AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

French Open 2022: ಫ್ರೆಂಚ್ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದ ಗಾರ್ಸಿಯಾ- ಮ್ಲಾಡೆನೋವಿಕ್ ಜೋಡಿ

French Open 2022: ಭಾನುವಾರ ನಡೆದ ಮಹಿಳೆಯರ ಡಬಲ್ಸ್ ಫೈನಲ್‌ನಲ್ಲಿ ಕೊಕೊ ಗೌಫ್ ಮತ್ತು ಅಮೆರಿಕದ ಜೊತೆಗಾರ್ತಿ ಜೆಸ್ಸಿಕಾ ಪೆಗುಲಾ ಅವರನ್ನು ಸೋಲಿಸುವ ಮೂಲಕ ಕ್ಯಾರೊಲಿನ್ ಗಾರ್ಸಿಯಾ ಮತ್ತು ಕ್ರಿಸ್ಟಿನಾ ಮ್ಲಾಡೆನೊವಿಕ್ ಪ್ರಶಸ್ತಿಯನ್ನು ಎತ್ತಿಹಿಡಿದರು.

French Open 2022: ಫ್ರೆಂಚ್ ಓಪನ್ ಮಹಿಳೆಯರ ಡಬಲ್ಸ್ ಪ್ರಶಸ್ತಿ ಗೆದ್ದ ಗಾರ್ಸಿಯಾ- ಮ್ಲಾಡೆನೋವಿಕ್ ಜೋಡಿ
ಕ್ಯಾರೋಲಿನ್ ಗಾರ್ಸಿಯಾ, ಕ್ರಿಸ್ಟಿನಾ ಮ್ಲಾಡೆನೋವಿಕ್
TV9 Web
| Updated By: ಪೃಥ್ವಿಶಂಕರ|

Updated on:Jun 05, 2022 | 8:15 PM

Share

ಫ್ರೆಂಚ್ ಜೋಡಿ ಕ್ಯಾರೊಲಿನ್ ಗಾರ್ಸಿಯಾ ಮತ್ತು ಕ್ರಿಸ್ಟಿನಾ ಮ್ಲಾಡೆನೊವಿಕ್ (Carolina Garcia and Kristina Mladenovic) ಅವರು ಭಾನುವಾರ ಅಮೆರಿಕದ ಕೊಕೊ ಗೌಫ್ ಮತ್ತು ಜೆಸ್ಸಿಕಾ ಪೆಗುಲಾ ಅವರನ್ನು 2-6 6-3 6-2 ಸೆಟ್‌ಗಳಿಂದ ಸೋಲಿಸಿ ಎರಡನೇ ಬಾರಿಗೆ ಫ್ರೆಂಚ್ ಓಪನ್ (French Open 2022) ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಎತ್ತಿ ಹಿಡಿದರು. ಗೌಫ್‌ಗೆ ಇದು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ಫೈನಲ್ ಸೋಲಾಗಿತ್ತು, ಶನಿವಾರದ ಸಿಂಗಲ್ಸ್ ಫೈನಲ್‌ನಲ್ಲಿ 18 ವರ್ಷ ವಯಸ್ಸಿನ ಅಗ್ರ ಶ್ರೇಯಾಂಕದ ಇಗಾ ಸ್ವಿಯಾಟೆಕ್ ವಿರುದ್ಧ ನೇರ ಸೆಟ್‌ಗಳಲ್ಲಿ ಸೋಲನುಭವಿಸಿದ್ದರು.

ಗಾರ್ಸಿಯಾ ಮತ್ತು ಮ್ಲಾಡೆನೋವಿಕ್ ಅವರು 2016 ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಒಟ್ಟಿಗೆ ಗೆದ್ದಿದ್ದರು. ಮ್ಲಾಡೆನೋವಿಕ್ ಈಗ ಒಟ್ಟು ಆರು ಗ್ರ್ಯಾಂಡ್ ಸ್ಲ್ಯಾಮ್ ಮಹಿಳಾ ಡಬಲ್ಸ್ ಟ್ರೋಫಿಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಂತ್ತಾಗಿದೆ. ಅದರಲ್ಲಿ ನಾಲ್ಕು ಪ್ರಶಸ್ತಿಗಳನ್ನು ಟೈಮಿ ಬಾಬೋಸ್ ಅವರೊಂದಿಗೆ ಸೇರಿ ಗೆದ್ದುಕೊಂಡಿದ್ದಾರೆ.

ಇನ್ನೊಂದೆಡೆ ಫ್ಲೋರಿಡಾ ಮೂಲದ ಗೌಫ್ ಮತ್ತು ನ್ಯೂಯಾರ್ಕ್‌ನ 28 ವರ್ಷದ ಪೆಗುಲಾ ಅವರು ಮೊದಲ ಬಾರಿಗೆ ಪ್ರಮುಖ ಡಬಲ್ಸ್ ಈವೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಈ ಜೋಡಿಗೆ ವಿಜಯಮಾಲೆ ಒಲಿಯಲಿಲ್ಲ.

ಗೆಲುವಿನ ಬಳಿಕ ಮಾತನಾಡಿದ ಗಾರ್ಸಿಯಾ, ನಾವು ಆರು ವರ್ಷಗಳ ಹಿಂದೆ ಈ ಪ್ರಶಸ್ತಿಯನ್ನು ಜೊತೆಯಾಗಿ ಗೆದ್ದಿದ್ದವು. ಮತ್ತೆ ಈ ಪ್ರಶಸ್ತಿಯನ್ನು ಗೆಲ್ಲಲ್ಲು ಬಹಳ ಸಮಯ ಹಿಡಿಯಿತು. ಕ್ರಿಸ್ಟಿನಾ ಅವರೊಂದಿಗೆ ಮತ್ತೊಮ್ಮೆ ತಂಡವನ್ನು ಸೇರಲು ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.

ಮ್ಲಾಡೆನೊವಿಕ್ ಮಾತನಾಡಿ, ಕ್ರಿಸ್ಟಿನಾ ಅವರೊಂದಿಗೆ ಈ ಪ್ರಶಸ್ತಿಯನ್ನು ಗೆಲ್ಲುವುದು ಒಂದು ಕನಸಾಗಿತ್ತು. ಈ ಗೆಲುವಿನಲ್ಲಿ ಜೊತೆಗಾತಿಯಾಗಿದ್ದ ನಿಮಗೆ ಧನ್ಯವಾದಗಳು ಎಂದಿದ್ದಾರೆ. ಮ್ಲಾಡೆನೊವಿಕ್ ಅವರು 2019 ಮತ್ತು 2020 ರಲ್ಲಿ ಪ್ಯಾರಿಸ್‌ನಲ್ಲಿ ಹಂಗೇರಿಯ ಟೈಮಾ ಬಾಬೋಸ್‌ ಅವರೊಂದಿಗೆ ಈ ಪ್ರಶಸ್ತಿಯನ್ನು ಗೆದ್ದಿದ್ದರು.

ಫ್ಲೋರಿಡಾ ಮೂಲದ ಗೌಫ್ ಮತ್ತು ನ್ಯೂಯಾರ್ಕ್‌ನ ಪೆಗುಲಾ ಜೋಡಿಗೆ ಇದು ಆಂಟಿ-ಕ್ಲೈಮ್ಯಾಕ್ಸ್ ಆಗಿತ್ತು. ಏಕೆಂದರೆ USA ಜೋಡಿಯು ಫೈನಲ್‌ಗೆ ಹೋಗುವ ಮಾರ್ಗದಲ್ಲಿ ಕೇವಲ ಒಂದು ಸೆಟ್ ಮಾತ್ರ ಕಳೆದುಕೊಂಡಿತು. ಆದಾಗ್ಯೂ, ಭಾನುವಾರ ನಡೆದ ಫೈನಲ್​ನಲ್ಲಿ ಈ ಜೋಡಿ ಆರಂಭಿಕ ಪ್ರಯೋಜನವನ್ನು ಬಿಟ್ಟುಕೊಟ್ಟಿದ್ದರಿಂದ ಮತ್ತೆ ಆಟಕ್ಕೆ ಮರಳಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ, ಈ ಜೋಡಿ ಆರಂಭಿಕ ಸೆಟ್‌ನಲ್ಲಿ ಮುಂದಿದ್ದರು ಆದರೆ ಮುಂದಿನ ಸೆಟ್​ಗಳಲ್ಲಿ ಪುಟಿದೇಳುವ ಮತ್ತು ಸೆಟ್ ಮುರಿಯುವಲ್ಲಿ ಯಶಸ್ವಿಯಾಗಲಿಲ್ಲ.

Published On - 6:59 pm, Sun, 5 June 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ