ಆಟಕ್ಕಿಂತ ನಮ್ಮ ಸ್ನೇಹ ದೊಡ್ಡದು! ಗೆಲುವಿನ ಬಳಿಕ ಕೊಹ್ಲಿಯನ್ನು ಅಪ್ಪಿಕೊಂಡಿದಕ್ಕೆ ಕಾರಣ ತಿಳಿಸಿದ ವಿಲಿಯಮ್ಸನ್
ವಿರಾಟ್ ಅವರೊಂದಿಗಿನ ಸ್ನೇಹ ಇತ್ತೀಚಿನದಲ್ಲ, ಅದು ತುಂಬಾ ಹಳೆಯದು. 19 ವರ್ಷದೊಳಗಿನವರ ವಿಶ್ವಕಪ್‌ನಿಂದ ನಾವು ಪರಸ್ಪರರ ವಿರುದ್ಧ ಆಡುತ್ತಿರುವುದರಿಂದ, ಮೈದಾನದಲ್ಲಿ ಕ್ರಿಕೆಟ್ ಪಂದ್ಯಕ್ಕಿಂತ ನಮ್ಮ ಸ್ನೇಹ ದೊಡ್ಡದಾಗಿದೆ ಎಂದರು.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ಸೋಲನುಭವಿಸಬೇಕಾಯಿತು. ಲಕ್ಷಾಂತರ ಭಾರತೀಯರು ಈ ಸೋಲಿನ ನಂತರ ಕೊಂಚ ಬೇಸರಗೊಂಡರು. ಆದರೆ ಅದರ ಜೊತೆಗೆ ಎದುರಾಳಿ ತಂಡದ ಗೆಲುವಿಗೂ ಸಂಭ್ರಮಿಸಿದರು. ಏಕೆಂದರೆ ವಿಶ್ವ ಕ್ರಿಕೆಟ್ನಲ್ಲಿ ಸಭ್ಯಸ್ಥರೆನಿಸಿಕೊಂಡಿರುವ ಕಿವೀಸ್ ಕ್ರಿಕೆಟಿಗರನ್ನು ಕಂಡರೆ ಎಲ್ಲರೂ ಇಷ್ಟಪಡುತ್ತಾರೆ. ಅವರ ಘನತೆಗೆ ತಕ್ಕಂತೆ ಗೆದ್ದ ಬಳಿಕ ಕಿವೀಸ್ ತಂಡದ ನಾಯಕ ಕೇನ್ ನಡೆದುಕೊಂಡರು. ಪಂದ್ಯದ ನಂತರ ಕೇನ್ ಮತ್ತು ವಿರಾಟ್ ತೋರಿಸಿದ ವರ್ತನೆ ಎಲ್ಲರ ಹೃದಯವನ್ನು ಗೆದ್ದಿತ್ತು. ಗೆಲುವಿನ ನಂತರ ಕೇನ್ ವಿರಾಟ್ ಅವರನ್ನು ತಬ್ಬಿಕೊಳ್ಳುವ ಫೋಟೋ ಸಖತ್ ವೈರಲ್ ಆಗಿತ್ತು. ಡಬ್ಲ್ಯುಟಿಸಿ ಫೈನಲ್ ನಂತರ ವಿರಾಟ್ ಕೊಹ್ಲಿಯನ್ನು ಏಕೆ ತಬ್ಬಿಕೊಂಡರು ಎಂದು ಕೇನ್ ವಿಲಿಯಮ್ಸನ್ ಈಗ ಬಹಿರಂಗಪಡಿಸಿದ್ದಾರೆ.
ಆಟಕ್ಕಿಂತ ನಮ್ಮ ಸ್ನೇಹ ದೊಡ್ಡದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯ ಮುಗಿದ ಒಂದು ವಾರದ ನಂತರ, ಗೆಲುವಿನ ನಂತರ ವಿರಾಟ್ ಅವರನ್ನು ತಬ್ಬಿಕೊಳ್ಳಲು ಕೆನ್ ವಿಲಿಯಮ್ಸನ್ ಒಂದು ಕಾರಣವನ್ನು ನೀಡಿದ್ದಾರೆ. ಕ್ರಿಕೆಟ್ಬಜ್ನೊಂದಿಗೆ ಮಾತನಾಡಿದ ಕೇನ್, ನಾವು ಗೆಲ್ಲುವುದು ಬಹಳ ವಿಶೇಷ ದಿನವಾಗಿತ್ತು. ಏಕೆಂದರೆ ಭಾರತದ ಎದುರು ಯಾವುದೇ ಪಂದ್ಯವನ್ನು ಗೆಲ್ಲುವುದು ಕಠಿಣ ಸವಾಲಾಗಿದೆ. ಭಾರತ ಕ್ರಿಕೆಟ್ನ ಎಲ್ಲಾ ಮಾದರಿಯಲ್ಲೂ ಸಾಟಿಯಿಲ್ಲದ ತಂಡವನ್ನು ಹೊಂದಿದೆ. ಹೀಗಾಗಿ ಭಾರತದ ವಿರುದ್ಧದ ಗೆಲುವು ನಮಗೆ ನಿರ್ಣಾಯಕವಾಗಿದೆ. ವಿರಾಟ್ ಅವರೊಂದಿಗಿನ ಸ್ನೇಹ ಇತ್ತೀಚಿನದಲ್ಲ, ಅದು ತುಂಬಾ ಹಳೆಯದು. 19 ವರ್ಷದೊಳಗಿನವರ ವಿಶ್ವಕಪ್‌ನಿಂದ ನಾವು ಪರಸ್ಪರರ ವಿರುದ್ಧ ಆಡುತ್ತಿರುವುದರಿಂದ, ಮೈದಾನದಲ್ಲಿ ಕ್ರಿಕೆಟ್ ಪಂದ್ಯಕ್ಕಿಂತ ನಮ್ಮ ಸ್ನೇಹ ದೊಡ್ಡದಾಗಿದೆ ಎಂದರು.
ಕೇನ್ ಏಕಾಂಗಿ ಹೋರಾಟ, ನ್ಯೂಜಿಲೆಂಡ್ಗೆ ವಿಜಯ ಪಂದ್ಯದುದ್ದಕ್ಕೂ ಭಾರತ ಮತ್ತು ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ನಗಳ ಸ್ಥಿರ ಪ್ರದರ್ಶನದ ಬಗ್ಗೆ ಮಾತನಾಡಿದರೆ, ಅದರ ಕೀರ್ತಿ ನ್ಯೂಜಿಲೆಂಡ್ ನಾಯಕ ಕೆನ್ ವಿಲಿಯಮ್ಸನ್ಗೆ ಸಲ್ಲುತ್ತದೆ. ಆರಂಭಿಕ ಜೋಡಿ ಡಾನನ್ ಕಾನ್ವೇ ಮತ್ತು ಟಾಮ್ ಲೆಥಮ್ ಔಟಾದ ನಂತರ ಕೇನ್ ಭಾರತ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ 49 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನ ಆರಂಭದಲ್ಲಿ ಎರಡೂ ಆರಂಭಿಕ ಆಟಗಾರರನ್ನು ಔಟ್ ಮಾಡಿದ ನಂತರ, ಕೇನ್ ರಾಸ್ ಟೇಲರ್ ಜೊತೆ ಕೈಜೋಡಿಸಿ ನ್ಯೂಜಿಲೆಂಡ್‌ನ ಗೆಲುವನ್ನು ಅರ್ಧ ಶತಕದೊಂದಿಗೆ ಖಾತ್ರಿ ಪಡಿಸಿದರು.