T20 World Cup 2021: ನಮಗಲ್ಲ, ಭಾರತಕ್ಕೆ ಟೆನ್ಶನ್ ಜಾಸ್ತಿ ಎಂದ ಪಾಕ್ ನಾಯಕ

India vs Pakistan: ಯುಎಇ-ಒಮಾನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ವೇಳಾಪಟ್ಟಿಯನ್ನು (T20 World Cup 2021 Schedule) ಐಸಿಸಿ (ICC) ಪ್ರಕಟಿಸಿದೆ. ಅದರಂತೆ ಅಕ್ಟೋಬರ್ 17 ರಿಂದ ಚುಟುಕು ಕದನಕ್ಕೆ ಚಾಲನೆ ಸಿಗಲಿದ್ದು, ಮೊದಲ ಸುತ್ತಿನಲ್ಲಿ 8 ತಂಡಗಳ ನಡುವೆ ಅರ್ಹತಾ ಪಂದ್ಯಗಳು ನಡೆಯಲಿವೆ.

T20 World Cup 2021: ನಮಗಲ್ಲ, ಭಾರತಕ್ಕೆ ಟೆನ್ಶನ್ ಜಾಸ್ತಿ ಎಂದ ಪಾಕ್ ನಾಯಕ
Virat kohli-Babar Azam
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 04, 2021 | 3:16 PM

ಟಿ20 ವಿಶ್ವಕಪ್ (T20 World Cup 2021) ಚುಟುಕು ಕ್ರಿಕೆಟ್ ಕದನಕ್ಕೆ ಡೇಟ್ ಫಿಕ್ಸ್ ಆಗಿದೆ. ಅಕ್ಟೋಬರ್ 24 ರಂದು ನಡೆಯಲಿರುವ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಏಕೆಂದರೆ ಆ ದಿನದಂದು ಕ್ರಿಕೆಟ್ ಅಂಗಳದ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ್ (India vs Pakistan) ಮುಖಾಮುಖಿಯಾಗುತ್ತಿದೆ. ಅತ್ತ ಈಗಾಗಲೇ ಪಾಕ್ ತಂಡದ ನಾಯಕ ಬಾಬರ್ ಆಜಂ (Babar Azam) ನಾವು ಮೊದಲ ಪಂದ್ಯದಲ್ಲೇ ಭಾರತವನ್ನು ಬಗ್ಗು ಬಡಿದು ವಿಶ್ವಕಪ್ ಅಭಿಯಾನ ಆರಂಭಿಸುವುದಾಗಿ ಹೇಳಿಕೆ ನೀಡಿದ್ದಾರೆ. ಟಿ20 ವಿಶ್ವಕಪ್ ತಂಡ ಘೋಷಣೆಯಾದ ಬಳಿಕ ವಿರಾಟ್ ಕೊಹ್ಲಿಯಿಂದ (Virat Kohli) ಕೂಡ ಇಂತಹ ಹೇಳಿಕೆಯನ್ನು ನಿರೀಕ್ಷಿಸಬಹುದು. ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಎಂದರೆ ಪಾಕಿಸ್ತಾನ್ ತಂಡ ಇದುವರೆಗೆ ಭಾರತವನ್ನು ವಿಶ್ವಕಪ್ ಟೂರ್ನಿಯಲ್ಲಿ ಮಣಿಸಿಲ್ಲ ಎಂಬುದು. ಇದೀಗ ಮಣಿಸುವ ಮೂಲಕವೇ ಅಭಿಮಾನ ಆರಂಭಿಸುವ ಇರಾದೆಯಲ್ಲಿದೆ ಪಾಕಿಸ್ತಾನ್ (Pakistan) ತಂಡ.

ಈ ಬಗ್ಗೆ ಮಾತನಾಡಿರುವ ಬಾಬರ್ ಆಜಂ, ಅಕ್ಟೋಬರ್ 24 ರಂದು ಉಭಯ ತಂಡಗಳ ಮುಖಾಮುಖಿಯಲ್ಲಿ, ನಮಗಿಂತ  ಭಾರತ ತಂಡದ ಮೇಲೆ ಹೆಚ್ಚಿನ ಒತ್ತಡವಿರುತ್ತದೆ ಎಂದಿದ್ದಾರೆ. ನಾವು ಭಾರತವನ್ನು ಸೋಲಿಸುವ ಮೂಲಕ ನಮ್ಮ ಅಭಿಯಾನವನ್ನು ಆರಂಭಿಸಲು ಬಯಸುತ್ತೇವೆ. ಯುಎಇಯಲ್ಲಿ ಆಡುವುದು ನಮಗೆ ತವರಿನಲ್ಲಿ ಆಡಿದಂತೆ. ಇಲ್ಲಿ ನಾವು ಅನೇಕ ಪಂದ್ಯಗಳನ್ನು ಆಡಿರುವುದರಿಂದ ಇದು ನಮಗೆ ತಾಯ್ನಾಡಿನಂತಿರಲಿದೆ. ಇದರ ಸಂಪೂರ್ಣ ಲಾಭ ಪಡೆದುಕೊಳ್ಳಲಿದ್ದೇವೆ. ಹೀಗಾಗಿ ನಮ್ಮ ತಂಡವು ಶೇ 100 ರಷ್ಟು ಉತ್ತಮ ಪ್ರದರ್ಶನ ನೀಡಲಿದೆ ಎಂದು ಬಾಬರ್ ತಿಳಿಸಿದರು.

ಇನ್ನು ಭಾರತ-ಪಾಕಿಸ್ತಾನ್ ಕೊನೆಯ ಬಾರಿ ಮುಖಾಮುಖಿಯಾಗಿದ್ದು 2019 ರಲ್ಲಿ. ಇಂಗ್ಲೆಂಡ್​ನಲ್ಲಿ ನಡೆದ ವಿಶ್ವಕಪ್​ನಲ್ಲಿ ಭಾರತ ತಂಡವು ಪಾಕ್​ ತಂಡವನ್ನು 89 ರನ್​ಗಳಿಂದ ಮಣಿಸಿತ್ತು. ಇದೀಗ 2 ವರ್ಷಗಳ ಬಳಿಕ ಚುಟುಕು ಕದನದ ಮೂಲಕ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ವಿಶೇಷ.

ಯುಎಇಯಲ್ಲಿ ನಡೆಯಲಿರುವ ಪಂದ್ಯಾವಳಿಯು ಟಿ20 ವಿಶ್ವಕಪ್‌ನ 7ನೇ ಸೀಸನ್ ಆಗಿರಲಿದೆ. ಅದರಲ್ಲೂ 2016ರ ಬಳಿಕ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡಲಾಗುತ್ತಿದೆ. ವೆಸ್ಟ್ ಇಂಡೀಸ್ ತಂಡವು ಟೂರ್ನಿಯ ಹಾಲಿ ಚಾಂಪಿಯನ್ ಆಗಿದ್ದು, ಎರಡು ಬಾರಿ ಟೂರ್ನಮೆಂಟ್ ಪ್ರಶಸ್ತಿಯನ್ನು ಗೆದ್ದಿದೆ. ಇದರ ಹೊರತಾಗಿ, ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಇಂಗ್ಲೆಂಡ್ ಕೂಡ ತಲಾ ಒಮ್ಮೆ ಪ್ರಶಸ್ತಿ ಗೆದ್ದಿವೆ.

2007ರ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾ ಮತ್ತೆ ಚಾಂಪಿಯನ್ ಪಟ್ಟಕ್ಕೇರಲು ಸಾಧ್ಯವಾಗಿಲ್ಲ. ಈ ಬಾರಿ ಭಾರತದಲ್ಲಿ ನಡೆಯಬೇಕಿದ್ದ ಟೂರ್ನಿಯು ಕೊರೋನಾ ಭೀತಿಯ ಕಾರಣ ಯುಎಇಗೆ ಶಿಫ್ಟ್ ಆಗಿದೆ. ಇದಾಗ್ಯೂ ಟಿ20 ವಿಶ್ವಕಪ್​ಗೂ ಮುನ್ನ ಐಪಿಎಲ್​ ನಡೆಯುತ್ತಿದ್ದು, ಹೀಗಾಗಿ ವಿರಾಟ್ ಕೊಹ್ಲಿ ಪಡೆ ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಅತ್ತ ಪಾಕಿಸ್ತಾನ್ ತಂಡವು ಹಲವು ವರ್ಷಗಳಿಂದ ಯುಎಇನಲ್ಲಿ ಸರಣಿಗಳನ್ನು ಆಯೋಜಿಸುತ್ತಿದ್ದು, ಹೀಗಾಗಿ ಮರಳುಗಾಡಿನ ಮೈದಾನದ ಪಿಚ್​ಗಳಲ್ಲಿ ಬೇಗನೆ ಹೊಂದಿಕೊಳ್ಳಲಿದೆ. ಇದೇ ಕಾರಣದಿಂದ ಬಾಬರ್ ನಮ್ಮ ತಂಡಕ್ಕಿಂತ ಭಾರತಕ್ಕೆ ಟೆನ್ಶನ್ ಹೆಚ್ಚಿರಲಿದೆ ಎಂದಿದ್ದಾರೆ. ಹೀಗಾಗಿ ಅಕ್ಟೋಬರ್ 24 ರಂದು ನಡೆಯುವ ಭಾರತ-ಪಾಕ್ ಮುಖಾಮುಖಿಯಲ್ಲಿ ಯಾರು ಗೆಲ್ಲಲಿದ್ದಾರೆ ಕಾದು ನೋಡಬೇಕಿದೆ.

ಯುಎಇ-ಒಮಾನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ವೇಳಾಪಟ್ಟಿಯನ್ನು (T20 World Cup 2021 Schedule) ಐಸಿಸಿ (ICC) ಪ್ರಕಟಿಸಿದೆ. ಅದರಂತೆ ಅಕ್ಟೋಬರ್ 17 ರಿಂದ ಚುಟುಕು ಕದನಕ್ಕೆ ಚಾಲನೆ ಸಿಗಲಿದ್ದು, ಮೊದಲ ಸುತ್ತಿನಲ್ಲಿ 8 ತಂಡಗಳ ನಡುವೆ ಅರ್ಹತಾ ಪಂದ್ಯಗಳು ನಡೆಯಲಿವೆ. ಎ ಮತ್ತು ಗ್ರೂಪ್ ಬಿ ನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಮಾತ್ರ ಸೂಪರ್ 12 ಪ್ರವೇಶಿಸುತ್ತವೆ. ಇನ್ನು ಅಕ್ಟೋಬರ್ 23 ರಿಂದ ಸೂಪರ್ 12 ಪಂದ್ಯಗಳು ಆರಂಭವಾಗಲಿದೆ.

ಇದನ್ನೂ ಓದಿ: ಅತ್ಯುತ್ತಮ ಮೈಲೇಜ್ ನೀಡುವ ಅತೀ ಕಡಿಮೆ ಬೆಲೆಯ ಸ್ಕೂಟರ್ ಬಿಡುಗಡೆ

ಇದನ್ನೂ ಓದಿ: Crime News: ಸಿಂಧೂರ ಹಚ್ಚಿದಕ್ಕೆ ಮಗಳನ್ನು ಕೊಂದ ತಾಯಿ

(Pressure will be more on India than us: Babar Azam on T20 World Cup 2021 clash)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ