ಭಾರತ ಖೇಲೋ ಫುಟ್ಬಾಲ್ ಸೀಸನ್ 3ಗೆ ಅದ್ಧೂರಿ ತೆರೆ; ಕ್ಲಬ್‌, ಅಕಾಡೆಮಿಗಳ ಕೈಯಲ್ಲಿ ಯುವ ಪಟುಗಳ ಭವಿಷ್ಯ

India Khelo Football S3 Finals: ಫೆಬ್ರವರಿ 4 ರಂದು ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರತಿಭಾವಂತ ಆಟಗಾರರನ್ನು ಆಯ್ಕೆ ಮಾಡಲು ದೇಶದ 20 ಕ್ಕೂ ಅಧಿಕ ಫುಟ್ಬಾಲ್ ಕ್ಲಬ್​ಗಳು ಉಪಸ್ಥಿತವಿದ್ದವು. ಅಕಾಡೆಮಿಗಳು ಮತ್ತು ಕ್ಲಬ್‌ಗಳು ಶಾರ್ಟ್‌ಲಿಸ್ಟ್ ಮಾಡಿದ ಆಟಗಾರರ ಪಟ್ಟಿಯನ್ನು ಭಾರತ ಫುಟ್‌ಬಾಲ್‌ಗೆ ಸಲ್ಲಿಸಲಾಗುವುದು.

ಭಾರತ ಖೇಲೋ ಫುಟ್ಬಾಲ್ ಸೀಸನ್ 3ಗೆ ಅದ್ಧೂರಿ ತೆರೆ; ಕ್ಲಬ್‌, ಅಕಾಡೆಮಿಗಳ ಕೈಯಲ್ಲಿ ಯುವ ಪಟುಗಳ ಭವಿಷ್ಯ
ಭಾರತ ಖೇಲೋ ಫುಟ್ಬಾಲ್ ಸೀಸನ್3
Follow us
|

Updated on:Feb 10, 2024 | 12:05 AM

ಭಾರತವನ್ನು ಒಂದು ಕ್ರಿಕೆಟ್ (Cricket) ಧರ್ಮ ದೇಶ ಎಂದು ಕರೆಯಲ್ಲಾಗುತ್ತದೆ. ಏಕೆಂದರೆ ಈ ದೇಶದಲ್ಲಿ ಕ್ರಿಕೆಟ್​ಗೆ ಸಿಗುವ ಮನ್ನಣೆ ವಿಶ್ವದ ಇನ್ನ್ಯಾವುದೇ ದೇಶದಲ್ಲಿ ಇಷ್ಟು ಪ್ರಮಾಣದಲ್ಲಿ ಸಿಗುವುದಿಲ್ಲ. ಹೀಗಾಗಿಯೇ ಭಾರತದಲ್ಲಿ ಕ್ರಿಕೆಟ್​ ಜನಪ್ರಿಯ ಕ್ರೀಡೆಯಾಗಿ ಬೆಳೆದಿದೆ. ಭಾರತದಲ್ಲಿ ಕ್ರಿಕೆಟ್ ಬಿಟ್ಟರೆ ಉಳಿದ ಕ್ರೀಡೆಗಳಿಗೆ ಅಷ್ಟಾಗಿ ಮನ್ನಣೆ ಸಿಗುತ್ತಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ಫುಟ್ಬಾಲ್ (Football) ಕೂಡ ಭಾರತೀಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಭಾರತದಲ್ಲೂ ಯುವ ಪ್ರತಿಭಾವಂತ ಫುಟ್ಬಾಲ್ ಪಟುಗಳು ಬೆಳಕಿಗೆ ಬರುತ್ತಿದ್ದಾರೆ. ಅಂತಹ ಯುವ ಪ್ರತಿಭೆಗಳನ್ನು ಹುಡುಕಿ ಆರಿಸುವ ಕೆಲಸವನ್ನು ಭಾರತ ಖೇಲೋ ಫುಟ್‌ಬಾಲ್​ನಂತಹ (India Football Khelo) ಕಾರ್ಯಕ್ರಮಗಳ ಆಯೋಜನೆಯ ಮೂಲಕ ಮಾಡಲಾಗುತ್ತಿದೆ.

ಇತ್ತೀಚೆಗಷ್ಟೇ ಭಾರತ ಖೇಲೋ ಫುಟ್‌ಬಾಲ್ ಸೀಸನ್ ಮೂರರ ಗ್ರ್ಯಾಂಡ್ ಫಿನಾಲೆ ಫೆಬ್ರವರಿ 4 ರಂದು ಅಹಮದಾಬಾದ್‌ನ ಇಕೆಎ ಅರೆನಾದಲ್ಲಿ ನಡೆಯಿತು. ಕಳೆದ ಎಂಟು ತಿಂಗಳಿನಿಂದ ಭಾರತ ಮತ್ತು ಯುಎಇಯ ಸುಮಾರು 50 ನಗರಗಳಲ್ಲಿ ಆಟಗಾರರ ಪ್ರಾಯೋಗಿಕ ಸ್ಪರ್ಧೆಗಳನ್ನು ನಡೆಸಲಾಯಿತು. ಇದರಲ್ಲಿ ಸುಮಾರು 10,000 ಆಟಗಾರರು ಭಾಗವಹಿಸಿದ್ದರು. ಇದರಲ್ಲಿ 13 ರಿಂದ 17 ವರ್ಷದೊಳಗಿನ ಒಟ್ಟು 150 ಕ್ರೀಡಾಪಟುಗಳು ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದರು.

ಇನ್ನು ಫೆಬ್ರವರಿ 4 ರಂದು ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರತಿಭಾವಂತ ಆಟಗಾರರನ್ನು ಆಯ್ಕೆ ಮಾಡಲು ದೇಶದ 20 ಕ್ಕೂ ಅಧಿಕ ಫುಟ್ಬಾಲ್ ಕ್ಲಬ್​ಗಳು ಉಪಸ್ಥಿತವಿದ್ದವು. ಅವುಗಳಲ್ಲಿ ಜೆಮ್‌ಶೆಡ್‌ಪುರ ಎಫ್‌ಸಿ, ಕೇರಳ ಬ್ಲಾಸ್ಟರ್ಸ್, ಗೋವಾ ಎಫ್‌ಸಿ, ಮುಂಬೈ ಸಿಟಿ ಎಫ್‌ಸಿ, ಚೆನ್ನೈಯಿನ್ ಎಫ್‌ಸಿ ಕ್ಲಬ್​ಗಳು ಭಾಗವಹಿಸಿದ್ದವು. ಹಾಗೆಯೇ ಐ ಲೀಗ್ ಕ್ಲಬ್‌ಗಳಾದ ಗೋಕುಲಂ ಕೇರಳ, ಡೆಲ್ಲಿ ಎಫ್‌ಸಿ, ಬರೋಡಾ ಎಫ್‌ಎಆರ್‌ಎ, ಮಹಾರಾಷ್ಟ್ರ ಆರೆಂಜ್ ಎಫ್‌ಸಿ, ಯುನೈಟೆಡ್ ಎಸ್‌ಸಿ ಕೋಲ್ಕತ್ತಾ, ಮಿಲ್ಲತ್ ಎಫ್‌ಸಿ, ಎಫ್‌ಸಿ ಮದ್ರಾಸ್, ಜಿಂಕ್ ಎಫ್‌ಎ, ಆಲ್ಫಾ ಸ್ಪೋರ್ಟ್ಸ್ ಅಕಾಡೆಮಿ, ಆರ್ಡರ್ ಎಫ್‌ಎ, ವಿಶಾಲ್ ಬಿಹಾರ್ ಯುನೈಟೆಡ್, ಸ್ಪೋರ್ಟೊ, ನಾರ್ದರ್ನ್ ಯುನೈಟೆಡ್ ಮುಂತಾದ ಅಕಾಡೆಮಿಗಳು ಭಾಗವಹಿಸಿ ಆಟಗಾರರನ್ನು ಪರೀಕ್ಷಿಸಿದವು.

ಇದರಲ್ಲಿ ಜಿಂಕ್ ಫುಟ್ಬಾಲ್ ಅಕಾಡೆಮಿಯು 23 ಆಟಗಾರರನ್ನು ಆಯ್ಕೆ ಮಾಡಿದ್ದರೆ, ಯುನೈಟೆಡ್ ಎಸ್‌ಸಿ 7, ARA ಎಫ್‌ಸಿ 6, ಗೋವಾ ಎಫ್‌ಸಿ 1 ಮತ್ತು ಮದ್ರಾಸ್ ಎಫ್‌ಸಿ 1 ಆಟಗಾರನನ್ನು ಆಯ್ಕೆ ಮಾಡಿದೆ. ಇನ್ನೂ ಇತರ ಅಕಾಡೆಮಿಗಳು ಮತ್ತು ಕ್ಲಬ್‌ಗಳು ತಮ್ಮ ಶಾರ್ಟ್‌ಲಿಸ್ಟ್ ಮಾಡಿದ ಆಟಗಾರರ ಪಟ್ಟಿಯನ್ನು ಇನ್ನಷ್ಟೇ ಹಸ್ತಾಂತರಿಸಬೇಕಿದೆ. ಆ ನಂತರ ಅರ್ಹ ಆಟಗಾರರ ಪಟ್ಟಿಯನ್ನು ಭಾರತ ಫುಟ್‌ಬಾಲ್‌ಗೆ ಸಲ್ಲಿಸಲಾಗುವುದು. ಆ ಬಳಿಕ ಆಯ್ಕೆಯಾದ ಆಟಗಾರರ ಮತ್ತಷ್ಟು ಪ್ರಗತಿಗೆ ಪ್ರಯತ್ನಿಸಲಾಗುವುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:03 am, Sat, 10 February 24

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್