RCB: ಆರ್‌ಸಿಬಿಗೆ ನೂತನ ಸಾರಥಿ! ಕೊಹ್ಲಿ ತಂಡದ ಅಧ್ಯಕ್ಷರಾಗಿ ಪ್ರಥಮೇಶ್ ಮಿಶ್ರಾ ಆಯ್ಕೆ
RCB: . ಪ್ರಥಮೇಶ್ ಪ್ರಸ್ತುತ ಡಿಯಾಗೋ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿಯಾಗಿದ್ದು, ಜುಲೈ 1 ರಿಂದ ಈ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೆ ಮುನ್ನ ತನ್ನ ಫ್ರಾಂಚೈಸ್ಗೆ ಪ್ರಥಮೇಶ್ ಮಿಶ್ರಾ ಅವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಿಸಿದೆ. ಪ್ರಥಮೇಶ್ ಪ್ರಸ್ತುತ ಡಿಯಾಗೋ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿಯಾಗಿದ್ದು, ಜುಲೈ 1 ರಿಂದ ಈ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೂ ಆನಂದ್ ಕೃಪಲು ಅವರು ನಿರ್ವಹಿಸುತ್ತಿದ್ದ ಆರ್‌ಸಿಬಿ ಅಧ್ಯಕ್ಷರ ಪಾತ್ರವನ್ನು ಮಿಶ್ರಾ ವಹಿಸಿಕೊಳ್ಳಲ್ಲಿದ್ದಾರೆ. ಆರ್‌ಸಿಬಿಯನ್ನು ಮದ್ಯ ದೈತ್ಯ ಡಿಯಾಗೋ ಇಂಡಿಯಾದ ಅಂಗಸಂಸ್ಥೆಯಾದ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ.
ತಂಡದ ಬಗ್ಗೆ ಹೆಚ್ಚಿನ ಉತ್ಸಾಹವನ್ನು ಹೊಂದಿದ್ದೇವೆ ಅಭಿವೃದ್ಧಿಯ ಬಗ್ಗೆ ಪ್ರತಿಕ್ರಿಯಿಸಿದ ಪ್ರಥಮೇಶ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಿಯಾಗೋ ಇಂಡಿಯಾದ ಅವಿಭಾಜ್ಯ ಅಂಗವಾಗಿದೆ. ನಾವೆಲ್ಲರೂ ತಂಡದ ಬಗ್ಗೆ ಹೆಚ್ಚಿನ ಉತ್ಸಾಹವನ್ನು ಹೊಂದಿದ್ದೇವೆ. ವಿರಾಟ್ ಕೊಹ್ಲಿ, ಮೈಕ್ ಹೆಸನ್ ಮತ್ತು ಸೈಮನ್ ಕಟಿಚ್ ಅವರೊಂದಿಗೆ ತಂಡದ ಏಳಿಗೆಗೆ ನನ್ನ ಭುಜವನ್ನು ಸೇರಿಸುವ ಬಗ್ಗೆ ಮತ್ತು ನಾವು ಮೈದಾನದಲ್ಲಿ ಮತ್ತು ಹೊರಗೆ ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಧೈರ್ಯದಿಂದ ಪಾಲ್ಗೊಳ್ಳುವ ಬಗ್ಗೆ ನಾನು ಉತ್ಸುಕನಾಗಿದ್ದೇನೆ. ಆರ್‌ಸಿಬಿಗೆ ಆನಂದ್ ನೀಡಿದ ಅಪಾರ ಕೊಡುಗೆಗಾಗಿ ನಾನು ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಪ್ರಥಮೇಶ್ ಮಿಶ್ರಾ ಹೇಳಿದ್ದಾರೆ.
ಕೃಪಾಲು ಅವರ ಡಿಯಾಗೋ ಇಂಡಿಯಾದ ನಿರ್ವಹಣಾ ನಿರ್ದೇಶಕ ಮತ್ತು ಸಿಇಒ ಕರ್ತವ್ಯ ಜೂನ್ 30ಕ್ಕೆ ಕೊನೆಗೊಂಡಿದೆ. ಒಮ್ಮೆಯೂ ಐಪಿಎಲ್ ಟ್ರೋಫಿ ಗೆಲ್ಲದ ಅರ್‌ಸಿಬಿ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಟ್ರೋಫಿಯ ನಿರೀಕ್ಷೆ ಮೂಡಿಸಿದೆ.
ಆರ್‌ಸಿಬಿ ಬಗ್ಗೆ ಒಂದಿಷ್ಟು ಮಾಹಿತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಡಯಾಜಿಯೊ ಇಂಡಿಯಾದ ಅಂಗಸಂಸ್ಥೆಯಾದ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಒಡೆತನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುವ ಕರ್ನಾಟಕದ ಬೆಂಗಳೂರು ಮೂಲದ ಫ್ರ್ಯಾಂಚೈಸ್ ಕ್ರಿಕೆಟ್ ತಂಡವಾಗಿದೆ. ಮೂಲ ಎಂಟು ತಂಡಗಳಲ್ಲಿ ಒಂದಾದ ಈ ತಂಡವು ಐಪಿಎಲ್‌ನಲ್ಲಿ ಮೂರು ಬಾರಿ ಫೈನಲ್ನಲ್ಲಿ (2009 ರಲ್ಲಿ ಡೆಕ್ಕನ್ ಚಾರ್ಜರ್ಸ್, 2011 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು 2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ) ಕಾಣಿಸಿಕೊಂಡಿದ್ದು, ಮೂರು ಪಂದ್ಯಗಳಲ್ಲೂ ರನ್ನರ್ಸ್ ಅಪ್ ಸ್ಥಾನ ಗಳಿಸಿದ್ದಾರೆ. ಈ ತಂಡ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಟಿ -20 ತಂಡಗಳಲ್ಲಿ ಒಂದಾಗಿದೆ ಮತ್ತು ಪ್ರಚಂಡ ಅಂತರರಾಷ್ಟ್ರೀಯ ಸ್ಟಾರ್ ಆಟಗಾರರನ್ನು ಹೊಂದಿದೆ.