ಬಾಕ್ಸಿಂಗ್​ ಡೇ ಟೆಸ್ಟ್​; 2ನೇ ದಿನದಾಟದಲ್ಲಿ ಶತಕ ಬಾರಿಸಿ ಮಿಂಚಿದ ರಹಾನೆ, ಜಡೇಜಾ ಜೊತೆ ಶತಕದ ಜೊತೆಯಾಟ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 27, 2020 | 12:21 PM

ಆಲ್‌ರೌಂಡರ್ ಜಡೇಜಾ ಸೇರಿ ಉತ್ತಮ ಇನ್ನಿಂಗ್ಸ್ ಕಟ್ಟಿರುವ ನಾಯಕ ರಹಾನೆ ಅಜೇಯ ಶತಕ ಗಳಿಸಿದ್ದಾರೆ. ರಹಾನೆ ಅವರ ಈ ಶತಕದಲ್ಲಿ 11 ಬೌಂಡರಿಗಳು ಸೇರಿವೆ. ಇನ್ನೂ ಮೈದಾನದಲ್ಲಿರುವ ನಾಯಕ ರಹಾನೆ 196 ಬಾಲ್​​ಗಳನ್ನ ಎದುರಿಸುವ ಮೂಲಕ 100 ರನ್​ ಬಾರಿಸಿದ್ದಾರೆ.

ಬಾಕ್ಸಿಂಗ್​ ಡೇ ಟೆಸ್ಟ್​; 2ನೇ ದಿನದಾಟದಲ್ಲಿ ಶತಕ ಬಾರಿಸಿ ಮಿಂಚಿದ ರಹಾನೆ, ಜಡೇಜಾ ಜೊತೆ ಶತಕದ ಜೊತೆಯಾಟ
ಶತಕದ ಸಂಭ್ರಮದಲ್ಲಿ ರಹಾನೆ
Follow us on

ಮೆಲ್ಬೋರ್ನ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಟೆಸ್ಟ್ ಸರಣಿಯ ಎರಡನೇ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದ್ದು ಪ್ರಮುಖ 5 ವಿಕೆಟ್​ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ ತಂಡಕ್ಕೆ ನಾಯಕ ಅಜಿಂಕ್ಯ ರಹಾನೆಯವರ ಅಜೇಯ ಶತಕ ನೇರವಾಗಿದೆ.

ಆಲ್‌ರೌಂಡರ್ ರವೀಂದ್ರ ಜಡೇಜಾ ಸೇರಿ ಉತ್ತಮ ಇನ್ನಿಂಗ್ಸ್ ಕಟ್ಟಿರುವ ನಾಯಕ ರಹಾನೆ ಅಜೇಯ ಶತಕ ಗಳಿಸಿದ್ದಾರೆ. ರಹಾನೆ ಅವರ ಈ ಶತಕದಲ್ಲಿ 11 ಬೌಂಡರಿಗಳು ಸೇರಿವೆ. ಇನ್ನೂ ಮೈದಾನದಲ್ಲಿರುವ ನಾಯಕ ರಹಾನೆ 196 ಬಾಲ್​​ಗಳನ್ನ ಎದುರಿಸುವ ಮೂಲಕ 100 ರನ್​ ಬಾರಿಸಿದ್ದಾರೆ. ಈ ಜೋಡಿಗಳ ಉತ್ತಮ ಜೊತೆಯಾಟದಿಂದಾಗಿ ಟೀಂ ಇಂಡಿಯಾ 5 ವಿಕೆಟ್​ ಕಳೆದುಕೊಂಡು 295 ರನ್​ ಗಳಿಸಿದೆ. ಅಲ್ಲದೆ ಈ ಜೋಡಿಗಳ ಜೊತೆಯಾಟದಿಂದಾಗಿ ನೂರು ರನ್​ ಬಂದಿವೆ.