Glenn Maxwell: ಪಂಜಾಬ್​ನಲ್ಲಿ ಜೀರೋ, ಆರ್​ಸಿಬಿಯಲ್ಲಿ ಹೀರೋ; ಸೋಷಿಯಲ್ ಮೀಡಿಯಾದಲ್ಲಿ ಟ್ರಾಲ್ ಆದ ಪಂಜಾಬ್ ಕಿಂಗ್ಸ್

| Updated By: ganapathi bhat

Updated on: Nov 30, 2021 | 12:18 PM

ಕಳೆದ ಎರಡು ಪಂದ್ಯಗಳಲ್ಲೂ ಉತ್ತಮ ಆಟವಾಡಿದ್ದ ಮ್ಯಾಕ್ಸ್​ವೆಲ್ ನಿನ್ನೆ ಕೂಡ ಸ್ಫೋಟಕ ಬ್ಯಾಟಿಂಗ್ ತೋರಿದ್ದಾರೆ. ಆ ಬಗ್ಗೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಕೆಲ ತಮಾಷೆಗಳು ಇಲ್ಲಿವೆ.

Glenn Maxwell: ಪಂಜಾಬ್​ನಲ್ಲಿ ಜೀರೋ, ಆರ್​ಸಿಬಿಯಲ್ಲಿ ಹೀರೋ; ಸೋಷಿಯಲ್ ಮೀಡಿಯಾದಲ್ಲಿ ಟ್ರಾಲ್ ಆದ ಪಂಜಾಬ್ ಕಿಂಗ್ಸ್
ಗ್ಲೆನ್ ಮ್ಯಾಕ್ಸ್​ವೆಲ್- ಪ್ರೀತಿ ಜಿಂಟಾ ಮಿಮ್ಸ್
Follow us on

ಆಸ್ಟ್ರೇಲಿಯಾ ತಂಡದ ಪವರ್ ಹಿಟ್ಟರ್ ಗ್ಲೆನ್ ಮ್ಯಾಕ್ಸ್​ವೆಲ್ ಮತ್ತೆ ತಮ್ಮ ಬಿರುಸಿನ ಆಟದ ಫಾರ್ಮ್​ಗೆ ಮರಳಿರುವಂತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರ ಪರ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಐಪಿಎಲ್ 2021ರಲ್ಲಿ ಉತ್ತಮ ಆಟವಾಡುತ್ತಿರುವ ಮ್ಯಕ್ಸ್​ವೆಲ್​ರನ್ನು ಆರ್​ಸಿಬಿ ತಂಡ 14.25 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಅದಕ್ಕೆ ತಕ್ಕಂತೆ ಆಡುತ್ತಿರುವ ಮ್ಯಾಕ್ಸಿ, ನಿನ್ನೆಯ ಆರ್​ಸಿಬಿ ಪಂದ್ಯದಲ್ಲಿ 49 ಬಾಲ್​ಗೆ 6 ಫೋರ್ ಹಾಗೂ 3 ಸಿಕ್ಸರ್ ಸಹಿತ 78 ರನ್ ಪೇರಿಸಿದ್ದರು. ಬಳಿಕ ಆರೆಂಜ್ ಕ್ಯಾಪ್​ನ್ನೂ ಪಡೆದುಕೊಂಡಿದ್ದರು.

ಎಬಿ ಡಿವಿಲಿಯರ್ಸ್ ಜೊತೆಗೆ ಇನ್ನಿಂಗ್ಸ್ ಕಟ್ಟಿದ ಮ್ಯಾಕ್ಸ್​ವೆಲ್ ಆರ್​ಸಿಬಿ 4 ವಿಕೆಟ್ ಕಳೆದುಕೊಂಡು 204 ರನ್ ಗಳಿಸಲು ಕಾರಣರಾದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬೃಹತ್ ಮೊತ್ತ ಬೆನ್ನತ್ತಲು ಕಷ್ಟಪಡುವಂತಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್​ಗಳ ಅಂತ್ಯಕ್ಕೆ 4 ವಿಕೆಟ್​ಗಳನ್ನು ಕಳೆದುಕೊಂಡು ಭರ್ಜರಿ 204 ರನ್ ದಾಖಲಿಸಿತ್ತು. ಬೆಂಗಳೂರು ಪರ ಗ್ಲೆನ್ ಮ್ಯಾಕ್ಸ್​ವೆಲ್ 78 (49) ಹಾಗೂ ಎಬಿ ಡಿವಿಲಿಯರ್ಸ್ 76 (34)* ಆಕರ್ಷಕ ಅರ್ಧಶತಕದ ಕೊಡುಗೆ ನೀಡಿದ್ದರು.

ಗ್ಲೆನ್ ಮ್ಯಾಕ್ಸ್​ವೆಲ್ ಈ ಬಾರಿಯ ಆಟ ಕ್ರಿಕೆಟ್ ಅಭಿಮಾನಿಗಳನ್ನು ಅದರಲ್ಲೂ ವಿಶೇಷವಾಗಿ ಪಂಜಾಬ್ ಕಿಂಗ್ಸ್ ಅಭಿಮಾನಿಗಳನ್ನು ಚಕಿತಗೊಳಿಸಿದೆ. ಐಪಿಎಲ್ 2020ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ತಂಡದಲ್ಲಿ ಆಡಿದ್ದ ಮ್ಯಾಕ್ಸ್​ವೆಲ್ 13 ಪಂದ್ಯಗಳಲ್ಲಿ ಕೇವಲ 108 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ, ಮ್ಯಾಕ್ಸಿ ಈ ಬಾರಿ ಆರ್​ಸಿಬಿ ಸೇರಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದು ಪಂಜಾಬ್ ಕಿಂಗ್ಸ್ ಕೊ-ಓನರ್ ಪ್ರೀತಿ ಜಿಂಟಾ ಬಗ್ಗೆ ಹಲವು ಟ್ರಾಲ್ ಹಾಗೂ ಮಿಮ್ಸ್​ಗಳು ಓಡಾಡುವಂತೆ ಮಾಡಿದೆ.

ಕಳೆದ ಎರಡು ಪಂದ್ಯಗಳಲ್ಲೂ ಉತ್ತಮ ಆಟವಾಡಿದ್ದ ಮ್ಯಾಕ್ಸ್​ವೆಲ್ ನಿನ್ನೆ ಕೂಡ ಸ್ಫೋಟಕ ಬ್ಯಾಟಿಂಗ್ ತೋರಿದ್ದಾರೆ. ಆ ಬಗ್ಗೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಕೆಲ ತಮಾಷೆಗಳು ಇಲ್ಲಿವೆ.

ಇದನ್ನೂ ಓದಿ: Yuzvendra Chahal: ಮೊದಲ ವಿಕೆಟ್ ಕಿತ್ತ ಚಹಾಲ್ ಸಂಭ್ರಮ ನೋಡಿ ಕಣ್ಣೀರಿಟ್ಟ ಧನಶ್ರೀ; ಫೊಟೊ ವೈರಲ್

ಇದನ್ನೂ ಓದಿ: IPL 2021 Orange Cap: ಪಂಜಾಬ್​ನಿಂದ ಗೇಟ್​ಪಾಸ್ ಪಡೆದು ಆರ್ಸಿಬಿ ತಂಡ ಸೇರಿದ ಗ್ಲೆನ್ ಮ್ಯಾಕ್ಸ್​ವೆಲ್ ಆರೆಂಜ್ ಕ್ಯಾಪ್ ಹೋಲ್ಡರ್!

Published On - 4:28 pm, Mon, 19 April 21