Junior Hockey World Cup 2021: ಬೆಲ್ಜಿಯಂ ಮಣಿಸಿ ಸೆಮಿ ಫೈನಲ್​ಗೆ ಎಂಟ್ರಿಕೊಟ್ಟ ಭಾರತ! ಮುಂದಿನ ಎದುರಾಳಿ ಜರ್ಮನಿ

Junior Hockey World Cup 2021: ಜೂನಿಯರ್ ಹಾಕಿ ವಿಶ್ವಕಪ್ 2021 ರ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ 1-0 ಗೋಲುಗಳಿಂದ ಬೆಲ್ಜಿಯಂ ತಂಡವನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

Junior Hockey World Cup 2021: ಬೆಲ್ಜಿಯಂ ಮಣಿಸಿ ಸೆಮಿ ಫೈನಲ್​ಗೆ ಎಂಟ್ರಿಕೊಟ್ಟ ಭಾರತ! ಮುಂದಿನ ಎದುರಾಳಿ ಜರ್ಮನಿ
ಭಾರತ ಹಾಕಿ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: Dec 02, 2021 | 2:53 PM

ಫ್ರಾನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಭಾರತೀಯ ಜೂನಿಯರ್ ಹಾಕಿ ತಂಡ, ಬುಧವಾರ ನಡೆದ ಜೂನಿಯರ್ ಹಾಕಿ ವಿಶ್ವಕಪ್ 2021 ರ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ 1-0 ಗೋಲುಗಳಿಂದ ಬೆಲ್ಜಿಯಂ ತಂಡವನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. 20ನೇ ನಿಮಿಷದಲ್ಲಿ ಶಾರದಾನಂದ್ ತಿವಾರಿ ಪೆನಾಲ್ಟಿ ಕಾರ್ನರ್ ಮೂಲಕ ಭಾರತಕ್ಕೆ ಏಕೈಕ ಗೋಲು ತಂದಿತ್ತರು. ಭಾರತದ ಗೆಲುವಿನಲ್ಲಿ, ಅದರ ಗೋಲ್‌ಕೀಪರ್ ಪವನ್ ಪ್ರಮುಖ ಪಾತ್ರವಹಿಸಿದಲ್ಲದೆ ಅವರು ಬೆಲ್ಜಿಯಂನ ಪೆನಾಲ್ಟಿ ಕಾರ್ನರ್‌ಗಳನ್ನು ವಿಫಲಗೊಳಿಸಿದರು.

ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಬೆಲ್ಜಿಯಂ ವಿರುದ್ಧ ಭಾರತದ ಅಜೇಯ ದಾಖಲೆ ಹಾಗೇ ಉಳಿದಿದೆ. ಅವರು ಐದನೇ ಬಾರಿಗೆ ಬೆಲ್ಜಿಯಂ ಅನ್ನು ಸೋಲಿಸಿದರು. ಕಳೆದ ಜೂನಿಯರ್ ವಿಶ್ವಕಪ್‌ನಲ್ಲಿ ಬೆಲ್ಜಿಯಂ ಅನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಹಾಲಿ ಚಾಂಪಿಯನ್ ಭಾರತವು ವಿಶ್ವ ಚಾಂಪಿಯನ್ ಆಗುವ ಹೆಗ್ಗಳಿಕೆಯನ್ನು ಸಾಧಿಸಿದೆ. ಇದೀಗ ಭಾರತ ತಂಡ ಮತ್ತೊಮ್ಮೆ ಬೆಲ್ಜಿಯಂ ತಂಡವನ್ನು ನಾಕೌಟ್ ಪಂದ್ಯದಲ್ಲಿ ಸೋಲಿಸಿದ್ದು, ಇದೀಗ ಶುಕ್ರವಾರ ಸೆಮಿಫೈನಲ್ ನಲ್ಲಿ ಜರ್ಮನಿಯನ್ನು ಎದುರಿಸಲಿದೆ. ಜರ್ಮನಿ ಕಳೆದ ಬಾರಿ ಕಂಚಿನ ಪದಕ ಗೆದ್ದು 6 ಬಾರಿ ಜೂನಿಯರ್ ವಿಶ್ವ ಚಾಂಪಿಯನ್ ಆಗಿದೆ.

ಬೆಲ್ಜಿಯಂಗೆ ಭಾರತದ ರಕ್ಷಣಾ ವಿಭಾಗವನ್ನು ಭೇದಿಸಲಾಗಲಿಲ್ಲ ಮೊದಲ ಕ್ವಾರ್ಟರ್‌ನಿಂದಲೇ ಬೆಲ್ಜಿಯಂ ಆಕ್ರಮಣಕಾರಿ ಆಟ ಆರಂಭಿಸಿತು. ಬೆಲ್ಜಿಯಂ ಆಟಗಾರರು ಭಾರತದ ರಕ್ಷಣೆಯನ್ನು ಭೇದಿಸಲು ಪ್ರಯತ್ನಿಸಿದರು ಆದರೆ ಟೀಮ್ ಇಂಡಿಯಾದ ಮ್ಯಾನ್ ಟು ಮ್ಯಾನ್ ಮಾರ್ಕಿಂಗ್ ಎದುರಾಳಿಯ ಪ್ರತಿ ಪ್ರಯತ್ನವನ್ನು ವಿಫಲಗೊಳಿಸಿತು. 13ನೇ ನಿಮಿಷದಲ್ಲಿ ಬೆಲ್ಜಿಯಂ ಗೋಲ್‌ ಪೋಸ್ಟ್‌ಗೆ ಸಮೀಪದಿಂದ ದಾಳಿ ಮಾಡಿದರೂ ಪ್ರಶಾಂತ್ ಚೌಹಾಣ್ ಅವರ ಪ್ರಯತ್ನವನ್ನು ವಿಫಲಗೊಳಿಸಿದರು. ಮೊದಲ ಕ್ವಾರ್ಟರ್‌ನ ಆರಂಭಿಕ ನಿಮಿಷಗಳಲ್ಲಿ ಭಾರತಕ್ಕೂ ಗೋಲು ಗಳಿಸುವ ಅವಕಾಶ ಸಿಕ್ಕಿತು. ಉತ್ತಮ್ ಸಿಂಗ್ ಅವರು ಉತ್ತಮ ಅವಕಾಶವನ್ನು ಸೃಷ್ಟಿಸಿದರು ಆದರೆ ಅವರು ಬೆಲ್ಜಿಯಂ ಗೋಲ್ಕೀಪರ್ ಬೋರಿಸ್ ಅವರನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ.

ಆದರೆ ಎರಡನೇ ಕ್ವಾರ್ಟರ್‌ನ ಆರನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಸಿಕ್ಕಿತು ಮತ್ತು ಶರಣಾನಂದ ತಿವಾರಿ ಅದನ್ನು ಗೋಲಾಗಿ ಪರಿವರ್ತಿಸಿದರು. 26ನೇ ನಿಮಿಷದಲ್ಲಿ ಬೆಲ್ಜಿಯಂಗೆ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು ಆದರೆ ಅವರ ಪ್ರಯತ್ನ ಮತ್ತೆ ವಿಫಲವಾಯಿತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತವು ಚೆಂಡನ್ನು ಹೆಚ್ಚಾಗಿ ತಮ್ಮ ಬಳಿಯೇ ಇಟ್ಟುಕೊಂಡಿದ್ದರಿಂದ ಬೆಲ್ಜಿಯಂಗೆ ಗೋಲು ಗಳಿಸುವ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ನಾಲ್ಕನೇ ಕ್ವಾರ್ಟರ್‌ನಲ್ಲಿ ಬೆಲ್ಜಿಯಂ ಗೋಲು ಗಳಿಸಲು ಅತ್ಯುತ್ತಮ ಪ್ರಯತ್ನ ನಡೆಸಿತು. 50ನೇ ನಿಮಿಷದಲ್ಲಿ ಭಾರತದ ಗೋಲ್ ಕೀಪರ್ ಪವನ್ ತಮ್ಮ ಬಲಕ್ಕೆ ಡೈವ್ ಮಾಡಿ ಬೆಲ್ಜಿಯಂ ವಿರುದ್ಧ ರೋಮನ್ ಹೊಡೆದ ಹೊಡೆತವನ್ನು ತಡೆದರು. 52ನೇ ನಿಮಿಷದಲ್ಲಿ ಬೆಲ್ಜಿಯಂಗೆ ಮತ್ತೊಮ್ಮೆ ಪೆನಾಲ್ಟಿ ಕಾರ್ನರ್ ಸಿಕ್ಕಿತು ಆದರೆ ಅದು ಕೂಡ ಭಾರತದ ರಕ್ಷಣಾ ಪಡೆಯಿಂದ ವಿಫಲವಾಯಿತು. ಆಟ ಮುಗಿಯುವ ಎರಡು ನಿಮಿಷಗಳ ಮೊದಲು, ಬೆಲ್ಜಿಯಂ ಮತ್ತೊಮ್ಮೆ ಪೆನಾಲ್ಟಿ ಕಾರ್ನರ್ ಪಡೆದರು ಆದರೆ ಗೋಲ್ಕೀಪರ್ ಪವನ್ ಅದನ್ನ ತಡೆದರು. ಈ ಮೂಲಕ ಭಾರತ ಅತ್ಯುತ್ತಮ ರಕ್ಷಣಾ ಪ್ರದರ್ಶನ ನೀಡುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ