IND vs ENG: ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಗಿಲ್​ಗೆ ಗಾಯ! ರಾಹುಲ್- ಮಾಯಾಂಕ್​ಗೆ ಅವಕಾಶ ಸಿಗುವ ಸಾಧ್ಯತೆ

| Updated By: Skanda

Updated on: Jul 01, 2021 | 9:02 AM

IND vs ENG: ಗಿಲ್ ಅವರ ನಿರ್ಗಮನದಿಂದ ಇತರ ಇಬ್ಬರು ಆರಂಭಿಕ ಆಟಗಾರರಾದ ಮಾಯಾಂಕ್ ಅಗರ್ವಾಲ್ ಮತ್ತು ಕೆ.ಎಲ್ ರಾಹುಲ್ ಲಾಭ ಪಡೆಯಬಹುದು. ಈ ಇಬ್ಬರಲ್ಲಿ ಯಾರಾದರೂ ಒಬ್ಬರು ಅಂತಿಮ 11 ಆಟಗಾರರ ಪಟ್ಟಿ ಪ್ರವೇಶಿಸಬಹುದು.

IND vs ENG: ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಗಿಲ್​ಗೆ ಗಾಯ! ರಾಹುಲ್- ಮಾಯಾಂಕ್​ಗೆ ಅವಕಾಶ ಸಿಗುವ ಸಾಧ್ಯತೆ
ಶುಭ್​ಮನ್ ಗಿಲ್
Follow us on

ಟೀಂ ಇಂಡಿಯಾ ಪ್ರಸ್ತುತ ಇಂಗ್ಲೆಂಡ್‌ನಲ್ಲಿದೆ, ಅಲ್ಲಿ ಆಗಸ್ಟ್ 4 ರಿಂದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಬೇಕಾಗಿದೆ. ಆದರೆ ಈ ಮಹತ್ವದ ಸರಣಿಗೂ ಮೊದಲು ಭಾರತವು ದೊಡ್ಡ ಹಿನ್ನಡೆ ಎದುರಿಸುತ್ತಿದೆ. ಭಾರತದ ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಈ ಸರಣಿಯಿಂದ ಹೊರಬಿಳುವ ಆತಂಕ ಮನೆಮಾಡಿದೆ. ಗಿಲ್​ ಇಂಜುರಿಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಇದು ಆಂತರಿಕ ಗಾಯವಾಗಿದ್ದು, ಇದರ ಬಗ್ಗೆ ಯಾವುದೇ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಗಿಲ್ ತಂಡದಿಂದ ಹೊರನಡೆದರೆ, ಬಂಗಾಳದ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್ ಮುಖ್ಯ ತಂಡಕ್ಕೆ ಬರಲು ದಾರಿ ತೆರೆಯಬಹುದು. ಅವರು ತಂಡದೊಂದಿಗೆ ಇಂಗ್ಲೆಂಡ್‌ಗೆ ಸ್ಟ್ಯಾಂಡ್-ಬೈ ಆಗಿ ಹೋಗಿದ್ದಾರೆ.

ಗಿಲ್‌ಗೆ ಸಂಬಂಧಿಸಿದಂತೆ, ಅವರಿಗೆ ಯಾವ ರೀತಿಯ ಇಂಜುರಿಯಾಗಿದೆ ಮತ್ತು ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೇ ಎಂಬುದು ಸಹ ಸ್ಪಷ್ಟವಾಗಿಲ್ಲ. ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು. ಗಿಲ್ ಇಡೀ ಟೆಸ್ಟ್ ಪ್ರವಾಸದಿಂದ ಹೊರಗುಳಿಯುವ ಸಾಧ್ಯತೆಯಿದೆ. ಆದರೂ ಟೆಸ್ಟ್​ ಸರಣಿಗೆ ಇನ್ನೂ ಒಂದು ತಿಂಗಳು ಕಾಲಾವಕಾಶವಿದೆ. ಗಾಯವು ಗಂಭೀರವಾಗಿರದಿದ್ದರೆ ಗಿಲ್ ಚೇರಿಸಿಕೊಂಡು ಮತ್ತೆ ಅಖಾಡಕ್ಕಿಳಿಯುವ ಸಾಧ್ಯತೆಯಿದೆ.

ಸ್ನಾಯು ಸೆಳೆತಕ್ಕೊಳಗಾಗಿರುವ ಗಿಲ್
ಶುಭ್​ಮನ್ ಸ್ನಾಯು ಸೆಳೆತದ ಒತ್ತಡದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ, ಅದು ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಅವರಿಗೆ ಯಾವಾಗ ಈ ಗಾಯವಾಯಿತು ಎಂಬುದು ಸ್ಪಷ್ಟವಾಗಿಲ್ಲ. ಅವರು ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಫೀಸಿಯೋ ಆದ ನಿತಿನ್ ಪಟೇಲ್, ಕಂಡೀಷನಿಂಗ್ ತರಬೇತುದಾರ ಸೋಹಮ್ ದೇಸಾಯಿ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಐದು ಪಂದ್ಯಗಳ ಟೆಸ್ಟ್ ಸರಣಿಯಾಗಿದ್ದು, ಸೆಪ್ಟೆಂಬರ್​ವರೆಗೆ ನಡೆಯುತ್ತದೆ, ಸರಣಿಯ ಕೊನೆಯ ಟೆಸ್ಟ್​ಗೆ ಗಿಲ್ ಪುನರಾಗಮನ ಮಾಡುವ ಸಾಧ್ಯತೆಯಿದೆ.

ಮಾಯಾಂಕ್ ಅಗರ್ವಾಲ್, ಕೆ.ಎಲ್.ರಾಹುಲ್ಗೆ ಅವಕಾಶ
ಗಿಲ್ ಅವರ ನಿರ್ಗಮನದಿಂದ ಇತರ ಇಬ್ಬರು ಆರಂಭಿಕ ಆಟಗಾರರಾದ ಮಾಯಾಂಕ್ ಅಗರ್ವಾಲ್ ಮತ್ತು ಕೆ.ಎಲ್ ರಾಹುಲ್ ಲಾಭ ಪಡೆಯಬಹುದು. ಈ ಇಬ್ಬರಲ್ಲಿ ಯಾರಾದರೂ ಒಬ್ಬರು ಅಂತಿಮ 11 ಆಟಗಾರರ ಪಟ್ಟಿ ಪ್ರವೇಶಿಸಬಹುದು ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ತೆರೆಯಬಹುದು.

ಇದನ್ನೂ ಓದಿ:
ಭಾರತೀಯ ಆಟಗಾರರು ಕ್ರಿಕೆಟ್​ನ ಶ್ರೇಷ್ಠ ರಾಯಭಾರಿಗಳು! ಟೀಂ ಇಂಡಿಯಾವನ್ನು ಶ್ಲಾಘಿಸಿದ ಕೇನ್ ವಿಲಿಯಮ್ಸನ್