ಕೇವಲ 12 ವರ್ಷ ವಯಸ್ಸಿಗೆ ಚದುರಂಗದ ಅಂತರಂಗ ಭೇದಿಸಿ ಗ್ರ್ಯಾಂಡ್ ಮಾಸ್ಟರ್ ಪಟ್ಟಕ್ಕೇರಿದ ಅಭಿಮನ್ಯು ಮಿಶ್ರಾ

Abhimanyu Mishra: ಬುಡಾಪೆಸ್ಟ್‌ನಲ್ಲಿ ನಡೆದ ಗ್ರ್ಯಾಂಡ್‌ಮಾಸ್ಟರ್ ಟೂರ್ನಮೆಂಟ್‌ನಲ್ಲಿ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಲಿಯಾನ್ ಮೆಂಡೊಂಕಾ ಅವರನ್ನು ಸೋಲಿಸಿ ಅಭಿಮನ್ಯು ಮಿಶ್ರಾ ಈ ಸಾಧನೆ ಮಾಡಿದ್ದಾರೆ.

ಕೇವಲ 12 ವರ್ಷ ವಯಸ್ಸಿಗೆ ಚದುರಂಗದ ಅಂತರಂಗ ಭೇದಿಸಿ ಗ್ರ್ಯಾಂಡ್ ಮಾಸ್ಟರ್ ಪಟ್ಟಕ್ಕೇರಿದ ಅಭಿಮನ್ಯು ಮಿಶ್ರಾ
ಅಭಿಮನ್ಯು ಮಿಶ್ರಾ
Follow us
ಪೃಥ್ವಿಶಂಕರ
|

Updated on:Jul 01, 2021 | 2:48 PM

ಭಾರತೀಯ ಮೂಲದ ಅಭಿಮನ್ಯು ಮಿಶ್ರಾ ಚೆಸ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ, ಅವರು 19 ವರ್ಷಗಳ ಹಿಂದೆ ರಷ್ಯಾದ ಗ್ರ್ಯಾಂಡ್ ಮಾಸ್ಟರ್ ಸೆರ್ಗೆ ಕಾರ್ಜಾಕಿನ್ ಹೆಸರಿನಲ್ಲಿ ದಾಖಲಿಸಿದ ದಾಖಲೆಯನ್ನು ಮುರಿದಿದ್ದಾರೆ. ಅಭಿಮನ್ಯು ಮಿಶ್ರಾ 12 ವರ್ಷ, 4 ತಿಂಗಳು, 25 ದಿನಗಳಲ್ಲಿ ಗ್ರ್ಯಾಂಡ್ ಮಾಸ್ಟರ್ ಸಾಧನೆ ಮಾಡಿದ್ದಾರೆ. ಆಗಸ್ಟ್ 2002 ರಲ್ಲಿ, ಕಾರ್ಜಾಕಿನ್ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆಗಿದ್ದಾಗ, ಅವರಿಗೆ 12 ವರ್ಷ, 7 ತಿಂಗಳ ವಯಸ್ಸಾಗಿತ್ತು. ಅಂದರೆ, 3 ತಿಂಗಳ ವಯಸ್ಸಿನ ಅಂತರದೊಂದಿಗೆ, ಅಭಿಮನ್ಯು ರಷ್ಯಾದ ಗ್ರ್ಯಾಂಡ್ ಮಾಸ್ಟರ್​ನ ಹಳೆಯ ದಾಖಲೆಯನ್ನು ಮುರಿದಿದ್ದಾನೆ.

ಬುಡಾಪೆಸ್ಟ್‌ನಲ್ಲಿ ನಡೆದ ಗ್ರ್ಯಾಂಡ್‌ಮಾಸ್ಟರ್ ಟೂರ್ನಮೆಂಟ್‌ನಲ್ಲಿ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಲಿಯಾನ್ ಮೆಂಡೊಂಕಾ ಅವರನ್ನು ಸೋಲಿಸಿ ಅಭಿಮನ್ಯು ಮಿಶ್ರಾ ಈ ಸಾಧನೆ ಮಾಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾದೊಂದಿಗಿನ ಸಂವಾದದಲ್ಲಿ ಅಭಿಮನ್ಯು, ಲಿಯಾನ್ ವಿರುದ್ಧದ ಹೋರಾಟ ನನಗೆ ತುಂಬಾ ಕಷ್ಟವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಆದರೆ ಕೊನೆಯಲ್ಲಿ ಅವನು ಮಾಡಿದ ತಪ್ಪಿನ ಲಾಭ ನನಗೆ ಸಿಕ್ಕಿತು. ಆ ತಪ್ಪುಗಳ ಲಾಭವನ್ನು ನಾನು ಪಡೆದುಕೊಂಡೆ. ಗೆಲುವಿನೊಂದಿಗೆ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಎಂಬ ಸಾಧನೆ ಮಾಡಿದ್ದಕ್ಕೆ ನನಗೆ ಈಗ ಸಂತೋಷವಾಗಿದೆ ಎಂದಿದ್ದಾರೆ.

ಮಗನ ಸಾಧನೆಗೆ ಅಪ್ಪನ ಪ್ರೋತ್ಸಾಹ ಅಭಿಮನ್ಯು ಮಿಶ್ರಾ ಅವರ ತಂದೆ ಅಮೆರಿಕದ ನ್ಯೂಜೆರ್ಸಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಗ ಅಭಿಮನ್ಯು ಗ್ರ್ಯಾಂಡ್ ಮಾಸ್ಟರ್ ಪಂದ್ಯಾವಳಿಯಲ್ಲಿ ಆಡಲು ಯುರೋಪಿಗೆ ಹೋಗುವ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದರು. ಇದರ ಪರಿಣಾಮವೆಂದರೆ ಅಭಿಮನ್ಯು ಚೇಸ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾದೊಂದಿಗಿನ ಸಂಭಾಷಣೆಯಲ್ಲಿ ಹೇಮಂತ್, ಇದು ನಮಗೆ ಒಂದು ದೊಡ್ಡ ಅವಕಾಶ ಎಂದು ನಮಗೆ ತಿಳಿದಿತ್ತು. ಬ್ಯಾಕ್ ಟು ಬ್ಯಾಕ್ ಪಂದ್ಯಾವಳಿಗಳನ್ನು ಆಡಲು ನಾವು ಏಪ್ರಿಲ್ ಮೊದಲ ವಾರದಲ್ಲಿ ಬುಡಾಪೆಸ್ಟ್ ತಲುಪಿದೆವು. ನಮ್ಮ ಮಗ ಅಭಿಮನ್ಯು ಕಿರಿಯ ಗ್ರ್ಯಾಂಡ್ ಮಾಸ್ಟರ್ ಆಗಬೇಕೆಂಬುದು ನನ್ನ ಮತ್ತು ನನ್ನ ಹೆಂಡತಿ ಸ್ವಾತಿಯ ಕನಸಾಗಿತ್ತು. ಇಂದು ಈ ಕನಸು ನನಸಾಯಿತು. ನಮಗಾಗಿರುವ ಸಂತೋಷವನ್ನು ಮಾತುಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಭಿಮನ್ಯು ತಂದೆ ಸಂತಸ ಹಂಚಿಕೊಂಡಿದ್ದಾರೆ.

ಕಿರಿಯ ವಯಸ್ಸಿನ ಇಂಟರ್ ನ್ಯಾಷನಲ್ ಮಾಸ್ಟರ್ ಗ್ರ್ಯಾಂಡ್ ಮಾಸ್ಟರ್ ಪಟ್ಟ ಗಳಿಸಲು ಆಟಗಾರ ಕನಿಷ್ಠ ಇಂಟರ್​ನ್ಯಾಷನಲ್ ಮಾಸ್ಟರ್ ಆಗಿರಬೇಕು. ಹಾಗೂ ಮೂರು ಟೂರ್ನಿಗಳಲ್ಲಿ ಜಿಎಂ ನಾರ್ಮ್​​ಗಳನ್ನ ಗೆಲ್ಲಬೇಕಾಗುತ್ತದೆ. ಕುತೂಹಲವೆಂದರೆ ಅಮೆರಿಕದ ಅಭಿಮನ್ಯು ಮಿಥುನ್ ಕಳೆದ ವರ್ಷ ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಇಂಟರ್ ನ್ಯಾಷನಲ್ ಮಾಸ್ಟರ್ ಆಗಿ ಹೊರಹೊಮ್ಮಿದ್ದರು. ಭಾರತದ ಆರ್ ಪ್ರಗ್ನಾನಂದ ಅವರ ದಾಖಲೆಯನ್ನು ಮುರಿದಿದ್ದರು. ಈ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅವರು ಎರಡು ಜಿಎಂ ನಾರ್ಮ್ ಸಂಪಾದಿಸಿದ್ದರು. ಆದರೆ, ಕೊರೊನಾ ಕಾರಣದಿಂದ ಹೆಚ್ಚು ಟೂರ್ನಿಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಬುಡಾಪೆಸ್ಟ್​ನಲ್ಲಿ ಅವರಿಗೆ ಆ ಸುವರ್ಣಾವಕಾಶ ಸಿಕ್ಕಿತು. ಈ ಟೂರ್ನಿಯ 9 ಸುತ್ತುಗಳಲ್ಲಿ 7 ಅಂಕ ಗಳಿಸಿ ಜಿಎಂ ನಾರ್ಮ್ ಪಡೆದರು. ಸದ್ಯ ಒಟ್ಟಾರೆ ಚೆಸ್ ವೃತ್ತಿಜೀವನದಲ್ಲಿ ಅವರ ಇಲೋ ರೇಟಿಂಗ್ ಕೂಡ 2400ರ ಗಡಿ ದಾಟಿದೆ.

Published On - 2:47 pm, Thu, 1 July 21

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ