ICC Awards | ವಿರಾಟ್ ಕೊಹ್ಲಿಗೆ ದಶಕದ ಕ್ರಿಕೆಟಿಗ ಮತ್ತು ಏಕದಿನ ತಂಡದ ಅತ್ಯುತ್ತಮ ಕ್ರಿಕೆಟಿಗನ ಗೌರವ
ಪುರುಷರ ಏಕದಿನ ಕ್ರಿಕೆಟ್‌ನ ದಶಕದ ಅತ್ಯುತ್ತಮ ಕ್ರಿಕೆಟಿಗನಾಗಿ ವಿರಾಟ್ ಕೊಹ್ಲಿಯನ್ನು ಐಸಿಸಿ ಆಯ್ಕೆ ಮಾಡಿದೆ. ಈ ಪ್ರಶಸ್ತಿಗಾಗಿ ಧೋನಿ, ಮಾಲಿಂಗ, ಕುಮಾರ ಸಂಗಕ್ಕರ, ರೋಹಿತ್ ಶರ್ಮಾ, ಸ್ಟಾರ್ಕ್ ಮತ್ತು ಎಬಿ ಡಿ ವಿಲಿಯರ್ಸ್ ಅವರಂತಹ ಅನುಭವಿಗಳು ಸ್ಪರ್ಧೆಯಲ್ಲಿದ್ದರು.
ಐಸಿಸಿ ಈ ದಶಕದ ಅತ್ಯುತ್ತಮ ಕ್ರಿಕೆಟಿಗನ ಹೆಸರು ಘೋಷಿಸಿದೆ. ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಶಕದ ಅತ್ಯುತ್ತಮ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ಇತರ 6 ಆಟಗಾರರನ್ನು ಹಿಂದಿಕ್ಕಿದ ಕೊಹ್ಲಿ, ಐಸಿಸಿ ಈ ದಶಕದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪ್ರಶಸ್ತಿಗಾಗಿ ಕೊಹ್ಲಿಗೆ ಪ್ರತಿಷ್ಠಿತ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ ನೀಡಲಾಗುವುದು. 2011ರಿಂದ 2020ರ ಅವಧಿಯ ಅತ್ಯುತ್ತಮ ಕ್ರಿಕೆಟಿಗನಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ 10 ವರ್ಷಗಳಲ್ಲಿ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಕೊಹ್ಲಿ ಸಾಧನೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಕ್ರಿಕೆಟ್‌ನ 3 ಆವೃತ್ತಿಗಳಲ್ಲೂ ಕೊಹ್ಲಿ ಅತೀ ಹೆಚ್ಚು ರನ್ ಮತ್ತು ಹೆಚ್ಚು ಶತಕಗಳನ್ನು ಗಳಿಸಿದ್ದಾರೆ.
ಈ ಬಾರಿ ಐಸಿಸಿ ತನ್ನ ವಾರ್ಷಿಕ ಪ್ರಶಸ್ತಿಗಳಿಗೆ ಬದಲಾಗಿ, ದಶಕದ ಅತ್ಯುತ್ತಮ ಕ್ರಿಕೆಟಿಗರನ್ನು ಗೌರವಿಸಲು ನಿರ್ಧರಿಸಿದೆ. ಅಭಿಮಾನಿಗಳ ಮತಗಳ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗಿದ್ದು, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ದಶಕದ ಅತ್ಯುತ್ತಮ ಕ್ರಿಕೆಟಿಗ ಎಂದು ಆಯ್ಕೆಯಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಕೊಹ್ಲಿ, ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಇಂಗ್ಲೆಂಡ್‌ನ ಜೋ ರೂಟ್, ಕುಮಾರ್ ಸಂಗಕ್ಕಾರ (ಶ್ರೀಲಂಕಾ), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) ಮತ್ತು ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ) ಕೂಡ ಇದ್ದರು.
ಏಕದಿನ ಕ್ರಿಕೆಟ್‌ನ ದಶಕದ ಅತ್ಯುತ್ತಮ ಕ್ರಿಕೆಟಿಗ ವಿರಾಟ್ ಕೊಹ್ಲಿ ಇದರ ಜೊತೆಗೆ ಐಸಿಸಿ ದಶಕದ ಏಕದಿನ ಕ್ರಿಕೆಟ್‌ನ ಅತ್ಯುತ್ತಮ ಆಟಗಾರನ ಹೆಸರನ್ನು ಪ್ರಕಟಿಸಿದೆ. ಪುರುಷರ ಏಕದಿನ ಕ್ರಿಕೆಟ್‌ನ ದಶಕದ ಅತ್ಯುತ್ತಮ ಕ್ರಿಕೆಟಿಗನಾಗಿ ವಿರಾಟ್ ಕೊಹ್ಲಿಯನ್ನು ಐಸಿಸಿ ಆಯ್ಕೆ ಮಾಡಿದೆ. ಈ ಪ್ರಶಸ್ತಿಗಾಗಿ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ಲಸಿತ್ ಮಾಲಿಂಗ, ಕುಮಾರ ಸಂಗಕ್ಕರ, ರೋಹಿತ್ ಶರ್ಮಾ, ಸ್ಟಾರ್ಕ್ ಮತ್ತು ಎಬಿ ಡಿ ವಿಲಿಯರ್ಸ್ ಅವರಂತಹ ಅನುಭವಿಗಳು ಸ್ಪರ್ಧೆಯಲ್ಲಿದ್ದರು.
?? VIRAT KOHLI is the ICC Men’s ODI Cricketer of the Decade ??
? Only player with 10,000-plus ODI runs in the #ICCAwards period? 39 centuries, 48 fifties?️ 61.83 average✊ 112 catches
A run machine ?? pic.twitter.com/0l0cDy4TYz
— ICC (@ICC) December 28, 2020
The incredible Virat Kohli wins the Sir Garfield Sobers Award for ICC Male Cricketer of the Decade ?
? Most runs in the #ICCAwards period: 20,396? Most hundreds: 66? Most fifties: 94?️ Highest average among players with 70+ innings: 56.97? 2011 @cricketworldcup champion pic.twitter.com/lw0wTNlzGi
— ICC (@ICC) December 28, 2020
ಮಹೇಂದ್ರ ಸಿಂಗ್ ಧೋನಿಗೆ ICC ಸ್ಪಿರಿಟ್ ಆಫ್ ಕ್ರಿಕೆಟ್ ಅವಾರ್ಡ್ ಘೋಷಣೆ
Published On - 5:45 pm, Mon, 28 December 20