Rafael Nadal: ದಾಖಲೆಯ 14ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ರಫೆಲ್ ನಡಾಲ್‌: ಯಾರು ಹೇಗೆ ಪ್ರತಿಕ್ರಿಯಿಸಿದರು?

French Open: ರಫೆಲ್ ನಡಾಲ್ ಅವರ ಈ ಅಮೋಘ ಜಯವನ್ನು ಜಗತ್ತೇ ಸಂಭ್ರಮಿಸುತ್ತಿದೆ. ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರರು ಕೂಡ ನಡೆಲ್ ಆಟಕ್ಕೆ ಮನಸೋತು ಟ್ವೀಟ್ ಮಾಡಿದ್ದಾರೆ. ವಿರೇಂದ್ರ ಸೆಹ್ವಾಗ್ ವಾಸೀಂ ಜಾಫರ್ ಮಾತ್ರವಲ್ಲದೆ ಎಬಿ ಡಿವಿಲಿಯರ್ಸ್ ಕೂಡ ಟ್ವೀಟ್ ಮಾಡಿ ಶುಭಕೋರಿದ್ದಾರೆ.

Rafael Nadal: ದಾಖಲೆಯ 14ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ರಫೆಲ್ ನಡಾಲ್‌: ಯಾರು ಹೇಗೆ ಪ್ರತಿಕ್ರಿಯಿಸಿದರು?
Rafel Nadal
Follow us
TV9 Web
| Updated By: Vinay Bhat

Updated on: Jun 06, 2022 | 7:57 AM

ನಾರ್ವೆಯ ಕಾಸ್ಪರ್ ರೂಡ್ ಅವರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ಸ್ಪೇನ್ ಸೂಪರ್ ಸ್ಟಾರ್ ರಫೆಲ್ ನಡಾಲ್ (Rafael Nadal) 14ನೇ ಬಾರಿ ಫ್ರೆಂಚ್ ಓಪನ್ (French Open) ಪ್ರಶಸ್ತಿಯನ್ನು ಜಯಿಸಿ ದಾಖಲೆ ನಿರ್ಮಿಸಿದ್ದಾರೆ. ರೋಲ್ಯಾಂಡ್‌ ಗ್ಯಾರೋಸ್‌ನ ಫಿಲಿಪ್‌ ಚಾಟ್ರಿಯರ್‌ ಕೋರ್ಟ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ನಡಾಲ್ ಅವರು ಕಾಸ್ಪರ್‌ ರೂಡ್‌ ವಿರುದ್ಧ 6-3, 6-3, 6-0 ರ ನೇರ ಸೆಟ್‌ಗಳ ಅಂತರದಿಂದ ಗೆದ್ದು ಬೀಗಿದರು. ಇದರೊಂದಿಗೆ ಪ್ಯಾರಿಸ್‌ ಫೈನಲ್‌ನಲ್ಲಿ ಅಜೇಯರಾಗಿ ಉಳಿದರು. ಇದು ಸ್ಪೇನಿಗನಿಗೆ ಒಲಿದ 22ನೇ ಗ್ರ್ಯಾನ್‌ಸ್ಲಾಮ್‌ (Grand Slam) ಪ್ರಶಸ್ತಿ. ಇದರೊಂದಿಗೆ ಅವರು ಸಮಕಾಲೀನ ಟೆನಿಸ್‌ ದಿಗ್ಗಜರಾದ ನೊವಾಕ್‌ ಜೊಕೋವಿಕ್‌ ಮತ್ತು ರೋಜರ್‌ ಫೆಡರರ್‌ ಅವರಿಗಿಂತ ಎರಡು ಹೆಜ್ಜೆ ಮುಂದೆ ಸಾಗಿದರು. ಇವರಿಬ್ಬರೂ ತಲಾ 20 ಪ್ರಶಸ್ತಿ ಜಯಿಸಿದ್ದಾರೆ.

ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಗೆದ್ದು ದಾಖಲೆಯ 21ನೇ ಟ್ರೋಫಿ ಜಯಿಸಿದ್ದ ನಡಾಲ್, ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳ ಸಂಖ್ಯೆಯನ್ನು 22ಕ್ಕೆ ಹೆಚ್ಚಿಸಿಕೊಂಡರು. 23 ವರ್ಷದ ರೂಡ್, ತನಗಿಂತ 13 ವರ್ಷ ಹಿರಿಯ ಆಟಗಾರನಿಗೆ ಸರಿಸಾಟಿಯಾಗಿ ನಿಲ್ಲಲು ವಿಫಲರಾದರು. ರೂಡ್ ಬತ್ತಳಿಕೆಯಲ್ಲಿದ್ದ ಅಸ್ತ್ರಗಳು ನಡಾಲ್ ಮುಂದೆ ನಡೆಯಲಿಲ್ಲ. ಗ್ರ್ಯಾನ್‍ಸ್ಲಾಂ ಪ್ರಶಸ್ತಿ ಗೆದ್ದ ನಾರ್ವೆಯ ಮೊದಲ ಆಟಗಾರ ಎನಿಸಿಕೊಳ್ಳುವ ಅವರ ಆಸೆ ಕೈಗೂಡಲಿಲ್ಲ.

ಇದನ್ನೂ ಓದಿ
Image
French Open 2022: ಫ್ರೆಂಚ್ ಓಪನ್ ಪ್ರಶಸ್ತಿಯೊಂದಿಗೆ ದಾಖಲೆಯ 22 ನೇ ಗ್ರ್ಯಾಂಡ್ ಸ್ಲಾಮ್​ ಗೆದ್ದ ರಾಫೆಲ್ ನಡಾಲ್!
Image
ಟ್ಯಾಟೂ ಪ್ರಿಯರ ಕಣ್ಣು ಕುಕ್ಕುತ್ತಿದೆ ಸೂರ್ಯಕುಮಾರ್ ಯಾದವ್ ಹೊಸ ಟ್ಯಾಟೂ; ಫೋಟೋ ನೋಡಿ
Image
French Open 2022: ಫ್ರೆಂಚ್ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದ ಗಾರ್ಸಿಯಾ- ಮ್ಲಾಡೆನೋವಿಕ್ ಜೋಡಿ
Image
ENG vs NZ: ಶತಕ, 10000 ರನ್, ಕಿವೀಸ್ ವಿರುದ್ಧ 1000 ರನ್! ಮೊದಲ ಟೆಸ್ಟ್​ನಲ್ಲಿ ರೂಟ್ ಮಾಡಿದ ದಾಖಲೆಗಳಿವು

ಫೈನಲ್ ಕಾದಾಟದಲ್ಲಿ ನಡಾಲ್‌ ಅನುಭವಕ್ಕೆ ರೂಡ್‌ ಸಂಪೂರ್ಣ ನಿರುತ್ತರವಾಗಿದ್ದರು. ಅವರಿಗೆ ಯಾವ ಹಂತದಲ್ಲೂ ತಿರುಗಿ ಬೀಳಲು ಸಾಧ್ಯವಾಗಲಿಲ್ಲ. ತೃತೀಯ ಸೆಟ್‌ನಲ್ಲಂತೂ ರೂಡ್‌ ಅವರದು ಸಂಪೂರ್ಣ ಶರಣಾಗತಿ. ಇಲ್ಲಿ ಅವರಿಗೆ ಒಂದೂ ಅಂಕ ಗಳಿಸಲಾಗಲಿಲ್ಲ. ಎರಡನೇ ಸೆಟ್‌ನ ನಾಲ್ಕನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಬ್ರೇಕ್ ಮಾಡಿದ ರೂಡ್‌ 3-1 ರಲ್ಲಿ ಮೇಲುಗೈ ಸಾಧಿಸಿ, ಮರುಹೋರಾಟದ ಸೂಚನೆ ನೀಡಿದರು. ಆದರೆ ಮುಂದಿನ ಗೇಮ್‌ನಲ್ಲಿ ರೂಡ್‌ ಸರ್ವ್‌ ಬ್ರೇಕ್‌ ಮಾಡಿ, ಬಳಿಕ ತಮ್ಮ ಸರ್ವ್‌ ಉಳಿಸಿಕೊಂಡ ನಡಾಲ್ 3-3 ರಲ್ಲಿ ಸಮಬಲ ಸಾಧಿಸಿದರು. ಆ ಬಳಿಕದ ಆಟ ಏಕಪಕ್ಷೀಯವಾಗಿ ನಡೆಯಿತು. ಸತತ ಒಂಬತ್ತು ಗೇಮ್‌ಗಳನ್ನು ಗೆದ್ದುಕೊಂಡು ಟ್ರೋಫಿಗೆ ಮುತ್ತಿಕ್ಕಿದರು.

ನಡಾಲ್ ಅವರ ಈ ಅಮೋಘ ಜಯವನ್ನು ಜಗತ್ತೇ ಸಂಭ್ರಮಿಸುತ್ತಿದೆ. ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರರು ಕೂಡ ನಡೆಲ್ ಆಟಕ್ಕೆ ಮನಸೋತು ಟ್ವೀಟ್ ಮಾಡಿದ್ದಾರೆ. ವಿರೇಂದ್ರ ಸೆಹ್ವಾಗ್ ವಾಸೀಂ ಜಾಫರ್ ಮಾತ್ರವಲ್ಲದೆ ಎಬಿ ಡಿವಿಲಿಯರ್ಸ್ ಕೂಡ ಟ್ವೀಟ್ ಮಾಡಿ ಶುಭಕೋರಿದ್ದಾರೆ. ಸಾನಿಯ ಮಿರ್ಜಾ ಕೂಡ ಶುಭಕೋರಿದರು.

ಈ ಜಯದೊಂದಿಗೆ ರಫೆಲ್‌ ನಡಾಲ್‌ ಫ್ರೆಂಚ್‌ ಓಪನ್‌ ಪ್ರಶಸ್ತಿ ಗೆದ್ದ ಅತೀ ಹಿರಿಯ ಟೆನಿಸಿಗನೆನಿಸಿದರು (36 ವರ್ಷ). 1972ರಲ್ಲಿ ಆಯಂಡ್ರೆಸ್‌ ಜಿಮೆನೊ 34ನೇ ವರ್ಷದಲ್ಲಿ ಚಾಂಪಿಯನ್‌ ಆದದ್ದು ಪ್ಯಾರಿಸ್‌ ದಾಖಲೆಯಾಗಿತ್ತು.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ