ಬೋಲ್ಟ್ ಪಾರ್ಟಿಯಲ್ಲಿ ಪಾಲ್ಗೊಂಡರೂ ಗೇಲ್​ಗೆ ಕೊವಿಡ್ ಸೋಂಕು ತಗುಲಿಲ್ಲ

|

Updated on: Aug 25, 2020 | 7:52 PM

ಇಂಡಿಯನ್ ಪ್ರೀಮಿಯರ್ ಲೀಗ್–13ರ (ಐಪಿಎಲ್) ಆವೃತಿಯಲ್ಲಿ ಆಡಲು ಈಗಾಗಲೇ ಯು ಎ ಈ ತಲುಪಿರುವ ಕಿಂಗ್ಸ್ XI ಪಂಜಾಬ್ ತಂಡಕ್ಕೊಂದು ಭಾರಿ ಸಂತೋಷದ ಸುದ್ದಿಯನ್ನು ಅದರ ವಿಧ್ವಂಸಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್ ನೀಡಿದ್ದಾರೆ. ಆ ಸುದ್ದಿಯೇನು ಗೊತ್ತಾ? ಅವರಿಗೆ ಕೊವಿಡ್-19 ಸೋಂಕಿನಿಂದ ಬಚಾವಾಗಿದ್ದಾರೆ. ಅವರಿಗ್ಯಾಕೆ ಸೋಂಕು ತಗುಲೀತು ಅಂತ ನೀವು ಯೋಚಿಸುತ್ತಿರಬಹುದು. ಅಂಥ ಸಾಧ್ಯತೆ ಖಂಡಿತವಾಗಿಯೂ ಇತ್ತು. ಶತಮಾನದ ಶ್ರೇಷ್ಠ ಸ್ಪ್ರಿಂಟರ್ ಜಮೈಕಾದ ಉಸೇನ್ ಬೋಲ್ಟ್ ಯಾರಿಗೆ ಗೊತ್ತಿಲ್ಲ? 100 ಮತ್ತು 200 ಮೀಟರ್​ಗಳ ಓಟದಲ್ಲಿ ವಿಶ್ವದಾಖಲೆ […]

ಬೋಲ್ಟ್ ಪಾರ್ಟಿಯಲ್ಲಿ ಪಾಲ್ಗೊಂಡರೂ ಗೇಲ್​ಗೆ ಕೊವಿಡ್ ಸೋಂಕು ತಗುಲಿಲ್ಲ
ಇತ್ತ ಕ್ರಿಸ್ ಗೇಲ್ ನಾಳೆ ಪಾಕಿಸ್ತಾನಕ್ಕೆ ಹೋಗುತ್ತಿದ್ದೇನೆ. ನನ್ನೊಂದಿಗೆ ಯಾರೆಲ್ಲಾ ಬರ್ತೀರಿ? ಎಂಬ ಕ್ರಿಸ್ ಗೇಲ್ ಟ್ವೀಟ್ ಬೆನ್ನಲ್ಲೇ ಪಂಜಾಬ್ ಕಿಂಗ್ಸ್​ ಅಭಿಮಾನಿಗಳು ಪ್ರಶ್ನೆಗಳು ಸುರಿಮಳೆಗೈದಿದ್ದಾರೆ. ಏಕೆಂದರೆ ಪಂಜಾಬ್ ಕಿಂಗ್ಸ್​ ಮಂಗಳವಾರ ಐಪಿಎಲ್​ ದ್ವಿತಿಯಾರ್ಧ ಆರಂಭಿಸಲಿದೆ. ಗೇಲ್ ತಾನು ಪಾಕಿಸ್ತಾನಕ್ಕೆ ತೆರಳುವುದಾಗಿ ತಿಳಿಸಿದ್ದರಿಂದ ಅವರು ಐಪಿಎಲ್​ಗೆ ಅಲಭ್ಯರಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಲಾರಂಭಿಸಿದೆ.
Follow us on

ಇಂಡಿಯನ್ ಪ್ರೀಮಿಯರ್ ಲೀಗ್13(ಐಪಿಎಲ್) ಆವೃತಿಯಲ್ಲಿ ಆಡಲು ಈಗಾಗಲೇ ಯು ಎ ಈ ತಲುಪಿರುವ ಕಿಂಗ್ಸ್ XI ಪಂಜಾಬ್ ತಂಡಕ್ಕೊಂದು ಭಾರಿ ಸಂತೋಷದ ಸುದ್ದಿಯನ್ನು ಅದರ ವಿಧ್ವಂಸಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್ ನೀಡಿದ್ದಾರೆ.

ಆ ಸುದ್ದಿಯೇನು ಗೊತ್ತಾ? ಅವರಿಗೆ ಕೊವಿಡ್-19 ಸೋಂಕಿನಿಂದ ಬಚಾವಾಗಿದ್ದಾರೆ. ಅವರಿಗ್ಯಾಕೆ ಸೋಂಕು ತಗುಲೀತು ಅಂತ ನೀವು ಯೋಚಿಸುತ್ತಿರಬಹುದು. ಅಂಥ ಸಾಧ್ಯತೆ ಖಂಡಿತವಾಗಿಯೂ ಇತ್ತು. ಶತಮಾನದ ಶ್ರೇಷ್ಠ ಸ್ಪ್ರಿಂಟರ್ ಜಮೈಕಾದ ಉಸೇನ್ ಬೋಲ್ಟ್ ಯಾರಿಗೆ ಗೊತ್ತಿಲ್ಲ? 100 ಮತ್ತು 200 ಮೀಟರ್​ಗಳ ಓಟದಲ್ಲಿ ವಿಶ್ವದಾಖಲೆ ಹಾಗೂ ಒಲಂಪಿಕ್ ದಾಖಲೆಗಳೆರಡನ್ನೂ ತನ್ನ ಹೆಸರು ಬರೆದುಕೊಡಿರುವ ಸರ್ವಶ್ರೇಷ್ಠ ಅಥ್ಲೀಟ್.

ಬೋಲ್ಟ್ ಮೊನ್ನೆ ತಮ್ಮ 34ನೇ ಹುಟ್ಟುಹಬ್ಬವನ್ನು ಹುಟ್ಟೂರಾದ ಜಮೈಕದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡರು. ಅವರ ಬರ್ತ್​ಡೇ ಬ್ಯಾಷ್​ನಲ್ಲಿ ಭಾಗವಹಿಸಿದ ಹಲವಾರು ಸೆಲೆಬ್ರಿಟಿಗಳಲ್ಲಿ ಗೇಲ್ ಕೂಡ ಒಬ್ಬರು. ಅದಕ್ಕೂ ಗೇಲ್ ಐಪಿಎಲ್​ನಲ್ಲಿ ಆಡುವುದಕ್ಕೂ ಏನು ಸಂಬಂಧ ಅಂತೀರಾ?

ಅಸಲಿಗೆ ವಿಷಯವೇನೆಂದರೆ, ಹುಟ್ಟುಹಬ್ಬ ಆಚರಿಸಿಕೊಂಡ ಮರುದಿನವೇ ಬೋಲ್ಟ್ ಕೊವಿಡ್-19 ಸೋಂಕಿಗೊಳಗಾಗಿರುವುದು ಪತ್ತೆಯಾಯಿತು. ಕೂಡಲೇ ಗೇಲ್ ಕೂಡ ಪರೀಕ್ಷೆ ಮಾಡಿಸಿಕೊಂಡರು, ಅವರ ಮತ್ತು ಪಂಜಾಬ್ ಕ್ಲಬ್​ನ ಅದೃಷ್ಟ ಚೆನ್ನಾಗಿತ್ತು. ಗೇಲ್ ಎರಡೆರಡು ಬಾರಿ ಟೆಸ್ಟ್ ಮಾಡಿಸಿಕೊಂಡರೂ ರಿಸಲ್ಟ್ ನೆಗೆಟಿವ್ ಬಂದಿದೆ.

ಈ ಸುದ್ದಿಯನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿರುವ ಗೇಲ್, ‘‘ಎರಡು ದಿನಗಳ ಹಿಂದೆ ಮೊದಲ ಟೆಸ್ಟ್ ಆಯಿತು, ಅದರೆ, ಪ್ರಯಾಣ ಬೆಳೆಸುವ ಮೊದಲು ಎರಡು ಬಾರಿ ಟೆಸ್ಟ್ ಅಗಬೇಕು….ಎರಡನೆ ಟೆಸ್ಟ್​ನಲ್ಲಿ ಉಪಕರಣವನ್ನು ಮೂಗಿನಲ್ಲಿ ಜಾಸ್ತಿಯೇ ಒಳ ದೂಡಿದರು. ಅಬ್ಬಾ. ಈ ಟೆಸ್ಟ್ ಸಹ ನೆಗೆಟಿವ್,’’ ಎಂದು ಬರೆದುಕೊಂಡಿದ್ದಾರೆ