AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympic: ಒಲಿಂಪಿಕ್ಸ್​ನಿಂದ ಮರಳಿದ ಬಳಿಕ ನಾವು ಒಟ್ಟಿಗೆ ಐಸ್​ಕ್ರೀಂ ತಿನ್ನೊಣ: ಪಿವಿ ಸಿಂಧು ಜೊತೆ ಮೋದಿ ಮಾತುಕತೆ

ಪ್ರಧಾನಿ ಮೋದಿಯವರೊಂದಿಗೆ ಪಿವಿ ಸಿಂಧು ಒಲಂಪಿಕ್ಸ್​ ಸಿದ್ಧತೆ ಕುರಿತು ಹಾಗೂ ಭಾರತಕ್ಕೆ ಪದಕ ತರುವ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.

Tokyo Olympic: ಒಲಿಂಪಿಕ್ಸ್​ನಿಂದ ಮರಳಿದ ಬಳಿಕ ನಾವು ಒಟ್ಟಿಗೆ ಐಸ್​ಕ್ರೀಂ ತಿನ್ನೊಣ: ಪಿವಿ ಸಿಂಧು ಜೊತೆ ಮೋದಿ ಮಾತುಕತೆ
PV Sindu and Narendra Modi
TV9 Web
| Edited By: |

Updated on: Jul 14, 2021 | 12:00 PM

Share

ಟೋಕಿಯೋಗೆ (Tokyo) ಹೊರಡಲು ಸಜ್ಜಾಗಿರುವ ಭಾರತದ ಪ್ರಮುಖ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಂಗಳವಾರ ಆತ್ಮೀಯ ಮಾತುಕತೆ ನಡೆಸಿದರು. ಜನರ ನಿರೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಒಲಿಂಪಿಕ್ಸ್‌ ನಲ್ಲಿ ಅತ್ಯುತ್ತಮ ಪ್ರದರ್ಶನದ ಜೊತೆ ನಿಮ್ಮಲ್ಲಿರುವ ಶೇ. 100 ರಷ್ಟು ಪ್ರಯತ್ನ ನೀಡಿ ಎಂದು ಧೈರ್ಯ ತುಂಬಿದ್ದಾರೆ.

ಈ ವೇಳೆ ಪ್ರಮಖ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು (PV Sindhu) ಜೊತೆ ಮೋದಿ ತುಂಬಾನೆ ಆತ್ಮೀಯವಾಗಿ ಮಾತನಾಡಿದರು. ಪಿವಿ ಸಿಂಧುಗೆ ಐಸ್​ಕ್ರೀಂ ಎಂದರೆ ತುಂಬಾ ಇಷ್ಟ ಎಂದು ತಿಳಿದ ಪ್ರಧಾನಿ ಅವರು, ತಾವು ಈ ಒಲಂಪಿಕ್ಸ್​ ಕ್ರೀಡೆ ಮುಗಿದ ಬಳಿಕ ಒಟ್ಟಿಗೆ ಐಸ್​ಕ್ರೀಂ ತಿನ್ನೋಣ ಎಂದು ನಗುತ್ತಾ ಹೇಳಿದರು.

ಒಲಂಪಿಕ್ಸ್​ ಸಿದ್ಧತೆಯಲ್ಲಿರುವ ಬ್ಯಾಡ್ಮಿಂಟನ್​ ತಾರೆ ಸಿಂಧು ಡಯಟ್​ ದೃಷ್ಟಿಯಿಂದ ಐಸ್​ ಕ್ರೀಂ ತಿನ್ನುವುದನ್ನು ಸದ್ಯಕ್ಕೆ ತ್ಯಜಿಸಿರುವುದಾಗಿ ತಿಳಿಸಿದರು. ಇದನ್ನು ಕೇಳಿದ ಪ್ರಧಾನಿಗಳು ಟೋಕಿಯಾದಿಂದ ಮರಳಿದ ಬಳಿಕ ಭೇಟಿಯಾದಾಗ ಒಟ್ಟಿಗೆ ಐಸ್​ಕ್ರೀಂ ಸವಿಯೋಣ ಎಂದಿದ್ದಾರೆ.

ಪ್ರಧಾನಿ ಮೋದಿಯವರೊಂದಿಗೆ ಪಿವಿ ಸಿಂಧು ಒಲಂಪಿಕ್ಸ್​ ಸಿದ್ಧತೆ ಕುರಿತು ಹಾಗೂ ಭಾರತಕ್ಕೆ ಪದಕ ತರುವ ಕುರಿತು ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭ ಕುಸ್ತಿಪಟು ವಿನೇಶ್ ಪೋಗಟ್ ಜೊತೆಗೂ ಕೆಲ ಸಮಯ ಮಾತನಾಡಿದರು. ನಿಮ್ಮ ಬಯೋಪಿಕ್ ಶೀಘ್ರದಲ್ಲೇ ‌ನಿರೀಕ್ಷಿಸಬಹುದೇ ಎಂದು ವಿನೇಶ್‌ ಪೋಗಟ್ ಬಳಿ ಪಿಎಂ‌ ಕೇಳಿದ್ದು ವಿಶೇಷವಾಗಿತ್ತು. ಅಂತೆಯೆ ಪೋಗಟ್ ಕುಟುಂಬದ ಸದಸ್ಯರೊಂದಿಗೂ ಮಾತನಾಡಿದರು. ‘ನಿಮ್ಮ ಹೆಣ್ಣುಮಕ್ಕಳಿಗೆ ಯಾವ ಬೀಸುಕಲ್ಲಿನಲ್ಲಿ ಸಿದ್ಧವಾದ ಹಿಟ್ಟಿನ ಆಹಾರ ನೀಡುತ್ತೀರಿ‘ ಎಂದು ಕೇಳಿದರು. ಕುಸ್ತಿಕ್ರೀಡೆಗೆ ತಮ್ಮ ಕುಟುಂಬದ ಹುಡುಗಿಯರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.

ವಿಶ್ವ ನಂ.1 ಬಿಲ್ಗಾರ್ತಿ ದೀಪಿಕಾ ಕುಮಾರಿ ಮೋದಿ ಜೊತೆ ಕೆಲವು ಮಾಹಿತಿಯನ್ನು ಹಂಚಿಕೊಂಡರು. ನನ್ನ ಕ್ರೀಡಾಜೀವನ ಆರಂಭ ದಿಂದಲೂ ಉತ್ತಮವಾಗಿತ್ತು. ಮೊದಲು ಬಿದಿರಿನ ಬಿಲ್ಲು ಬಳಸುತ್ತಿದ್ದೆ. ನಮ್ಮಿಂದ ಇತರರು ಬಹಳಷ್ಟನ್ನು ನಿರೀಕ್ಷಿಸುತ್ತಾರೆ. ಆದ್ದರಿಂದ ಅಭ್ಯಾಸದ ಮೇಲೆ ಬಹಳ ಗಮನ ಹರಿಸಿದ್ದೇನೆ. ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆಯಿದೆ ಎಂದರು.

ಈ ವೇಳೆ ಇತರೆ ಸ್ಪರ್ಧಿಗಳೊಂದಿಗೂ ಮಾತನಾಡಿದ ಪ್ರಧಾನಿಗಳು, ಒಲಂಪಿಕ್ಸ್​ನಲ್ಲಿ ನಿಮ್ಮಿಂದ ದೇಶದ ಹೆಮ್ಮೆಯನ್ನು ನಾವು ಬಯಸುತ್ತಿದ್ದೇವೆ ಎಂದು ತಿಳಿಸಿದರು.

Virat Kohli: ಕಿಂಗ್ ವಿರಾಟ್ ಕೊಹ್ಲಿ ದಾಖಲೆಯನ್ನು ಅಳಿಸಿ ಹಾಕಿದ ಪಾಕ್ ನಾಯಕ ಬಾಬರ್ ಅಜಂ

Milkha Singh : ಶೆಲ್ಫಿಗೇರುವ ಮುನ್ನ ; ಕಾಲದೊಂದಿಗೆ ಓಟದ ಮುಖಾಮುಖಿ

(PM Narendra Modi Tokyo pep talk Ice-cream for Sindhu and biopic on Vinesh)

ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?