India vs Australia Test Cricket 2020: ಕಾಂಗರೂಗಳಿಗೆ ಬಾಕ್ಸಿಂಗ್​ ಡೆ ‘ಪಂಚ್’.. ಟೀಂ ಇಂಡಿಯಾಗೆ ಸಿಗುತ್ತಾ ಗೆಲುವು?

ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟ್​ ಬೀಸಲು ಆರಂಭಿಸಿದ ಆಸ್ಟ್ರೇಲಿಯಾಗೆ ಮತ್ತೆ ಭಾರತೀಯ ಬೌಲರ್​ಗಳು ಶಾಕ್​ ನೀಡಿದ್ದಾರೆ. ಕೇವಲ 133 ರನ್​ಗಳಿಗೆ ಆಸ್ಟ್ರೇಲಿಯಾ 6 ವಿಕೆಟ್​ ಕಳೆದುಕೊಂಡಿದೆ. ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಎರಡು ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ.

India vs Australia Test Cricket 2020: ಕಾಂಗರೂಗಳಿಗೆ ಬಾಕ್ಸಿಂಗ್​ ಡೆ ‘ಪಂಚ್’.. ಟೀಂ ಇಂಡಿಯಾಗೆ ಸಿಗುತ್ತಾ ಗೆಲುವು?
ವಿಕೆಟ್​ ಕಿತ್ತ ಖುಷಿಯಲ್ಲಿ ಟೀಂ ಇಂಡಿಯಾ ಆಟಗಾರರು
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 28, 2020 | 10:47 PM

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್​ ಮ್ಯಾಚ್​​ನಲ್ಲಿ ಭಾರತ ಗೆಲುವಿನ ಸನಿಹಕ್ಕೆ ಬಂದಿದೆ. ಭಾರತೀಯ ಬೌಲರ್​ಗಳ ಅದ್ಭುತ ಬೌಲಿಂಗ್​ ಪ್ರದರ್ಶನದಿಂದ ಆಸ್ಟ್ರೇಲಿಯಾ ಬ್ಯಾಟ್ಸ್​​ಮನ್​ಗಳು ನಲುಗಿ ಹೋಗಿದ್ದಾರೆ. ಮೂರನೇ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ 133 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು, ಎರಡು ರನ್​ ಮುನ್ನಡೆ ಸಾಧಿಸಿದೆ.

ಮೆಲ್ಬೋರ್ನ್​ನಲ್ಲಿ ಶನಿವಾರ ಮ್ಯಾಚ್​ ಆರಂಭಗೊಂಡಿತ್ತು. ಟಾಸ್​ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತ್ತು. ಆದರೆ, ಭಾರತೀಯ ಬೌಲರ್​ಗಳ ಮಾರಕ ದಾಳಿಗೆ ಕಾಂಗರೂ ಪಡೆ ತತ್ತರಿಸಿ ಹೋಗಿತ್ತು. ಆಸ್ಟ್ರೇಲಿಯಾ ಕೇವಲ 195 ರನ್​ಗಳಿಗೆ ತನ್ನೆಲ್ಲಾ ವಿಕೆಟ್​ ಒಪ್ಪಿಸಿತ್ತು.

ಜಸ್​ಪ್ರೀತ್​ ಬೂಮ್ರಾ 4 ವಿಕೆಟ್​ ಕಿತ್ತರೆ, ಸ್ಪಿನ್​ ಮಾಂತ್ರಿಕ ಆರ್​​. ಅಶ್ವಿನ್​ 3 ವಿಕೆಟ್​ ಪಡೆದರು. ಈ ಪಂದ್ಯದ ಮೂಲಕ ಟೆಸ್ಟ್​ಗೆ ಪಾದಾರ್ಪಣೆ ಮಾಡಿರುವ ಮೊಹಮದ್​ ಸಿರಾಜ್​ ಎರಡು ವಿಕೆಟ್​ ಪಡೆದು ಗಮನ ಸೆಳೆದರು. ರವೀಂದ್ರ ಜಡೇಜಾ ಒಂದು ವಿಕೆಟ್​ ಪಡೆದರು.

ನಂತರ ಬ್ಯಾಟಿಂಗ್​ಗೆ ಇಳಿದ ಭಾರತ ಕೂಡ ಆರಂಭ ಆಘಾತ ಅನುಭವಿಸಿತ್ತು. ಆದರೆ, ಅಜಿಂಕ್ಯ ರಹಾನೆ ಶತಕ ಹಾಗೂ ಜಡೇಜಾ ಅರ್ಧ ಶತಕದ ನೆರವಿನಿಂದ ಭಾರತ 326 ರನ್​ ಗಳಿಸಿ, 131ರನ್​ಗಳ ಲೀಡ್​ ಪಡೆದುಕೊಂಡಿತ್ತು.

ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟ್​ ಬೀಸಲು ಆರಂಭಿಸಿದ ಆಸ್ಟ್ರೇಲಿಯಾಗೆ ಮತ್ತೆ ಭಾರತೀಯ ಬೌಲರ್​ಗಳು ಶಾಕ್​ ನೀಡಿದ್ದಾರೆ. ಕೇವಲ 133 ರನ್​ಗಳಿಗೆ ಆಸ್ಟ್ರೇಲಿಯಾ 6 ವಿಕೆಟ್​ ಕಳೆದುಕೊಂಡಿದೆ. ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಕೇವಲ ಎರಡು ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ. ಬ್ಯಾಟಿಂಗ್​ನಲ್ಲಿ ಮಿಂಚಿದ್ದ ಜಡೇಜಾ 2 ವಿಕೆಟ್​ ಕಿತ್ತು ಆಲ್​ರೌಂಡರ್​ ಪ್ರದರ್ಶನ ತೋರಿದರು. ಆರ್​​. ಅಶ್ವಿನ್​, ಮೊಹಮದ್​ ಸಿರಾಜ್​, ಉಮೇಶ್​ ಯಾದವ್​ ಹಾಗೂ ಜಸ್​ಪ್ರೀತ್​ ಬೂಮ್ರಾ ತಲಾ ಒಂದು ವಿಕೆಟ್​ ಪಡೆದು ತಂಡಕ್ಕೆ ನೆರವಾದರು.

ಗಾಯಕ್ಕೆ ತುತ್ತಾದ ಉಮೇಶ್​ ಯಾದವ್​ ಎರಡನೇ ಇನ್ನಿಂಗ್ಸ್​ನ ಆರಂಭದಲ್ಲೇ ಉಮೇಶ್​ ಯಾದವ್​ ಜೋ ಬರ್ನ್ಸ್​ ಅವರ ವಿಕೆಟ್​ ಪಡೆದಿದ್ದರು. ಈ ಮೂಲಕ ಆಸ್ಟ್ರೇಲಿಯಾಗೆ ದುಸ್ವಪ್ನವಾಗಿ ಕಾಡಲು ಸಿದ್ಧವಾಗಿದ್ದರು. ಆದರೆ, ನಾಲ್ಕನೇ ಓವರ್ ಎಸೆಯುವಾಗ ಅವರಿಗೆ ಸ್ನಾಯು ಸೆಳೆತ ಕಾಣಿಸಿಕೊಂಡಿತ್ತು. ಹೀಗಾಗಿ, ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ನಾಳೆ (ಡಿ.29) ನಡೆಯುವ ನಾಲ್ಕನೇ ದಿನದ ಟೆಸ್ಟ್​ನಲ್ಲಿ ಅವರು ಪಾಲ್ಗೊಳ್ಳಲಿದ್ದಾರೋ ಅಥವಾ ಇಲ್ಲವೋ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಭಾರತಕ್ಕೆ ಸುಲಭ ಗೆಲುವು? ಮೊದಲ ಟೆಸ್ಟ್​ನಲ್ಲಿ ಹೀನಾಯ ಸೋಲಿನ ನಂತರ ಪುಟಿದೆದ್ದಿರುವ ಭಾರತ ಎರಡನೇ ಟೆಸ್ಟ್​ನಲ್ಲಿ ಗೆಲುವು ದಾಖಲಿಸುವ ಆಶಾಭಾವ ಹೊಂದಿದೆ. ಕಾಂಗರೂ ಪಡೆ ಕೇವಲ 133 ರನ್​ಗಳಿಗೆ ಆರು ಪ್ರಮುಖ ವಿಕೆಟ್​ ಕಳೆದುಕೊಂಡಿದೆ. ಅಲ್ಲದೆ 2 ರನ್​ ಲೀಡ್ ಕಾಯ್ದುಕೊಂಡಿದೆ. ನಾಲ್ಕನೇ ದಿನದಾಟದಲ್ಲಿ ಭಾರತ ಇನ್ನು ನೂರು ರನ್​ ಒಳಗೆ ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಿದರೆ ಭಾರತಕ್ಕೆ ಸುಲಭವಾಗಿ ಗೆಲುವು ಲಭಿಸಲಿದೆ.

ಮ್ಯಾಚ್​ ಡ್ರಾಗೆ ಇದೆ ಆಯ್ಕೆ? ಒಂದೊಮ್ಮೆ ಏಳನೇ ವಿಕೆಟ್​ ಜೊತೆಯಾಟದಲ್ಲಿ ಪ್ಯಾಟ್​ ಕಮ್ಮಿನ್ಸ್​ ಹಾಗೂ ಕ್ಯಾಮರೂನ್​ ಗ್ರೀನ್​​ ಸ್ಕ್ರೀಸ್​ ಕಚ್ಚಿ ನಿಂತರೆ ಮ್ಯಾಚ್​ ಡ್ರಾ ಆಗಲೂಬಹುದು. ಐದನೇ ದಿನದವರೆಗೂ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳು ವಿಕೆಟ್​ ಉಳಿಸಿಕೊಂಡು ಆಡಬೇಕು. ಆದರೆ, ಇದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಭಾರತ ಈ ಪಂದ್ಯದಲ್ಲಿ ಗೆಲುವು ದಾಖಲಿಸಲಿದೆ ಎನ್ನುವುದು ಕ್ರಿಕೆಟ್​ ಪಂಡಿತರ ಲೆಕ್ಕಾಚಾರ.

ಏನಾಗಲಿದೆ ಮುಂದಿನ ಪಂದ್ಯ ಇಂದಿನ ಪಂದ್ಯ ಭಾರತ ಗೆದ್ದರೆ ಸರಣಿಯಲ್ಲಿ ಸಮಬಲ ಸಾಧಿಸಿದಂತಾಗುತ್ತದೆ. ನಂತರ ಎರಡು ಟೆಸ್ಟ್​ಗಳು ಬಾಕಿ ಉಳಿಯಲಿವೆ. ಮೂರನೇ ಟೆಸ್ಟ್​​ಗೆ ರೋಹಿತ್​ ಶರ್ಮಾ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಹೀಗಾಗಿ, ಬ್ಯಾಟಿಂಗ್​ ಬಲಕ್ಕೆ ಹೊಸ ಬಲ ಸಿಗಲಿದೆ. ಮುಂದಿನ ಒಂದು ಟೆಸ್ಟ್​ ಗೆದ್ದು ಮತ್ತೊಂದು ಡ್ರಾ ಆದರೂ ಟೀಂ ಇಂಡಿಯಾಗೆ ಸರಣಿ ಒಲಿಯಲಿದೆ.

India vs Australia Test Cricket 2020 | ಬಾಕ್ಸಿಂಗ್​ ಡೇ ಟೆಸ್ಟ್​; 195 ರನ್​ಗಳಿಗೆ ಸರ್ವಪತನಗೊಂಡ ಟೀಂ ಆಸ್ಟ್ರೇಲಿಯಾ

Published On - 2:05 pm, Mon, 28 December 20

ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ