ಮೆಲ್ಬೋರ್ನ್: ಭಾರತ (ಆಸ್ಟ್ರೇಲಿಯಾ) ವಿರುದ್ಧದ ಮೆಲ್ಬೋರ್ನ್ ಟೆಸ್ಟ್ ಪಂದ್ಯಕ್ಕೂ ಮೊದಲು ಆಸ್ಟ್ರೇಲಿಯಾ ತಂಡ ದೊಡ್ಡ ಹಿನ್ನಡೆ ಅನುಭವಿಸಿದ್ದು, ತಂಡದ ಅನುಭವಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮತ್ತು ವೇಗದ ಬೌಲರ್ ಸೀನ್ ಅಬಾಟ್ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ.
ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಗಾಯದಿಂದಾಗಿ ಇಬ್ಬರೂ ಆಟಗಾರರು ಪಂದ್ಯದಿಂದ ಹೊರಗುಳಿದಿದ್ದರು. ಚಿಕಿತ್ಸೆಯ ನಂತರ ಗುಣಮುಖರಾಗಿದ್ದ ಇಬ್ಬರು ಆಟಗಾರರು ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಭರವಸೆ ಮೂಡಿಸಿದ್ದರು. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಡಿಸೆಂಬರ್ 23 ಬುಧವಾರದಂದು ಈ ಎರಡೂ ಆಟಗಾರರು ಮೆಲ್ಬೋರ್ನ್ ಟೆಸ್ಟ್ನಿಂದ ಹೊರಗುಳಿದಿದ್ದಾರೆ ಎಂದು ಮಾಹಿತಿ ನೀಡಿದೆ.
ಕ್ರಿಕೆಟ್ ಆಸ್ಟ್ರೇಲಿಯಾದ ಈ ನಿಲುವಿಗೆ ಪ್ರಮುಖ ಕಾರಣವೆಂದರೆ ಈ ಇಬ್ಬರೂ ಆಟಗಾರರು ಕೆಲವು ದಿನಗಳ ಹಿಂದೆ ಸಿಡ್ನಿಯಲ್ಲಿದ್ದರು. ಹಾಗಾಗಿ ಸಿಡ್ನಿಯಲ್ಲಿ ಈಗಾಗಲೇ ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾದ ಬಳಿಕ ಭೀತಿ ಉಂಟಾಗಿದೆ. ಈ ಕಾರಣದಿಂದಾಗಿ ಡೇವಿಡ್ ವಾರ್ನರ್ ಮತ್ತು ವೇಗದ ಬೌಲರ್ ಸೀನ್ ಅಬಾಟ್ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಮರ್ಥನೆ ನೀಡಿದೆ.
ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಇದರಿಂದಾಗಿ ಅವರು ಕೊನೆಯ ಏಕದಿನ ಪಂದ್ಯ ಹಾಗೂ ಟಿ 20 ಸರಣಿ ಮತ್ತು ಮೊದಲ ಟೆಸ್ಟ್ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ ಭಾರತ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ವೇಗದ ಬೌಲರ್ ಶಾನ್ ಅಬಾಟ್ ಗಾಯಗೊಂಡಿದ್ದರು.
David Warner and Sean Abbott will rejoin our Aussie men's squad ahead of the third Vodafone Test against India, after being ruled out of the second Vodafone Test in Melbourne #AUSvIND
Full statement: https://t.co/avo8Xck03N pic.twitter.com/2Yb5p72022
— Cricket Australia (@CricketAus) December 23, 2020