AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಪ್ಪ ಎಲ್ಲಿದ್ದೀಯಪ್ಪಾ: 10 ತಿಂಗಳ ಬಳಿಕ ಮಗಳನ್ನು ಭೇಟಿಯಾದ ವಾಸಿಂ ಅಕ್ರಂ

Wasim Akram: ಕೋವಿಡ್ -19 ಪ್ರಯಾಣ ನಿರ್ಬಂಧಗಳಿಂದಾಗಿ ಅಕ್ರಂ ಕಳೆದ 10 ತಿಂಗಳುಗಳಿಂದ ತನ್ನ ಕುಟುಂಬದಿಂದ ದೂರವಾಗಿದ್ದರು.

Viral Video: ಅಪ್ಪ ಎಲ್ಲಿದ್ದೀಯಪ್ಪಾ: 10 ತಿಂಗಳ ಬಳಿಕ ಮಗಳನ್ನು ಭೇಟಿಯಾದ ವಾಸಿಂ ಅಕ್ರಂ
Wasim Akram
TV9 Web
| Edited By: |

Updated on: Sep 04, 2021 | 7:32 PM

Share

ಪಾಕಿಸ್ತಾನ್ ಮಾಜಿ ನಾಯಕ ವಾಸಿಂ ಅಕ್ರಂ (Wasim Akram) ತಮ್ಮ ಮಗಳು ಐಲಾ ಜೊತೆಗಿನ ಸುಂದರ ಕ್ಷಣಗಳ ವೀಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ಈ ವೀಡಿಯೋ ತುಣುಕನ್ನು ಹಂಚಿಕೊಳ್ಳಲು ಮುಖ್ಯ ಕಾರಣ ಇಬ್ಬರು ಭೇಟಿಯಾಗಿ ತಿಂಗಳುಗಳೇ ಕಳೆದಿರುವುದು. ಹೌದು, ಕೋವಿಡ್ -19 ಪ್ರಯಾಣ ನಿರ್ಬಂಧಗಳಿಂದಾಗಿ ಅಕ್ರಂ ಕಳೆದ 10 ತಿಂಗಳುಗಳಿಂದ ತನ್ನ ಕುಟುಂಬದಿಂದ ದೂರವಾಗಿದ್ದರು. ಅಕ್ರಂ ಪಾಕಿಸ್ತಾನದಲ್ಲಿದ್ದರೆ, ಅವರ ಹೆಂಡತಿ ಮತ್ತು ಮಗಳು ಆಸ್ಟ್ರೇಲಿಯಾದಲ್ಲಿದ್ದರು.

ಇದೀಗ 55 ವರ್ಷದ ಅಕ್ರಂ, ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿ 14 ದಿನಗಳ ಕ್ವಾರಂಟೈನ್​ ಮುಗಿಸಿ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾರೆ. ಇದೇ ವೇಳೆ ಮಗಳನೊಂದಿಗಿನ ಸುಂದರ ಕ್ಷಣಗಳನ್ನು ಅಕ್ರಂ ಅವರ ಪತ್ನಿ ಶನಿಯರಾ ಅಕ್ರಮ್ ಚಿತ್ರೀಕರಿಸಿದ್ದಾರೆ. ಈ ವಿಡಿಯೋವನ್ನು ಮಾಜಿ ಎಡಗೈ ವೇಗಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು “ಕೊನೆಗೂ 10 ತಿಂಗಳ ನಂತರ ನನ್ನ ಮಗಳನ್ನು ನೋಡಿದೆ,” ಎಂದು ಸಂತಸವನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ ತಾನು ಇಲ್ಲದಿದ್ದರೂ, ತಮ್ಮ “ಪುಟ್ಟ ರಾಜಕುಮಾರಿ” ಯನ್ನು ಚೆನ್ನಾಗಿ ನೋಡಿಕೊಂಡಿದ್ದಕ್ಕಾಗಿ ತನ್ನ ಪತ್ನಿ, ಆಸ್ಟ್ರೇಲಿಯಾದ ಸಾಮಾಜಿಕ ಕಾರ್ಯಕರ್ತೆ ಶನಿಯೆರಾ ಅವರಿಗೆ ತನ್ನ ಕೃತಜ್ಞತೆಗಳು ಎಂದು ವಾಸಿಂ ಅಕ್ರಂ ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಭಾರತದ ಖ್ಯಾತ ಕ್ರಿಕೆಟ್ ಕಾಮೆಂಟೇಟರ್ ಹರ್ಷ ಭೋಗ್ಲೆ ಪ್ರತಿಕ್ರಿಯಿಸಿದ್ದು, “ಲವ್ಲಿ…ಭಯಂಕರ ಬೌಲರ್​ನ ಮುಗ್ದತೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಹಲವರು ಅಕ್ರಂ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ತುಂಬಾ ದಿನಗಳ ಬಳಿಕ ಮಗಳ ಭೇಟಿಯ ಕ್ಷಣಗಳು ಅದ್ಭುತವಾಗಿರುತ್ತವೆ. ಅಂತಹ ಅನುಭವ ನನಗೂ ಆಗಿತ್ತು. ಈಗ ನಿಮಗೂ ಆಗಿದೆ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. ಇನ್ನು ಕೆಲವರು ಸ್ವಿಂಗ್ ಮಾಂತ್ರಿಕ ವಿಡಿಯೋಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: T20 World Cup 2021: ನಮಗಲ್ಲ, ಭಾರತಕ್ಕೆ ಟೆನ್ಶನ್ ಜಾಸ್ತಿ ಎಂದ ಪಾಕ್ ನಾಯಕ

ಇದನ್ನೂ ಓದಿ: ಅತ್ಯುತ್ತಮ ಮೈಲೇಜ್ ನೀಡುವ ಅತೀ ಕಡಿಮೆ ಬೆಲೆಯ ಸ್ಕೂಟರ್ ಬಿಡುಗಡೆ

ಇದನ್ನೂ ಓದಿ: Crime News: ಸಿಂಧೂರ ಹಚ್ಚಿದಕ್ಕೆ ಮಗಳನ್ನು ಕೊಂದ ತಾಯಿ

(Wasim Akram Meets His Daughter After Being “10 Months Apart”)

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ