India vs Australia Test Cricket 2020 | ಬಾಕ್ಸಿಂಗ್ ಡೇ ಟೆಸ್ಟ್; ಭಾರತದ ಮಾರಕ ದಾಳಿಗೆ ಪೆವಿಲಿಯನ್ ಪರೇಡ್ ನಡೆಸುತ್ತಿರುವ ಆಸಿಸ್ ದಾಂಡಿಗರು
70 ಓವರ್ಗಳನ್ನ ಎಸೆದಿರುವ ಭಾರತೀಯ ಬೌಲರ್ಗಳು, ಆಸ್ಟ್ರೇಲಿಯಾದ ಪ್ರಮುಖ 8 ವಿಕೆಟ್ಗಳನ್ನ ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ. ಅದರಲ್ಲಿ ಯಾರ್ಕರ್ ಕಿಂಗ್ ಬುಮ್ರಾ ಹಾಗೂ ಕೆರಮ್ ಸ್ಪಿನ್ನರ್ ಅಶ್ವಿನ್ ತಲಾ 3 ವಿಕೆಟ್ ಪಡೆದು ಮೈದಾನದಲ್ಲಿ ಮಿಂಚು ಹರಿಸಿದ್ದಾರೆ.
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ ಅಂಗಳದಲ್ಲಿ ನಡೆಯುತ್ತಿದ್ದು, ಇತ್ತೀಚಿನ ವರದಿಯ ಪ್ರಕಾರ ಆಸ್ಟ್ರೇಲಿಯಾ ತಂಡ ಭಾರತದ ಮಾರಕ ದಾಳಿಯಿಂದಾಗಿ ಕೇವಲ 177 ರನ್ಗಳಿಗೆ ಪ್ರಮುಖ 8 ವಿಕೆಟ್ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಕಳೆದ ಪಂದ್ಯದಲ್ಲಿನ ಸೋಲನ್ನ ಬದಿಗೊತ್ತಿ ತನ್ನ ಆರ್ಭಟ ಮುಂದುವರೆಸಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾದೆದುರು ತಮ್ಮ ಚಾಂಪಿಯನ್ ಆಟವನ್ನ ಪ್ರದರ್ಶಿಸುತ್ತಿದೆ. ಭಾರತೀಯ ವೇಗಿಗಳ ದಾಳಿಗೆ ಸಿಲುಕಿರುವ ಆಸಿಸ್ ದಾಂಡಿಗರು ತರಗೆಲೆಗಳಂತೆ ತಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೆಡ್ ನಡೆಸುತ್ತಿದ್ದಾರೆ. ಭಾರತೀಯ ಬೌಲರ್ಗಳ ಮಾರಕ ದಾಳಿಗೆ ಬೆದರಿದ ಆಸಿಸ್ ಬ್ಯಾಟ್ಸ್ಮನ್ಗಳು ಯಾವುದೇ ರೀತಿಯ ಪ್ರತಿರೋಧ ತೋರಲು ಸಾಧ್ಯವಾಗುತ್ತಿಲ್ಲ.
ಈಗಿನ ಮಾಹಿತಿಯ ಪ್ರಕಾರ 70 ಓವರ್ಗಳನ್ನ ಎಸೆದಿರುವ ಭಾರತೀಯ ಬೌಲರ್ಗಳು, ಆಸ್ಟ್ರೇಲಿಯಾದ ಪ್ರಮುಖ 8 ವಿಕೆಟ್ಗಳನ್ನ ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ. ಅದರಲ್ಲಿ ಯಾರ್ಕರ್ ಕಿಂಗ್ ಬುಮ್ರಾ ಹಾಗೂ ಕೆರಮ್ ಸ್ಪಿನ್ನರ್ ಅಶ್ವಿನ್ ತಲಾ 3 ವಿಕೆಟ್ ಪಡೆದು ಮೈದಾನದಲ್ಲಿ ಮಿಂಚು ಹರಿಸಿದ್ದಾರೆ. ಇನ್ನ ಪಾದಾರ್ಪಣೆಯ ಪಂದ್ಯದಲ್ಲಿಯೇ ಭರವಸೆ ಮೂಡಿಸಿರುವ ವೇಗಿ ಸಿರಾಜ್ 2 ವಿಕೆಟ್ ತೆಗೆಯುವುದರ ಮೂಲಕ ತಂಡಕ್ಕೆ ನೆರವಾಗಿದ್ದಾರೆ.
Published On - 11:35 am, Sat, 26 December 20