ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೊಮ್ಮೆ ವಿಶ್ವದ ಕ್ರೀಡಾಪ್ರೇಮಿಗಳ ಪಾಲಿಗೆ ಹಬ್ಬದ ಔತಣ ಮಾಡಿಸುತ್ತಿದೆ. ಎಷ್ಟೋ ಆಟಗಾರರಿಗೆ ಐಪಿಎಲ್ ಎಂದರೆ ಅದೊಂದು ಅವಕಾಶಗಳ ಹೆಬ್ಬಾಗಿಲು. ಕ್ರಿಕೆಟ್ ಎಂಬೋ ಮಹಾಸಾಗರದಲ್ಲಿ ಧುಮುಕಲು ಐಪಿಎಲ್ ಅತಿ ದೊಡ್ಡ ದಾರಿ. ಐಪಿಎಲ್ನಲ್ಲಿ ಮಿಂಚಿದ ಎಷ್ಟೋ ಕ್ರಿಕೆಟಿಗರು ಮುಂದೆ ಅಂತರಾಷ್ಟ್ರೀಯ ದರ್ಜೆಯ ಕ್ರಿಕೆಟ್ಗೂ ಪದಾರ್ಪಣೆ ಮಾಡಿದ್ದಾರೆ. ಅಂತಹ ಉದಾಹರಣೆಗಳು ಪುಷ್ಕಳವಾಗಿ ದೊರೆಯುತ್ತದೆ. ಮುಂಚೆ ರಣಜಿ ಪಂದ್ಯಾವಳಿಗಳ ಮೂಲಕ ಹೇಗೆ ರಾಷ್ಟ್ರೀಯ ಕ್ರಿಕೆಟ್ ತಂಡ್ಕಕೆ ಸೇರುತ್ತಿದ್ದರೋ ಹಾಗೇ ಇಂದು ಐಪಿಎಲ್ಗೆ ಕಾಲಿಟ್ಟು ಮಿಂಚಲು ಪ್ರಯತ್ನಿಸುತ್ತಾರೆ. ಅಲ್ಲಿ ಮಿಂಚಿದರೆ ಮುಂದೆ ಭವಿಷ್ಯ ಪ್ರಜ್ವಲವಾದಂತೆಯೇ ಎಂಬ ಮನೋಭಾವ ಎಲ್ಲರಲ್ಲಿದೆ.
ಇಷ್ಟೆಲ್ಲ ಇರುವಾಗ ಭಾರತೀಯ ಉದ್ಯಮಿಯೋರ್ವರಿಗೂ ಐಪಿಎಲ್ನಲ್ಲಿ ಆಡುವ ಮನಸಾಗಿದೆ. ಯಾರು ಅಂತೀರಾ? ಅವರೇ ಆರ್ಪಿಜಿ ಸಮೂಹ ಸಂಸ್ಥೆಗಳ ಒಡೆಯ ಹರ್ಷ ಗೋಯೆಂಕಾ. ಟ್ವಿಟರ್ನಲ್ಲಿ ಸಕ್ರಿಯರಾಗಿರುವ ಅವರ ಟ್ವೀಟ್ಗಳು ಬಹಳ ಕುತೂಹಲಕರ ಮತ್ತು ಸ್ವಾರಸ್ಯಕರ. ಈ ಬಾರಿ ಸಂಚಲನ ಮೂಡಿಸಿರುವ ಐಪಿಎಲ್ನಲ್ಲಿ ಆಡುವ ಅಪೇಕ್ಷೆಯನ್ನು 63 ವರ್ಷದ ಹರ್ಷ ಗೋಯೆಂಕಾ ವ್ಯಕ್ತಪಡಿಸಿದ್ದಾರೆ.
ನನ್ನ ಹೊಸ ಜೀವನವೇ, ನಿನಗೆ ಧನ್ಯವಾದಗಳು. ಪ್ರತಿದಿನ ಸಂಜೆ ನಾನು ಕ್ರಿಕೆಟ್ ಆಡುತ್ತೇನೆ. ಕೊನೆಗೂ ಆಟದಲ್ಲಿ ಒಂದು ಫಾರ್ಮ್ ಸಾಧಿಸಿದ್ದೇನೆ. ಐಪಿಎಲ್ ತಂಡಗಳ ಒಡೆತನ ಹೊಂದಿರುವ ಮಾಲೀಕರೇ ಗಮನಿಸಿ. ನಾನು ನಿಮಗಾಗಿ ಉಚಿತವಾಗಿ ಆಡಲು ಸಿದ್ಧನಿದ್ದೇನೆ. ಆದರೆ ನಾನು ಆಡಬೇಕೆಂದಿದ್ದರೆ ಎರಡೇ ಎರಡು ಮನವಿಗಳಿಗೆ ನೀವು ಒಪ್ಪಬೇಕಾಗುತ್ತದೆ ಎಂದು ಅವರ ಟ್ವೀಟ್ನ ಮೊದಲಾರ್ಧದಲ್ಲಿ ಬರೆದಿದ್ದಾರೆ.
Thanks to the new life, I am playing cricket almost every evening. Finally….in form! IPL team owners, I am available to play free of cost for you. Just two requests- game should be played with tennis ball and after scoring 50 runs, I should be allowed a runner !?? pic.twitter.com/vUa5PUDRgZ
— Harsh Goenka (@hvgoenka) April 12, 2021
ಹಾಗಾದರೆ ಅವರು ಐಪಿಎಲ್ನಲ್ಲಿ ಆಡಲು ಕೋರಿರುವ ಮನವಿಗಳೇನು ಎಂದು ನಿಮಗೂ ಕುತೂಹಲವಾಯಿತು ಅಲ್ಲವೇ? ಅದನ್ನು ತಿಳಿಯಲು ಟ್ವೀಟ್ನ ಮುಂದಿನ ಭಾಗವನ್ನು ಓದಲೇಬೇಕು. ಹರ್ಷ ಗೋಯೆಂಕಾ ಕ್ರಿಕೆಟ್ ಆಡಬೇಕೆಂದರೆ ಆಡಲು ಟೆನಿಸ್ ಬಾಲ್ ಬಳಸಬೇಕು. ಮತ್ತು 50 ರನ್ಗಳ ನಂತರ ರನ್ನರ್ ಒಬ್ಬನನ್ನು ಅವರಿಗೆ ಒದಗಿಸಬೇಕು’ ಎಂದು ಅವರು ಕೇಳಿಕೊಂಡಿದ್ದಾರೆ.
If the ball is hit in the sea, who brings it back? Or you don’t bother and unwrap a new ball.
— Gabbbar (@GabbbarSingh) April 12, 2021
ಅವರ ಟ್ವೀಟ್ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರತಿಕ್ರಿಯೆಗಳೂ ಒಂದಕ್ಕಿಂತ ಒಂದು ಮಜ ಮಜಾ ಆಗಿವೆ. ಅವರ ಟ್ವೀಟ್ನಲ್ಲಿನ ಚಿತ್ರದಲ್ಲಿ ಸಮುದ್ರ ಕಾಣಿಸುತ್ತದೆ. ನೀವು ಹೊಡೆದ ಬಾಲ್ ಆ ಸಮುದ್ರಕ್ಕೆ ಹೋದರೆ ಹೆಕ್ಕಿ ತರುವವರು ಯಾರು ಎಂದು ಓರ್ವರು ಟ್ವೀಟ್ ಮಾಡಿದ್ದಾರೆ!
ಇದನ್ನೂ ಓದಿ: Petrol Price Today: ಏಪ್ರಿಲ್ 13ನೇ ತಾರೀಕು ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ!
ಕೊರೊನಾ ಕಡಿಮೆ ಮಾಡಲು ಕೆಂಪಿರುವೆಯ ಚಟ್ನಿ; ಅರ್ಜಿ ತಿರಸ್ಕರಿಸಿದ ಒಡಿಶಾ ಹೈಕೋರ್ಟ್
(Harsh Goenka wants to play IPL 2021 for free but have 2 conditions)