VIDEO: ಏಕದಿನ ಇತಿಹಾಸದಲ್ಲಿ ಅತ್ಯಂತ ಅಚ್ಚರಿಯ ಎಸೆತ: 12.1 ಡಿಗ್ರಿಯಷ್ಟು ಟರ್ನ್ ಆದ ಬಾಲ್
ಕ್ರಿಕ್ವಿಜ್ ಹೇಳಿರುವ ಪ್ರಕಾರ ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸ್ನಿನ್ ಡೆಲಿವರಿಯಂತೆ. ಇದು 12.1 ಡಿಗ್ರಿಯಷ್ಟು ಟರ್ನ್ ಆಗಿದೆ ಎಂದು ಹೇಳಿದೆ. ಇಲ್ಲಿದೆ ನೋಡಿ ವಿಡಿಯೋ.
ಆಂಗ್ಲರ ನಾಡಿನಲ್ಲಿ ಕ್ರಿಕೆಟ್ ಪಿಚ್ ವೇಗದ ಬೌಲರ್ಗಳಿಗಿಂತ ಸ್ಪಿನ್ನರ್ಗಳಿಗೇ ಹೆಚ್ಚು ಉಪಯುಕ್ತ ಎಂಬುದು ಮತ್ತೆ ಸಾಭೀತಾಗಿದೆ. ಇದಕ್ಕೆ ಸಾಕ್ಷಿಯಾಗಿದ್ದು ಮಂಗಳವಾರ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಇಂಗ್ಲೆಂಡ್ ಮತ್ತು ಪಾಕಿಸ್ತಾನ (England vs Pakistan) ನಡುವಣ ಮೂರನೇ ಏಕದಿನ ಪಂದ್ಯ. ಇಂಗ್ಲೆಂಡ್ ತಂಡದ ಪ್ರಮುಖ ಸ್ಪಿನ್ನರ್ ಮ್ಯಾಟ್ ಪರ್ಕಿನ್ಸನ್ (Matt Parkinson) ಅವರ ಒಂದು ಎಸೆತ ‘ಡಿಲಿವರಿ ಆಫರ್ ದಿ ಇಯರ್’ (delivery of the year) ಆಗಿ ಬಿಟ್ಟಿತು.
1993ರ ಆ್ಯಶಸ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾದ ಲೆಜೆಂಡ್ ಸ್ಪಿನ್ನರ್ ಶೇನ್ ವಾರ್ನ್ ಇಗ್ಲೆಂಡ್ನ ಮೈಕ್ ಗಟ್ಲಿಂಗ್ ಅವರನ್ನು ಇದೇರೀತಿ ಔಟ್ ಆಡಿದ್ದರು. ಆ ಬಳಿಕ ಇಂಥಹ ಟರ್ನ್ ಡೆಲಿವರಿ ಕ್ರಿಕೆಟ್ ಜಗತ್ತು ಕಂಡಿರಲಿಲ್ಲ. ಆದರೆ, ಮಂಗಳವಾರ ನಡೆದ ಪಂದ್ಯದಲ್ಲಿ ಪರ್ಕಿನ್ಸನ್ ಅವರ ಮ್ಯಾಜಿಕ್ ಡೆಲಿವರಿ ಪಾಕ್ ಬ್ಯಾಟ್ಸ್ಮನ್ ಇಮಾಮ್ ಉಲ್ ಹಖ್ ಅವರನ್ನು ಪೆವಿಲಿಯನ್ಗೆ ಅಟ್ಟುವಂತೆ ಮಾಡಿತು. ಈ ಡೆಲಿವರಿಯನ್ನು ಕಂಡು ಕ್ರಿಕೆಟ್ ಅಭಿಮಾನಿಗಳು ಬೆರಗಾಗಿದ್ದಾರೆ.
ಕ್ರಿಕ್ವಿಜ್ ಹೇಳಿರುವ ಪ್ರಕಾರ ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸ್ನಿನ್ ಡೆಲಿವರಿಯಂತೆ. ಇದು 12.1 ಡಿಗ್ರಿಯಷ್ಟು ಟರ್ನ್ ಆಗಿದೆ ಎಂದು ಹೇಳಿದೆ. ಇಲ್ಲಿದೆ ನೋಡಿ ವಿಡಿಯೋ.
ಇಮಾಮ್ ವಿಕೆಟ್ ಇಂಗ್ಲೆಂಡ್ ತಂಡಕ್ಕೆ ತುಂಬಾನೆ ಮುಖ್ಯವಾಗಿತ್ತು. ನಾಯಕ ಬಾಬರ್ ಅಜಂ ಜೊತೆಗೂಡಿ ಇಮಾಮ್ ದೊಡ್ಡ ಇನ್ನಿಂಗ್ಸ್ ಕಟ್ಟುವ ಯೋಜನೆ ಹಾಕಿಕೊಂಡಿದ್ದರು. ಈ ಜೋಡಿ ಎರಡನೇ ವಿಕೆಟ್ಗೆ 92 ರನ್ಗಳ ಕಾಣಿಕೆ ನೀಡಿತು. ಇಮಾಮ್ 73 ಎಸೆತಗಳಲ್ಲಿ 56 ರನ್ ಗಳಿಸಿದರು. ಬಾಬರ್ 139 ಎಸೆತಗಳಲ್ಲಿ 14 ಬೌಂಡರಿ 4 ಸಿಕ್ಸರ್ ಸಿಡಿಸಿ 158 ರನ್ ಮತ್ತು ರಿಜ್ವಾನ್ 74 ರನ್ ಗಳಿಸಿದರು.
ಪಾಕಿಸ್ತಾನ 50 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 331 ರನ್ ಬಾರಿಸಿತು. ಕಠಿಣ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಪರ ಜೇಮ್ಸ್ ವಿನ್ಸ್ ಕೇವಲ 95 ಎಸೆತಗಳಲ್ಲಿ 102 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಲೆವಿಸ್ ಗ್ರೆಗೊರಿ 69 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಬಾರಿಸಿ 77 ರನ್ ಚಚ್ಚಿದರು. ಇಂಗ್ಲೆಂಡ್ 48 ಓವರ್ನಲ್ಲೇ 7 ವಿಕೆಟ್ ಕಳೆದುಕೊಂಡು 332 ರನ್ ಬಾರಿಸುವ ಮೂಲಕ 3 ವಿಕೆಟ್ಗಳ ಜಯ ಸಾಧಿಸಿತು. 3-0 ಅಂತರದಿಂದ ಏಕದಿನ ಸರಣಿ ಕೂಡ ಕ್ಲೀನ್ಸ್ವೀಪ್ ಮಾಡಿಕೊಂಡಿತು.
IND vs SL: ಕೊಹ್ಲಿ, ರೋಹಿತ್ ಇಲ್ಲದ ಲಂಕಾ ಪ್ರವಾಸಕ್ಕೆ ಧವನ್ ಅಲ್ಲ ಈ ಆಟಗಾರ ಕ್ಯಾಪ್ಟನ್ ಆಗಬೇಕಿತ್ತಂತೆ
(Viral Video England vs Pakistan Matt Parkinson produced the biggest spinning delivery in ODI history)