ಪಿಂಕ್​ ಬಾಲ್​ ಕಂಡ್ರೆ ಕೊರೊನಾ ಬಾಲ್​ ಕಂಡಂತೆ ಹೆದರುವುದೇಕೆ ಟೀಂ ಇಂಡಿಯಾ ಆಟಗಾರರು?

ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​ನಲ್ಲಿ ಅತೀವ ಕಳಪೆ ಪ್ರದರ್ಶನ ನೀಡಿತು. ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 36 ರನ್​ ಗಳಿಕೆ ಮಾಡಿತು. ಕೆಲ ಕಾರ್ಟೂನ್​ ಮಂದಿ ಟೀಂ ಇಂಡಿಯಾ ಸೋಲನ್ನು ಭಿನ್ನವಾಗಿ ಚಿತ್ರಿಸಿದ್ದಾರೆ.

ಪಿಂಕ್​ ಬಾಲ್​ ಕಂಡ್ರೆ ಕೊರೊನಾ ಬಾಲ್​ ಕಂಡಂತೆ ಹೆದರುವುದೇಕೆ ಟೀಂ ಇಂಡಿಯಾ ಆಟಗಾರರು?
ಕಾರ್ಟೂನ್​
Follow us
ರಾಜೇಶ್ ದುಗ್ಗುಮನೆ
|

Updated on:Dec 20, 2020 | 4:15 PM

ಅಡಿಲೇಡ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಕೇವಲ 36 ರನ್ ಕಲೆ ಹಾಕುವ ಮೂಲಕ ಭಾರತದ ಕ್ರಿಕೆಟ್​ ಇತಿಹಾಸದಲ್ಲೇ ಅತಿ ಕಡಿಮೆ ಸ್ಕೋರ್​ ಗಳಿಸಿದ ಕುಖ್ಯಾತಿ ಪಾತ್ರವಾಯಿತು. ವಿರಾಟ್​ ಕೊಹ್ಲಿ ನಾಯಕತ್ವದ ಬಗ್ಗೆ ಅನೇಕರು ಅಪಸ್ವರ ತೆಗೆದರೆ, ಇನ್ನೂ ಕೆಲವರು ಒಟ್ಟಾರಿ ಟೀಂ ಇಂಡಿಯಾವನ್ನು ಶಪಿಸಿದ್ದಾರೆ. ಈ ಮಧ್ಯೆ ಟ್ವಿಟರ್​ನಲ್ಲೂ ಈ ಬಗ್ಗೆ ಚರ್ಚೆ ಜೋರಾಗಿದೆ. ಹೀಗಿರುವಾಗ ಕೆಲ ಕಾರ್ಟೂನ್​ ಮಂದಿ ಟೀಂ ಇಂಡಿಯಾ ಸೋಲನ್ನು ಭಿನ್ನವಾಗಿ ಚಿತ್ರಿಸಿದ್ದಾರೆ.

ಮೊದಲನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ನಲ್ಲಿ ಸಾಧಾರಣ ಹಾಗೂ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​ನಲ್ಲಿ ಅತೀವ ಕಳಪೆ ಪ್ರದರ್ಶನ ನೀಡಿತು. ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 36 ರನ್​ ಗಳಿಕೆ ಮಾಡಿತು. ಯಾವೊಬ್ಬ ಬ್ಯಾಟ್ಸ್​​ಮನ್​ ಕೂಡ ಒಂದಕಿ ದಾಟಿಲ್ಲ! ಎರಡನೇ ಇನ್ನಿಂಗ್ಸ್​ನಲ್ಲಿ ಅತಿ ಹೆಚ್ಚು ರನ್​ ಗಳಿಕೆ ಮಾಡಿದ್ದು ಮಯಾಂಕ್​ ಅಗರ್​ವಾಲ್​. ಅವರು ಬಾರಿಸಿದ್ದು 9 ರನ್​ ಮಾತ್ರ!

ಮೊದಲ ಇನ್ನಿಂಗ್ಸ್​ನಲ್ಲಿ 244 ರನ್​ ಬಾರಿಸಿದ್ದ ಭಾರತ, ಆಸ್ಟ್ರೇಲಿಯಾವನ್ನು ಕೇವಲ 191ರನ್​ಗಳಿಗೆ ಕಟ್ಟಿ ಹಾಕಿತ್ತು. ಈ ಮೂಲಕ 53 ರನ್​ಗಳ ಲೀಡ್​ ಕಾಯ್ದುಕೊಂಡಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ ಓಪನರ್​ಗಳಾಗಿ ಇಳಿದ ಪೃಥ್ವಿ ಶಾ ಹಾಗೂ ಮಯಾಂಕ್​ ಅನುಕ್ರಮವಾಗಿ ನಾಲ್ಕು ಹಾಗೂ ಒಂಭತ್ತು ರನ್​ ಗಳಿಸಿದರು. ಶಾ ಔಟ್​ ಆದ ನಂತರ ಬಂದ ಬೂಮ್ರಾ ಎರಡು ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. ಪೂಜಾರ ಡಕ್​ಔಟ್​ ಆದರೆ, ನಾಯಕ ಕೊಹ್ಲಿ ನಾಲ್ಕು ರನ್​ ಬಾರಿಸಿ ಪೆವಿಲಿಯನ್​ ಸೇರಿದರು. ಉಪನಾಯಕ ರಹಾನೆ ಶೂನ್ಯ ಸುತ್ತಿದರೆ, ಹನುಮ ವಿಹಾರಿ 8 ರನ್​ ಗಳಿಸಲು ಪರದಾಡಿದರು. ಅಶ್ವಿನ್​ ಸೊನ್ನೆ ಸುತ್ತಿದರು. ಕೊನೆಯ ವಿಕೆಟ್​ನಲ್ಲಿ ಆಡುತ್ತಿದ್ದ ಉಮೇಶ್​ ನಾಲ್ಕು ರನ್​ ಗಳಿಸಿದರು. 1 ರನ್​ ಬಾರಿಸಿದ್ದ ಶಮಿ ಗಾಯಗೊಂಡು ಪೆವಿಲಿಯನ್​ ಸೇರಿದರು. ಕೊನೆಗೆ ಭಾರತ 36 ರನ್​ ಗಳಿಸಲಷ್ಟೇ ಶಕ್ತವಾಯಿತು.

ಈ ಬಗ್ಗೆ ಕಾರ್ಟೂನ್​ ಬಿಡಿಸಿರುವ ವ್ಯಂಗ್ಯ ಚಿತ್ರಕಾರ ವಿವೇಕ ಜಿ. ಸಿದ್ದಾಪುರ​, ಇದು ಪಿಂಕ್​ ಬಾಲ್​ ಅಲ್ಲ ಕೊರೊನಾ ಬಾಲ್​ ಎಂದು ವರ್ಣಿಸಿದ್ದಾರೆ. ಅವರು ಹೀಗೆ ಹೇಳೋಕೆ ಕಾರಣ ಕೂಡ ಇದೆ. ಕೊರೊನಾ ಎಂದರೆ ಸಾಕು ಎಲ್ಲರೂ ಮಾರುದ್ದ ಹೋಗಿ ನಿಲ್ಲುತ್ತಾರೆ. ಅದೇ ರೀತಿ, ನಿನ್ನೆಯ ಪಂದ್ಯದಲ್ಲಿ ಎಲ್ಲರೂ ಬೇಗ ಬೇಗ ಔಟ್​ ಆದರು. ಎಲ್ಲ ಆಟಗಾರರು ಬಾಲ್​ಅನ್ನು ಕೊರೊನಾ ಬಾಲ್​ ಅಂತೆ ನೋಡಿದ್ದರು! ಇದಕ್ಕಾಗಿಯೇ ಅದನ್ನು ಮುಟ್ಟುವ ಪ್ರಯತ್ನ ಮಾಡದೆ ಔಟ್​ ಆದರು ಎಂದು ವ್ಯಂಗ್ಯ ಚಿತ್ರದ ಮೂಲಕ ಹೇಳಿದ್ದಾರೆ. ಈ ವ್ಯಂಗ್ಯ ಚಿತ್ರ  ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

India vs Australia 2020: ಈ ಸೋಲು ಸುಲಭಕ್ಕೆ ಮರೆತು ಹೋಗುವಂಥದಲ್ಲ!

Published On - 2:59 pm, Sun, 20 December 20

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ