ಖುದ್ದು ನಾಯಕನೇ ಹತಾಷನಾಗಿರುವ ಚೆನೈಗೆ ಎಲ್ಲ ಪಂದ್ಯಗಳನ್ನು ಗೆಲ್ಲುವುದು ದುಸ್ಸಾಧ್ಯ!

| Updated By: ಸಾಧು ಶ್ರೀನಾಥ್​

Updated on: Oct 23, 2020 | 4:58 PM

ಕ್ರಿಕೆಟ್ ವಲಯಗಳಲ್ಲಿ ಈಗ ಚೆನೈ ಸೂಪರ್ ಕಿಂಗ್ಸ್ ಟೀಮಿನ ಬಗ್ಗೆ ಜಾಸ್ತಿ ಚರ್ಚೆಯಾಗುತ್ತಿದೆ. ಪ್ರತಿ ವರ್ಷ ಎಮ್ ಎಸ್ ಧೋನಿ ತಂಡದ ಶ್ರೇಷ್ಠ ಪ್ರದರ್ಶನಗಳ ಬಗ್ಗೆ ಚರ್ಚೆಯಾಗುತ್ತಿದ್ದರೆ ಈ ಸಲ ಅದರ ನೀರಸ ಅಭಿಯಾನ ಕುರಿತು ಜನ ಮಾತಾಡುತ್ತಿದ್ದಾರೆ. ಖುದ್ದು ಧೋನಿಯೇ ಅಂಗೀಕರಿಸಿರುವಂತೆ ಪ್ರಸಕ್ತ ಸೀಸನ್​ನಲ್ಲಿ ಅವರ ಟೀಮು ಟೂರ್ನಿಯಿಂದ ಹೆಚ್ಚ್ಚು ಕಡಿಮೆ ಹೊರಬಿದ್ದಿದೆ. ಸ್ಫರ್ದೆಯಲ್ಲಿ ಉಳಿಯಬೇಕಾದರೆ ಚೆನೈ ಉಳಿದ 4 ಪಂದ್ಯಗಳನ್ನು ಉತ್ತಮ ಅಂತರದಿಂದ ಗೆಲ್ಲಬೇಕು. ಆಗಲೂ ಅದಕ್ಕೆ ಕೇವಲ ಔಟ್​ಸೈಡ್ ಅವಕಾಶ ಮಾತ್ರವಿರುತ್ತದೆ. ಓಕೆ, […]

ಖುದ್ದು ನಾಯಕನೇ ಹತಾಷನಾಗಿರುವ ಚೆನೈಗೆ ಎಲ್ಲ ಪಂದ್ಯಗಳನ್ನು ಗೆಲ್ಲುವುದು ದುಸ್ಸಾಧ್ಯ!
Follow us on

ಕ್ರಿಕೆಟ್ ವಲಯಗಳಲ್ಲಿ ಈಗ ಚೆನೈ ಸೂಪರ್ ಕಿಂಗ್ಸ್ ಟೀಮಿನ ಬಗ್ಗೆ ಜಾಸ್ತಿ ಚರ್ಚೆಯಾಗುತ್ತಿದೆ. ಪ್ರತಿ ವರ್ಷ ಎಮ್ ಎಸ್ ಧೋನಿ ತಂಡದ ಶ್ರೇಷ್ಠ ಪ್ರದರ್ಶನಗಳ ಬಗ್ಗೆ ಚರ್ಚೆಯಾಗುತ್ತಿದ್ದರೆ ಈ ಸಲ ಅದರ ನೀರಸ ಅಭಿಯಾನ ಕುರಿತು ಜನ ಮಾತಾಡುತ್ತಿದ್ದಾರೆ. ಖುದ್ದು ಧೋನಿಯೇ ಅಂಗೀಕರಿಸಿರುವಂತೆ ಪ್ರಸಕ್ತ ಸೀಸನ್​ನಲ್ಲಿ ಅವರ ಟೀಮು ಟೂರ್ನಿಯಿಂದ ಹೆಚ್ಚ್ಚು ಕಡಿಮೆ ಹೊರಬಿದ್ದಿದೆ. ಸ್ಫರ್ದೆಯಲ್ಲಿ ಉಳಿಯಬೇಕಾದರೆ ಚೆನೈ ಉಳಿದ 4 ಪಂದ್ಯಗಳನ್ನು ಉತ್ತಮ ಅಂತರದಿಂದ ಗೆಲ್ಲಬೇಕು. ಆಗಲೂ ಅದಕ್ಕೆ ಕೇವಲ ಔಟ್​ಸೈಡ್ ಅವಕಾಶ ಮಾತ್ರವಿರುತ್ತದೆ. ಓಕೆ, ಇವತ್ತಿನ ಪಂದ್ಯದ ಬಗ್ಗೆ ಚರ್ಚೆ ಮಾಡುವ. ಕ್ರಿಕೆಟ್ ಪ್ರೇಮಿಗಳಿಗೆ ಚೆನ್ನಾಗಿ ನೆನಪಿದೆ. ಮುಂಬೈ ಇಂಡಿಯನ್ಸ್ ಮತ್ತು ಸಿ ಎಸ್ ಕೆ, ಸೆಪ್ಟೆಂಬರ 19ರಂದು ಶುರವಾದ 13ನೇ ಸೀಸನ್​ನ ಉದ್ಘಾಟನಾ ಪಂದ್ಯದಲ್ಲಿ ಎದುರಾಳಿಗಳಾಗಿದ್ದವು. ಮೂರು ಬಾರಿ ಚಾಂಪಿಯನ್​ಶಿಪ್ ಗೆದ್ದಿರುವ ದಕ್ಷಿಣ ಭಾರತದ ಫ್ರಾಂಚೈಸಿ ಕಳೆದ ಬಾರಿಯ ಪ್ರಶಸ್ತಿ ವಿಜೇತ ಮತ್ತು ಒಟ್ಟು ನಾಲ್ಕು ಬಾರಿ ಟ್ರೋಫಿ ಗೆದ್ದಿರುವ ರೋಹಿತ್ ಶರ್ಮ ನಾಯಕತ್ವದ ಟೀಮನ್ನು 5 ವಿಕೆಟ್​ಗಳಿಂದ ಸೋಲಿಸಿ ಶುಭಾರಂಭ ಮಾಡಿತ್ತು.
[yop_poll id=”20″]
ಅದಾದ ಮೇಲೆ ಪರಿಸ್ಥಿತಿಯೇ ಬದಲಾಗಿದೆ. ಆಡಿರುವ 9 ಪಂದ್ಯಗಳಲ್ಲಿ 6 ಗೆದ್ದು 3ರಲ್ಲಿ ಸೋತು 12 ಅಂಕ ಗಳಿಸಿರುವ ಮುಂಬೈ 12 ಅಂಕಗಳೊಂದಿಗೆ 3 ನೇ ಸ್ಥಾನದಲ್ಲಿದ್ದರೆ, ಆಡಿರುವ 10ರಲ್ಲಿ 7 ಸೋತು ಕೇವಲ 3ರಲ್ಲಿ ಮಾತ್ರ ಗೆಲುವು ಕಂಡಿರುವ ಚೆನೈ ಕೊನೆ ಸ್ಥಾನದಲ್ಲಿದೆ.

ಪ್ರಸಕ್ತ ಸೀಸನ್ ಸಾಗಿದಂತೆಲ್ಲ ಮುಂಬೈ ಬಲಿಷ್ಠಗೊಂಡರೆ ಚೆನೈ ಪಂದ್ಯದಿಂದ ಪಂದ್ಯಕ್ಕೆ ದುರ್ಬಲಗೊಂಡಿದೆ. ರೋಹಿತ್ ಟೀಮಿಗೆ ಯಾವ ವಿಭಾಗದಲ್ಲೂ ಸಮಸ್ಯೆಯಿಲ್ಲ ಆದರೆ ಧೋನಿಯ ತಂಡಕ್ಕೆ ಎಲ್ಲ ವಿಭಾಗಗಳಲ್ಲಿ ತೊಂದರೆಗಳು. ಅಂಬಾನಿಗಳ ತಂಡದ ಎಲ್ಲ ಬ್ಯಾಟ್ಸ್​ಮನ್​ಗಳು ಉತ್ತಮ ಸ್ಪರ್ಶದಲ್ಲಿದ್ದಾರೆ. ಕೆಳ ಕ್ರಮಾಂಕದಲ್ಲಾಡುವ ಕೈರನ್ ಪೊಲ್ಲಾರ್ಡ್ ಪ್ರಸಕ್ತ ಸೀಸನ್​ನಲ್ಲಿ 200ರ ಸ್ಟ್ರೈಕ್​ರೇಟ್​ನಲ್ಲಿ ರನ್ ಗಳಿಸುತ್ತಿದ್ದಾರೆ. ಚೆನೈ ವಿರುದ್ಧ ಅವರು ಇದುವರೆಗೆ, ಅಂದರೆ, 2008 ರಲ್ಲಿ ಐಪಿಎಲ್ ಶುರುವಾದಾಗಿನಿಂದ ಇಂದಿನವರೆಗೆ, 467 ರನ್ ಕಲೆಹಾಕಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಆಡಿದ ಪಂದ್ಯದಲ್ಲಿ ಪೊಲ್ಲಾರ್ಡ್ ಕೇವಲ 12 ಎಸೆತಗಳಲ್ಲಿ 34 ರನ್ ಚಚ್ಚಿದ್ದರು.

ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ಅವರಲ್ಲಿ ಮುಂಬೈ ಅತ್ಯಂತ ಘಾತಕ ಆರಂಭಿಕ ವೇಗದ ದಾಳಿಯನ್ನು ಹೊಂದಿದೆ. ನೇಥನ್ ಕೌಲ್ಟರ್ನೈಲ್ ಅಥವಾ ಜೇಮ್ಸ್ ಪ್ಯಾಟಿನ್ಸನ್ ಸಹ ಉತ್ತಮವಾಗಿ ಬೌಲ್ ಮಾಡುತ್ತಿದ್ದಾರೆ. ಕೃಣಾಲ್ ಪಾಂಡ್ಯ 4 ಓವರ್​ಗಳನ್ನು ಮಿತವ್ಯಯಿಯಾಗಿ ಬೌಲ್ ಮಾಡುವುದರೊಂದಿಗೆ ಬ್ಯಾಟ್​ನಿಂದಲೂ ಕಾಂಟ್ರಿಬ್ಯೂಟ್ ಮಾಡುತ್ತಾರೆ. ರಾಹುಲ್ ಚಹರ್ ಮೇಲೆ ನಾಯಕನಿಗೆ ಅಪಾರವಾದ ವಿಶ್ವಾಸವಿದೆ ಮತ್ತು ಯುವ ಬೌಲರ್ ಅದನ್ನು ಉಳಿಸಿಕೊಳ್ಳುತ್ತಿದ್ದಾರೆ.

2013ರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ (2013, 2015, 2017, 2019) ಐಪಿಎಲ್ ಟ್ರೋಫಿ ಗೆಲ್ಲುತ್ತಿರುವ ಮುಂಬಯ ಈ ಬಾರಿ ಪ್ಲೇ ಆಫ್ ಹಂತವನ್ನು ತಲುಪುವುದನ್ನು ಹೆಚ್ಚು ಕಡಿಮೆ ಖಚಿತಪಡಿಸಿಕೊಂಡಿದೆ.

ಕೊನೆಯ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್​ಗೆ ಸೋತಿರುವ ಚೆನೈ ಇಂದು ಮೈದಾನಕ್ಕಿಳಿಯುವ ಮೊದಲೇ ತನ್ನ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ. ಖುದ್ದು ನಾಯಕನೇ ನೆಗೆಟಿವ್ ಧೋರಣೆಯಲ್ಲಿ ಮಾತಾಡುತ್ತಿರುವುದರಿಂದ ಟೀಮಿಗೆ ಆತ್ಮವಿಶ್ವಾಸದ ಕೊರತೆಯಿದೆ. ವಿಶ್ವ ಕ್ರಿಕೆಟ್​ನಲ್ಲಿ ಗ್ರೆಟೆಸ್ಟ್ ಫಿನಿಶರ್​ಗಳ ಪೈಕಿ ಒಬ್ಬರೆನಿಸಿಕೊಂಡಿದ್ದ ಧೋನಿ ಈ ಸೀಸನ್​ನಲ್ಲಿ 10 ಪಂದ್ಯಗಳಿಂದ ಕೇವಲ 164 ರನ್ ಮಾತ್ರ ಶೇಖರಿಸಿದ್ದಾರೆ.

ಅವರು ಸಿಕ್ಸರ್​ಗಳನ್ನು ಬಾರಿಸುವ ಪರಿಯನ್ನೊಮ್ಮೆ ಗಮನಿಸಿ. ಇದುವರೆಗೆ ಆಡಿರುವ 326 ಟಿ20 ಪಂದ್ಯಗಳಲ್ಲಿ ಅವರು ನಂಬಲಸದಳ 301 ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ಐಪಿಎಲ್ ಇತಹಾಸದಲ್ಲಿ ಅವರ ಸಾಧನೆಯನ್ನು ನೋಡಿದ್ದೇಯಾದರೆ, 190 ಪಂದ್ಯಗಳಲ್ಲಿ 209 ಸಿಕ್ಸರ್​ಗಳು ಅವರ ಬ್ಯಾಟ್​ನಿಂದ ಸಿಡಿದಿವೆ. ಅಂದರೆ ಪ್ರತಿ ಪಂದಕ್ಕೆ 1.1 ಸರಾಸರಿಯಲ್ಲಿ ಅವರು ಸಿಕ್ಸರ್ ಬಾರಿಸುತ್ತಾರೆ. 

ಧೋನಿಯ ಕಟ್ಟಾ ಅಭಿಮಾನಿಗಳಿಗೆ ಇದು ಗೊತ್ತಿರುತ್ತದೆ. 2019 ರ ಐಪಿಎಲ್ ಸೀಸನ್​ನಲ್ಲಿ ಅವರು 30 ಸಿಕ್ಸರ್​ಗಳನ್ನು ಬಾರಿಸಿದ್ದರು. ಮರುವರ್ಷದ ಸೀಸನ್​ನಲ್ಲಿ (2019) ಅವರು ಬಾರಿಸಿದ್ದು 23 ಸಿಕ್ಸರ್​ಗಳು. ಆದರೆ ಈ ಬಾರಿ ಅವರ ಬ್ಯಾಟ್​ನಿಂದ ಇದುವರೆಗೆ ಕೇವಲ 6 ಸಿಕ್ಸರ್​ಗಳು ಸಿಡಿದಿವೆ. ಅಂಕಿ-ಅಂಶಗಳೇ ವಸ್ತುಸ್ಥಿತಿಯನ್ನು ನಿಖರವಾಗಿ ವಿಶ್ಲೇಷಿಸುತ್ತಿವೆ. ಈ ಮಹಾನ್ ಆಟಗಾರ ಮತ್ತು ನಾಯಕನ ಐಪಿಎಲ್ ಕರೀಯರ್ ಸಹ ಕೊನೆಗೊಳ್ಳುವ ಹಂತ ತಲುಪಿದೆ.

ಉಳಿದಿರುವ ಪಂದ್ಯಗಳಲ್ಲಿ ಯುವಕರಿಗೆ ಅವಕಾಶ ಕಲ್ಪಿಸುವುದಾಗಿ ಧೋನಿ ಹೇಳಿದ್ದಾರೆ. ಅದು ನಿಜವೇ ಆದಲ್ಲಿ ಕೇದಾರ್ ಜಾಧವ್ ಅವರ ಸ್ಥಾನದಲ್ಲಿ ಇಂದು ಎನ್ ಜಗದೀಶನ್ ಆಡುತ್ತಾರೆ ಮತ್ತು ಶೇನ್ ವಾಟ್ಸನ್ ಜಾಗಕ್ಕೆ ಋತುರಾಜ್ ಗಾಯಕ್ವಾಡ್ ಬರಬಹುದು. ಹಾಗೆಯೇ ಇದುವರೆಗೆ ಕೇವಲ ಬೆಂಚ್ ಕಾಯಿಸುತ್ತಿದ್ದ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್, ಪಿಯುಷ್ ಚಾವ್ಲಾ ಸ್ಥಾನದಲ್ಲಿ ಆಡಬಹುದು.

ಹಾಗೆ ನೋಡಿದರೆ, ಮುಂಬೈ ಮತ್ತು ಚೆನೈ ನಡುವೆ ನಡೆಯುವ ಪಂದ್ಯಗಳು ತುರುಸಿನ ಸೆಣಸಾಟದಿಂದ ಕೂಡಿರುತ್ತವೆ. ಇವತ್ತಿನ ಪಂದ್ಯದಲ್ಲೂ ಅದೇಮಟ್ಟದ ಹಣಾಹಣಿ ಕಂಡುಬರುವುದು ಶತಸಿದ್ಧ.

Published On - 4:55 pm, Fri, 23 October 20