ಶೂಟಿಂಗ್​ನಲ್ಲಿ ಪದಕ ಗೆದ್ದ ಮನೀಶ್ ನರ್ವಾಲ್- ಸಿಂಹರಾಜ್​ಗೆ ಭಾರೀ ಬಹುಮಾನ ಘೋಷಿಸಿದ ಹರಿಯಾಣ ಸರ್ಕಾರ

Tokyo Paralympics: ಹರಿಯಾಣ ಸರ್ಕಾರ ಚಿನ್ನದ ಪದಕ ಗೆದ್ದ ಭಾರತದ ಶೂಟರ್ ಮನೀಶ್ ನರ್ವಾಲ್​ಗೆ 6 ಕೋಟಿ ಮತ್ತು ಬೆಳ್ಳಿ ಪದಕ ಗೆದ್ದ ಸಿಂಹರಾಜ್​ಗೆ 4 ಕೋಟಿ ರೂ ಬಹುಮಾನ ಘೋಷಿಸಿದೆ.

ಶೂಟಿಂಗ್​ನಲ್ಲಿ ಪದಕ ಗೆದ್ದ ಮನೀಶ್ ನರ್ವಾಲ್- ಸಿಂಹರಾಜ್​ಗೆ ಭಾರೀ ಬಹುಮಾನ ಘೋಷಿಸಿದ ಹರಿಯಾಣ ಸರ್ಕಾರ
ಮನೀಶ್ ನರ್ವಾಲ್- ಸಿಂಹರಾಜ್
Updated By: ಪೃಥ್ವಿಶಂಕರ

Updated on: Sep 04, 2021 | 6:32 PM

ಈ ವರ್ಷದ ಪ್ಯಾರಾಲಿಂಪಿಕ್ ಕ್ರೀಡಾಕೂಟವು ಭಾರತೀಯ ಕ್ರೀಡಾಪಟುಗಳಿಗೆ ದೊಡ್ಡ ಯಶಸ್ಸನ್ನು ನೀಡುತ್ತಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್ 2020 ರಲ್ಲಿ, ಭಾರತೀಯ ಪ್ಯಾರಾ ಅಥ್ಲೀಟ್‌ಗಳು ಒಂದರ ನಂತರ ಒಂದು ಪದಕಗಳನ್ನು ಗೆಲ್ಲುತ್ತಿದ್ದಾರೆ. ಈ ಪ್ರದರ್ಶನವು ದೇಶಾದ್ಯಂತ ಭಾರತೀಯ ಪ್ಯಾರಾ-ಕ್ರೀಡಾಪಟುಗಳ ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ಇತ್ತೀಚೆಗೆ, ಭಾರತದ ಶೂಟರ್ ಮನೀಶ್ ನರ್ವಾಲ್ ಚಿನ್ನದ ಪದಕ ಗೆದ್ದರು ಮತ್ತು ಸಿಂಹರಾಜ್ ಬೆಳ್ಳಿ ಪದಕ ಗೆದ್ದರು. ಅವರು ಕ್ರಮವಾಗಿ ಪಿ 4 ಮಿಶ್ರ 50 ಮೀ ಪಿಸ್ತೂಲ್ ಎಸ್‌ಎಸ್ -1 ಫೈನಲ್‌ನಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರು. ಈ ಸಾಧನೆಗೆ ಹರಿಯಾಣ ಸರ್ಕಾರ ಅವರನ್ನು ಗೌರವಿಸಿ ಮನೀಶ್​ಗೆ 6 ಕೋಟಿ ಮತ್ತು ಸಿಂಹರಾಜ್​ಗೆ 4 ಕೋಟಿ ಬಹುಮಾನ ಘೋಷಿಸಿದ್ದಾರೆ.

ಅರ್ಹತೆಯಲ್ಲಿ, ಸಿಂಹರಾಜ್ 536 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಮನೀಶ್ ನರ್ವಾಲ್ (533) ಏಳನೇ ಸ್ಥಾನದಲ್ಲಿದ್ದರು. ಮನೀಶ್ ನರ್ವಾಲ್ 218.2 ಅಂಕಗಳೊಂದಿಗೆ ಫೈನಲ್‌ನಲ್ಲಿ ಮೊದಲ ಸ್ಥಾನ ಪಡೆದರು. ಸಿಂಹರಾಜ್ (216.7) ಎರಡನೇ ಸ್ಥಾನ ಪಡೆದರು. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ ಗೆಲ್ಲಲು ಮನೀಶ್ ನರ್ವಾಲ್ ಸಹಾಯ ಮಾಡಿದರು. ಈ ಹಿಂದೆ ಅವನಿ ಲಖೇರಾ (ಮಹಿಳೆಯರ 10 ಮೀಟರ್ ಏರ್ ರೈಫಲ್ SH1) ಮತ್ತು ಸುಮಿತ್ ಆಂಟಿಲ್ (ಪುರುಷರ ಜಾವೆಲಿನ್ ಥ್ರೋ F64) ಚಿನ್ನದ ಪದಕಗಳನ್ನು ಗೆದ್ದಿದ್ದರು.

ಸಿಂಹರಾಜ್ ಅವರ ಡಬಲ್ ಬ್ಲಾಸ್ಟ್
39 ವರ್ಷದ ಸಿಂಹರಾಜ್ ಪ್ಯಾರಾಲಿಂಪಿಕ್ಸ್​ನಲ್ಲಿ ಎರಡನೇ ಪದಕ ಗೆದ್ದರು. ಅವರು ಈ ಹಿಂದೆ 10 ಮೀಟರ್ ಏರ್ ಪಿಸ್ತೂಲ್ SH1 ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅವ್ನಿ ಲಖೇರಾ ಕೂಡ ಎರಡು ಪದಕಗಳನ್ನು ಹೊಂದಿದ್ದಾರೆ. ಚಿನ್ನದ ಜೊತೆಗೆ, ಅವರು ಕಂಚು ಗೆದ್ದಿದ್ದಾರೆ.

Published On - 6:27 pm, Sat, 4 September 21