ಕಳೆದ ಕೆಲ ಮ್ಯಾಚ್ಗಳಿಂದ ಅದ್ಭುತ ಪ್ರದರ್ಶನ ನೀಡುತ್ತಿರುವ ಭಾರತದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ರಿಷಬ್ ಪಂತ್ಗೆ ಐಸಿಸಿಯ ತಿಂಗಳ ಆರಂಭಿಕ ಆಟಗಾರ ಪ್ರಶಸ್ತಿ ದೊರೆತಿದೆ. ಈ ಮೂಲಕ ಟೀಂ ಇಂಡಿಯಾಗೆ ವಿಶೇಷ ಕೊಡುಗೆ ನೀಡುತ್ತಿರುವ ರಿಷಬ್ಗೆ ಐಸಿಸಿ ವಿಶೇಷವಾಗಿ ಗೌರವ ಸಲ್ಲಿಸಿದೆ. ಆಸ್ಟ್ರೇಲಿಯಾ ನೆಲದಲ್ಲಿ ನಡೆದ ಟೆಸ್ಟ್ ಮ್ಯಾಚ್ನಲ್ಲಿ ರಿಷಬ್ ಪಂತ್ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ಸಿಡ್ನಿ ಟೆಸ್ಟ್ನಲ್ಲಿ 97 ಹಾಗೂ ಬ್ರಿಸ್ಬೇನ್ನಲ್ಲಿ ಔಟ್ ಆಗದೆ 89 ರನ್ ಬಾರಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಲು ಇದು ತುಂಬಾನೇ ಸಹಕಾರಿಯಾಗಿತ್ತು. ಇದನ್ನು ಗಮನಿಸಿ ಆಸ್ಟ್ರೇಲಿಯಾ ಈ ಪ್ರಶಸ್ತಿ ನೀಡಿದೆ.
ಐಸಿಸಿ ನೀಡಿದ ವಿಶೇಷ ಗೌರವ ತೆಗೆದುಕೊಂಡ ನಂತರ ಮಾತನಾಡಿರುವ ರಿಷಬ್ ಪಂತ್, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವುದು ಪ್ರತಿ ಆಟಗಾರನಿಗೂ ಹೆಮ್ಮೆಯ ವಿಚಾರ. ಈ ರೀತಿ ಘಟನೆಗಳಿಂದ ಯುವ ಆಟಗಾರರಲ್ಲಿ ಹೊಸ ಚೈತನ್ಯ ಮೂಡುತ್ತದೆ. ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಮ್ಮ ತಂಡದ ಪ್ರತಿ ಆಟಗಾರನಿಗೆ ನಾನು ಈ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ. ನನಗೆ ವೋಟ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದಿದ್ದಾರೆ.
ಇನ್ನು, ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಟೆಸ್ಟ್ನಲ್ಲೂ ರಿಷಬ್ ಪಂತ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ 91 ರನ್ ಗಳಿಸಿದ್ದರು.
ಐಸಿಸಿ ಪ್ರಶಸ್ತಿ ಗೆದ್ದಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಐಸಿಸಿ ವೋಟಿಂಗ್ ಅಕಾಡೆಮಿಯ ಸದಸ್ಯ ರಮೀಜ್ ರಾಜಾ, ರಿಷಬ್ ಪಂತ್ ಒತ್ತಡದಲ್ಲಿ ಆಡಿದ ಸಂದರ್ಭದಲ್ಲೇ ಹೆಚ್ಚು ಅದ್ಭುತವಾಗಿ ಆಡಿದ್ದಾರೆ ಎಂದಿದ್ದಾರೆ. ಪ್ರತಿ ತಿಂಗಳಲ್ಲಿ ಆಟಗಾರರ ಪ್ರದರ್ಶನವನ್ನು ಗಮನಿಸಿ ಈ ಪ್ರಶಸ್ತಿ ನೀಡಲಾಗುತ್ತೆ. ಅಭಿಮಾನಿಗಳು ಹಾಗೂ ಐಸಿಸಿ ವೋಟಿಂಗ್ ಅಕಾಡೆಮಿ ಅವರು ಮಾಡುವ ಮತಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.
ಐಸಿಸಿ ದಶಕದ ಆಟಗಾರ ಪ್ರಶಸ್ತಿಯ ಎಲ್ಲ ಕೆಟೆಗಿರಿಗಳಿಗೆ ಕೊಹ್ಲಿ ಹೆಸರು ನಾಮಿನೇಟ್ ಅಗಿದೆ!