ಕ್ರಿಕೆಟ್ ಜಗತ್ತಿನ ಅಜಾತಶತ್ರು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮೆಚ್ಚಿನ ಆಟಗಾರ, ಮಿಸ್ಟರ್ 360 ಡಿಗ್ರೀಸ್ ಎಬಿ ಡಿವಿಲಿಯರ್ಸ್ (Mr 360 Degrees) ಇಂದು 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಎಬಿಡಿ ದಕ್ಷಿಣ ಆಫ್ರಿಕಾದ ಆಟಗಾರನಾದರೂ ಎಲ್ಲಾ ದೇಶಗಳಲ್ಲೂ ಅವರಿಗೆ ಅಭಿಮಾನಿಗಳಿದ್ದಾರೆ. ಭಾರತದಲ್ಲೂ ಡಿವಿಲಿಯರ್ಸ್ ಅಭಿಮಾನಕ್ಕೆ ಕೊರತೆ ಏನಿಲ್ಲ. ಅದರಲ್ಲೂ ಕರುನಾಡಿನವರಿಗೆ ಅಥವಾ ಬೆಂಗಳೂರಿನವರಿಗೆ ಡಿವಿಲಿಯರ್ಸ್ ಮೇಲಿರುವ ಪ್ರೀತಿ, ಗೌರವದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಂಬಿಕಸ್ಥ ಆಟಗಾರನ ಮೇಲೆ ಅತ್ಯಂತ ಅಭಿಮಾನ. ಎಬಿಡಿಗೂ ಅಷ್ಟೇ. ಭಾರತ, ಬೆಂಗಳೂರು ಎಂದರೆ ಅಚ್ಚುಮೆಚ್ಚು!
ಎಬಿಡಿ, ಮಿಸ್ಟರ್ 360 ಡಿಗ್ರೀಸ್ ಎಂದು ಕರೆಸಿಕೊಳ್ಳುವ ಡಿವಿಲಿಯರ್ಸ್ ಪೂರ್ಣ ಹೆಸರು ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್. 1984 ಫೆಬ್ರವರಿ 17ರಂದು ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ವಿಲಿಯರ್ಸ್, ಈಗ ಕ್ರಿಕೆಟ್ ಲೋಕದ ಸೂಪರ್ಮ್ಯಾನ್. ಬಲಗೈ ದಾಂಡಿಗ. ಬಲಗೈ ಮಧ್ಯಮ ವೇಗಿ. ವಿಕೆಟ್ ಕೀಪರ್ ಮತ್ತು ಅತ್ಯುತ್ತಮ ಫೀಲ್ಡರ್ ಕೂಡ ಹೌದು.
ಭಾರತ ಮತ್ತು ಡಿವಿಲಿಯರ್ಸ್, ಬೆಂಗಳೂರು ಮತ್ತು ಡಿವಿಲಿಯರ್ಸ್ ಒಲವಿನ ಬಗ್ಗೆ ಬೇರೆ ಹೇಳಬೇಕಾದ್ದಿಲ್ಲ. ಡಿವಿಲಿಯರ್ಸ್ ಭಾರತೀಯರೇ ಅನ್ನುವಷ್ಟು ನಮಗೆ ಅವರ ಮೇಲೆ ಪ್ರೀತಿ. ಯಾವೊಬ್ಬ ಕ್ರಿಕೆಟ್ ಅಭಿಮಾನಿಯೂ ಇಷ್ಟ ಪಡದೆ ಇರಲಾರದ ವ್ಯಕ್ತಿತ್ವ, ಮೈದಾನದಲ್ಲಿ ತೋರುವ ಉತ್ಸಾಹ ಡಿವಿಲಿಯರ್ಸ್ಗೆ ಇದೆ. ಇಡೀ ಪ್ರೇಕ್ಷಕ ವರ್ಗವನ್ನು ತಮ್ಮ ಆಟ ಹಾಗೂ ನಡತೆಯಿಂದ ಪುಟಿದೇಳಿಸಬಲ್ಲ ಸಾಮರ್ಥ್ಯ ಎಬಿಡಿಗಿದೆ.
ಡಿವಿಲಿಯರ್ಸ್ ಹುಟ್ಟುಹಬ್ಬಕ್ಕೆ ನೆಟ್ಟಿಗರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಮೆಚ್ಚಿನ ಆಟಗಾರನನ್ನು ಅಭಿಮಾನದಿಂದ ಹೊಗಳಿದ್ದಾರೆ. ಡಿವಿಲಿಯರ್ಸ್, 44 ಎಸೆತಗಳಲ್ಲಿ 149 ರನ್ ಗಳಿಸಬಲ್ಲರು. ಹಾಗೆಯೇ 297 ಎಸೆತಗಳನ್ನು ಆಡಿ 43 ರನ್ ಮಾತ್ರ ಕಲೆಹಾಕಲೂ ಸಮರ್ಥರು. ಟೆಸ್ಟ್ ಮತ್ತು ಚುಟುಕು ಪಂದ್ಯಕ್ಕೆ ವಿಲಿಯರ್ಸ್ ಹೇಗೆ ಒಗ್ಗಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಈ ಮೂಲಕ ತಿಳಿಸಿದ್ದಾರೆ.
Capable Of Scoring 149 Off 44 & 43 Off 297 Happiest B'day ABD??#HappyBirthdayABD • @ABdeVilliers17 pic.twitter.com/UjflfNVgCV
— RCB Trends™ (@TrendRCB) February 16, 2021
ಕ್ರಿಕೆಟ್ ಇತಿಹಾಸ ಕಂಡ ಮೋಸ್ಟ್ ವರ್ಸಟೈಲ್ ಬ್ಯಾಟ್ಸ್ಮನ್ ಡಿವಿಲಿಯರ್ಸ್ ಎಂದು ಅಭಿಮಾನಿಯೊಬ್ಬರು ಹೀಗೆ ವಿವರಣೆ ನೀಡಿದ್ದಾರೆ. ಎಬಿಡಿ ಆಟದ ವಿವಿಧ ಭಂಗಿಗಳು ಇಲ್ಲಿವೆ.
Most Versatile Batsman
in The History of The Game ?❤️#HappyBirthdayABD pic.twitter.com/GF1gRs0PaT— Virat Fan Trends™ (@ViratFanTrends) February 16, 2021
ಇದನ್ನೂ ಓದಿ: IPL 2021 Auction Date: ಫೆ. 18 ರಂದು ಐಪಿಎಲ್ 2021 ಹರಾಜು.. ಲೈವ್ ಯಾವ ಚಾನೆಲ್ನಲ್ಲಿ ಗೊತ್ತಾ? ಇಲ್ಲಿದೆ ಮಾಹಿತಿ
ಎಬಿಡಿ ಹೇಗೆ ಬ್ಯಾಟ್ ಬೀಸುತ್ತಾರೆ, ಮೈದಾನದಲ್ಲಿ ಹೇಗೆ ಮಿಂಚುತ್ತಾರೆ.. ಆಟದ ಝಲಕ್ ಇಲ್ಲಿದೆ ನೋಡಿ.
• Fastest ODI 50 off 16 balls
• Fastest ODI century off 31 balls ?
• 47 ?s, 109 fifties
• 20,014 Int. runs
• ODI Avg- 53+
• Total 4s- 2004, Total 6s- 328
• Test Best- 278*, ODI Best- 176Most loved foreign player in India ??❤️#HappyBirthdayABDpic.twitter.com/0OuqJeHdkg
— Abhi. (@Abhicricket18) February 16, 2021
ಡಿವಿಲಿಯರ್ಸ್ ಭಾರತದಲ್ಲಿ ಭಾರತದ ವಿರುದ್ಧವೇ ಆಡುತ್ತಿದ್ದಾರೆ. ಆದರೆ, ಮುಂಬೈನ ವಾಂಖೇಡೆ ಮೈದಾನದಲ್ಲಿ ಅಭಿಮಾನಿಗಳು ಎಬಿಡಿ ಎಬಿಡಿ ಎಬಿಡಿ ಎಂದು ಕೂಗುತ್ತಿದ್ದಾರೆ. ಭಾರತದಲ್ಲಿ ವಿದೇಶಿ ಕ್ರಿಕೆಟಿಗನೊಬ್ಬ ಈ ರೀತಿಯ ಫ್ಯಾನ್ ಫಾಲೊವಿಂಗ್ ಪಡೆಯಬೇಕಾದರೆ ಅದು ವಿಲಿಯರ್ಸ್ಗೆ ಮಾತ್ರ ಸಾಧ್ಯ!
Playing Against India That To In India But Whole Wankhede Chants ??
ABD…
ABD….
ABD…..!This Is Only Possible For This Man Abraham Benjamin Devilliers ???#HappyBirthdayABD • @ABdeVilliers17 https://t.co/oX6W0qYXKR
— RCB Trends™ (@TrendRCB) February 16, 2021
ಇದನ್ನೂ ಓದಿ: IPL 2021 Auction: ಚೆನ್ನೈನಲ್ಲಿ ಫೆ. 18 ರಂದು IPL ಹರಾಜು.. 292 ಆಟಗಾರರ ಭವಿಷ್ಯ ಪ್ರಾಂಚೈಸಿಗಳ ತೀರ್ಮಾನದಲ್ಲಿದೆ..!
ಡಿವಿಲಿಯರ್ಸ್ರನ್ನು ಮಾಸ್ ಹೀರೋ, ವಿರಾಟ್-ಎಬಿಡಿ ಜೋಡಿ ಎಂದು ಮೆರೆಸಿರುವ ನೆಟ್ಟಿಗರು ಇನ್ನಿಲ್ಲದ ಅಭಿಮಾನ ತೋರ್ಪಡಿಸಿದ್ದಾರೆ. #HappyBirthdayABD ಹಾಗೂ #HappyBirthDayAbDeVilliers ಎಂಬ ಹ್ಯಾಷ್ಟ್ಯಾಗ್ಗಳು ಟ್ವಿಟರ್ ಟ್ರೆಂಡಿಂಗ್ನಲ್ಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ವಿಭಾಗದಲ್ಲಿ ಈ ವೇಳೆ HappyBirthdayABD ಟ್ಯಾಗ್ ಮೂಲಕ 59.9K ರಿಟ್ವೀಟ್ಗಳಾಗಿವೆ.
Published On - 11:29 am, Wed, 17 February 21