ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ಅಂಪೈರ್​ ಮೋಸದಾಟ? ಇಲ್ಲಿದೆ ವಿಡಿಯೋ ಸಾಕ್ಷ್ಯ

ಎರಡನೇ ಪಂದ್ಯದದ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ 108 ರನ್​ಗೆ ಒಂದು ವಿಕೆಟ್​ ಕಳೆದುಕೊಂಡಿತ್ತು. ​ ಶುಬ್​ಮನ್​ ಗಿಲ್​ ಹಾಗೂ ಮಯಾಂಕ್​ ಅಗರ್​ವಾಲ್​ ಅದ್ಭುತವಾಗಿ ಆಟವಾಡುತ್ತಿದ್ದರು. ಆಗ ಗಿಲ್​ ಔಟ್ ಆದ ರೀತಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ಅಂಪೈರ್​ ಮೋಸದಾಟ? ಇಲ್ಲಿದೆ ವಿಡಿಯೋ ಸಾಕ್ಷ್ಯ
ಔಟ್​ ಆದ ಗಿಲ್​
Rajesh Duggumane

| Edited By: sadhu srinath

Dec 14, 2020 | 4:04 PM

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಡಿಸೆಂಬರ್ 17ರಿಂದ ಮೊದಲ ಟೆಸ್ಟ್​ ಪಂದ್ಯ ನಡೆಯಲಿದೆ. ಅದಕ್ಕೂ ಮೊದಲು ಎರಡು ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಎರಡನೇ ಅಭ್ಯಾಸ  ಪಂದ್ಯದ ವೇಳೆ ನಡೆದ ಘಟನೆಯೊಂದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮ್ಯಾಚ್​ನಲ್ಲಿ ಅಂಪೈರ್​ ಮಾಡಿದ ತಪ್ಪಿನಿಂದ ಭಾರತ ವಿಕೆಟ್​ ಕಳೆದುಕೊಳ್ಳುವಂತಾಯಿತು ಎಂದು ಎಲ್ಲರೂ ಆಕ್ರೋಶ ಹೊರ ಹಾಕಿದ್ದಾರೆ.

ಎರಡನೇ ಅಭ್ಯಾಸ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ 108 ರನ್​ಗೆ ಒಂದು ವಿಕೆಟ್​ ಕಳೆದುಕೊಂಡಿತ್ತು. ​ ಶುಭ್​ ಮನ್​​ ಗಿಲ್​ ಹಾಗೂ ಮಯಾಂಕ್​ ಅಗರ್​ವಾಲ್​ ಅದ್ಭುತವಾಗಿ ಆಟವಾಡುತ್ತಿದ್ದರು. ಅರ್ಧ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಗಿಲ್​ 65 ರನ್​ ಸಿಡಿಸಿದ್ದರು. ಈ ವೇಳೆ ಅಂಪೈರ್​ ಮಾಡಿದ ಎಡವಟ್ಟಿನಿಂದ ಶುಭ್​ ಮನ್​​ ಗಿಲ್ ಔಟ್​ ಆದರು.

ಸ್ವೆಪ್​ಸನ್​​ ಎಸೆದ ಬಾಲ್​ ನೇರವಾಗಿ ಪ್ಯಾಡ್​ಗೆ ತಾಗಿ ಸ್ಲಿಪ್​ನಲ್ಲಿದ್ದ ಸಿಯಾನ್ ಅಬಾಟ್​ ಕೈ ಸೇರಿತ್ತು. ಮೊದಲು ಸ್ವೆಪ್​ಸನ್ ಲೆಗ್​ ಬಿಪೋರ್ ವಿಕೆಟ್​ಗೆ (LBW) ಅಪೀಲ್​ ಮಾಡಿದ್ದರು. ಆದರೆ, ಅಂಪೈರ್​ ಔಟ್​ ನೀಡಲಿಲ್ಲ. ನಂತರ ಇದು ಕ್ಯಾಚ್​ ಎಂದು ಆಸ್ಟ್ರೇಲಿಯಾ ಆಟಗಾರರು ಸಂಭ್ರಮಿಸಿದರು. ಈ ವೇಳೆ ಅಂಪೈರ್​ ಕೂಡ ಔಟ್​ ಕೊಟ್ಟರು.

ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗಿದ್ದು, ಚರ್ಚೆಗೆ ಕಾರಣವಾಗಿದೆ. ಲೆಗ್​ ಬಿಪೋರ್ ವಿಕೆಟ್​ ಇರಲಿಲ್ಲ. ಬಾಲ್​ ಪ್ಯಾಡ್​ಗೆ ತಾಗಿದ್ದರಿಂದ ಕ್ಯಾಚ್​ ಎನ್ನುವ ಮಾತೇ ಇಲ್ಲ. ಹೀಗಿರುವಾಗ ಅಂಪೈರ್​ ಔಟ್​ ಕೊಟ್ಟಿದ್ದೇಕೆ? ಇವರೆಲ್ಲ ಎಲ್ಲಿಂದ ಬರುತ್ತಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

ಇನ್ನು, ಭಾರತದ ಮಾಜಿ ಓಪನರ್ ಆಕಾಶ್​ ಚೋಪ್ರಾ ಕೂಡ ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಶುಭ್​ ಮನ್​​ ಗಿಲ್​ ಔಟ್​ ಆಗಿದ್ದು ಹೇಗೆ? ಇದು ಎಲ್​ಬಿಡಬ್ಲ್ಯು ಆಗಿರಲಿಲ್ಲ. ಕ್ಯಾಚ್​ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ ಎಂದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada