ICC World Test Championship ಮುಂದಿನ ಆವೃತ್ತಿ ವೇಳಾಪಟ್ಟಿ ಪ್ರಕಟ: ಭಾರತದ ಮೊದಲ ಎದುರಾಳಿ ಈ ತಂಡ

| Updated By: Vinay Bhat

Updated on: Jul 14, 2021 | 12:51 PM

WTC 2021-23 cycle: ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ 2021-23ನೇ ಸಾಲಿನ ವೇಳಾಪಟ್ಟಿಯಲ್ಲಿ ಪ್ರತಿ 9 ತಂಡ ಒಟ್ಟು ಆರು ಟೆಸ್ಟ್​ ಸರಣಿಯನ್ನು ಆಡಲಿದೆ. ಮೂರು ಸರಣಿ ದೇಶದಲ್ಲಿ ಮತ್ತು ಮೂರು ವಿದೇಶದಲ್ಲಿ ಎಂದು ನಿರ್ಧಾರ ಮಾಡಲಾಗಿದೆ.

ICC World Test Championship ಮುಂದಿನ ಆವೃತ್ತಿ ವೇಳಾಪಟ್ಟಿ ಪ್ರಕಟ: ಭಾರತದ ಮೊದಲ ಎದುರಾಳಿ ಈ ತಂಡ
Team India
Follow us on

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ (ICC World Test Championship) 2021-23ನೇ ಸಾಲಿನ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಇಂದು ಬಿಡುಗಡೆ ಮಾಡಿದೆ. ಇದು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಎರಡನೇ ಆವೃತ್ತಿಯಾಗಿದೆ. ಇತ್ತೀಚೆಗಷ್ಟೆ ಮೊದಲ ಆವೃತ್ತಿ ಮುಕ್ತಾಯಗೊಂಡಿದ್ದು, ಭಾರತ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

ಸದ್ಯ ಐಸಿಸಿ ಪ್ರಕಟಿಸಿರುವ ವೇಳಾಪಟ್ಟಿಯಲ್ಲಿ ಯಾವುದೇ ದಿನಾಂಕವನ್ನು ನಿಗದಿ ಮಾಡಲಾಗಿಲ್ಲ. ಬದಲಾಗಿ ಒಂದು ತಂಡ ಯಾವ ತಂಡದ ವಿರುದ್ಧ ಆಡಲಿದೆ ಮತ್ತು ಹೋಮ್ ಗ್ರೌಂಡ್ – ಅವೇ ಗ್ರೌಂಡ್​ನಲ್ಲಿ ಆಡಲಿರುವ ಪಂದ್ಯಗಳ ಮಾಹಿತಿ ತಿಳಿಸಿದೆ.

 

ಐಸಿಸಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ, ಭಾರತ ಮೊದಲಿಗೆ ತನ್ನ ಹೋಮ್ ಗ್ರೌಂಡ್​ನಲ್ಲಿ ಶ್ರೀಲಂಕಾ ವಿರುದ್ಧ ಆಡಲಿದೆ. ಬಳಿಕ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೆಣೆಸಾಟ ನಡೆಸಲಿದೆ. ಇನ್ನೂ ವಿದೇಶದಲ್ಲಿ ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟ ನಡೆಸಲಿದೆ.

ಪ್ರತಿ 9 ತಂಡ ಒಟ್ಟು ಆರು ಟೆಸ್ಟ್​ ಸರಣಿಯನ್ನು ಆಡಲಿದೆ. ಮೂರು ಸರಣಿ ದೇಶದಲ್ಲಿ ಮತ್ತು ಮೂರು ವಿದೇಶದಲ್ಲಿ ಎಂದು ನಿರ್ಧಾರ ಮಾಡಲಾಗಿದೆ.

ಇನ್ನೂ ಈ ಬಾರಿಯ ಪಾಯಿಂಟ್ ನಿಯಮದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಇದರ ಪ್ರಕಾರ ಒಂದು ಪಂದ್ಯದಲ್ಲಿ ಗೆದ್ದ ತಂಡ 12 ಅಂಕ ಸಂಪಾದಿಸಲಿದೆ. ಪರ್ಸೆಂಟೆಜ್ ಆಫ್ ಪಾಯಿಂಟ್ 100 ಇದೆ. ಟೈ ಆದರೆ 6 ಅಂಕ, ಡ್ರಾ ಆದರೆ 4 ಅಂಕ ಮತ್ತು ಸೋತರೆ 0 ಪಾಯಿಂಟ್ ಎಂದು ನಿಗದಿ ಮಾಡಲಾಗಿದೆ.

 

ಅಂತೆಯೆ ಸರಣಿಯ ಆಧಾರದ ಮೇಲೆ ಅಂಕ ನೀಡಲಾಗುತ್ತಿದೆ. ಅದರೆ ಒಂದು ಸರಣಿಯಲ್ಲಿ ಎರಡು ಪಂದ್ಯವಿದ್ದರೆ 24 ಅಂಕ, 3 ಪಂದ್ಯವಿದ್ದರೆ 36 ಅಂಕ, 4 ಪಂದ್ಯವಿದ್ದರೆ 48 ಅಂಕ ಮತ್ತು 5 ಪಂದ್ಯವಿದ್ದರೆ 60 ಅಂಕ ಎಂದು ನಿಗದಿ ಮಾಡಲಾಗಿದೆ.

Tokyo Olympic: ಒಲಿಂಪಿಕ್ಸ್​ನಿಂದ ಮರಳಿದ ಬಳಿಕ ನಾವು ಒಟ್ಟಿಗೆ ಐಸ್​ಕ್ರೀಂ ತಿನ್ನೊಣ: ಪಿವಿ ಸಿಂಧು ಜೊತೆ ಮೋದಿ ಮಾತುಕತೆ

Milkha Singh : ಶೆಲ್ಫಿಗೇರುವ ಮುನ್ನ ; ಕಾಲದೊಂದಿಗೆ ಓಟದ ಮುಖಾಮುಖಿ

(ICC WTC 2021-23 ICC Announces Fixtures for World Test Championship 2021-23 Cycle here is the team india Schedule)