ಭಾರತಕ್ಕೆ 12 ರನ್ ಸೋಲು

ಅರುಣ್​ ಕುಮಾರ್​ ಬೆಳ್ಳಿ
| Updated By: Praveen Sahu

Updated on:Dec 17, 2020 | 1:03 PM

ಒಂದು ದಿನದ ಪಂದ್ಯಗಳ ಸರಣಿಯಲ್ಲಿ ಭಾರತ ಕೊನೆಯ ಅನೌಪಚಾರಿಕ ಪಂದ್ಯವನ್ನು ಗೆದ್ದಂತೆಯೇ ಆಸ್ಟ್ರೇಲಿಯ ಸಹ ಕೊನೆಯ ಟಿ20ಐ ಸರಣಿಯ ಕೊನೆ ಪಂದ್ಯವನ್ನು 12 ರನ್​ಗಳಿಂದ ಗೆದ್ದು ಸೋಲಿನ ಅಂತರ ಕಡಿಮೆ ಮಾಡಿಕೊಂಡಿತು. ಎರಡು ರಾಷ್ಟ್ರಗಳ ನಡುವೆ ಟೆಸ್ಟ್ ಸರಣಿ ಡಿಸೆಂಬರ್​ 17ರಿಂದ ಆರಂಭವಾಗಲಿದೆ.

ಭಾರತಕ್ಕೆ 12 ರನ್ ಸೋಲು

ಇಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವೆ ಮೂರನೆ ಹಾಗೂ ಕೊನೆಯ ಟಿ20ಐ ಪಂದ್ಯವನ್ನು ಭಾರತ 12 ರನ್​ಗಳಿಂದ ಸೋತಿದೆ.  ಈ ಪಂದ್ಯವನ್ನುಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ವಿರಾಟ್ ಕೊಹ್ಲಿಯ ಉದ್ದೇಶ  ಈಡೇರಲಿಲ್ಲ.

ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯ ನಿಗದಿತ 20 ಓವರ್​ಗಳಲ್ಲಿ 186/5 ಮೊತ್ತ ಪೇರಿಸಿತು. ಅತಿಥೇಯರ ಪರ ಆರಂಭ ಆಟಗಾರ ಮ್ಯಾಥ್ಯೂ ವೇಡ್ ಅತ್ಯಧಿಕ 80 ರನ್ ಗಳಿಸಿದರು. ಮಧ್ಯಮ ಕ್ರಮಾಂಕದ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ 54 ರನ್ ಗಳಿದರು.

ಭಾರತದ ಅತ್ಯಂತ ಯಶಸ್ವೀ ಬೌಲರ್ ಎನಿಸಿದ ವಾಷಿಂಗ್ಟನ್ ಸುಂದರ್ 34 ರನ್​ ನೀಡಿ 2 ವಿಕೆಟ್ ಪಡೆದರು, ನಟರಾಜನ್ ಮತ್ತು ಶಾರ್ದುಲ್ ಠಾಕುರ್​ ತಲಾ ಒಂದು ವಿಕೆಟ್​ ಪಡೆದರು.​

ಇದಕ್ಕೆ ಉತ್ತರವಾಗಿ ಭಾರತ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 174 ರನ್ ಕಲೆಹಾಕುವಲ್ಲಿ ಮಾತ್ರ ಯಶ ಕಂಡಿತು, ಭಾರತದ ಪರ ಕೊಹ್ಲಿ ಅತ್ಯಂತ ಜವಾಬ್ದಾರಿಯುತ ಆಟವಾಡಿ 61 ಎಸೆತಗಳಲ್ಲಿ 85 ರನ್ ಬಾರಿಸಿದರಾದರೂ ಟೀಮನ್ನು ಗೆಲುವಿನ ಗೆರೆ ದಾಟಿಸಲು ವಿಫಲರಾದರು. ಆರಂಭ ಆಟಗಾರ ಶಿಖರ್ ಧವನ್ 28 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 20 ರನ್ ಬಾರಿಸಿದರು.

ಆಸ್ಟ್ರೇಲಿಯ ಪರ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಮಿಚೆಲ್ ಸ್ವೆಪ್ಸನ್ ತಮ್ಮ 4 ಓವರ್​ಗಳಲ್ಲಿ ಕೇವಲ 23 ರನ್​ ನೀಡಿ 3 ವಿಕೆಟ್ ಪಡೆದರು.

ಎರಡು ರಾಷ್ಟ್ರಗಳ ನಡುವೆ ಸೀಮಿತ ಪಂದ್ಯಗಳ ಸರಣಿಗಳು ಕೊನೆಗೊಂಡಿವೆ. ಟೆಸ್ಟ್ ಸರಣಿ ಡಿಸೆಂಬರ್ 17ನೇ ತಾರೀಖಿನಿಂದ ಶುರುವಾಗಲಿದೆ.

LIVE NEWS & UPDATES

The liveblog has ended.
  • 08 Dec 2020 05:23 PM (IST)

    ಭಾರತಕ್ಕೆ 12 ರನ್ ಸೋಲು

    ಮೂರನೇ ಪಂದ್ಯವನ್ನು ಭಾರತ 12 ರನ್​ಗಳಿಂದ ಸೋತಿದೆ, ಗೆಲ್ಲಲು 187 ರನ್ ಗಳೀಸಬೇಕಿದ್ದ ಭಾರತಕ್ಕೆ ಕೇವಲ 174/7 ಗಳಿಸುವುದು ಮಾತ್ರ ಸಾಧ್ಯವಾಯಿತು

  • 08 Dec 2020 05:21 PM (IST)

    ಸುಂದರ್ ಔಟ್

    ಕೊನೆ ಓವರ್​ನಲ್ಲಿ ಸುಂದರ್ ಔಟಾಗಿದ್ದಾರೆ, ಸೀನ್ ಅಬ್ಬಾಟ್​ ದಾಳಿಯಲ್ಲಿ ಅವರು ಟೈಗೆ ಕ್ಯಾಚ್ ನೀಡಿದ್ದಾರೆ

  • 08 Dec 2020 05:18 PM (IST)

    ಕೊನೆ ಓವರ್​ನಲ್ಲಿ ಭಾರತಕ್ಕೆ 27 ರನ್ ಬೇಕು

    19 ಓವರ್​ಗಳ ಅಂತ್ಯಕ್ಕೆ ಭಾರತದ ಸ್ಕೋರ್ 160/6, ಗೆಲುವಿಗೆ 6 ಎಸೆತಗಳಲ್ಲಿ 27 ರನ್ ಬೇಕು, ಶಾರ್ದುಲ್ 7, ಸುಂದರ್ 3

  • 08 Dec 2020 05:15 PM (IST)

    ಕೊಹ್ಲಿ ಔಟ್!

    ನಾಯಕ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 85 ರನ್ ಗಳಿಸಿ ಔಟಾಗಿದ್ದಾರೆ, ಭಾರತದ ಗೆಲುವಿನ ಆಸೆ ಕ್ಷೀಣಿಸಿದೆ

  • 08 Dec 2020 05:12 PM (IST)

    ಭಾರತಕ್ಕೆ 12 ಎಸೆತಗಳಲ್ಲಿ 36 ರನ್ ಬೇಕು

    18 ಓವರ್​ಗಳ ಅಂತ್ಯಕ್ಕೆ ಭಾರತದ ಸ್ಕೋರ್ 151/5, ಗೆಲುವಿಗೆ ಇನ್ನೂ 36ರನ್ ಬೇಕಿದೆ, 12 ಎಸೆತಗಳು ಮಾತ್ರ ಉಳಿದಿವೆ

  • 08 Dec 2020 05:07 PM (IST)

    17ನೇ ಓವರ್ ಅಂತ್ಯದಲ್ಲಿ ಭಾರತ 144/4

    17ನೇ ಓವರ್​ನಲ್ಲಿ ಭಾರತ 13 ರನ್ ಗಳಿಸಿದೆ, ಈಗ ಗೆಲುವಿಗೆ 18 ಎಸೆತಗಳಲ್ಲಿ 43 ರನ್ ಬೇಕು, ಕೊಹ್ಲಿ 79, ಪಾಂಡ್ಯ 20

  • 08 Dec 2020 05:03 PM (IST)

    16ನೇ ಓವರ್​ನಲ್ಲಿ 20 ರನ್

    ಭಾರತದ ಬ್ಯಾಟ್ಸ್​ಮನ್​ಗಳು 16ನೇ ಓವರ್​ನಲ್ಲಿ 3 ಸಿಕ್ಸರ್ ಸೇರಿದಂತೆ 20 ರನ್ ಚಚ್ಚಿದ್ದಾರೆ, ಭಾರತದ ಸ್ಕೋರ್ 131/4

  • 08 Dec 2020 04:58 PM (IST)

    15ನೇ ಓವರ್​ನಲ್ಲಿ ಕೇವಲ 2 ರನ್

    15ನೇ ಓವರ್ ಬೌಲ್ ಮಾಡಿದ ಆ್ಯಂಡ್ರ್ಯೂ ಟೈ ಕೇವಲ 2 ರನ್ ನೀಡಿದರು ಬಾರತದ ಸ್ಕೋರ್ 111/4, ಕೊಹ್ಲಿ 65, ಪಾಂಡ್ಯ 2

  • 08 Dec 2020 04:52 PM (IST)

    14ನೇ ಓವರ್ ಅಂತ್ಯಕ್ಕೆ ಭಾರತ 109/4

    14 ಓವರ್​ಗಳ ಆಟದಲ್ಲಿ ಭಾರತ 4 ವಿಕೆಟ್​ ಕಳೆದುಕೊಂಡು 109 ರನ್ ಗಳಿಸಿದೆ, ಕೊಹ್ಲಿ 64, ಹಾರ್ದಿಕ್ ಪಾಂಡ್ಯ 1

  • 08 Dec 2020 04:47 PM (IST)

    ಭಾರತಕ್ಕೆ ಮತ್ತೊಂದು ಆಘಾತ

    ಸ್ವೆಪ್ಸನ್ ಭಾರತಕ್ಕೆ ಇನ್ನೊಂದು ಆಘಾತ ನೀಡಿದ್ದಾರೆ, ಅಯ್ಯರ್ ಖಾತೆ ಆರಂಭಿಸದೆ ಪೆವಿಲಿಯನ್​ಗೆ ಮರಳಿದ್ದಾರೆ, ಭಾರತದ ಸ್ಕೋರ್ 100/4

  • 08 Dec 2020 04:44 PM (IST)

    ಸ್ಯಾಮ್ಸನ್ ಔಟ್!

    ಆಸ್ಸೀ ಸ್ಪಿನ್ನರ್ ಸ್ವೆಪ್ಸನ್,  ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡಿದ್ದಾರೆ,  ಸಂಜು 9 ಎಸೆತಗಳಲ್ಲಿ 10ರನ್ ಗಳಿಸಿದರು, ಭಾರತದ ಸ್ಕೋರ್ 99/3

    ಸಂಜು ಜಾಗದಲ್ಲಿ ಶ್ರೇಯಸ್ ಅಯ್ಯರ್ ಆಡಲು ಬಂದಿದ್ದಾರೆ

  • 08 Dec 2020 04:40 PM (IST)

    ಅರ್ಧ ಶತಕ ಪೂರೈಸಿದ ಕೊಹ್ಲಿ

    ಟೀಮ್ ಇಂಡಿಯ ನಾಯಕ ವಿರಾಟ್​ ಕೊಹ್ಲಿ ಅರ್ಧ ಶತಕ ಪೂರೈಸಿದ್ದಾರೆ, ಅವರ 50 ರನ್​ಗಳು 41 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ ಬಂದಿವೆ, 12 ಓವರ್​ಗಳ ನಂತರ ಭಾರತದ ಸ್ಕೋರ್ 94/2

  • 08 Dec 2020 04:36 PM (IST)

    11 ಓವರ್​ಗಳ ನಂತರ ಭಾರತದ ಸ್ಕೋರ್ 87/2

    11 ನೇ ಓವರ್ ಅಂತ್ಯಕ್ಕೆ ಭಾರತದ ಸ್ಕೋರ್ 87/2, ಕೊಹ್ಲಿ 47, ಸಂಜು 6

  • 08 Dec 2020 04:32 PM (IST)

    10 ಓವರ್​ಗಳ ನಂತರ ಭಾರತದ ಸ್ಕೋರ್ 82/2 ​

    10ನೇ ಓವರ್ ಅಂತ್ಯಕ್ಕೆ ಭಾರತದ ಸ್ಕೋರ್​ 82/2, ಕೊಹ್ಲಿ 44, ಸಂಜು 4

  • 08 Dec 2020 04:29 PM (IST)

    ಧವನ್ ಔಟ್​

    9ನೇ ಓವರ್​ನಲ್ಲಿ ಭಾರತ ಧವನ್ ಅವರ ವಿಕೆಟ್​ ಕಳೆದುಕೊಂಡಿದೆ, ಧವನ್ 21 ಎಸೆತಗಳಲ್ಲಿ 28 ರನ್ (3X4) ಔಟಾದರು, ಭಾರತದ ಸ್ಕೋರ್ 75/2, ಸಂಜು ಸ್ಯಾಮ್ಸನ್ ಕ್ರೀಸಿಗೆ ಆಗಮಿಸಿದ್ದಾರೆ

  • 08 Dec 2020 04:24 PM (IST)

    8 ಓವರ್​ಗಳ ಆಟದಲ್ಲಿ ಭಾರತ 69/1

    8ನೇ ಓವರ್ ಕೊನೆಗೊಂಡಾಗ ಭಾರತ 69/1,  ಕೊಹ್ಲಿ 36,  ಧವನ್​ 27,

  • 08 Dec 2020 04:20 PM (IST)

    7ನೇ ಓವರ್ ಅಂತ್ಯಕ್ಕೆ ಭಾರತದ ಸ್ಕೋರ್ 61/1

    7 ಓವರ್​ಗಳ ಆಟ ಕೊನೆಗೊಂಡಾಗ ಭಾರತ 1 ವಿಕೆಟ್​ ಕಳೆದುಕೊಂಡು 61 ರನ್ ಗಳಿಸಿತ್ತು, ಕೊಹ್ಲಿ 34, ಧವನ್ 21

  • 08 Dec 2020 04:17 PM (IST)

    6ನೇ ಓವರ್ ಅಂತ್ಯಕ್ಕೆ ಭಾರತ 55/1

    6 ಓವರ್​ಗಳ ಆಟದಲ್ಲಿ ಭಾರತದ ಸ್ಕೋರ್ 55/1, ಕೊಹ್ಲಿ 31, ಧವನ್ 18, ಪವರ್ ಪ್ಲೇ ಮುಗಿದಿದೆ

  • 08 Dec 2020 04:12 PM (IST)

    5ನೇ ಓವರ್ ಅಂತ್ಯಕ್ಕೆ ಭಾರತ 40/1

    5 ಓವರ್​ಗಳ ಆಟದ ನಂತರ ಭಾರತ 1 ವಿಕೆಟ್​ ಕಳೆದುಕೊಂಡು 40 ರನ್ ಗಳಿಸಿದೆ; ಕೊಹ್ಲಿ 25, ಧವನ್ 9

  • 08 Dec 2020 04:07 PM (IST)

    4ನೇ ಓವರ್ ಅಂತ್ಯಕ್ಕೆ ಭಾರತ 33/1

    4 ಓವರ್​ಗಳ ಆಟದಲ್ಲಿ ಭಾರತ 1 ವಿಕೆಟ್​ ನಷ್ಟಕ್ಕೆ 33 ರನ್ ಗಳಿಸಿದೆ, ಕೊಹ್ಲಿ 19 ಧವನ್ 9

  • 08 Dec 2020 04:03 PM (IST)

    3ನೇ ಓವರ್ ಅಂತ್ಯಕ್ಕೆ ಭಾರತದ ಸ್ಕೋರ್ 23/1

    3 ಓವರ್​ಗಳ ಆಟದಲ್ಲಿ ಭಾರತದ ಸ್ಕೋರ್ 23/1;  ಕೊಹ್ಲಿ 12, ಧವನ್ 7

  • 08 Dec 2020 03:59 PM (IST)

    2ನೇ ಓವರ್ ಅಂತ್ಯಕ್ಕೆ ಭಾರತದ ಸ್ಕೋರ್

    2 ಓವರ್​ಗಳ ಆಟದಲ್ಲಿ ಭಾರತದ ಸ್ಕೋರ್ 15/1, (ಕೊಹ್ಲಿ 8, ಧವನ್ 5)

  • 08 Dec 2020 03:56 PM (IST)

    ಮೊದಲ ಓವರ್​ನಲ್ಲೇ ಭಾರತಕ್ಕೆ ಆಘಾತ

    ಉತ್ತಮ ಸ್ಪರ್ಶದಲ್ಲಿದ್ದ ಭಾರತದ ಆರಂಭ ಆಟಗಾರ ಕೆ ಎಲ್ ರಾಹುಲ್ ಮೊದಲ ಓವರ್​ನಲ್ಲೇ ಮ್ಯಾಕ್ಸ್​ವೆಲ್​ಗೆ ವಿಕೆಟ್ ಒಪ್ಪಿಸಿದ್ದಾರೆ, ಭಾರತದ ಸ್ಕೋರ್ 4/1, ವಿರಾಟ್​ ಕೊಹ್ಲಿ ಆಡಲು ಬಂದಿದ್ದಾರೆ

  • 08 Dec 2020 03:50 PM (IST)

    ಭಾರತಕ್ಕೆ 187 ರನ್​ಗಳ ಸವಾಲು

    ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯ ನಿಗದಿತ 20 ಓವರ್​ಗಳಲ್ಲಿ 186/5 ಮೊತ್ತ ಪೇರಿಸಿದೆ, ಕೊನೆಯ ಓವರ್​ನಲ್ಲಿ ನಟರಾಜನ್ 11 ರನ್ ನೀಡಿದರು

    ಭಾರತದ ಪರ 34 ರನ್ ನೀಡಿ 2 ವಿಕೆಟ್​ ಪಡೆದ ಸುಂದರ್ ಅತ್ಯಂತ ಯಶಸ್ವೀ ಬೌಲರ್ ಎನಿಸಿದರು, ಶಾರ್ದುಲ್ ಮತ್ತು ನಟರಾಜನ್ ತಲಾ ಒಂದು ವಿಕೆಟ್​ ಪಡೆದರು.

    ಅತಿಥೇಯರ ಪರ ಮ್ಯಾಥ್ಯೂ ವೇಡ್​ 80 ರನ್ ಗಳಿಸಿದರೆ,  ಗ್ಲೆನ್ ಮ್ಯಾಕ್ಸ್​ವೆಲ್ 54, ಮತ್ತು ಸ್ಟೀವ್ ಸ್ಮಿತ್ 24 ರನ್ ಗಳಿಸಿದರು.

  • 08 Dec 2020 03:28 PM (IST)

    ಶಾರ್ಟ್ ರನೌಟ್!

    20ನೇ ಓವರ್​ನಲ್ಲಿ ಡಾರ್ಸಿ ಶಾರ್ಟ್​ ರನೌಟ್ ಆಗಿದ್ದಾರೆ

  • 08 Dec 2020 03:26 PM (IST)

    ಮ್ಯಾಕ್ಸ್​ವೆಲ್ ಔಟ್!

    ಕೊನಯ ಓವರ್​ನಲ್ಲಿ ನಟರಾಜನ್ 54 ರನ್ ಗಳಿಸಿದ್ದ ಮ್ಯಾಕ್ಸ್​ವೆಲ್ ಅವರನ್ನು ಔಟ್ ಮಾಡಿದ್ದಾರೆ

  • 08 Dec 2020 03:24 PM (IST)

    ವೇಡ್ ಔಟ್​!

    19ನೇ ಓವರ್​ನಲ್ಲಿ ಶಾರ್ದುಲ್ ಠಾಕುರ್ ವೇಡ್​ ಅವರನ್ನು ಎಲ್ ಬಿ ಬಲೆಗೆ ಕೆಡವಿದ್ದಾರೆ, ವೇಡ್ 53 ಎಸೆತಗಳಲ್ಲಿ 80 ರನ್ ಗಳಿಸಿ (7×4 2×6) ಔಟಾದರು, ಅಸ್ಟ್ರೇಲಿಯ ಸ್ಕೋರ್ 175/3

    19ನೇ ಓವರ್​ನಲ್ಲಿ ಶಾರ್ದುಲ್ ಕೇವಲ 7 ರನ್ ನೀಡಿದರು

  • 08 Dec 2020 03:19 PM (IST)

    ಮ್ಯಾಕ್ಸ್​ವೆಲ್ ಅರ್ಧ ಶತಕ!

    ಅಪಾಯಕಾರಿ ಬ್ಯಾಟ್ಸ್​ಮನ್ ಮ್ಯಾಕ್ಸ್​ವೆಲ್ ಅರ್ಧ ಶತಕ ವನ್ನು ಕೇವಲ 32 ಎಸೆತಗಳಲ್ಲಿ ಪೂರೈಸಿದ್ದಾರೆ,  18 ಓವರ್​ಗಳಲ್ಲಿ ಅಸ್ಟ್ರೆಲಿಯಾದ ಸ್ಕೋರ್ 168/2

  • 08 Dec 2020 03:13 PM (IST)

    17ನೇ ಓವರ್​ನಲ್ಲಿ 12 ರನ್

    17  ಓವರ್​ಗಳ ಆಟದಲ್ಲಿ ಆಸ್ಟ್ರೇಲಿಯ 2 ವಿಕೆಟ್​ ನಷ್ಟಕ್ಕೆ 157 ರನ್ ಗಳಿಸಿದೆ, ವೇಡ್ 76, ಮ್ಯಾಕ್ಸ್​ವೆಲ್ 46​

  • 08 Dec 2020 03:07 PM (IST)

    16ನೇ ಓವರ್​ನಲ್ಲಿ ಕೇವಲ 6 ರನ್

    ಬೌಲಿಂಗ್ ದಾಳಿಗೆ ವಾಪಸ್ಸು ಬಂದಿರುವ ದೀಪಕ್ ಚಹರ್ 16ನೇ ಓವರ್​ನಲ್ಲಿ ಕೇವಲ 6 ರನ್ ನೀಡಿದರು, ಆಸ್ಟ್ರೇಲಿಯ ಸ್ಕೋರ್ 145/2

  • 08 Dec 2020 03:02 PM (IST)

    15ನೇ ಓವರ್ ಅಂತ್ಯಕ್ಕೆ ಆಸ್ಟ್ರೇಲಿಯ 139/2

    ಕೊನೆಯ 5 ಓವರ್​ಗಳ ಆಟ ಬಾಕಿಯುಳಿದಿದೆ, 15ನೇ ಓವರ್ ಅಂತ್ಯಕ್ಕೆ ಅತಿಥೇಯರ ಸ್ಕೋರ್ 139/2 (ವೇಡ್ 70, ಮ್ಯಾಕ್ಸ್​ವೆಲ್ 35)

  • 08 Dec 2020 02:59 PM (IST)

    3ನೇ ವಿಕೆಟ್​ ಜೊತೆಯಾಟದಲ್ಲಿ 50 ರನ್!

    ವೇಡ್ ಮತ್ತು ಮ್ಯಾಕ್ಸ್​ವೆಲ್ ಮುರಿಯದ ಮೂರನೇ ವಿಕೆಟ್​ಗೆ 34 ಎಸೆತಗಳಲ್ಲಿ 51 ರನ್ ಸೇರಿಸಿದ್ದಾರೆ

  • 08 Dec 2020 02:57 PM (IST)

    14ನೇ ಓವರ್ ಅಂತ್ಯಕ್ಕೆ ಆಸ್ಟ್ರೇಲಿಯ 124/2

    14 ಓವರ್​ಗಳ ಆಟ ಕೊನೆಗೊಂಡಾಗ ಆಸ್ಟ್ರೇಲಿಯ 124/2 (ವೇಡ್ 68, ಮ್ಯಾಕ್ಸ್​ವೆಲ್ 22)

  • 08 Dec 2020 02:51 PM (IST)

    13 ಓವರ್​ಗಳ ಆಟದಲ್ಲಿ ಆಸ್ಟ್ರೇಲಿಯ 112/2

    13ನೇ ಓವರ್ ಆಟ ಮುಗಿದಾಗ ಆಸ್ಟ್ರೇಲಿಯಾದ ಸ್ಕೋರ್ 112/2 (ವೇಡ್ 60 , ಮ್ಯಾಕ್ಸ್​ವೆಲ್ 19)

  • 08 Dec 2020 02:46 PM (IST)

    12 ಓವರ್​ಗಳ ಆಟದಲ್ಲಿ ಆಸ್ಟ್ರೇಲಿಯ 101/2

    12ನೇ ಓವರ್ ಆಟ ಮುಗಿದಾಗ ಆಸ್ಟ್ರೇಲಿಯ 101/2 (ವೇಡ್ 58, ಮ್ಯಾಕ್ಸ್​ವೆಲ್ 11)

  • 08 Dec 2020 02:40 PM (IST)

    ಅರ್ಧ ಶತಕ ಪೂರೈಸಿದ ವೇಡ್

    ಆಸ್ಟ್ರೇಲಿಯ ಆರಂಭ ಆಟಗಾರ ಮ್ಯಾಥ್ಯೂ ವೇಡ್ 35 ಎಸೆತಗಳಲ್ಲಿ 50 ರನ್ ಬಾರಿಸಿದ್ದಾರೆ, ಅದರಲ್ಲಿ 7 ಬೌಂಡರಿಗಳಿವೆ, 11 ಓವರ್​ಗಳ ನಂತರ ಆಸ್ಟ್ರೇಲಿಯ 87/2

    ಸುಂದರ್ ತಮ್ಮ ಕೋಟಾವನ್ನು ಪೂರ್ತಿಗೊಳಿಸಿರುವುದರಿಂದ (4-035-2) ಅವರ ಸ್ಥಾನದಲ್ಲಿ ಶಾರ್ದುಲ್ ಠಾಕುರ್ ಬೌಲ್ ಮಾಡಲು ಬಂದಿದ್ದಾರೆ

  • 08 Dec 2020 02:34 PM (IST)

    ಮ್ಯಾಕ್ಸ್​ವೆಲ್ ಆಡಲು ಬಂದಿದ್ದಾರೆ

    ಸ್ಮಿತ್ ಸ್ಥಾನದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಆಡಲು ಬಂದಿದ್ದಾರೆ, 10 ಓವರ್​ಗಳ ನಂತರ ಆಸ್ಟ್ರೇಲಿಯ 84/2

  • 08 Dec 2020 02:30 PM (IST)

    ಸ್ಮಿತ್ ಔಟ್ ಮಾಡಿದ ಸುಂದರ್

    ವಾಷಿಂಗ್ಟನ್ ಸುಂದರ್ ತಮ್ಮ ಕೊನೆ ಓವರ್​ನಲ್ಲಿ ಸ್ಟೀವ್ ಸ್ಮಿತ್ ಅವರನ್ನು ಔಟ್​ ಮಾಡಿದ್ದಾರೆ,  23 ಎಸೆತಗಳಲ್ಲಿ 24 ರನ್ ಬಾರಿಸಿದ ಸ್ಮಿತ್ ಕ್ಲೀನ್ ಬೋಲ್ಡ್ ಆದರು, ಸ್ಕೋರ್ 82/2

  • 08 Dec 2020 02:26 PM (IST)

    9ನೇ ಓವರ್ ಅಂತ್ಯಕ್ಕೆ ಆಸ್ಟ್ರೇಲಿಯ 73/1

    9 ಓವರ್​ಗಳ ಆಟದಲ್ಲಿ ಆಸ್ಟ್ರೇಲಿಯ 1 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿದೆ (ವೇಡ್ 48 ಸ್ಮಿತ್ 18)

  • 08 Dec 2020 02:21 PM (IST)

    8ನೇ ಓವರ್ ಅಂತ್ಯಕ್ಕೆ ಆಸ್ಟ್ರೇಲಿಯ 68/1

    8 ಓವರ್​ಗಳ ಆಟ ಕೊನೆಗೊಂಡಾಗ ಆಸ್ಟ್ರೇಲಿಯ  68/1 (ವೇಡ್ 43, ಸ್ಮಿತ್ 15)

  • 08 Dec 2020 02:19 PM (IST)

    7ನೇ ಓವರ್ ಚಹಲ್ ಎಸೆಯುತ್ತಿದ್ದಾರೆ

    ಪವರ್ ಪ್ಲೇ ಮುಗಿದ ನಂತರ ವಿರಾಟ್ ಕೊಹ್ಲಿ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಬೌಲಿಂಗ್ ಆಕ್ರಮಣಕ್ಕೆ ಕರೆದಿದ್ದಾರೆ, 7 ಒವರ್ ಆಟದ ನಂತರ ಆಸ್ಟ್ರೇಲಿಯ  59/1

    ಚಹಲ್ ಮೊದಲ ಓವರ್​ನಲ್ಲಿ 8 ರನ್ ನೀಡಿದರು

  • 08 Dec 2020 02:14 PM (IST)

    6 ಓವರ್​ಗಳ ಅಂತ್ಯಕ್ಕೆ ಆಸ್ಟ್ರೇಲಿಯ 51/1

    6 ಓವರ್​​ಗಳ ಪವರ್ ಪ್ಲೇ ಮುಗಿದಿದೆ, ಆಸ್ಟ್ರೇಲಿಯ 51/1 (ವೇಡ್ 34, ಸ್ಮಿತ್ 10), ನಟರಾಜನ್ ತಮ್ಮ ಮೊದಲ ಓವರ್​ನಲ್ಲಿ 6 ರನ್ ನೀಡಿದರು

  • 08 Dec 2020 02:10 PM (IST)

    ಚಹರ್ ಸ್ಥಾನದಲ್ಲಿ ನಟರಾಜನ್ ಬೌಲಿಂಗ್ ಮಾಡಲು ಬಂದಿದ್ದಾರೆ

    ಯಾರ್ಕರ್ ಸ್ಪೆಷಲಿಸ್ಟ್ ಟಿ ನಟರಾಜನ್ ಅವರನ್ನು ಬೌಲಿಂಗ್ ಮಾಡಲು ಕರೆಯಲಾಗಿದೆ

  • 08 Dec 2020 02:08 PM (IST)

    5 ಓವರ್​ಗಳ ಅಂತ್ಯಕ್ಕೆ ಆಸ್ಟ್ರೇಲಿಯ 45/1

    5 ಓವರ್​ಗಳ ಆಟದಲ್ಲಿ ಆಸ್ಟ್ರೇಲಿಯ 1 ವಿಕೆಟ್​ ನಷ್ಟಕ್ಕೆ 45 ರನ್ ಗಳಿಸಿದೆ,  (ವೇಡ್ 32, ಸ್ಮಿತ್ 6)

  • 08 Dec 2020 02:05 PM (IST)

    ಆಕ್ರಮಣಕಾರಿ ಮೂಡ್​ನಲ್ಲಿ ವೇಡ್

    ವೇಡ್ ಎರಡನೇ ಪಂದ್ಯದಲ್ಲಿ ಆಡಿದಂತೆಯೇ ಆಕ್ರಮಣಕಾರಿ ಹೊಡೆತಗಳನ್ನು ಬಾರಿಸುತ್ತಿದ್ದಾರೆ, ಈಗಾಗಲೇ 20 ಎಸೆತಗಳಲ್ಲಿ 29 ರನ್ ಗಳಿಸಿದ್ದಾರೆ

  • 08 Dec 2020 02:00 PM (IST)

    4 ಓವರ್​ಗಳ ಅಂತ್ಯಕ್ಕೆ ಆಸ್ಟ್ರೇಲಿಯ 28/1

    ನಾಲ್ಕು ಓವರ್​ಗಳ ನಂತರ ಆಸ್ಟ್ರೇಲಿಯಾದ ಸ್ಕೋರ್ 28/1 (ವೇಡ್ 20, ಸ್ಮಿತ್ 2)

  • 08 Dec 2020 01:57 PM (IST)

    ಮೂರು ಓವರ್​ಗಳ ಅಂತ್ಯಕ್ಕೆ ಆಸ್ಟ್ರೇಲಿಯ 16/1

    ಫಿಂಚ್ ಅವರ ಸ್ಥಾನದಲ್ಲಿ ಸ್ಟೀವ್ ಸ್ಮಿತ್ ಆಡಲು ಬಂದಿದ್ದಾರೆ, ಮೂರು ಓವರ್​ಗಳ ಆಟದಲ್ಲಿ ಆಸ್ಟ್ರೇಲಿಯ 16/1 (ವೇಡ್ 15,  ಸ್ಮಿತ್ 1)

  • 08 Dec 2020 01:53 PM (IST)

    ಫಿಂಚ್ ಔಟ್​!

    ಸುಂದರ್ ತಮ್ಮ ಮೊದಲ ಓವರ್​ನಲ್ಲೇ ಫಿಂಚ್​ ಅವರನ್ನು ಔಟ್ ಮಾಡಿದ್ದಾರೆ. ಆಸ್ಸೀ ನಾಯಕ ತಮ್ಮ ಖಾತೆ ತೆರೆಯದೆ ಹಾರ್ದಿಕ್ ಪಾಂಡ್ಯಗೆ ಕ್ತಾಚಿತ್ತು ಔಟಾಗಿದ್ದಾರೆ. ಸ್ಕೋರ್ 14/1

  • 08 Dec 2020 01:50 PM (IST)

    ಮೊದಲ ಓವರ್ ಅಂತ್ಯಕ್ಕೆ ಆಸ್ಟ್ರೇಲಿಯ 9/0

    ಮೊದಲ ಓವರ್​ನಲ್ಲಿ ಅತಿಥೇಯರು ವಿಕೆಟ್​ ನಷ್ಟವಿಲ್ಲದೆ 9 ರನ್ ಗಳಿಸಿದ್ದಾರೆ, ಸುಂದರ್ ಎರಡನೆ ಓವರ್​ ಎಸೆಯುತ್ತಿದ್ದಾರೆ

  • 08 Dec 2020 01:47 PM (IST)

    ಭಾರತದ ಪರ ಮೊದಲ ಓವರ್ ಚಹರ್ ಎಸೆಯುತ್ತಿದ್ದಾರೆ

    ವೇಗದ ಬೌಲರ್ ದೀಪಕ್ ಚಹರ್ ಭಾರತದ ಪರ ಬೌಲಿಂಗ್ ದಾಳಿಯನ್ನು ಆರಂಭಿಸಿದ್ದಾರೆ, ಆರನ್ ಫಿಂಚ್ ಮತ್ತು ಮ್ಯಾಥ್ಯು ವೇಡ್ ಅತಿಥೇಯರ ಪರ ಇನ್ನಿಂಗ್ಸ್ ಶುರು ಮಾಡಿದ್ದಾರೆ

  • 08 Dec 2020 01:42 PM (IST)

    ಫಿಂಚ್ ವಾಪಸ್ಸಾಗಿದ್ದಾರೆ

    ಆಸ್ಟ್ರೇಲಿಯ ಟೀಮಿಗೆ ನಾಯಕ  ಆರನ್ ಫಿಂಚ್ ವಾಪಸ್ಸಾಗಿದ್ದಾರೆ.

    ಟೀಮ್ ಇಂತಿದೆ: ಫಿಂಚ್, ಮ್ಯಾಥ್ಯು ವೇಡ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಡಾರ್ಸಿ ಶಾರ್ಟ್, ಮೊಸೆಸ್ ಹೆನ್ರಿಕೆ, ಡೇನಿಯಲ್ ಸ್ಯಾಮ್ಸ್, ಸೀನ್ ಅಬ್ಬಾಟ್, ಮಿಚೆಲ್ ಸ್ವೆಪ್ಸನ್, ಅಂಡ್ರ್ಯೂ ಟೈ ಮತ್ತು ಆಡಂ ಜಂಪಾ

  • 08 Dec 2020 01:34 PM (IST)

    ಟಾಸ್​ ಗೆದ್ದ ಭಾರತ: ಫೀಲ್ಡಿಂಗ್ ಆಯ್ಕೆ

    ಟಾಸ್​ ಗೆದ್ದ ಭಾರತ: ಫೀಲ್ಡಿಂಗ್ ಆಯ್ಕೆ

  • Published On - Dec 08,2020 5:23 PM

    Follow us
    ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
    ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
    ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
    ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
    ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
    ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
    ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
    ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
    ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
    ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
    ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
    ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
    ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
    ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
    ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
    ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
    ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
    ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?