್ ಪ್ರಶಸ್ತಿಯೊಂದಿಗೆ ದಾಖಲೆಯ 22 ನೇ ಗ್ರ್ಯಾಂಡ್ ಸ್ಲಾಮ್​ ಗೆದ್ದ ರಾಫೆಲ್ ನಡಾಲ್!

Rafael Nadal: ಪುರುಷರ ಟೆನಿಸ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರ ನಡಾಲ್ ಅವರು 14 ನೇ ಬಾರಿಗೆ ಫ್ರೆಂಚ್ ಓಪನ್ ಗೆದ್ದು ಮಣ್ಣಿನ ಅಂಕಣದಲ್ಲಿ ತಮ್ಮ ಅಧಿಪತ್ಯವನ್ನು ಉಳಿಸಿಕೊಂಡರು.

French Open 2022: ಫ್ರೆಂಚ್ ಓಪನ್ ಪ್ರಶಸ್ತಿಯೊಂದಿಗೆ ದಾಖಲೆಯ 22 ನೇ ಗ್ರ್ಯಾಂಡ್ ಸ್ಲಾಮ್​ ಗೆದ್ದ ರಾಫೆಲ್ ನಡಾಲ್!
ರಾಫೆಲ್ ನಡಾಲ್
Follow us
TV9 Web
| Updated By: ಪೃಥ್ವಿಶಂಕರ

Updated on:Jun 05, 2022 | 9:45 PM

ಸ್ಪ್ಯಾನಿಷ್ ಟೆನಿಸ್ ಸ್ಟಾರ್ ರಾಫೆಲ್ ನಡಾಲ್ (Rafael Nadal) 2022 ರ ಫ್ರೆಂಚ್ ಓಪನ್ (French Open 2022) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪುರುಷರ ಟೆನಿಸ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರ ನಡಾಲ್ ಅವರು 14 ನೇ ಬಾರಿಗೆ ಫ್ರೆಂಚ್ ಓಪನ್ ಗೆದ್ದು ಮಣ್ಣಿನ ಅಂಕಣದಲ್ಲಿ ತಮ್ಮ ಅಧಿಪತ್ಯವನ್ನು ಉಳಿಸಿಕೊಂಡರು. ಎರಡು ದಿನಗಳ ಹಿಂದೆಯಷ್ಟೇ 36ನೇ ವರ್ಷಕ್ಕೆ ಕಾಲಿಟ್ಟ ನಡಾಲ್, ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನಾರ್ವೆಯ ಯುವ ಆಟಗಾರ ಕ್ಯಾಸ್ಪರ್ ರೂಡ್ (Kasper Ruud) ವಿರುದ್ಧ 6-1, 6-3, 6-0 ಅಂತರದ ಸುಲಭ ಜಯದೊಂದಿಗೆ 22ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಅಷ್ಟೇ ಅಲ್ಲ, ಫ್ರೆಂಚ್ ಓಪನ್‌ನಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಫ್ರೆಂಚ್ ಓಪನ್​ನಲ್ಲಿ ದಾಖಲೆಯ 14ನೇ ಬಾರಿ ಫೈನಲ್ ಪ್ರವೇಶಿಸಿದ ಸೂಪರ್ ಸ್ಟಾರ್ ನಡಾಲ್ ಶೇ.100ರಷ್ಟು ದಾಖಲೆಯನ್ನು ಉಳಿಸಿಕೊಂಡು ಮತ್ತೊಬ್ಬ ಆಟಗಾರನ ಪ್ರಯತ್ನವನ್ನು ವಿಫಲಗೊಳಿಸಿದರು.

ಇದನ್ನೂ ಓದಿ
Image
French Open 2022: ಫ್ರೆಂಚ್ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದ ಗಾರ್ಸಿಯಾ- ಮ್ಲಾಡೆನೋವಿಕ್ ಜೋಡಿ
Image
French Open 2022 Mens Final: ಗುರು ಶಿಷ್ಯರ ನಡುವೆ ಫೈನಲ್ ಕಾಳಗ! ಪಂದ್ಯದ ಬಗ್ಗೆ ಪೂರ್ಣ ವಿವರ ಇಲ್ಲಿದೆ

ಕಾಸ್ಪರ್ ಆಟ ನಡೆಯಲಿಲ್ಲ

ರೋಜರ್ ಫೆಡರರ್‌ನಿಂದ ಹಿಡಿದು ನೊವಾಕ್ ಜೊಕೊವಿಕ್ ಮತ್ತು ಆಂಡಿ ಮರ್ರೆ ಅವರಂತಹ ದಂತಕಥೆಗಳು ಯಶಸ್ವಿಯಾಗದಿದ್ದರೂ, 23 ವರ್ಷದ ಕ್ಯಾಸ್ಪರ್ ರುಡ್ ಅದ್ಭುತ ಆಟ ಪ್ರದರ್ಶಿಸಿದರು. ಎಂಟನೇ ಶ್ರೇಯಾಂಕದ ಕ್ಯಾಸ್ಪರ್, ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಫೈನಲ್‌ನಲ್ಲಿ ಆಡಿದರು. ಅದರಲ್ಲೂ ಅವರ ಆರಾಧ್ಯ ಮತ್ತು ಮಾರ್ಗದರ್ಶಕ ನಡಾಲ್ ಎದುರು ಕ್ಯಾಸ್ಪರ್ ಕೈಚಳಕ ತೋರಲು ಸಾಧ್ಯವಾಗಲಿಲ್ಲ. ಹಾಗಾಗಿ ಮೊದಲ ಸೆಟ್‌ನಲ್ಲಿ ನಡಾಲ್ 6-1 ರಿಂದ ಸುಲಭವಾಗಿ ಗೆದ್ದರು.

ಎರಡನೇ ಸೆಟ್‌ನಲ್ಲಿ, ರೂಡ್ ಒಂದು ಹಂತದಲ್ಲಿ 3-1 ರಿಂದ ಮುನ್ನಡೆ ಸಾಧಿಸಲು ಪ್ರಬಲ ಪ್ರಯತ್ನ ಮಾಡಿದರೂ, ನಡಾಲ್ ಅವರ ಸಾಮರ್ಥ್ಯ, ಅನುಭವ ಮತ್ತು ಕ್ಯಾಸ್ಪರ್‌ನ ಕೆಲವು ತಪ್ಪುಗಳ ಲಾಭವನ್ನು ಪಡೆದುಕೊಂಡು ಸತತ ಐದು ಗೇಮ್‌ಗಳನ್ನು ಗೆದ್ದು 2-0 ಮುನ್ನಡೆ ಸಾಧಿಸಿದರು. ಮೂರನೇ ಸೆಟ್‌ನಲ್ಲಂತ್ತೂ ನಡಾಲ್ ಕಾಸ್ಪರ್​ಗೆ ಗೇಮ್​ನ ಹತ್ತಿರ ಬರಲೂ ಬಿಡಲಿಲ್ಲ.

ಹಳೆಯ ಸೋಲಿಗೆ ಸೇಡು

ರಾಫೆಲ್ ನಡಾಲ್ ಕಳೆದ ವರ್ಷ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದರು. ನೊವಾಕ್ ಜೊಕೊವಿಕ್ ಸೆಮಿಫೈನಲ್‌ನಲ್ಲಿ ನಡಾಲ್​ರನ್ನು ಸೋಲಿಸಿ, ನಂತರ ಪ್ರಶಸ್ತಿಯನ್ನು ಗೆದ್ದರು. ಈ ಬಾರಿ ನಡಾಲ್ ಮತ್ತು ಜೊಕೊವಿಕ್ ಕ್ವಾರ್ಟರ್ ಫೈನಲ್‌ನಲ್ಲಿಯೇ ಕಣಕ್ಕಿಳಿದಿದ್ದು, ಇಲ್ಲಿ ನಡಾಲ್ ಹಳೆಯ ಸೋಲಿಗೆ ಸೇಡು ತೀರಿಸಿಕೊಂಡಿದ್ದರು. ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದ ನಡಾಲ್​ಗೆ ಸೆಮಿಫೈಲ್‌ನಲ್ಲಿ ಸ್ವಲ್ಪ ಅದೃಷ್ಟ ಕೈ ಮೇಲೆ ಮಾಡಿತು. ಜೆರೆವ್ ಇಂಜುರಿಯಿಂದಾಗಿ ಆಟ ಅರ್ಧಕ್ಕೆ ನಿಲ್ಲುವಂತ್ತಾಯಿತು. ಇದರಿಂದ ನಡಾಲ್ ಸುಲಭವಾಗಿ ಫೈನಲ್​ಗೆ ಲಗ್ಗೆ ಇಟ್ಟಿದ್ದರು.

ಫೆಡರರ್-ಜೊಕೊವಿಕ್ ಮುನ್ನಡೆ

ಈ ಪ್ರಶಸ್ತಿಯೊಂದಿಗೆ ನಡಾಲ್, ತನ್ನ ಯುಗದ ಇತರ ಇಬ್ಬರು ಶ್ರೇಷ್ಠ ಆಟಗಾರರಾದ ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಕ್‌ಗಿಂತ ಎರಡು ಹೆಜ್ಜೆ ಮುಂದಿದ್ದಾರೆ. ಇಬ್ಬರೂ ದೈತ್ಯರು 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದರೆ, ನಡಾಲ್ 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳೊಂದಿಗೆ ಮುಂದಿದ್ದಾರೆ. ಹೀಗಾಗಿ ಜೊಕೊವಿಕ್ ಈಗ ವಿಂಬಲ್ಡನ್‌ನಲ್ಲಿ ಗೆಲ್ಲುವುದರ ಮೂಲಕ ನಡಾಲ್‌ ಹಾಗೂ ಇವರ ನಡುವೆ ಇರುವ ಪ್ರಶಸ್ತಿಯ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸಲಿದ್ದಾರೆ. ಅಷ್ಟೇ ಅಲ್ಲ, ಈ ಮೂವರು ಅನುಭವಿಗಳ ನಂತರ ಹೆಚ್ಚಿನ ಶೀರ್ಷಿಕೆಗಳು ಅಮೆರಿಕದ ಮಾಜಿ ಅನುಭವಿ ಪೀಟ್ ಸಾಂಪ್ರಾಸ್ ಹೆಸರಿನಲ್ಲಿವೆ. ಸಾಂಪ್ರಾಸ್ 14 ಪ್ರಶಸ್ತಿಗಳನ್ನು ಗೆದ್ದಿದ್ದರು, ಆದರೆ ನಡಾಲ್ ಈಗ ಫ್ರೆಂಚ್ ಓಪನ್‌ನಲ್ಲಿಯೇ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Published On - 9:19 pm, Sun, 5 June 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್